SOCIAL MEDIA VIRAL SONGS : “ಹೂವಿನ ಬಾಣದಂತೆ ಯಾರಿಗೂ ಕಾಣದಂತೆ…ಎಂಬ ಟ್ರೆಂಡಿಂಗ್ ಆಗಿರೋ ಹಾಡು ಸದ್ದು..! ವೈರಲ್‌ ಚಲುವೆ ನಿತ್ಯಶ್ರೀ ದೇ, ಎಲ್ಲೆಲ್ಲೂ ಹವಾ.!ಇಲ್ಲಿದೆ ನೋಡಿ ವಿಶೇಷ ಸ್ಟೋರಿ..!

By admin

“ಹೂವಿನ ಬಾಣದಂತೆ ಯಾರಿಗೂ ಕಾಣದಂತೆ…ಎಂಬ  ಟ್ರೆಂಡಿಂಗ್ ಆಗಿರೋ ಹಾಡು ಸದ್ದು! ವೈರಲ್‌ ಚಲುವೆ ನಿತ್ಯಶ್ರೀ ದೇ, ಎಲ್ಲೆಲ್ಲೂ ಹವಾ.!

Contents
“ಹೂವಿನ ಬಾಣದಂತೆ ಯಾರಿಗೂ ಕಾಣದಂತೆ…ಎಂಬ  ಟ್ರೆಂಡಿಂಗ್ ಆಗಿರೋ ಹಾಡು ಸದ್ದು! ವೈರಲ್‌ ಚಲುವೆ ನಿತ್ಯಶ್ರೀ ದೇ, ಎಲ್ಲೆಲ್ಲೂ ಹವಾ.!• ಸೆಕ್ಯೂಲರ್‌ ವಾಯ್ಸ್‌ ವಿಶೇಷ ಸುದ್ದಿ: ಸದ್ಯಕ್ಕೆ ಇಡೀ ಕರ್ನಾಟಕದಲ್ಲಿ ಟ್ರೆಂಡಿಂಗ್ ಆಗಿರೋ, ಎಲ್ಲರನ್ನೂ ನಕ್ಕು ನಗಿಸುತ್ತಿರುವ ಸುದ್ದಿ ಅಂದ್ರೆ ಅದು ‘ಹೂವಿನ ಬಾಣದಂತೆ.. ಯಾರಿಗೂ ಕಾಣದಂತೆ..’… ಇಷ್ಟು ಹೇಳಿದರೆ ಸಾಮಾನ್ಯವಾಗಿ ಎಲ್ಲರಿಗೂ ಅರ್ಥವಾಗುತ್ತದೆ ಅನಿಸುತ್ತದೆ. ನಿತ್ಯಶ್ರೀ ಹೆಸರಿನ ಹುಡುಗಿ 15 ವರ್ಷಗಳ ಹಿಂದೆ ಅರ್ಜುನ್ ಜನ್ಯ ಸಂಗೀತ ನಿರ್ದೇಶನದ ‘ಬಿರುಗಾಳಿ’ ಚಿತ್ರದ ಹಾಡನ್ನು ಇತ್ತೀಚೆಗೆ ವಿಚಿತ್ರವಾಗಿ, ನಗು ಬರುವಂತೆ ಹಾಡಿದ್ದು ಭಾರೀ ವೈರಲ್ ಆಗಿದೆ. ಕಳೆದ ಕೆಲವು ದಿನಗಳಿಂದ ಆ ಹಾಡು ಕರ್ನಾಟಕದ ತುಂಬಾ ಅದೆಷ್ಟು ವೈರಲ್ ಆಗಿದೆ ಎಂದರೆ ಜನರು ಹೇಳಿಕೊಂಡು ಆಡಿಕೊಂಡು ನಗುತ್ತಿದ್ದಾರೆ. ಜನ ಅದನ್ನು ರೀಲ್ಸ್ ಮಾಡಿ ತಮ್ಮದೇ ಶೈಲಿಯಲ್ಲಿ ಮತ್ತಷ್ಟು ರೀಚ್ ಆಗುವಂತೆ ಮಾಡಿಬಿಟ್ಟರು.ಬಿರುಗಾಳಿ ಚಿತ್ರಕ್ಕೆ ಅರ್ಜುನ್ ಜನ್ಯಾ ಸಂಗೀತ ಹಾಗೂ ಶ್ರೇಯಾ ಘೋಷಾಲ್ ಸುಮಧುರ ಕಂಠದಲ್ಲಿ ಆ ಹಾಡು ಮೂಡಿಬಂದು ಸಾಕಷ್ಟು ಜನಪ್ರಿಯ ಆಗಿತ್ತು. ಆ ಹಾಡನ್ನು ತಮಾಷೆ ಎಂಬಂತೆ, ವಿಚಿತ್ರವಾಗಿ ಹಾಡಿದ್ದ ನಿತ್ಯಶ್ರೀ ಹಾಡು ಸೋಷಿಯಲ್ ಮೀಡಿಯಾ ಮೂಲಕ ಬಹಳಷ್ಟು  ಭಾರಿ ವೈರಲ್ ಆಗಿತ್ತು. ಆ ಹಾಡನ್ನು ಇದೀಗ ಸ್ವತಃ ಅರ್ಜುನ್ ಜನ್ಯ ಅವರು ವೇದಿಕೆಯೊಂದರಲ್ಲಿ ಹಾಡಿ ಅಲ್ಲಿದ್ದವರನ್ನು ನಕ್ಕು ನಗಿಸಿದ್ದಾರೆ. ಅರ್ಜುನ್ ಜನ್ಯಾ ಅವರು ನಿತ್ಯಶ್ರೀ ಅವರಂತೆ ತಮಾಷೆಗೆ ಹಾಡಿರುವ ಈ ಹಾಡು ಇದೀಗ ಸಾಕಷ್ಟು ವೈರಲ್ ಆಗುತ್ತಿದೆ.ನಿತ್ಯಶ್ರೀ ಮೂಲಕ ಇದೀಗ ವೈರಲ್!ಆ ಹುಡುಗಿ ಅಷ್ಟು ಇಂಪಾದ ಹಾಡನ್ನು ಅದ್ಯಾವ ರೀತಿ ತಮಾಷೆ ಎಂಬಂತೆ ಹಾಡಿದ್ದಾರೆ ಎಂದರೆ ಅದನ್ನು ಕೇಳಿದ ಯಾರಿಗೇ ಆದರೂ ನಗು ತಡೆಯಲು ಅಸಾಧ್ಯ ಎನ್ನಬಹುದು. ಈಗಂತೂ ಶಾರ್ಟ್ಸ್‌, ರೀಲ್ಸ್ ಜಮಾನಾ ಆಗಿರುವುದರಿಂದ, ಆ ಹಾಡು ಸಾಕಷ್ಟು ಶೇರ್ ಆಗುತ್ತಿದೆ. ಆ ಮೂಲಕ ಎಲ್ಲೆಡೆ ನಗು ಕೂಡ ಹರಡುತ್ತಿದೆ. ನಿತ್ಯಶ್ರೀ ಹಾಡಿರುವ ಹಾಡಿನಂತೆ ಇದೀಗ ಅರ್ಜುನ್ ಜನ್ಯ ಅವರು ಹಾಡಿರುವ ಈ ‘ಅಣುಕು ಗೀತೆ’ ಎನ್ನಬಹುದಾದ ಸಾಂಗ್ ಕೂಡ ವೈರಲ್ ಆಗುತ್ತಿದೆ. ಸಾಕಷ್ಟು ಜನ ನಿತ್ಯಶ್ರೀ ಪರ ಬ್ಯಾಟ್ ಬೀಸುತ್ತಿದ್ದಾರೆ. ಆಕಾಶ್ ಚಿತ್ರದ ನೀನೆ ನೀನೆ ಹಾಡನ್ನು ಕೂಡ ಆಕೆ ಇದೇ ರೀತಿ ವಿಭಿನ್ನವಾಗಿ ಹಾಡಿರುವ ವೀಡಿಯೋ ಇನ್‌ಸ್ಟಾಗ್ರಾಮ್‌ನಲ್ಲಿದೆ. ಆದರೆ ಅದು ವೈರಲ್ ಆಗ್ತಿಲ್ಲ. ‘ಹೂವಿನ ಬಾಣದಂತೆ’ ಹಾಡು ಮಾತ್ರವೇ ಸದ್ದು ಮಾಡ್ತಿದೆ.  • ನಿತ್ಯಶ್ರೀ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದು.!ನಟ ಯಶ್ ಅವರ ಅಭಿಮಾನಿ ನಾನು ಎಂದು ಹೇಳಿಕೊಂಡಿದ್ದಾರೆ. ಅವರೊಟ್ಟಿಗೆ ಸಿನಿಮಾದಲ್ಲಿ ನಟಿಸೋ ಆಸೆ ಇದೆ ಎಂದು ತಿಳಿಸಿದ್ದಾರೆ. ‘ಹೂವಿನ ಬಾಣದಂತೆ’ ಹಾಡಿಗೆ ಒಂದರ್ಥದಲ್ಲಿ ನಾನು ಅವಮಾನ ಮಾಡಿದ್ದೀನಿ, ಹಾಗಾಗಿ ಅರ್ಜುನ್ ಜನ್ಯಾ ಸರ್ ಹಾಗೂ ಶ್ರೇಯಾ ಘೋಷಾಲ್ ಅವರಿಗೆ ಕ್ಷಮೆ ಕೋರುತ್ತೇನೆ ಎಂದು ಕೂಡ ನಿತ್ಯಶ್ರೀ ಹೇಳಿದ್ದಾರೆ. ಇನ್ನು ಸೋಶಿಯಲ್ ಮೀಡಿಯಾದಲ್ಲಿ ಇಷ್ಟೆಲ್ಲಾ ವೈರಲ್ ಆಗುತ್ತಿದ್ದಂತೆ ಆಕೆಯ ಇನ್‌ಸ್ಟಾಗ್ರಾಮ್ ಅಕೌಂಟ್ ಫಾಲೋವರ್ಸ್ ಸಂಖ್ಯೆ ಹೆಚ್ಚಾಗಿದೆ. ಆಕೆಯ ‘ಅಮ್ಮು ಗೌಡ’ ಹೆಸರಿನ ಇನ್‌ಸ್ಟಾಗ್ರಾಮ್ ಅಕೌಂಟ್‌ ಅನ್ನು ಬಂದು ನೋಡುವವರ ಸಂಖ್ಯೆ ಹೆಚ್ಚಾಗುತ್ತಲೇ ಇದೆ ಎಂದು ಹೇಳಬಹುದು.

ಸೆಕ್ಯೂಲರ್‌ ವಾಯ್ಸ್‌ ವಿಶೇಷ ಸುದ್ದಿ: 

ಸದ್ಯಕ್ಕೆ ಇಡೀ ಕರ್ನಾಟಕದಲ್ಲಿ ಟ್ರೆಂಡಿಂಗ್ ಆಗಿರೋ, ಎಲ್ಲರನ್ನೂ ನಕ್ಕು ನಗಿಸುತ್ತಿರುವ ಸುದ್ದಿ ಅಂದ್ರೆ ಅದು ‘ಹೂವಿನ ಬಾಣದಂತೆ.. ಯಾರಿಗೂ ಕಾಣದಂತೆ..’… ಇಷ್ಟು ಹೇಳಿದರೆ ಸಾಮಾನ್ಯವಾಗಿ ಎಲ್ಲರಿಗೂ ಅರ್ಥವಾಗುತ್ತದೆ ಅನಿಸುತ್ತದೆ. 

ನಿತ್ಯಶ್ರೀ ಹೆಸರಿನ ಹುಡುಗಿ 15 ವರ್ಷಗಳ ಹಿಂದೆ ಅರ್ಜುನ್ ಜನ್ಯ ಸಂಗೀತ ನಿರ್ದೇಶನದ ‘ಬಿರುಗಾಳಿ’ ಚಿತ್ರದ ಹಾಡನ್ನು ಇತ್ತೀಚೆಗೆ ವಿಚಿತ್ರವಾಗಿ, ನಗು ಬರುವಂತೆ ಹಾಡಿದ್ದು ಭಾರೀ ವೈರಲ್ ಆಗಿದೆ. ಕಳೆದ ಕೆಲವು ದಿನಗಳಿಂದ ಆ ಹಾಡು ಕರ್ನಾಟಕದ ತುಂಬಾ ಅದೆಷ್ಟು ವೈರಲ್ ಆಗಿದೆ ಎಂದರೆ ಜನರು ಹೇಳಿಕೊಂಡು ಆಡಿಕೊಂಡು ನಗುತ್ತಿದ್ದಾರೆ. ಜನ ಅದನ್ನು ರೀಲ್ಸ್ ಮಾಡಿ ತಮ್ಮದೇ ಶೈಲಿಯಲ್ಲಿ ಮತ್ತಷ್ಟು ರೀಚ್ ಆಗುವಂತೆ ಮಾಡಿಬಿಟ್ಟರು.

ಬಿರುಗಾಳಿ ಚಿತ್ರಕ್ಕೆ ಅರ್ಜುನ್ ಜನ್ಯಾ ಸಂಗೀತ ಹಾಗೂ ಶ್ರೇಯಾ ಘೋಷಾಲ್ ಸುಮಧುರ ಕಂಠದಲ್ಲಿ ಆ ಹಾಡು ಮೂಡಿಬಂದು ಸಾಕಷ್ಟು ಜನಪ್ರಿಯ ಆಗಿತ್ತು. ಆ ಹಾಡನ್ನು ತಮಾಷೆ ಎಂಬಂತೆ, ವಿಚಿತ್ರವಾಗಿ ಹಾಡಿದ್ದ ನಿತ್ಯಶ್ರೀ ಹಾಡು ಸೋಷಿಯಲ್ ಮೀಡಿಯಾ ಮೂಲಕ ಬಹಳಷ್ಟು  ಭಾರಿ ವೈರಲ್ ಆಗಿತ್ತು. ಆ ಹಾಡನ್ನು ಇದೀಗ ಸ್ವತಃ ಅರ್ಜುನ್ ಜನ್ಯ ಅವರು ವೇದಿಕೆಯೊಂದರಲ್ಲಿ ಹಾಡಿ ಅಲ್ಲಿದ್ದವರನ್ನು ನಕ್ಕು ನಗಿಸಿದ್ದಾರೆ. ಅರ್ಜುನ್ ಜನ್ಯಾ ಅವರು ನಿತ್ಯಶ್ರೀ ಅವರಂತೆ ತಮಾಷೆಗೆ ಹಾಡಿರುವ ಈ ಹಾಡು ಇದೀಗ ಸಾಕಷ್ಟು ವೈರಲ್ ಆಗುತ್ತಿದೆ.

ನಿತ್ಯಶ್ರೀ ಮೂಲಕ ಇದೀಗ ವೈರಲ್!

ಆ ಹುಡುಗಿ ಅಷ್ಟು ಇಂಪಾದ ಹಾಡನ್ನು ಅದ್ಯಾವ ರೀತಿ ತಮಾಷೆ ಎಂಬಂತೆ ಹಾಡಿದ್ದಾರೆ ಎಂದರೆ ಅದನ್ನು ಕೇಳಿದ ಯಾರಿಗೇ ಆದರೂ ನಗು ತಡೆಯಲು ಅಸಾಧ್ಯ ಎನ್ನಬಹುದು. ಈಗಂತೂ ಶಾರ್ಟ್ಸ್‌, ರೀಲ್ಸ್ ಜಮಾನಾ ಆಗಿರುವುದರಿಂದ, ಆ ಹಾಡು ಸಾಕಷ್ಟು ಶೇರ್ ಆಗುತ್ತಿದೆ. ಆ ಮೂಲಕ ಎಲ್ಲೆಡೆ ನಗು ಕೂಡ ಹರಡುತ್ತಿದೆ. ನಿತ್ಯಶ್ರೀ ಹಾಡಿರುವ ಹಾಡಿನಂತೆ ಇದೀಗ ಅರ್ಜುನ್ ಜನ್ಯ ಅವರು ಹಾಡಿರುವ ಈ ‘ಅಣುಕು ಗೀತೆ’ ಎನ್ನಬಹುದಾದ ಸಾಂಗ್ ಕೂಡ ವೈರಲ್ ಆಗುತ್ತಿದೆ.

 ಸಾಕಷ್ಟು ಜನ ನಿತ್ಯಶ್ರೀ ಪರ ಬ್ಯಾಟ್ ಬೀಸುತ್ತಿದ್ದಾರೆ. ಆಕಾಶ್ ಚಿತ್ರದ ನೀನೆ ನೀನೆ ಹಾಡನ್ನು ಕೂಡ ಆಕೆ ಇದೇ ರೀತಿ ವಿಭಿನ್ನವಾಗಿ ಹಾಡಿರುವ ವೀಡಿಯೋ ಇನ್‌ಸ್ಟಾಗ್ರಾಮ್‌ನಲ್ಲಿದೆ. ಆದರೆ ಅದು ವೈರಲ್ ಆಗ್ತಿಲ್ಲ. ‘ಹೂವಿನ ಬಾಣದಂತೆ’ ಹಾಡು ಮಾತ್ರವೇ ಸದ್ದು ಮಾಡ್ತಿದೆ.

  • ನಿತ್ಯಶ್ರೀ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದು.!

ನಟ ಯಶ್ ಅವರ ಅಭಿಮಾನಿ ನಾನು ಎಂದು ಹೇಳಿಕೊಂಡಿದ್ದಾರೆ. ಅವರೊಟ್ಟಿಗೆ ಸಿನಿಮಾದಲ್ಲಿ ನಟಿಸೋ ಆಸೆ ಇದೆ ಎಂದು ತಿಳಿಸಿದ್ದಾರೆ. ‘ಹೂವಿನ ಬಾಣದಂತೆ’ ಹಾಡಿಗೆ ಒಂದರ್ಥದಲ್ಲಿ ನಾನು ಅವಮಾನ ಮಾಡಿದ್ದೀನಿ, ಹಾಗಾಗಿ ಅರ್ಜುನ್ ಜನ್ಯಾ ಸರ್ ಹಾಗೂ ಶ್ರೇಯಾ ಘೋಷಾಲ್ ಅವರಿಗೆ ಕ್ಷಮೆ ಕೋರುತ್ತೇನೆ ಎಂದು ಕೂಡ ನಿತ್ಯಶ್ರೀ ಹೇಳಿದ್ದಾರೆ. ಇನ್ನು ಸೋಶಿಯಲ್ ಮೀಡಿಯಾದಲ್ಲಿ ಇಷ್ಟೆಲ್ಲಾ ವೈರಲ್ ಆಗುತ್ತಿದ್ದಂತೆ ಆಕೆಯ ಇನ್‌ಸ್ಟಾಗ್ರಾಮ್ ಅಕೌಂಟ್ ಫಾಲೋವರ್ಸ್ ಸಂಖ್ಯೆ ಹೆಚ್ಚಾಗಿದೆ. ಆಕೆಯ ‘ಅಮ್ಮು ಗೌಡ’ ಹೆಸರಿನ ಇನ್‌ಸ್ಟಾಗ್ರಾಮ್ ಅಕೌಂಟ್‌ ಅನ್ನು ಬಂದು ನೋಡುವವರ ಸಂಖ್ಯೆ ಹೆಚ್ಚಾಗುತ್ತಲೇ ಇದೆ ಎಂದು ಹೇಳಬಹುದು.