ALERT NEWS : “ಕುಕನೂರ | ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಹಾವು ಕಚ್ಚಿ ಯುವ ರೈತನ ಸಾವು : ಪರಿಹಾರಕ್ಕೆ ಗ್ರಾಮಸ್ಥರು ಒತ್ತಾಯ”

By admin

“ಕುಕನೂರ | ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಹಾವು ಕಚ್ಚಿ ಯುವ ರೈತನ ಸಾವು : ಪರಿಹಾರಕ್ಕೆ ಗ್ರಾಮಸ್ಥರು ಒತ್ತಾಯ”

 

Contents
“ಕುಕನೂರ | ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಹಾವು ಕಚ್ಚಿ ಯುವ ರೈತನ ಸಾವು : ಪರಿಹಾರಕ್ಕೆ ಗ್ರಾಮಸ್ಥರು ಒತ್ತಾಯ”• ಸೆಕ್ಯೂಲರ್‌ ವಾಯ್ಸ್‌ ನ್ಯೂಸ್‌   :ಕುಕನೂರು : ಹೊಲದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಹಾವು ಕಚ್ಚಿ ಯುವ ರೈತನೊಬ್ಬ ಸಾವನ್ನಪ್ಪಿದ ಘಟನೆ ಕುಕನೂರ ತಾಲೂಕಿನ ಮಂಗಳೂರು ಗ್ರಾಮದಲ್ಲಿ ಶುಕ್ರವಾರ ಸಂಜೆ ನಡೆದಿದೆ.ಮಂಗಳೂರು ಗ್ರಾಮದ ರೈತ ಶರಣಪ್ಪ ಪಕೀರಪ್ಪ ಮೂಲಿಮನಿ (22)ತನ್ನ ಕೃಷಿ ಜಮೀನಿನಲ್ಲಿ ಕೃಷಿ ಚಟುವಟಿಕೆ ಯಲ್ಲಿ ತೊಡಗಿದಾಗ ಮುಸ್ಸಂಜೆ ವೇಳೆ ಹಾವು ಕಚ್ಚಿದ ಘಟನೆ ಜರುಗಿದ್ದು, ನೋವಿನಿಂದ ಬಳಲುತ್ತಿದ್ದ ಯುವ ರೈತನನ್ನು ಕಂಡ ಪಕ್ಕದ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ಕೃಷಿ ಕಾರ್ಮಿಕರು ತಕ್ಷಣವೇ ಬಂದು ಸಹಾಯ ಮಾಡಿದ್ದಾರೆಂದು ತಿಳಿದು ಬಂದಿದೆ.ಹಾವು ಕಡಿತಕ್ಕೊಳಗಾದ ಯುವ ರೈತನನ್ನು ಚಿಕಿತ್ಸೆಗೆ೦ದು ಮಂಗಳೂರು ಗ್ರಾಮದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಹೋಗುತ್ತಿದ್ದ ವೇಳೆ ಮಾರ್ಗ ಮಧ್ಯದಲ್ಲಿ ಕೊನೆ ಉಸಿರೆಳೆದಿದ್ದು ,ರೈತನ ಸಾವಿಗೆ ಇಡೀ ಮಂಗಳೂರು ಗ್ರಾಮವೇ ಕಂಬನಿ ಮಿಡಿದಿರುತ್ತದೆ ಎನ್ನಲಾಗಿದೆ.ಈ ಕುರಿತು ಬೇವೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ರೈತನ ಕುಟುಂಬಕ್ಕೆ ಪರಿಹಾರ ಒದಗಿಸಿ ಕೊಡಬೇಕು ಎಂದು ಗ್ರಾಮಸ್ಥರು ಸರ್ಕಾರವನ್ನು ಒತ್ತಾಯಿಸಿದ್ದಾರೆ.

• ಸೆಕ್ಯೂಲರ್‌ ವಾಯ್ಸ್‌ ನ್ಯೂಸ್‌   :

ಕುಕನೂರು : ಹೊಲದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಹಾವು ಕಚ್ಚಿ ಯುವ ರೈತನೊಬ್ಬ ಸಾವನ್ನಪ್ಪಿದ ಘಟನೆ ಕುಕನೂರ ತಾಲೂಕಿನ ಮಂಗಳೂರು ಗ್ರಾಮದಲ್ಲಿ ಶುಕ್ರವಾರ ಸಂಜೆ ನಡೆದಿದೆ.

ಮಂಗಳೂರು ಗ್ರಾಮದ ರೈತ ಶರಣಪ್ಪ ಪಕೀರಪ್ಪ ಮೂಲಿಮನಿ (22)ತನ್ನ ಕೃಷಿ ಜಮೀನಿನಲ್ಲಿ ಕೃಷಿ ಚಟುವಟಿಕೆ ಯಲ್ಲಿ ತೊಡಗಿದಾಗ ಮುಸ್ಸಂಜೆ ವೇಳೆ ಹಾವು ಕಚ್ಚಿದ ಘಟನೆ ಜರುಗಿದ್ದು, ನೋವಿನಿಂದ ಬಳಲುತ್ತಿದ್ದ ಯುವ ರೈತನನ್ನು ಕಂಡ ಪಕ್ಕದ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ಕೃಷಿ ಕಾರ್ಮಿಕರು ತಕ್ಷಣವೇ ಬಂದು ಸಹಾಯ ಮಾಡಿದ್ದಾರೆಂದು ತಿಳಿದು ಬಂದಿದೆ.

ಹಾವು ಕಡಿತಕ್ಕೊಳಗಾದ ಯುವ ರೈತನನ್ನು ಚಿಕಿತ್ಸೆಗೆ೦ದು ಮಂಗಳೂರು ಗ್ರಾಮದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಹೋಗುತ್ತಿದ್ದ ವೇಳೆ ಮಾರ್ಗ ಮಧ್ಯದಲ್ಲಿ ಕೊನೆ ಉಸಿರೆಳೆದಿದ್ದು ,ರೈತನ ಸಾವಿಗೆ ಇಡೀ ಮಂಗಳೂರು ಗ್ರಾಮವೇ ಕಂಬನಿ ಮಿಡಿದಿರುತ್ತದೆ ಎನ್ನಲಾಗಿದೆ.

ಈ ಕುರಿತು ಬೇವೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ರೈತನ ಕುಟುಂಬಕ್ಕೆ ಪರಿಹಾರ ಒದಗಿಸಿ ಕೊಡಬೇಕು ಎಂದು ಗ್ರಾಮಸ್ಥರು ಸರ್ಕಾರವನ್ನು ಒತ್ತಾಯಿಸಿದ್ದಾರೆ.