BALLARY LOCAL NEWS: “ಬಳ್ಳಾರಿ|ವಿವಿಧ ಬೇಡಿಕೆಗಳ ಪರಿಹಾರ ಕ್ರಮಕ್ಕಾಗಿ ಒತ್ತಾಯಿಸಿ ಬಳ್ಳಾರಿ ನಾಗರಿಕ ಹೋರಾಟ ಸಮಿತಿ ಯಿಂದ ಬೃಹತ್‌ ಪ್ರತಿಭಟನೆ”

By admin

“ಬಳ್ಳಾರಿ|ವಿವಿಧ ಬೇಡಿಕೆಗಳ ಪರಿಹಾರ ಕ್ರಮಕ್ಕಾಗಿ ಒತ್ತಾಯಿಸಿ ಬಳ್ಳಾರಿ ನಾಗರಿಕ ಹೋರಾಟ ಸಮಿತಿಯಿಂದ ಬೃಹತ್‌ ಪ್ರತಿಭಟನೆ”

 

Contents
“ಬಳ್ಳಾರಿ|ವಿವಿಧ ಬೇಡಿಕೆಗಳ ಪರಿಹಾರ ಕ್ರಮಕ್ಕಾಗಿ ಒತ್ತಾಯಿಸಿ ಬಳ್ಳಾರಿ ನಾಗರಿಕ ಹೋರಾಟ ಸಮಿತಿಯಿಂದ ಬೃಹತ್‌ ಪ್ರತಿಭಟನೆ”• ಸೆಕ್ಯುಲರ್‌ ವಾಯ್ಸ್‌ ನ್ಯೂಸ್‌ ಬಳ್ಳಾರಿ:ಇಲ್ಲಿನ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಲು ಹಾಗೂ ಜನತೆಗೆ ಸೂಕ್ತ ನಾಗರಿಕ ಸೌಲಭ್ಯಗಳನ್ನು ಕಲ್ಪಿಸಲು ಆಗ್ರಹಿಸಿ  ಬಳ್ಳಾರಿ ನಾಗರಿಕ ಹೋರಾಟ ಸಮಿತಿ ಯಿಂದ ಮಹಾನಗರ ಪಾಲಿಕೆಯ ಮುಂದೆ ಬೃಹತ್ ಪ್ರತಿಭಟನೆಯನ್ನುನಡೆಸಲಾಯಿತು. ಬಳಿಕ ಬೇಡಿಕೆಗಳುಳ್ಳ ಮನವಿ ಪತ್ರವನ್ನು ಮಹಾನಗರ ಪಾಲಿಕೆ  ಆಯುಕ್ತರಿಗೆ ಮತ್ತು ಮಹಾಪೌರರಿಗೆ ಸಲ್ಲಿಸಲಾಯಿತು.ಪ್ರತಿಭಟನೆಯನ್ನುದ್ದೇಶಿಸಿ  ಬಿ.ಎನ್.ಎಚ್.ಎಸ್. ನ ಸಂಚಾಲಕ  ಸೋಮಶೇಖರ್ ಗೌಡ ಅವರು ಮಾತನಾಡಿ, “ಈಗಾಗಲೇ ನಗರಾದ್ಯಂತ ಕೈಗೊಂಡಿರುವ ಆಮೆಗತಿಯಲ್ಲಿ ಸಾಗುತ್ತಿರುವ ಎಲ್ಲಾ ಕಾಮಗಾರಿಗಳನ್ನು ವಿಳಂಬ ಮಾಡದೆ ತುರ್ತಾಗಿ ಮಾಡಿ ಮುಗಿಸಿ, ರಸ್ತೆಗಳ ಕುಣಿಗಳನ್ನು ಮುಚ್ಚಿ, ಬಾರಿ ವಾಹನಗಳ ಸಂಚಾರ ತಡೆಯಲು ತುರ್ತಾಗಿ ವರ್ತುಲ ರಸ್ತೆ ನಿರ್ಮಿಸಬೇಕು ಎಂದರು.ರಾತ್ರಿ ವೇಳೆಯಲ್ಲಿ ಕಾಮಗಾರಿಯ ಕೆಲಸಗಳನ್ನು ಕೈಗೊಂಡು ಜನತೆಗೆ ತೊಂದರೆಯಾಗದಂತೆ ಕಾಮಗಾರಿಗಳನ್ನು ಬೇಗ ಮುಗಿಸಿ, ಹಳೇ ಬಸ್ ನಿಲ್ದಾಣದ ಬಳಿ ಒಂದು ಕಡೆ ಸರ್ವಿಸ್ ರಸ್ತೆ ನಿರ್ಮಿಸಿ, ವಾಹನಗಳ ಸಂಚಾರಕ್ಕೆ ಇರುವ ಅಡ್ಡಿಯನ್ನು ತೆರವುಗೊಳಿಸಿ, ಬೀದಿ ನಾಯಿ ಹಾಗೂ ಬೀಡಾಡಿ ದನಗಳಿಂದ ಆಗುವ ಅಪಾಯ ತಪ್ಪಿಸಲು ಕ್ರಮ ಕೈಗೊಳ್ಳಿ, ಕುಡಿಯುವ ನೀರಿನಲ್ಲಿ ಚರಂಡಿ ನೀರು ಮಿಶ್ರಿತವಾಗದಂತೆ ಕ್ರಮ ಕೈಗೊಳ್ಳಿಬೇಕು. ಅವೈಜ್ಞಾನಿಕ ಯೋಜನೆರಹಿತ ಕಾಮಗಾರಿಗಳಿಂದ ಜನತೆಗೆ ಕಿರುಕುಳವಾಗುವುದನ್ನು ತಪ್ಪಿಸಲು ಕಾಮಗಾರಿಗಳನ್ನು ತುರ್ತಾಗಿ ಕ್ರಮ ಕೈಗೊಳ್ಳಬೇಕೆಂದು ಬಿಎನ್ಎಚ್ಎಸ್ ಆಗ್ರಹಿಸುತ್ತದೆ ಎಂದರು.ಪ್ರತಿಭಟನೆ ಅಧ್ಯಕ್ಷತೆ ವಹಿಸಿದ್ದ ಸಮಿತಿ ಸದಸ್ಯೆ  ನಾಗರತ್ನ ಅವರ ಮಾತನಾಡಿ, ನಗರದಾದ್ಯಂತ ಹೆಚ್ಚುತ್ತಿರುವ ಕುಣಿ ತುಂಬಿದ ರಸ್ತೆಗಳು, ನಿರ್ವಹಣೆ ಯಿಲ್ಲದ ಒಳಚರಂಡಿಗಳು, ಅನೇಕ ಕಡೆ ಪೈಪ್‌ಲೈನ್ ಹಾಕಲು ತೋಡಿದ, ವರ್ಷಗಟ್ಟಲೆ ಹಾಗೇ ಇರುವ ರಸ್ತೆಯ ತಗ್ಗುಗಳು, ವರ್ತುಲ ರಸ್ತೆ ಇಲ್ಲದೆ ಇರುವುದರಿಂದ ನಗರದಲ್ಲಿ 60-70 ಟನ್ ವಾಹನಗಳ ಓಡಾಟದಿಂದ ಗಣಿಗಳ ರಸ್ತೆಯಂತೆ ತಗ್ಗು ದಿನ್ನೆಗಳಾಗಿರುವ ದೂಳು ತುಂಬಿದ ರಸ್ತೆಗಳು, ನಗರವ್ಯಾಪಿ ಬೀದಿನಾಯಿಗಳು ಹಾಗೂ ಬಿಡಾಡಿ ದನಗಳು. ಅನೇಕ ಕಡೆಗಳಲ್ಲಿ ಕುಡಿಯುವ ನೀರಿನ ಜೊತೆಯಲ್ಲಿ ಚರಂಡಿ ನೀರು ಬರುವುದು, ಅವೈಜ್ಞಾನಿಕವಾಗಿ ರಸ್ತೆಗಳನ್ನು ಎತ್ತರಿಸುತ್ತಾ ಹೋಗಿ ಮನೆಗಳು ತೆಗ್ಗಿನಲ್ಲಿದ್ದು, ಮಳೆ ಬಂದರೆ ಮನೆಗಳಿಗೆ ನೀರು ನುಗ್ಗುವ ಭಯ. ಇಂತಹ ಅನೇಕ ಸಮಸ್ಯೆಗಳಿಂದ ನಗರದ ಜನತೆ ತತ್ತರಿಸಿ ಹೋಗಿದ್ದಾರೆ ಆಕ್ರೋಶ ವ್ಯಕ್ತಪಡಿಸಿದರು.ಮಹಾನಗರ ಪಾಲಿಕೆಯು ಕೂಡಲೇ  ಎಚ್ಚೆತ್ತುಕೊಂಡು ಈ ಜ್ವಲಂತ ಸಮಸ್ಯೆಗಳನ್ನು ಬಗೆಹರಿಸದಿದ್ದರೆ ಮುಂದಿನ ದಿನಗಳಲ್ಲಿ ಬೃಹತ್‌ ಹೋರಾಟಕ್ಕೆ ಜನತೆ ಸಜ್ಜುಗೊಳಿಸಲಾಗುವದು ಎಂದರು.ಬಿ.ಎನ್.ಎಚ್.ಎಸ್ ನ ಪದಾಧಿಕಾರಿಗಳಾದ  ಮಂಜುನಾಥ ,ಶ್ಯಾಮಸುಂದರ್, ಗುರುರಾಜ್, ಗೋಪಾಲ ಕೃಷ್ಣ, ವಿರೇಶ್, ಅಂಥೋನಿ ಮತ್ತಿತರರು ಸೇರಿದಂತೆ ಹಲವಾರು ಬಡವಣೆಗಳಿಂದ ದೊಡ್ಡ ಸಂಖ್ಯೆಯಲ್ಲಿ ಜನತೆ ಭಾಗವಸಿದ್ದರು.

• ಸೆಕ್ಯುಲರ್‌ ವಾಯ್ಸ್‌ ನ್ಯೂಸ್‌ ಬಳ್ಳಾರಿ:

ಇಲ್ಲಿನ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಲು ಹಾಗೂ ಜನತೆಗೆ ಸೂಕ್ತ ನಾಗರಿಕ ಸೌಲಭ್ಯಗಳನ್ನು ಕಲ್ಪಿಸಲು ಆಗ್ರಹಿಸಿ  ಬಳ್ಳಾರಿ ನಾಗರಿಕ ಹೋರಾಟ ಸಮಿತಿ ಯಿಂದ ಮಹಾನಗರ ಪಾಲಿಕೆಯ ಮುಂದೆ ಬೃಹತ್ ಪ್ರತಿಭಟನೆಯನ್ನುನಡೆಸಲಾಯಿತು. ಬಳಿಕ ಬೇಡಿಕೆಗಳುಳ್ಳ ಮನವಿ ಪತ್ರವನ್ನು ಮಹಾನಗರ ಪಾಲಿಕೆ  ಆಯುಕ್ತರಿಗೆ ಮತ್ತು ಮಹಾಪೌರರಿಗೆ ಸಲ್ಲಿಸಲಾಯಿತು.

ಪ್ರತಿಭಟನೆಯನ್ನುದ್ದೇಶಿಸಿ  ಬಿ.ಎನ್.ಎಚ್.ಎಸ್. ನ ಸಂಚಾಲಕ  ಸೋಮಶೇಖರ್ ಗೌಡ ಅವರು ಮಾತನಾಡಿ, “ಈಗಾಗಲೇ ನಗರಾದ್ಯಂತ ಕೈಗೊಂಡಿರುವ ಆಮೆಗತಿಯಲ್ಲಿ ಸಾಗುತ್ತಿರುವ ಎಲ್ಲಾ ಕಾಮಗಾರಿಗಳನ್ನು ವಿಳಂಬ ಮಾಡದೆ ತುರ್ತಾಗಿ ಮಾಡಿ ಮುಗಿಸಿ, ರಸ್ತೆಗಳ ಕುಣಿಗಳನ್ನು ಮುಚ್ಚಿ, ಬಾರಿ ವಾಹನಗಳ ಸಂಚಾರ ತಡೆಯಲು ತುರ್ತಾಗಿ ವರ್ತುಲ ರಸ್ತೆ ನಿರ್ಮಿಸಬೇಕು ಎಂದರು.

ರಾತ್ರಿ ವೇಳೆಯಲ್ಲಿ ಕಾಮಗಾರಿಯ ಕೆಲಸಗಳನ್ನು ಕೈಗೊಂಡು ಜನತೆಗೆ ತೊಂದರೆಯಾಗದಂತೆ ಕಾಮಗಾರಿಗಳನ್ನು ಬೇಗ ಮುಗಿಸಿ, ಹಳೇ ಬಸ್ ನಿಲ್ದಾಣದ ಬಳಿ ಒಂದು ಕಡೆ ಸರ್ವಿಸ್ ರಸ್ತೆ ನಿರ್ಮಿಸಿ, ವಾಹನಗಳ ಸಂಚಾರಕ್ಕೆ ಇರುವ ಅಡ್ಡಿಯನ್ನು ತೆರವುಗೊಳಿಸಿ, ಬೀದಿ ನಾಯಿ ಹಾಗೂ ಬೀಡಾಡಿ ದನಗಳಿಂದ ಆಗುವ ಅಪಾಯ ತಪ್ಪಿಸಲು ಕ್ರಮ ಕೈಗೊಳ್ಳಿ, ಕುಡಿಯುವ ನೀರಿನಲ್ಲಿ ಚರಂಡಿ ನೀರು ಮಿಶ್ರಿತವಾಗದಂತೆ ಕ್ರಮ ಕೈಗೊಳ್ಳಿಬೇಕು. ಅವೈಜ್ಞಾನಿಕ ಯೋಜನೆರಹಿತ ಕಾಮಗಾರಿಗಳಿಂದ ಜನತೆಗೆ ಕಿರುಕುಳವಾಗುವುದನ್ನು ತಪ್ಪಿಸಲು ಕಾಮಗಾರಿಗಳನ್ನು ತುರ್ತಾಗಿ ಕ್ರಮ ಕೈಗೊಳ್ಳಬೇಕೆಂದು ಬಿಎನ್ಎಚ್ಎಸ್ ಆಗ್ರಹಿಸುತ್ತದೆ ಎಂದರು.

ಪ್ರತಿಭಟನೆ ಅಧ್ಯಕ್ಷತೆ ವಹಿಸಿದ್ದ ಸಮಿತಿ ಸದಸ್ಯೆ  ನಾಗರತ್ನ ಅವರ ಮಾತನಾಡಿ, ನಗರದಾದ್ಯಂತ ಹೆಚ್ಚುತ್ತಿರುವ ಕುಣಿ ತುಂಬಿದ ರಸ್ತೆಗಳು, ನಿರ್ವಹಣೆ ಯಿಲ್ಲದ ಒಳಚರಂಡಿಗಳು, ಅನೇಕ ಕಡೆ ಪೈಪ್‌ಲೈನ್ ಹಾಕಲು ತೋಡಿದ, ವರ್ಷಗಟ್ಟಲೆ ಹಾಗೇ ಇರುವ ರಸ್ತೆಯ ತಗ್ಗುಗಳು, ವರ್ತುಲ ರಸ್ತೆ ಇಲ್ಲದೆ ಇರುವುದರಿಂದ ನಗರದಲ್ಲಿ 60-70 ಟನ್ ವಾಹನಗಳ ಓಡಾಟದಿಂದ ಗಣಿಗಳ ರಸ್ತೆಯಂತೆ ತಗ್ಗು ದಿನ್ನೆಗಳಾಗಿರುವ ದೂಳು ತುಂಬಿದ ರಸ್ತೆಗಳು, ನಗರವ್ಯಾಪಿ ಬೀದಿನಾಯಿಗಳು ಹಾಗೂ ಬಿಡಾಡಿ ದನಗಳು. ಅನೇಕ ಕಡೆಗಳಲ್ಲಿ ಕುಡಿಯುವ ನೀರಿನ ಜೊತೆಯಲ್ಲಿ ಚರಂಡಿ ನೀರು ಬರುವುದು, ಅವೈಜ್ಞಾನಿಕವಾಗಿ ರಸ್ತೆಗಳನ್ನು ಎತ್ತರಿಸುತ್ತಾ ಹೋಗಿ ಮನೆಗಳು ತೆಗ್ಗಿನಲ್ಲಿದ್ದು, ಮಳೆ ಬಂದರೆ ಮನೆಗಳಿಗೆ ನೀರು ನುಗ್ಗುವ ಭಯ. ಇಂತಹ ಅನೇಕ ಸಮಸ್ಯೆಗಳಿಂದ ನಗರದ ಜನತೆ ತತ್ತರಿಸಿ ಹೋಗಿದ್ದಾರೆ ಆಕ್ರೋಶ ವ್ಯಕ್ತಪಡಿಸಿದರು.

ಮಹಾನಗರ ಪಾಲಿಕೆಯು ಕೂಡಲೇ  ಎಚ್ಚೆತ್ತುಕೊಂಡು ಈ ಜ್ವಲಂತ ಸಮಸ್ಯೆಗಳನ್ನು ಬಗೆಹರಿಸದಿದ್ದರೆ ಮುಂದಿನ ದಿನಗಳಲ್ಲಿ ಬೃಹತ್‌ ಹೋರಾಟಕ್ಕೆ ಜನತೆ ಸಜ್ಜುಗೊಳಿಸಲಾಗುವದು ಎಂದರು.

ಬಿ.ಎನ್.ಎಚ್.ಎಸ್ ನ ಪದಾಧಿಕಾರಿಗಳಾದ  ಮಂಜುನಾಥ ,ಶ್ಯಾಮಸುಂದರ್, ಗುರುರಾಜ್, ಗೋಪಾಲ ಕೃಷ್ಣ, ವಿರೇಶ್, ಅಂಥೋನಿ ಮತ್ತಿತರರು ಸೇರಿದಂತೆ ಹಲವಾರು ಬಡವಣೆಗಳಿಂದ ದೊಡ್ಡ ಸಂಖ್ಯೆಯಲ್ಲಿ ಜನತೆ ಭಾಗವಸಿದ್ದರು.