KOPPAL NEWS :”ಕೊಪ್ಪಳ | ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳ ಪೂರ್ವ ಸಿದ್ಧತೆ : ನಾಳೆ  ಉಚಿತ ಕಾರ್ಯಗಾರ”

By admin

“ಕೊಪ್ಪಳ | ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳ ಪೂರ್ವ ಸಿದ್ಧತೆ : ನಾಳೆ  ಉಚಿತ ಕಾರ್ಯಗಾರ”

• ಸೆಕ್ಯೂಲರ್‌ ವಾಯ್ಸ್‌ ಡೆಸ್ಕ್‌ ನ್ಯೂಸ್‌ :

ಕೊಪ್ಪಳ : “ನಗರದ ಅಶೋಕ ಸರ್ಕಲ್ ಹತ್ತಿರವಿರುವ ಸಾಹಿತ್ಯ ಭವನದಲ್ಲಿ ನಿಂಗೋಜಿ  ಶಿಕ್ಷಣ ಮತ್ತು ಗ್ರಾಮೀಣ ಅಭಿವೃದ್ಧಿ ಟ್ರಸ್ಟ್, ಎಸ್.ಎ.ನಿಂಗೋಜಿ ಮಹಿಳಾ ಪದವಿ ಮಹಾ ವಿದ್ಯಾಲಯ, ಎಸ್.ಎನ್. ನಿಂಗೋಜಿ ಆಯುರ್ವೇದಿಕ್ ವೈದ್ಯಕೀಯ ಮಹಾವಿದ್ಯಾಲಯ ಕೊಪ್ಪಳ ಹಾಗೂ ಎಸ್.ಎ.ನಿಂಗೊಜಿ ಶಿಕ್ಷಣ ಮಹಾ ವಿದ್ಯಾಲಯ ಯಲಬುರ್ಗಾ ಇವುಗಳ ಸಂಯುಕ್ತಾಶ್ರಯದಲ್ಲಿ ಸೆ.14 ರಂದು ಬೆಳ್ಳಿಗ್ಗೆ 9: 30ಕ್ಕೆ ಒಂದು ದಿನದ ಯುಜಿಸಿ ,ನೆಟ್ ಮತ್ತು ಕೆಸೆಟ್ ಸ್ಪರ್ಧಾತ್ಮಕ ಪರೀಕ್ಷೆಗಳ  ಪೂರ್ವ ತಯಾರಿ ಕುರಿತು ಉಚಿತ ಕಾರ್ಯಗಾರ ಹಮ್ಮಿಕೊಳ್ಳಲಾಗಿದೆ, ಎಂದು ಹಿರಿಯ ನ್ಯಾಯವಾದಿ, ನಿಂಗೋಜಿ ಸಮೂಹ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಎಸ್. ಎ. ನಿಂಗೋಜಿ ಅವರು ತಿಳಿಸಿದರು.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಕೆಸೆಟ್ ನೆಟ್ ಸೇರಿದಂತೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗೆ ಪೂರ್ವ ತಯಾರಿ ಎದುರಿಸುವ ಕುರಿತು ಉದ್ಯೋಗಕಾಂಕ್ಷಿಗಳಿಗೆ ಒಂದು ದಿನದ ಉಚಿತ ಕಾರ್ಯಗಾರ ಆಯೋಜಿಸಲಾಗಿದೆ ಎಂದರು.

ಈ ಕಾರ್ಯಗಾರಕ್ಕೆ ಉದ್ಘಾಟಕರಾಗಿ ಕೊಪ್ಪಳ ಸಹಾಯಕ ಆಯುಕ್ತ ಕ್ಯಾಪ್ಟನ್ ಮಹೇಶ್ ಕುಮಾರ್ ಮಾಲಗತ್ತಿ ಅವರು ಸಂಪನ್ಮೂಲ ವ್ಯಕ್ತಿಯಾಗಿ ಆಂಧ್ರಪ್ರದೇಶ ರಾಜ್ಯದ ನೆಲ್ಲೂರು ನ ಪ್ರಾದೇಶಿಕ ಶಿಕ್ಷಣ ಸಂಸ್ಥೆಯ ಸಹ ಪ್ರಾಧ್ಯಾಪಕ ಡಾ. ಪ್ರಕಾಶ್ ಕೆ.ಬಡಿಗೇರ್ ಅವರು ಆಗಮಿಸುವರು ಎಂದು ಹೇಳಿದರು.

ಅಲ್ಲದೇ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಹಿರಿಯ ಸಾಹಿತಿ ಮಹಾಂತೇಶ್ ಮಲ್ಲನಗೌಡರ್ ಅವರು, ಎಸ್. ಎ. ನಿಂಗೋಜಿ ಆಯುರ್ವೇದಿಕ್ ವೈದ್ಯಕೀಯ ಮಹಾ ವಿದ್ಯಾಲಯದ ಪ್ರಾಂಶುಪಾಲ ಡಾ. ಪ್ರವೀಣ್ ಕುಮಾರ್ ಅವರು, ಎಸ್.ಎ. ನಿಂಗೋಜಿ ಮಹಿಳಾ ಪದವಿ ಮಹಾ ವಿದ್ಯಾಲಯದ ಪ್ರಾಂಶುಪಾಲ ಸಂಪತ್ ಕುಮಾರ್ ಆಕಳವಾಡಿ ಅವರು ಮತ್ತು ಯಲಬುರ್ಗಾದ ಎಸ್. ಎ. ನಿಂಗೋಜಿ ಶಿಕ್ಷಣ ಮಹಾ ವಿದ್ಯಾಲಯದ ಪ್ರಾಂಶುಪಾಲ ಡಾ. ಪ್ರಕಾಶ ಡಿ. ಎಚ್. ಅವರು ಆಗಮಿಸುವರು ಎಂದರು. ಅದೇ ರೀತಿ ಪ್ರಾಸ್ತಾವಿಕವಾಗಿ ಗದಗ ಪಿಪಿಜಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ.ವಿ. ಎ.ನಿಂಗೋಜಿ ಅವರು ಪ್ರಾಸ್ತಾವಿಕವಾಗಿ ಮಾತನಾಡುವವರು ಎಂದು ತಿಳಿಸಿದರು.

ಆಸಕ್ತ ಸ್ಪರ್ಧಾತ್ಮಕ ಪರೀಕ್ಷೆ ಬರೆಯುತ್ತಿರುವ ಅಭ್ಯರ್ಥಿಗಳು ಈ ಉಚಿತ ಕಾರ್ಯಗಾರದ ಸದುಪಯೋಗ ಪಡೆದುಕೊಳ್ಳಬೇಕೆಂದು ಪ್ರಕಟಣೆ ಮೂಲಕ ಅವರು ಕೋರಿದ್ದಾರೆ.