🟢LOCAL NEWS : “ಯಾದಗಿರಿ | ಸ್ವಚ್ಛ ನಗರವನ್ನಾಗಿಡುವುದು ನಮ್ಮ ಆದ್ಯ ಕರ್ತವ್ಯ :  ನಗರಸಭೆ ಪೌರಾಯುಕ್ತ ಉಮೇಶ ಚವ್ಹಾಣ ಅಭಿಮತ”

By admin

 LOCAL NEWS : “ಯಾದಗಿರಿ | ಸ್ವಚ್ಛ ನಗರವನ್ನಾಗಿಡುವುದು ನಮ್ಮ ಆದ್ಯ ಕರ್ತವ್ಯ :  ನಗರಸಭೆ ಪೌರಾಯುಕ್ತ ಉಮೇಶ ಚವ್ಹಾಣ ಅಭಿಮತ”

• ಸೆಕ್ಯುಲರ್ ವಾಯ್ಸ್ ನ್ಯೂಸ್  ಯಾದಗಿರಿ:

ಇಲ್ಲಿನ ನಗರಸಭೆ ಯಾದಗಿರಿ ಹಾಗೂ ಡಾನ್ ಬೋಸ್ಕೊ ಪದವಿ ಕಾಲೇಜು ವಿದ್ಯಾರ್ಥಿಗಳ ಸಹಯೋಗದಲ್ಲಿ ಸ್ವಚ್ಛ ಸರ್ವೇಕ್ಷಣ ಅಭಿಯಾನ ಶನಿವಾರ ಹಮ್ಮಿಕೊಳ್ಳಲಾಯಿತು.

ನಗರದ ಹೃದಯ ಭಾಗದಲ್ಲಿರುವ ಪದವಿ ಕಾಲೇಜು ಮುಂಭಾಗದ ಬಸ್ ನಿಲ್ದಾಣವು ಹಲವು ವರ್ಷಗಳಿಂದ ಪಾಳುಬಿದ್ದಿದ್ದ ಹಿನ್ನೆಲೆಯಲ್ಲಿ, ಆ ಸ್ಥಳ ಹಾಗೂ ಸುತ್ತಮುತ್ತಲಿನ ಪರಿಸರವನ್ನು ಕಾಲೇಜು ವಿದ್ಯಾರ್ಥಿಗಳು ಮತ್ತು ನಗರಸಭೆಯ ಪೌರಕಾರ್ಮಿಕರು ಸೇರಿ ಶುಚಿಗೊಳಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ನಗರಸಭೆ ಪೌರಾಯುಕ್ತ ಉಮೇಶ ಚವ್ಹಾಣ, “ಸ್ವಚ್ಛ ನಗರವನ್ನಾಗಿಡುವುದು ನಮ್ಮೆಲ್ಲರ ಆದ್ಯ ಕರ್ತವ್ಯ. ಸಾರ್ವಜನಿಕರು ಪ್ರತಿದಿನ ಹಸಿ ಕಸ ಮತ್ತು ಒಣ ಕಸವನ್ನು ವಿಂಗಡಣೆ ಮಾಡಿ ಮನೆ ಮನೆಗೆ ಬರುವ ಕಸ ವಿಲೇವಾರಿ ವಾಹನಗಳಿಗೆ ನೀಡಬೇಕು. ಎಲ್ಲೆಂದರಲ್ಲಿ ಕಸ ಚೆಲ್ಲಬಾರದು. ಮನೆಯಿಂದಲೇ ನಾಗರಿಕರು ಸ್ವಚ್ಛತಾ ಅಭಿಯಾನದಲ್ಲಿ ಭಾಗಿಯಾಗಬೇಕು,” ಎಂದು ತಿಳಿಸಿದರು. ಅಭಿಯಾನಕ್ಕೆ ಕೈಜೋಡಿಸಿದ ಡಾನ್ ಬೋಸ್ಕೊ ಕಾಲೇಜು ವಿದ್ಯಾರ್ಥಿಗಳು, ಪ್ರಾಂಶುಪಾಲರು ಮತ್ತು ಸಿಬ್ಬಂದಿಗೆ ಕೃತಜ್ಞತೆ ಸಲ್ಲಿಸಿದರು.

ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲ ಫಾದರ್ ಥಾಮಸ್, ಎನ್‌ಎಸ್‌ಎಸ್ ಪ್ರೋಗ್ರಾಮ್ ಆಫೀಸರ್ ಸಚಿನ್, ನಗರಸಭೆಯ ಪರಿಸರ ಅಭಿಯಂತರ ಪ್ರಶಾಂತ್ ಸೂರ್ಯವಂಶಿ, ಕಿರಿಯ ಆರೋಗ್ಯ ನಿರೀಕ್ಷಕ ಮಂಜುನಾಥ್ ಚೌವ್ಹಾಣ್, ಸಿಬ್ಬಂದಿ ಶಿವಪುತ್ರ, ಯುವ ಕ್ರೀಡಾಪಟು ಮಲ್ಲು ಅಭಿನವ, ಶೈಬಾಸ್ ಸೇರಿದಂತೆ ವಿದ್ಯಾರ್ಥಿಗಳು ಮತ್ತು ಪೌರಕಾರ್ಮಿಕರು ಉಪಸ್ಥಿತರಿದ್ದರು.