🚨 BREAKING NEWS :ಚಿಕ್ಕಬಳ್ಳಾಪುರ | ರಕ್ತಸಂಬಂಧ ಮರೆತು ಪ್ರೀತಿಸಿ ಮದುವೆಯಾಗಿ ಪೊಲೀಸರ ರಕ್ಷಣೆ ಕೋರಿದ ಅಕ್ಕ-ತಮ್ಮ ಜೋಡಿ!

Contents
🚨 BREAKING NEWS :ಚಿಕ್ಕಬಳ್ಳಾಪುರ | ರಕ್ತಸಂಬಂಧ ಮರೆತು ಪ್ರೀತಿಸಿ ಮದುವೆಯಾಗಿ ಪೊಲೀಸರ ರಕ್ಷಣೆ ಕೋರಿದ ಅಕ್ಕ-ತಮ್ಮ ಜೋಡಿ! • ಸೆಕ್ಯುಲರ್ ವಾಯ್ಸ್ ನ್ಯೂಸ್ ಚಿಕ್ಕಬಳ್ಳಾಪುರ:ಪ್ರೀತಿ ಕುರುಡು ಎಂಬ ಮಾತಿಗೆ ಸಾಕ್ಷಿಯೆಂಬಂತೆ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ವರಸೆಯಲ್ಲಿ ಅಕ್ಕ-ತಮ್ಮನಾಗಬೇಕಿದ್ದ ಜೋಡಿಯೊಂದು ಮದುವೆಯಾಗಿರುವ ಘಟನೆ ಸಾಮಾಜಿಕ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.ದೇವನಹಳ್ಳಿಯ ಸಾವಕನಹಳ್ಳಿ ಮೂಲದ ಶಶಿಕಲಾ ಹಾಗೂ ಹೊಸಕೋಟೆಯ ಪ್ರವೀಣ್ ಕಳೆದ ಮೂರು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ವಿಶೇಷವೆಂದರೆ, ಇವರಿಬ್ಬರ ತಾಯಂದಿರು ಸ್ವಂತ ಅಕ್ಕ-ತಂಗಿಯರಾಗಿದ್ದು, ವರಸೆಯಲ್ಲಿ ಶಶಿಕಲಾ ಮತ್ತು ಪ್ರವೀಣ್ ಅಕ್ಕ-ತಮ್ಮ ಸಂಬಂಧಕ್ಕೆ ಬರುತ್ತಾರೆ.ಇತ್ತೀಚೆಗೆ ಶಶಿಕಲಾಗೆ ಪೋಷಕರು ಬೇರೊಬ್ಬ ಯುವಕನೊಂದಿಗೆ ಮದುವೆ ನಿಶ್ಚಯಿಸಿ ಲಗ್ನಪತ್ರಿಕೆಯನ್ನೂ ಹಂಚಿದ್ದರು. ಮದುವೆ ನಡೆಯುವ ಮುನ್ನವೇ ಶಶಿಕಲಾ ತನ್ನ ಪ್ರಿಯಕರ ಪ್ರವೀಣ್ ಜೊತೆ ಪರಾರಿಯಾಗಿದ್ದಳು. ಬಳಿಕ ಇಬ್ಬರೂ ಅಂಗಟ್ಟದ ಶಿವನ ಗುಡಿಯಲ್ಲಿ ಶಾಸ್ತ್ರೋಕ್ತವಾಗಿ ವಿವಾಹವಾಗಿದ್ದಾರೆ ಎನ್ನಲಾಗಿದೆ.ಮದುವೆಯ ನಂತರ ಪೋಷಕರಿಂದ ಜೀವ ಬೆದರಿಕೆ ಇದೆ ಎಂದು ಆರೋಪಿಸಿದ ನವಜೋಡಿ, ರಕ್ಷಣೆ ಕೋರಿ ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಗೆ ಧಾವಿಸಿದ್ದಾರೆ.ಈ ವೇಳೆ ಎಸ್‌ಪಿ ಕಚೇರಿ ಆವರಣದಲ್ಲಿ ಕುಟುಂಬಸ್ಥರು ಹಾಗೂ ನವಜೋಡಿ ನಡುವೆ ವಾಗ್ವಾದ ನಡೆದು ಕೆಲಕಾಲ ಉದ್ವಿಗ್ನ ವಾತಾವರಣ ನಿರ್ಮಾಣವಾಯಿತು. ಮಗಳ ನಿರ್ಧಾರಕ್ಕೆ ತಾಯಿ ಕಣ್ಣೀರಿಟ್ಟು ಆಕ್ರಂದನ ವ್ಯಕ್ತಪಡಿಸಿದ ದೃಶ್ಯ ಮನಕಲಕುವಂತಿತ್ತು.ಆದರೆ, “ನನಗೆ ಪ್ರಿಯಕರನೇ ಸರ್ವಸ್ವ. ನಾನು ಪೋಷಕರ ಜೊತೆ ಹೋಗುವುದಿಲ್ಲ,” ಎಂದು ಶಶಿಕಲಾ ಪಟ್ಟು ಹಿಡಿದಿದ್ದಾಳೆ. ಪ್ರಸ್ತುತ ಈ ವಿಲಕ್ಷಣ ಮದುವೆ ಪ್ರಕರಣ ಜಿಲ್ಲೆಯಾದ್ಯಂತ ವ್ಯಾಪಕ ಚರ್ಚೆಗೆ ಕಾರಣವಾಗಿದೆ.
