🚨 EXCLUSIVE NEWS : ಕೊಪ್ಪಳ| ನಾಳೆ 8ನೇ,9ನೇ  ಎಸ್‌ಎ-02 ಪರೀಕ್ಷೆ: ಮುನಿರಾಬಾದ್ ಡಯಟ್ ಏಕಾಏಕಿ ಆದೇಶ – ಅನುದಾನಿತ ಶಾಲೆಗಳಿಗೆ ಆರ್ಥಿಕ ಹೊರೆ; ತಾರತಮ್ಯ ಆರೋಪ”

By admin

 EXCLUSIVE NEWS : ಕೊಪ್ಪಳ| 8ನೇ,9ನೇ  ಎಸ್‌ಎ-02 ಪರೀಕ್ಷೆ: ಮುನಿರಾಬಾದ್ ಡಯಟ್ ಏಕಾಏಕಿ ಆದೇಶ – ಅನುದಾನಿತ ಶಾಲೆಗಳಿಗೆ ಆರ್ಥಿಕ ಹೊರೆ; ತಾರತಮ್ಯ ಆರೋಪ”

⭐ ವರದಿ: ಭೀಮಾಶಂಕರ ಪಾಣೇಗಾಂವ.

——————————————————-

Contents
 EXCLUSIVE NEWS : ಕೊಪ್ಪಳ| 8ನೇ,9ನೇ  ಎಸ್‌ಎ-02 ಪರೀಕ್ಷೆ: ಮುನಿರಾಬಾದ್ ಡಯಟ್ ಏಕಾಏಕಿ ಆದೇಶ – ಅನುದಾನಿತ ಶಾಲೆಗಳಿಗೆ ಆರ್ಥಿಕ ಹೊರೆ; ತಾರತಮ್ಯ ಆರೋಪ”⭐ ವರದಿ: ಭೀಮಾಶಂಕರ ಪಾಣೇಗಾಂವ.• ಸೆಕ್ಯಲರ್‌ ವಾಯ್ಸ್‌ ನ್ಯೂಸ್‌ ಕೊಪ್ಪಳ:2025-26ನೇ ಸಾಲಿನ ಎಸ್‌ಎ-02 ಪರೀಕ್ಷೆಗೆ ಸಂಬಂಧಿಸಿ ಮುನಿರಾಬಾದ್ ಡಯಟ್ ಏಕಾಏಕಿ ಆದೇಶ ಹೊರಡಿಸಿರುವುದರಿಂದ ಅನುದಾನಿತ ಪ್ರೌಢಶಾಲೆಗಳಲ್ಲೀಗ ಗೊಂದಲ ಹಾಗೂ ಆರ್ಥಿಕ ಹೊರೆ ಉಂಟಾಗಿದೆ.ಡಯಟ್ ಜ್ಞಾಪನದ ಪ್ರಕಾರ, ಮೊದಲು ಎಸ್‌ಎ-02 ಪರೀಕ್ಷೆಯನ್ನು ಸರ್ಕಾರಿ ಶಾಲೆಗಳ 6ರಿಂದ 9ನೇ ತರಗತಿವರೆಗೆ ಮಾತ್ರ ನಡೆಸಲು ಸೂಚಿಸಲಾಗಿತ್ತು.ಆದರೆ ಮಾರ್ಚ್ 23ರಂದು ಡಿ.ಎಸ್.ಇ.ಆರ್.ಟಿ ನಿರ್ದೇಶಕರೊಂದಿಗೆ ನಡೆದ ಗೂಗಲ್ ಸಭೆಯ ನಿರ್ದೇಶನದಂತೆ ಇದೀಗ ಅನುದಾನಿತ ಪ್ರೌಢಶಾಲೆಗಳ 8 ಮತ್ತು 9ನೇ ತರಗತಿ ವಿದ್ಯಾರ್ಥಿಗಳಿಗೂ ಪರೀಕ್ಷೆ ನಡೆಸಲು ಆದೇಶಿಸಲಾಗಿದೆ. ಈ ಸಂಬಂಧ ಕೊಪ್ಪಳ, ಯಲಬುರ್ಗಾ, ಗಂಗಾವತಿ ಹಾಗೂ ಕುಷ್ಟಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ (ಬಿ.ಇ.ಒ) ಸೂಚನೆ ನೀಡಲಾಗಿದೆ.ಮಾರ್ಚ್ 24ರಿಂದ ನಡೆಯಲಿರುವ ಪರೀಕ್ಷೆಗೆ ಸಂಬಂಧಿಸಿದಂತೆ ಪ್ರಶ್ನೆಪತ್ರಿಕೆಗಳನ್ನು ಪ್ರತಿದಿನ ಬೆಳಿಗ್ಗೆ 9.15ಕ್ಕೆ ಶಾಲೆಯ ಮುಖ್ಯಶಿಕ್ಷಕರ ಲಾಗಿನ್‌ಗೆ ಕಳುಹಿಸಲಾಗುತ್ತದೆ. ಬಳಿಕ ಮುಖ್ಯಶಿಕ್ಷಕರು ಪ್ರಶ್ನೆಪತ್ರಿಕೆಗಳನ್ನು ಪ್ರಿಂಟ್ ತೆಗೆದು ವಿದ್ಯಾರ್ಥಿಗಳಿಗೆ ವಿತರಿಸಿ ಪರೀಕ್ಷೆ ನಡೆಸಬೇಕಾಗಿದೆ.ಸರ್ಕಾರಿ ಶಾಲೆಗಳಿಗೆ ಪ್ರಶ್ನೆಪತ್ರಿಕೆ ಪ್ರಿಂಟ್ ವೆಚ್ಚವನ್ನು ಸರ್ಕಾರ ಹಾಗೂ ಶಿಕ್ಷಣ ಇಲಾಖೆ ಭರಿಸುತ್ತಿದ್ದು, ಅನುದಾನಿತ ಶಾಲೆಗಳು ಮತ್ತೆ ಈ ಆದೇಶದಿಂದ ಶಾಲಾ ಮಟ್ಟದಲ್ಲೇ ತಮ್ಮದೇ ವೆಚ್ಚದಲ್ಲಿ ಪ್ರಿಂಟ್ ಮಾಡಿಕೊಳ್ಳಬೇಕಾಗಿದೆ.ಹಳೆ ಪದ್ಧತಿಯಂತೆ  ಶಾಲಾ ಮಟ್ಟದಲ್ಲೇ ಅನುದಾನಿತ ಶಾಲೆಗಳು ಈಗಾಗಲೇ ಪ್ರಶ್ನೆಪತ್ರಿಕೆಗಳನ್ನು ಸಿದ್ಧಪಡಿಸಿ ಪ್ರಿಂಟ್ ಮಾಡಿಕೊಂಡಿದ್ದವು. ಹೊಸ ಆದೇಶದಿಂದ ಆ ಪ್ರಶ್ನೆಪತ್ರಿಕೆಗಳು ವ್ಯರ್ಥವಾಗುವ ಪರಿಸ್ಥಿತಿ ನಿರ್ಮಾಣವಾಗಿದೆ.ಇದರಿಂದ ಒಂದು ಶಾಲೆಗೆ ಕನಿಷ್ಠ 3ರಿಂದ 4 ಸಾವಿರ ರೂ.ವರೆಗೆ ಹೆಚ್ಚುವರಿ ಖರ್ಚು ತಗುಲುತ್ತಿದೆ ಎಂದು ತಿಳಿದುಬಂದಿದೆ. ಜೊತೆಗೆ, ಅನುದಾನಿತ ಶಾಲೆಗಳಿಗೆ ತಡವಾಗಿ ಮಾಹಿತಿ ತಲುಪಿರುವುದು ಅಸಮಾಧಾನಕ್ಕೆ ಕಾರಣವಾಗಿದೆ.“ಮುಂಚಿತ ಮಾಹಿತಿ ನೀಡದೆ ಏಕಾಏಕಿ ಆದೇಶ ಹೊರಡಿಸಿರುವುದು ಅನ್ಯಾಯಕರ ಕ್ರಮ” ಎಂದು ಅನುದಾನಿತ ಪ್ರೌಢಶಾಲೆ ಶಿಕ್ಷಕರ ಸಂಘದ ಸದಸ್ಯರೊಬ್ಬರು ಅಭಿಪ್ರಾಯಪಟ್ಟರು.“ಸರ್ಕಾರಿ ಮತ್ತು ಅನುದಾನಿತ ಪ್ರೌಢಶಾಲೆಗಳ ನಡುವೆ ಶಿಕ್ಷಣ ಇಲಾಖೆ ತಾರತಮ್ಯ ನೀತಿ ಅನುಸರಿಸುತ್ತಿರುವುದು ಕಂಡು ಬರುತ್ತಿದೆ” ಎಂದು ಆರೋಪಿಸಲಾಗಿದೆ.“ಈ ರೀತಿಯ ಆದೇಶಗಳಿಂದ ಅನುದಾನಿತ ಶಾಲೆಗಳ ಮೇಲೆ ಪ್ರಶ್ನೆಪತ್ರಿಕೆ ಪ್ರಿಂಟ್ ಸೇರಿದಂತೆ ಆರ್ಥಿಕ ಹೊರೆ ಹೆಚ್ಚುತ್ತಿದೆ; ಇಂತಹ ಕ್ರಮಗಳು ನ್ಯಾಯಸಮ್ಮತವಲ್ಲ” ಎಂದು ಆಕ್ರೋಶ ವ್ಯಕ್ತವಾಗಿದೆ.ಒಟ್ಟಾರೆಯಾಗಿ, ಈ ಆದೇಶದಿಂದ ಅನುದಾನಿತ ಪ್ರೌಢಶಾಲೆಗಳ  ಶಿಕ್ಷಕರು ಸಮಸ್ಯೆಗಳನ್ನು ಎದುರಿಸುವಂತ ಪರಿಸ್ಥಿತಿ ನಿರ್ಮಾಣವಾಗಿದೆ.ಹೀಗಾಗಿ, ಇಂತಹ ನಿರ್ಧಾರಗಳನ್ನು ಮುಂಚಿತವಾಗಿ ತಿಳಿಸಿ, ಎಲ್ಲ ಶಾಲೆಗಳಿಗೂ ಸಮಾನ ವ್ಯವಸ್ಥೆ ಕಲ್ಪಿಸಬೇಕು ಎಂದು ಅನುದಾನಿತ ಪ್ರೌಢಶಾಲಾ ಶಿಕ್ಷಕರ ಸಂಘ ಒತ್ತಾಯಿಸಿದೆ.

• ಸೆಕ್ಯಲರ್‌ ವಾಯ್ಸ್‌ ನ್ಯೂಸ್‌ ಕೊಪ್ಪಳ:

2025-26ನೇ ಸಾಲಿನ ಎಸ್‌ಎ-02 ಪರೀಕ್ಷೆಗೆ ಸಂಬಂಧಿಸಿ ಮುನಿರಾಬಾದ್ ಡಯಟ್ ಏಕಾಏಕಿ ಆದೇಶ ಹೊರಡಿಸಿರುವುದರಿಂದ ಅನುದಾನಿತ ಪ್ರೌಢಶಾಲೆಗಳಲ್ಲೀಗ ಗೊಂದಲ ಹಾಗೂ ಆರ್ಥಿಕ ಹೊರೆ ಉಂಟಾಗಿದೆ.

ಡಯಟ್ ಜ್ಞಾಪನದ ಪ್ರಕಾರ, ಮೊದಲು ಎಸ್‌ಎ-02 ಪರೀಕ್ಷೆಯನ್ನು ಸರ್ಕಾರಿ ಶಾಲೆಗಳ 6ರಿಂದ 9ನೇ ತರಗತಿವರೆಗೆ ಮಾತ್ರ ನಡೆಸಲು ಸೂಚಿಸಲಾಗಿತ್ತು.

ಆದರೆ ಮಾರ್ಚ್ 23ರಂದು ಡಿ.ಎಸ್.ಇ.ಆರ್.ಟಿ ನಿರ್ದೇಶಕರೊಂದಿಗೆ ನಡೆದ ಗೂಗಲ್ ಸಭೆಯ ನಿರ್ದೇಶನದಂತೆ ಇದೀಗ ಅನುದಾನಿತ ಪ್ರೌಢಶಾಲೆಗಳ 8 ಮತ್ತು 9ನೇ ತರಗತಿ ವಿದ್ಯಾರ್ಥಿಗಳಿಗೂ ಪರೀಕ್ಷೆ ನಡೆಸಲು ಆದೇಶಿಸಲಾಗಿದೆ.
ಈ ಸಂಬಂಧ ಕೊಪ್ಪಳ, ಯಲಬುರ್ಗಾ, ಗಂಗಾವತಿ ಹಾಗೂ ಕುಷ್ಟಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ (ಬಿ.ಇ.ಒ) ಸೂಚನೆ ನೀಡಲಾಗಿದೆ.

ಮಾರ್ಚ್ 24ರಿಂದ ನಡೆಯಲಿರುವ ಪರೀಕ್ಷೆಗೆ ಸಂಬಂಧಿಸಿದಂತೆ ಪ್ರಶ್ನೆಪತ್ರಿಕೆಗಳನ್ನು ಪ್ರತಿದಿನ ಬೆಳಿಗ್ಗೆ 9.15ಕ್ಕೆ ಶಾಲೆಯ ಮುಖ್ಯಶಿಕ್ಷಕರ ಲಾಗಿನ್‌ಗೆ ಕಳುಹಿಸಲಾಗುತ್ತದೆ. ಬಳಿಕ ಮುಖ್ಯಶಿಕ್ಷಕರು ಪ್ರಶ್ನೆಪತ್ರಿಕೆಗಳನ್ನು ಪ್ರಿಂಟ್ ತೆಗೆದು ವಿದ್ಯಾರ್ಥಿಗಳಿಗೆ ವಿತರಿಸಿ ಪರೀಕ್ಷೆ ನಡೆಸಬೇಕಾಗಿದೆ.

ಸರ್ಕಾರಿ ಶಾಲೆಗಳಿಗೆ ಪ್ರಶ್ನೆಪತ್ರಿಕೆ ಪ್ರಿಂಟ್ ವೆಚ್ಚವನ್ನು ಸರ್ಕಾರ ಹಾಗೂ ಶಿಕ್ಷಣ ಇಲಾಖೆ ಭರಿಸುತ್ತಿದ್ದು, ಅನುದಾನಿತ ಶಾಲೆಗಳು ಮತ್ತೆ ಈ ಆದೇಶದಿಂದ ಶಾಲಾ ಮಟ್ಟದಲ್ಲೇ ತಮ್ಮದೇ ವೆಚ್ಚದಲ್ಲಿ ಪ್ರಿಂಟ್ ಮಾಡಿಕೊಳ್ಳಬೇಕಾಗಿದೆ.

ಹಳೆ ಪದ್ಧತಿಯಂತೆ  ಶಾಲಾ ಮಟ್ಟದಲ್ಲೇ ಅನುದಾನಿತ ಶಾಲೆಗಳು ಈಗಾಗಲೇ ಪ್ರಶ್ನೆಪತ್ರಿಕೆಗಳನ್ನು ಸಿದ್ಧಪಡಿಸಿ ಪ್ರಿಂಟ್ ಮಾಡಿಕೊಂಡಿದ್ದವು. ಹೊಸ ಆದೇಶದಿಂದ ಆ ಪ್ರಶ್ನೆಪತ್ರಿಕೆಗಳು ವ್ಯರ್ಥವಾಗುವ ಪರಿಸ್ಥಿತಿ ನಿರ್ಮಾಣವಾಗಿದೆ.

ಇದರಿಂದ ಒಂದು ಶಾಲೆಗೆ ಕನಿಷ್ಠ 3ರಿಂದ 4 ಸಾವಿರ ರೂ.ವರೆಗೆ ಹೆಚ್ಚುವರಿ ಖರ್ಚು ತಗುಲುತ್ತಿದೆ ಎಂದು ತಿಳಿದುಬಂದಿದೆ. ಜೊತೆಗೆ, ಅನುದಾನಿತ ಶಾಲೆಗಳಿಗೆ ತಡವಾಗಿ ಮಾಹಿತಿ ತಲುಪಿರುವುದು ಅಸಮಾಧಾನಕ್ಕೆ ಕಾರಣವಾಗಿದೆ.

“ಮುಂಚಿತ ಮಾಹಿತಿ ನೀಡದೆ ಏಕಾಏಕಿ ಆದೇಶ ಹೊರಡಿಸಿರುವುದು ಅನ್ಯಾಯಕರ ಕ್ರಮ” ಎಂದು ಅನುದಾನಿತ ಪ್ರೌಢಶಾಲೆ ಶಿಕ್ಷಕರ ಸಂಘದ ಸದಸ್ಯರೊಬ್ಬರು ಅಭಿಪ್ರಾಯಪಟ್ಟರು.

“ಸರ್ಕಾರಿ ಮತ್ತು ಅನುದಾನಿತ ಪ್ರೌಢಶಾಲೆಗಳ ನಡುವೆ ಶಿಕ್ಷಣ ಇಲಾಖೆ ತಾರತಮ್ಯ ನೀತಿ ಅನುಸರಿಸುತ್ತಿರುವುದು ಕಂಡು ಬರುತ್ತಿದೆ” ಎಂದು ಆರೋಪಿಸಲಾಗಿದೆ.

“ಈ ರೀತಿಯ ಆದೇಶಗಳಿಂದ ಅನುದಾನಿತ ಶಾಲೆಗಳ ಮೇಲೆ ಪ್ರಶ್ನೆಪತ್ರಿಕೆ ಪ್ರಿಂಟ್ ಸೇರಿದಂತೆ ಆರ್ಥಿಕ ಹೊರೆ ಹೆಚ್ಚುತ್ತಿದೆ; ಇಂತಹ ಕ್ರಮಗಳು ನ್ಯಾಯಸಮ್ಮತವಲ್ಲ” ಎಂದು ಆಕ್ರೋಶ ವ್ಯಕ್ತವಾಗಿದೆ.

ಒಟ್ಟಾರೆಯಾಗಿ, ಈ ಆದೇಶದಿಂದ ಅನುದಾನಿತ ಪ್ರೌಢಶಾಲೆಗಳ  ಶಿಕ್ಷಕರು ಸಮಸ್ಯೆಗಳನ್ನು ಎದುರಿಸುವಂತ ಪರಿಸ್ಥಿತಿ ನಿರ್ಮಾಣವಾಗಿದೆ.

ಹೀಗಾಗಿ, ಇಂತಹ ನಿರ್ಧಾರಗಳನ್ನು ಮುಂಚಿತವಾಗಿ ತಿಳಿಸಿ, ಎಲ್ಲ ಶಾಲೆಗಳಿಗೂ ಸಮಾನ ವ್ಯವಸ್ಥೆ ಕಲ್ಪಿಸಬೇಕು ಎಂದು ಅನುದಾನಿತ ಪ್ರೌಢಶಾಲಾ ಶಿಕ್ಷಕರ ಸಂಘ ಒತ್ತಾಯಿಸಿದೆ.