🔴 LOCAL EXPRESS ;” ಹುಣಸಗಿ |ಮಲ್ಲಿಕಾರ್ಜುನ ಖರ್ಗೆ ಭಾಗವಹಿಸಿದ ವೇದಿಕೆ ಶುದ್ಧೀಕರಣ ದಲಿತ ಮುಖಂಡ ಮಲ್ಲಣ್ಣ ಆಕ್ರೋಶ”.

By admin

🔴 LOCAL EXPRESS :” ಹುಣಸಗಿ |ಮಲ್ಲಿಕಾರ್ಜುನ ಖರ್ಗೆ ಭಾಗವಹಿಸಿದ ವೇದಿಕೆ ಶುದ್ಧೀಕರಣ ದಲಿತ ಮುಖಂಡ ಮಲ್ಲಣ್ಣ ಆಕ್ರೋಶ”

Contents
🔴 LOCAL EXPRESS :” ಹುಣಸಗಿ |ಮಲ್ಲಿಕಾರ್ಜುನ ಖರ್ಗೆ ಭಾಗವಹಿಸಿದ ವೇದಿಕೆ ಶುದ್ಧೀಕರಣ ದಲಿತ ಮುಖಂಡ ಮಲ್ಲಣ್ಣ ಆಕ್ರೋಶ”ಉತ್ತರಾಖಂಡದ ಹಾನಿಯಲ್ಲಿ ಕಾಂಗ್ರೆಸ್‌ ಪಕ್ಷ ಆಯೋಜಿಸಿದ್ದ ಸಾರ್ವಜನಿಕ ಕಾರ್ಯಕ್ರಮದಲ್ಲಿ ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಭಾಗವಹಿಸಿದ್ದ ವೇದಿಕೆಯನ್ನು ಹೋಮ-ಹವನದ ಮೂಲಕ ಶುದ್ದೀಕರಣ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಮಾಜಿ ಎಸ್.ಸಿ ಎಸ್.ಟಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹಾಗೂ ಭೂ ನ್ಯಾಯ ಮಂಡಳಿ ಸದಸ್ಯ ಮಲ್ಲಣ್ಣ ಕಟ್ಟಿಮನಿ ಒತ್ತಾಯಿಸಿದ್ದಾರೆ.ಪತ್ರಿಕಾ ಪ್ರಕಟಣೆ ನೀಡಿರುವ ಅವರು ಇಂತಹ ಕೃತ್ಯಗಳು ಖಂಡನೀಯವಾಗಿದ್ದು, ಭಾರತ ದೇಶದ ಸಂವಿಧಾನ ಹಾಗೂ ಪ್ರಜಾಪ್ರಭುತ್ವ ವ್ಯವಸ್ಥೆಗೆ ಅಗೌರವ ತೋರುವ ಬೆಳವಣಿಗೆಯಾಗಿದೆ. ಜಾತಿವಾದಿ ಹಾಗೂ ಕೋಮುವಾದಿ ಮನಸ್ಥಿತಿಯ ಕೆಲವರು ನಡೆಸಿರುವ ಈ ಕೃತ್ಯ ಜಗತ್ತಿನ ಮುಂದೆ ಭಾರತ ತಲೆತಗ್ಗಿಸುವಂತಾಗಿದೆ ಎಂದು ಆರೋಪಿಸಿದ್ದಾರೆ.ದೇಶಕ್ಕೆ ಸ್ವಾತಂತ್ರ‍್ಯ ಬಂದು 80 ವರ್ಷಗಳಾದರೂ ಜಾತಿವಾದಿಗಳಿಂದ ಸಂವಿಧಾನದ ಆಶಯಗಳಿಗೆ ಧಕ್ಕೆ ತರುವಂತಹ ಘಟನೆಗಳು ನಡೆಯುತ್ತಿರುವುದು ವಿಷಾದನಿಯ. ಇಂತಹ ಘಟನೆಗಳು ಈ ಹಿಂದೆ ಜನಸಾಮಾನ್ಯರ ಮೇಲೂ ನಡೆದಿದ್ದು, ಇದೀಗ ಪ್ರಜಾಪ್ರಭುತ್ವ ವ್ಯವಸ್ಥೆಯ ಪ್ರಮುಖ ವ್ಯಕ್ತಿಯೊಬ್ಬರ ವಿರುದ್ಧ ನಡೆದಿರುವುದು ಖಂಡನೀಯವಾಗಿ. ತಪ್ಪಿತಸ್ಥರ ವಿರುದ್ಧ ಸರಕಾರ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.ರಾಜಕೀಯ ಕ್ಷೇತ್ರದ ಮೂಲಕ ದೇಶಕ್ಕಾಗಿ ಕಳೆದ ಹಲವು ವರ್ಷಗಳಿಂದ ಸೇವೆ ಸಲ್ಲಿಸಿರುವ ಮಲ್ಲಿಕಾರ್ಜುನ ಖರ್ಗೆ ಅವರನ್ನು ವೇದಿಕೆ ಶುದ್ದೀಕರಣದ ನೆಪದಲ್ಲಿ ಪರೋಕ್ಷವಾಗಿ ಅವಮಾನಿಸಲಾಗಿದೆ. ಸಂವಿಧಾನದಡಿಯಲ್ಲಿ ಇಂತಹ ಕೃತ್ಯಗಳಿಗೆ ಅವಕಾಶವಿಲ್ಲದಿದ್ದರೂ ಪ್ರಕರಣ ನಡೆದಿರುವುದು ಕಳವಳಕಾರಿವಾಗಿದೆ. ಈ ರೀತಿಯ ಮನಸ್ಥಿತಿಗಳನ್ನು ಕಾನೂನು ಕ್ರಮದ ಮೂಲಕ ತಿದ್ದುವ ಅಗತ್ಯವಿದೆ. ಸಂವಿಧಾನದ ಆಶಯಗಳಿಗೆ ಅಪಚಾರ ಮಾಡಿರುವವರ ವಿರುದ್ಧ ಶಿಕ್ಷೆ ವಿಧಿಸದೆ ಇದ್ದರೆ ದೇಶವ್ಯಾಪ್ತಿ ದಲಿತ ಸಂಘಟನೆಗಳು ಹೋರಾಟವನ್ನು ರೂಪಿಸಲಿವೆ ಎಂದು ಎಚ್ಚರಿಕೆ ನೀಡಿದ್ದಾರೆ.

 

• ಸೆಕ್ಯುಲರ್ ವಾಯ್ಸ್ ನ್ಯೂಸ್ ಹುಣಸಗಿ:

ಉತ್ತರಾಖಂಡದ ಹಾನಿಯಲ್ಲಿ ಕಾಂಗ್ರೆಸ್‌ ಪಕ್ಷ ಆಯೋಜಿಸಿದ್ದ ಸಾರ್ವಜನಿಕ ಕಾರ್ಯಕ್ರಮದಲ್ಲಿ ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಭಾಗವಹಿಸಿದ್ದ ವೇದಿಕೆಯನ್ನು ಹೋಮ-ಹವನದ ಮೂಲಕ ಶುದ್ದೀಕರಣ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಮಾಜಿ ಎಸ್.ಸಿ ಎಸ್.ಟಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹಾಗೂ ಭೂ ನ್ಯಾಯ ಮಂಡಳಿ ಸದಸ್ಯ ಮಲ್ಲಣ್ಣ ಕಟ್ಟಿಮನಿ ಒತ್ತಾಯಿಸಿದ್ದಾರೆ.

ಪತ್ರಿಕಾ ಪ್ರಕಟಣೆ ನೀಡಿರುವ ಅವರು ಇಂತಹ ಕೃತ್ಯಗಳು ಖಂಡನೀಯವಾಗಿದ್ದು, ಭಾರತ ದೇಶದ ಸಂವಿಧಾನ ಹಾಗೂ ಪ್ರಜಾಪ್ರಭುತ್ವ ವ್ಯವಸ್ಥೆಗೆ ಅಗೌರವ ತೋರುವ ಬೆಳವಣಿಗೆಯಾಗಿದೆ. ಜಾತಿವಾದಿ ಹಾಗೂ ಕೋಮುವಾದಿ ಮನಸ್ಥಿತಿಯ ಕೆಲವರು ನಡೆಸಿರುವ ಈ ಕೃತ್ಯ ಜಗತ್ತಿನ ಮುಂದೆ ಭಾರತ ತಲೆತಗ್ಗಿಸುವಂತಾಗಿದೆ ಎಂದು ಆರೋಪಿಸಿದ್ದಾರೆ.

ದೇಶಕ್ಕೆ ಸ್ವಾತಂತ್ರ‍್ಯ ಬಂದು 80 ವರ್ಷಗಳಾದರೂ ಜಾತಿವಾದಿಗಳಿಂದ ಸಂವಿಧಾನದ ಆಶಯಗಳಿಗೆ ಧಕ್ಕೆ ತರುವಂತಹ ಘಟನೆಗಳು ನಡೆಯುತ್ತಿರುವುದು ವಿಷಾದನಿಯ. ಇಂತಹ ಘಟನೆಗಳು ಈ ಹಿಂದೆ ಜನಸಾಮಾನ್ಯರ ಮೇಲೂ ನಡೆದಿದ್ದು, ಇದೀಗ ಪ್ರಜಾಪ್ರಭುತ್ವ ವ್ಯವಸ್ಥೆಯ ಪ್ರಮುಖ ವ್ಯಕ್ತಿಯೊಬ್ಬರ ವಿರುದ್ಧ ನಡೆದಿರುವುದು ಖಂಡನೀಯವಾಗಿ. ತಪ್ಪಿತಸ್ಥರ ವಿರುದ್ಧ ಸರಕಾರ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ರಾಜಕೀಯ ಕ್ಷೇತ್ರದ ಮೂಲಕ ದೇಶಕ್ಕಾಗಿ ಕಳೆದ ಹಲವು ವರ್ಷಗಳಿಂದ ಸೇವೆ ಸಲ್ಲಿಸಿರುವ ಮಲ್ಲಿಕಾರ್ಜುನ ಖರ್ಗೆ ಅವರನ್ನು ವೇದಿಕೆ ಶುದ್ದೀಕರಣದ ನೆಪದಲ್ಲಿ ಪರೋಕ್ಷವಾಗಿ ಅವಮಾನಿಸಲಾಗಿದೆ. ಸಂವಿಧಾನದಡಿಯಲ್ಲಿ ಇಂತಹ ಕೃತ್ಯಗಳಿಗೆ ಅವಕಾಶವಿಲ್ಲದಿದ್ದರೂ ಪ್ರಕರಣ ನಡೆದಿರುವುದು ಕಳವಳಕಾರಿವಾಗಿದೆ. ಈ ರೀತಿಯ ಮನಸ್ಥಿತಿಗಳನ್ನು ಕಾನೂನು ಕ್ರಮದ ಮೂಲಕ ತಿದ್ದುವ ಅಗತ್ಯವಿದೆ. ಸಂವಿಧಾನದ ಆಶಯಗಳಿಗೆ ಅಪಚಾರ ಮಾಡಿರುವವರ ವಿರುದ್ಧ ಶಿಕ್ಷೆ ವಿಧಿಸದೆ ಇದ್ದರೆ ದೇಶವ್ಯಾಪ್ತಿ ದಲಿತ ಸಂಘಟನೆಗಳು ಹೋರಾಟವನ್ನು ರೂಪಿಸಲಿವೆ ಎಂದು ಎಚ್ಚರಿಕೆ ನೀಡಿದ್ದಾರೆ.