LOCAL NEWS :”ಬಸವಕಲ್ಯಾಣ |ಮಹಾತ್ಕಾರ್ಯಗಳಿಗೆ ಮನಸ್ಸೆ ಮೂಲಾಧಾರ – ಹಾರಕೂಡ ಶ್ರೀ”.

By admin

“ಬಸವಕಲ್ಯಾಣ |ಮಹಾತ್ಕಾರ್ಯಗಳಿಗೆ ಮನಸ್ಸೆ ಮೂಲಾಧಾರ – ಹಾರಕೂಡ ಶ್ರೀ”.

• ಸೆಕ್ಯುಲರ್ ವಾಯ್ಸ್  ಡೆಸ್ಕ್‌  ನ್ಯೂಸ್‌ :

ಬಸವಕಲ್ಯಾಣ :  ಸೃಷ್ಟಿಕರ್ತ ಪರಮಾತ್ಮನನ್ನು ಕುರಿತು ಬಹು ಎತ್ತರದ ಭಕ್ತಿಯ ಮನಸ್ಸು ಇದ್ದರೆ ಅಂಥಹವರಿಂದ ಸಮಾಜದಲ್ಲಿ ಮಹತ್ಕಾರ್ಯಗಳು ಘಟಿಸುತ್ತವೆ ಎಂದು ಹಾರಕೂಡದ ಡಾ. ಚನ್ನವೀರ ಶಿವಾಚಾರ್ಯರು ನುಡಿದರು.

ತಾಲೂಕಿನ ಬೇಡರವಾಡಿ (U) ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿದ ವೀರ ಹನುಮಾನ ದೇವಸ್ಥಾನದ ಕಳಸಾರೋಹಣ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದ ಶ್ರೀಗಳು, ಮನಸ್ಸು ಶುದ್ಧವಾದಷ್ಟು ಸತ್ಕಾರ್ಯಗಳು ಅರಳುತ್ತವೆ.ಹೀಗಾಗಿ ಮನಸ್ಸಿನ ಸುದ್ದಿಕರಣಕ್ಕಾಗಿ ಸಾಧು ಸಂತರ ಸತ್ಸಂಗದಲ್ಲಿ ಮನಸಾರೆ ತೊಡಗಿಸಿಕೊಳ್ಳಬೇಕು. ಸುದೀರ್ಘ ಕಾಲದ ಪೂಜೆ ಪುನಸ್ಕಾರಗಳಿಗಿಂತಲೂ ಒಂದು ಕ್ಷಣದ ಗುರು ಸಾನಿಧ್ಯ ಶ್ರೇಷ್ಠವಾಗಿರುತ್ತದೆ.
ಗುರು ಗೋವಿಂದನ ಅನುಗ್ರಹ ಪಡೆಯಬೇಕಾದರೆ, ಹೆತ್ತ ತಾಯಿಯನ್ನು ಅತ್ಯಂತ ಗೌರವದಿಂದ ಕಾಣಬೇಕು.

ದೈವತ್ವದ ಗಣಿಯಾಗಿರುವ ತಾಯಿಯನ್ನು ಪೂಜ್ಯನೀಯವಾಗಿ ನೋಡಿಕೊಳ್ಳುವವರ ಬಾಳು ಸುಭಿಕ್ಷೆಯಿಂದ ಕೂಡಿರುತ್ತದೆ ಎಂದು ನುಡಿದರು.
ಸಮಸ್ತ ಭಾರತೀಯರ ಆರಾಧ್ಯ ದೇವರಾದ ಶ್ರೀರಾಮಚಂದ್ರರ ಭಕ್ತ ವೀರ ಹನುಮಾನ ಮಂದಿರ ನಿರ್ಮಿಸಿ ಕಳಸಾರೋಹಣ ಹಾಡಿರುವ ಬೇಡರವಾಡಿ (ಯು) ಗ್ರಾಮದ ಎಲ್ಲ ಜನತೆಯಲ್ಲಿ ಆಂಜನೇಯ ಸ್ವಾಮಿಯ ಆದರ್ಶಗಳು ಬೆಳೆದು ಬರುವಂತಾಗಲಿ ಹಾಗೂ ಸರ್ವರಿಗೂ ಸನ್ಮಂಗಳವಾಗಲಿ ಎಂದು ಶುಭ ಹಾರೈಸಿದರು.

ಗೋವಿಂದ ಗುರೂಜಿ ಸ್ವಾಗತಿಸಿ ನಿರೂಪಿಸಿದರು. ಕಾರ್ತಿಕ ಸ್ವಾಮಿ ಯಲ್ಲದಗುಂಡಿ ಪ್ರಾರ್ಥನಾ ಗೀತೆ ಹಾಡಿದರು.
ಆಶಿತೋಷ ಮಹಾರಾಜ, ಅವಧೂತಪುರಿ ಮಹಾರಾಜ, ಧನರಾಜ ಭೋಸಲೆ, ಮುಂತಾದವರು ಉಪಸ್ಥಿತರಿದ್ದರು.
ಕಾರ್ಯಕ್ರಮಕ್ಕೂ ಮೊದಲು ಹಾರಕೂಡ ಶ್ರೀಗಳ ಅದ್ದೂರಿ ಮೆರವಣಿಗೆ ಜರುಗಿತು.

———————————————————————–

Contents
“ಬಸವಕಲ್ಯಾಣ |ಮಹಾತ್ಕಾರ್ಯಗಳಿಗೆ ಮನಸ್ಸೆ ಮೂಲಾಧಾರ – ಹಾರಕೂಡ ಶ್ರೀ”.• ಸೆಕ್ಯುಲರ್ ವಾಯ್ಸ್  ಡೆಸ್ಕ್‌  ನ್ಯೂಸ್‌ :ಬಸವಕಲ್ಯಾಣ :  ಸೃಷ್ಟಿಕರ್ತ ಪರಮಾತ್ಮನನ್ನು ಕುರಿತು ಬಹು ಎತ್ತರದ ಭಕ್ತಿಯ ಮನಸ್ಸು ಇದ್ದರೆ ಅಂಥಹವರಿಂದ ಸಮಾಜದಲ್ಲಿ ಮಹತ್ಕಾರ್ಯಗಳು ಘಟಿಸುತ್ತವೆ ಎಂದು ಹಾರಕೂಡದ ಡಾ. ಚನ್ನವೀರ ಶಿವಾಚಾರ್ಯರು ನುಡಿದರು.ತಾಲೂಕಿನ ಬೇಡರವಾಡಿ (U) ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿದ ವೀರ ಹನುಮಾನ ದೇವಸ್ಥಾನದ ಕಳಸಾರೋಹಣ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದ ಶ್ರೀಗಳು, ಮನಸ್ಸು ಶುದ್ಧವಾದಷ್ಟು ಸತ್ಕಾರ್ಯಗಳು ಅರಳುತ್ತವೆ.ಹೀಗಾಗಿ ಮನಸ್ಸಿನ ಸುದ್ದಿಕರಣಕ್ಕಾಗಿ ಸಾಧು ಸಂತರ ಸತ್ಸಂಗದಲ್ಲಿ ಮನಸಾರೆ ತೊಡಗಿಸಿಕೊಳ್ಳಬೇಕು. ಸುದೀರ್ಘ ಕಾಲದ ಪೂಜೆ ಪುನಸ್ಕಾರಗಳಿಗಿಂತಲೂ ಒಂದು ಕ್ಷಣದ ಗುರು ಸಾನಿಧ್ಯ ಶ್ರೇಷ್ಠವಾಗಿರುತ್ತದೆ. ಗುರು ಗೋವಿಂದನ ಅನುಗ್ರಹ ಪಡೆಯಬೇಕಾದರೆ, ಹೆತ್ತ ತಾಯಿಯನ್ನು ಅತ್ಯಂತ ಗೌರವದಿಂದ ಕಾಣಬೇಕು.ದೈವತ್ವದ ಗಣಿಯಾಗಿರುವ ತಾಯಿಯನ್ನು ಪೂಜ್ಯನೀಯವಾಗಿ ನೋಡಿಕೊಳ್ಳುವವರ ಬಾಳು ಸುಭಿಕ್ಷೆಯಿಂದ ಕೂಡಿರುತ್ತದೆ ಎಂದು ನುಡಿದರು. ಸಮಸ್ತ ಭಾರತೀಯರ ಆರಾಧ್ಯ ದೇವರಾದ ಶ್ರೀರಾಮಚಂದ್ರರ ಭಕ್ತ ವೀರ ಹನುಮಾನ ಮಂದಿರ ನಿರ್ಮಿಸಿ ಕಳಸಾರೋಹಣ ಹಾಡಿರುವ ಬೇಡರವಾಡಿ (ಯು) ಗ್ರಾಮದ ಎಲ್ಲ ಜನತೆಯಲ್ಲಿ ಆಂಜನೇಯ ಸ್ವಾಮಿಯ ಆದರ್ಶಗಳು ಬೆಳೆದು ಬರುವಂತಾಗಲಿ ಹಾಗೂ ಸರ್ವರಿಗೂ ಸನ್ಮಂಗಳವಾಗಲಿ ಎಂದು ಶುಭ ಹಾರೈಸಿದರು.ಗೋವಿಂದ ಗುರೂಜಿ ಸ್ವಾಗತಿಸಿ ನಿರೂಪಿಸಿದರು. ಕಾರ್ತಿಕ ಸ್ವಾಮಿ ಯಲ್ಲದಗುಂಡಿ ಪ್ರಾರ್ಥನಾ ಗೀತೆ ಹಾಡಿದರು. ಆಶಿತೋಷ ಮಹಾರಾಜ, ಅವಧೂತಪುರಿ ಮಹಾರಾಜ, ಧನರಾಜ ಭೋಸಲೆ, ಮುಂತಾದವರು ಉಪಸ್ಥಿತರಿದ್ದರು. ಕಾರ್ಯಕ್ರಮಕ್ಕೂ ಮೊದಲು ಹಾರಕೂಡ ಶ್ರೀಗಳ ಅದ್ದೂರಿ ಮೆರವಣಿಗೆ ಜರುಗಿತು.• 👉 ಇದನ್ನೂ ಓದಿ…! 👇• ಧಾರ್ಮಿಕ ಪ್ರಜ್ಞೆ ಇರುವಲ್ಲಿ ದೈವ ಕೃಪೆ ನಿಶ್ಚಿತ – ಹಾರಕೂಡ ಶ್ರೀಬಸವಕಲ್ಯಾಣ : “ಎಲ್ಲಿ ಸದ್ವಿಚಾರ, ಸಹಯೋಗ, ಶಾಂತಿ ಮತ್ತು ಧಾರ್ಮಿಕ ಪ್ರಜ್ಞೆ ಇರುತ್ತದೆಯೋ ಅಲ್ಲಿ ಸದಾಕಾಲ ದೇವರ ಕೃಪೆ ಇರುವುದು ನಿಶ್ಚಿತ” ಎಂದು ಹಾರಕೂಡದ ಡಾ. ಚನ್ನವೀರ ಶಿವಾಚಾರ್ಯರು ನುಡಿದರು.ತಾಲೂಕಿನ ಖಾನಾಪುರ ಬಿ. ಗ್ರಾಮದ ಲಕ್ಷ್ಮೀದೇವಿ ಮಂದಿರದಲ್ಲಿ ಗ್ರಾಮಸ್ಥರಿಂದ ಆಯೋಜಿಸಿದ ಗುರುವಂದನೆ ಹಾಗೂ 874ನೇ ತುಲಾಭಾರ ಸಮಾರಂಭದ ಪಾವನ ಸನ್ನಿಧಾನವಹಿಸಿ ಶ್ರೀವಾಣಿ ಕರುಣಿಸಿದ ಪೂಜ್ಯರು, ಸಂಘಟಿತ ಮನೋಭಾವನೆಯಿಂದ ಸಮಾಜದಲ್ಲಿ ಮಹತ್ವದ ಕಾರ್ಯಸಿದ್ದಿ ಲಭಿಸುತ್ತದೆ.ಸಮಾನ ಮನಸ್ಕರ ಸಂಘಟನೆಯಲ್ಲಿ ಅದ್ಭುತ ಶಕ್ತಿ ಇರುವುದರಿಂದ ಕೈಗೊಂಡ ಕಾರ್ಯಗಳು ಸುಲಭ ಸಾಧ್ಯವಾಗುತ್ತವೆ. ಸಂಘಟನೆ ಎಂದರೆ ಕೇವಲ ಜನಸಂದಣಿ ಅಲ್ಲ, ಅದೊಂದು ವ್ಯವಸಾಯಾತ್ಮಕವಾದ ಸಂಸ್ಥೆಯಾಗಿದ್ದು ಐಕ್ಯತೆಯಿಂದ ಧ್ಯೇಯ ಸಾಧನೆ ಮಾಡುವುದೇ ಪ್ರಧಾನ ಅಂಶವಾಗಿರುತ್ತದೆ.ವಿಶೇಷವಾಗಿ ಧರ್ಮ ಕಾರ್ಯಗಳಲ್ಲಿ ಸಂಘಟನೆಯ ಬಲ ಮಹತ್ವದ ಪಾತ್ರ ನಿಭಾಯಿಸುತ್ತದೆ ಎಂದು ನುಡಿದರು. ಖಾನಾಪುರ ಬಿ. ಗ್ರಾಮದ ಭಕ್ತರೆಲ್ಲರೂ ಒಂದಾಗಿ ಚೆಂದಾಗಿ ಗುರುನಿಷ್ಠೆಯಿಂದ ಆಯೋಜಿಸಿದ ಈ ಧಾರ್ಮಿಕ ಸಮಾರಂಭ ನಮಗೆ ಖುಷಿ ನೀಡಿದ್ದು, ಸರ್ವರ ಬಾಳಲ್ಲಿ ಹಾರಕೂಡಧೀಶ ಶುಭವನ್ನುಂಟು ಮಾಡಲಿ ಎಂದು ಹಾರೈಸಿದರು. ಸಾವಿತ್ರಿ ಶರಣು ಸಲಗರ, ಮುಖಂಡರಾದ ಶಿವಕುಮಾರ ಶಟಗಾರ,  ಸುಧಾರಾಣಿ ಪಾಟೀಲ ಮಾತನಾಡಿದರು. ಸಂಜು ಸೂಗರೆ, ಅಮರ ಬಡದಾಳೆ, ಮಹಾರಾಜಪ್ಪಾ ಮೂಳೆ, ವೀರಣ್ಣ ಬಿರಾದಾರ, ಮೊಹ್ಮದ್ ಶರಣನಗರ, ಶರಣಬಸಪ್ಪ ದಳಪತಿ, ಶಿವರಾಜ ಕಲ್ಲಾ, ಶಾಲಿವಾನ ಪಾಟೀಲ, ಬಾಬುರಾವ ಜಟ್ ಮುಂತಾದವರು ಭಾಗವಹಿಸಿದ್ದರು. ಚಂದ್ರಕಾಂತ ಬಿರಾದಾರ ಸ್ವಾಗತಿಸಿದರು. ಕಾರ್ತಿಕ ಸ್ವಾಮಿ ಎಲ್ಲದಗುಂಡಿ ಪ್ರಾರ್ಥನಾ ಗೀತೆ ಹಾಡಿದರು. ಸಂತೋಷ ಬಿರಾದರ ವಂದಿಸಿದರು.

• 

👉 ಇದನ್ನೂ ಓದಿ…! 👇

ಧಾರ್ಮಿಕ ಪ್ರಜ್ಞೆ ಇರುವಲ್ಲಿ ದೈವ ಕೃಪೆ ನಿಶ್ಚಿತ – ಹಾರಕೂಡ ಶ್ರೀ

ಬಸವಕಲ್ಯಾಣ : “ಎಲ್ಲಿ ಸದ್ವಿಚಾರ, ಸಹಯೋಗ, ಶಾಂತಿ ಮತ್ತು ಧಾರ್ಮಿಕ ಪ್ರಜ್ಞೆ ಇರುತ್ತದೆಯೋ ಅಲ್ಲಿ ಸದಾಕಾಲ ದೇವರ ಕೃಪೆ ಇರುವುದು ನಿಶ್ಚಿತ” ಎಂದು ಹಾರಕೂಡದ ಡಾ. ಚನ್ನವೀರ ಶಿವಾಚಾರ್ಯರು ನುಡಿದರು.

ತಾಲೂಕಿನ ಖಾನಾಪುರ ಬಿ. ಗ್ರಾಮದ ಲಕ್ಷ್ಮೀದೇವಿ ಮಂದಿರದಲ್ಲಿ ಗ್ರಾಮಸ್ಥರಿಂದ ಆಯೋಜಿಸಿದ ಗುರುವಂದನೆ ಹಾಗೂ 874ನೇ ತುಲಾಭಾರ ಸಮಾರಂಭದ ಪಾವನ ಸನ್ನಿಧಾನವಹಿಸಿ ಶ್ರೀವಾಣಿ ಕರುಣಿಸಿದ ಪೂಜ್ಯರು, ಸಂಘಟಿತ ಮನೋಭಾವನೆಯಿಂದ ಸಮಾಜದಲ್ಲಿ ಮಹತ್ವದ ಕಾರ್ಯಸಿದ್ದಿ ಲಭಿಸುತ್ತದೆ.

ಸಮಾನ ಮನಸ್ಕರ ಸಂಘಟನೆಯಲ್ಲಿ ಅದ್ಭುತ ಶಕ್ತಿ ಇರುವುದರಿಂದ ಕೈಗೊಂಡ ಕಾರ್ಯಗಳು ಸುಲಭ ಸಾಧ್ಯವಾಗುತ್ತವೆ.
ಸಂಘಟನೆ ಎಂದರೆ ಕೇವಲ ಜನಸಂದಣಿ ಅಲ್ಲ, ಅದೊಂದು ವ್ಯವಸಾಯಾತ್ಮಕವಾದ ಸಂಸ್ಥೆಯಾಗಿದ್ದು ಐಕ್ಯತೆಯಿಂದ ಧ್ಯೇಯ ಸಾಧನೆ ಮಾಡುವುದೇ ಪ್ರಧಾನ ಅಂಶವಾಗಿರುತ್ತದೆ.

ವಿಶೇಷವಾಗಿ ಧರ್ಮ ಕಾರ್ಯಗಳಲ್ಲಿ ಸಂಘಟನೆಯ ಬಲ ಮಹತ್ವದ ಪಾತ್ರ ನಿಭಾಯಿಸುತ್ತದೆ ಎಂದು ನುಡಿದರು.
ಖಾನಾಪುರ ಬಿ. ಗ್ರಾಮದ ಭಕ್ತರೆಲ್ಲರೂ ಒಂದಾಗಿ ಚೆಂದಾಗಿ ಗುರುನಿಷ್ಠೆಯಿಂದ ಆಯೋಜಿಸಿದ ಈ ಧಾರ್ಮಿಕ ಸಮಾರಂಭ ನಮಗೆ ಖುಷಿ ನೀಡಿದ್ದು, ಸರ್ವರ ಬಾಳಲ್ಲಿ ಹಾರಕೂಡಧೀಶ ಶುಭವನ್ನುಂಟು ಮಾಡಲಿ ಎಂದು ಹಾರೈಸಿದರು.

 ಸಾವಿತ್ರಿ ಶರಣು ಸಲಗರ, ಮುಖಂಡರಾದ ಶಿವಕುಮಾರ ಶಟಗಾರ,  ಸುಧಾರಾಣಿ ಪಾಟೀಲ ಮಾತನಾಡಿದರು.
ಸಂಜು ಸೂಗರೆ, ಅಮರ ಬಡದಾಳೆ, ಮಹಾರಾಜಪ್ಪಾ ಮೂಳೆ, ವೀರಣ್ಣ ಬಿರಾದಾರ, ಮೊಹ್ಮದ್ ಶರಣನಗರ, ಶರಣಬಸಪ್ಪ ದಳಪತಿ, ಶಿವರಾಜ ಕಲ್ಲಾ, ಶಾಲಿವಾನ ಪಾಟೀಲ, ಬಾಬುರಾವ ಜಟ್ ಮುಂತಾದವರು ಭಾಗವಹಿಸಿದ್ದರು. ಚಂದ್ರಕಾಂತ ಬಿರಾದಾರ ಸ್ವಾಗತಿಸಿದರು. ಕಾರ್ತಿಕ ಸ್ವಾಮಿ ಎಲ್ಲದಗುಂಡಿ ಪ್ರಾರ್ಥನಾ ಗೀತೆ ಹಾಡಿದರು. ಸಂತೋಷ ಬಿರಾದರ ವಂದಿಸಿದರು.