🎬CINI NEWS : “ಬೆಂಗಳೂರು |ಸ್ಟಾರ್‌ಗಳ ಸಿನಿಮಾ ಹಬ್ಬ: ಸುದೀಪ್ ನಟನೆಯ ಮಾರ್ಕ್ ಮತ್ತು ಶಿವರಾಜ್‌ಕುಮಾರ್, ಉಪೇಂದ್ರ, ರಾಜ್ ಬಿ. ಶೆಟ್ಟಿ ನಟಿಸಿರುವ “45” ಇಂದು ರಿಲೀಸ್”
• ಸೆಕ್ಯುಲರ್ ವಾಯ್ಸ್ ಡೆಸ್ಕ್ ನ್ಯೂಸ್ :
ಕನ್ನಡ ಸಿನೆಮಾ ಅಭಿಮಾನಿಗಳಿಗೆ ಗುರುವಾರ (ಡಿಸೆಂಬರ್ 25) ಎರಡು ದೊಡ್ಡ ಸರ್ಪ್ರೈಸ್ ಗಿಫ್ಟ್. ಕಿಚ್ಚ ಸುದೀಪ್ ನಟನೆಯ ‘ಮಾರ್ಕ್’ ಹಾಗೂ ಶಿವರಾಜ್‌ಕುಮಾರ್, ಉಪೇಂದ್ರ, ರಾಜ್ ಬಿ. ಶೆಟ್ಟಿ ನಟಿಸಿರುವ ‘45’ ಸಿನಿಮಾಗಳು ಒಂದೇ ದಿನ ತೆರೆಕಾಣಲಿದೆ. ಪ್ರೇಕ್ಷಕರು ಈ ಸಿನಿಮಾ ಕ್ಷಣಕ್ಕಾಗಿ ಕಾತರದಿಂದ ಕಾಯುತ್ತಿದ್ದಾರೆ.
•ಕಿಚ್ಚ್ ಸುದೀಪ್ ನಟನೆಯ ಮಾರ್ಕ್ :
ಸುದೀಪ್ ಅಭಿನಯದ ‘ಮಾರ್ಕ್’ ಅವರ 47ನೇ ಸಿನಿಮಾ. ಚಿತ್ರದಲ್ಲಿ ಅವರು ಅಜಯ್ ಮಾರ್ಕಂಡೆ ಪಾತ್ರದಲ್ಲಿ ಕಾಣಿಸುತ್ತಿದ್ದಾರೆ. ‘ಮ್ಯಾಕ್ಸ್’ ಚಿತ್ರ ನಿರ್ದೇಶಕ ವಿಜಯ್ ಕಾರ್ತಿಕೇಯ ನಿರ್ದೇಶನದ ಈ ಚಿತ್ರವನ್ನು ಸತ್ಯಜ್ಯೋತಿ ಫಿಲ್ಮ್ಸ್ ನಿರ್ಮಿಸಿದೆ. ಕಿಚ್ಚ ಸುದೀಪ್ ಅಭಿನಯ ಮತ್ತು ಆ್ಯಕ್ಷನ್ ಸನ್ನಿವೇಶಗಳು ಪ್ರೇಕ್ಷಕರ ಗಮನ ಸೆಳೆಯಲಿದ್ದಾರೆ ಎಂದು ನಿರೀಕ್ಷೆ.
• ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ನಿರ್ದೇಶನದ ‘45’ ಚಿತ್ರ
ಇದೇ ದಿನ, ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ನಿರ್ದೇಶನದ ‘45’ ಚಿತ್ರವೂ ತೆರೆಕಾಣಲಿದೆ. ಶಿವರಾಜ್‌ಕುಮಾರ್, ಉಪೇಂದ್ರ, ರಾಜ್ ಬಿ. ಶೆಟ್ಟಿ ತ್ರಯದ ಅಭಿನಯವೂ, ವಿಶೇಷವಾಗಿ ಶಿವರಾಜ್‌ಕುಮಾರ್ ಮಹಿಳಾ ಪಾತ್ರದಲ್ಲಿ ಕಾಣಿಸಿಕೊಂಡಿರುವುದು ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿದೆ. ಈಗಾಗಲೇ ಟ್ರೇಲರ್ ಬಿಡುಗಡೆಯಿಂದ ಚಿತ್ರಕ್ಕೆ ಸಾಕಷ್ಟು ಬಂಡವಾಳ ಬಂದಿದೆ.
ಮಾರ್ಕ್ ಹಾಗೂ 45 ಸಿನಿಮಾಗಳ ಬಿಡುಗಡೆ ಬಳಿಕ ಪ್ರೇಕ್ಷಕರು ಹೇಗೆ ಪ್ರತಿಕ್ರಿಯಿಸುತ್ತಾರೆ ಎಂಬುದು ಕಾದು ನೋಡಬೇಕಾದ ವಿಷಯವಾಗಿದೆ.