🟠 LOCAL NEWS : “ಯಾದಗಿರಿ | ತೆಲಂಗಾಣ ಸಚಿವ ವಾಕಿಟಿ ಶ್ರೀಹರಿ ಪತ್ನಿ ಲಲಿತಮ್ಮರಿಂದ ಕೃಷ್ಣವೇಣಿ–ಭೀಮಾ ಸಂಗಮ ದರ್ಶನ”

By admin

🟠 LOCAL NEWS : “ಯಾದಗಿರಿ | ತೆಲಂಗಾಣ ಸಚಿವ ವಾಕಿಟಿ ಶ್ರೀಹರಿ ಪತ್ನಿ ಲಲಿತಮ್ಮರಿಂದ ಕೃಷ್ಣವೇಣಿ–ಭೀಮಾ ಸಂಗಮ ದರ್ಶನ”

• ಸೆಕ್ಯುಲರ್‌ ವಾಯ್ಸ್‌ ನ್ಯೂಸ್‌ ವಡಗೇರಾ: 

 ‘ಕೃಷ್ಣವೇಣಿ–ಭೀಮಾ ನದಿಗಳ ಸಂಗಮದಲ್ಲಿರುವ ಸಂಗಮೇಶ್ವರ ಹಾಗೂ ಕಾಳಿಕಾ ಮಾತೆಯ ದರ್ಶನದಿಂದ ತಮ್ಮ ಜೀವನ ಪಾವನಗೊಂಡಿದೆ ಎಂದು ತೆಲಂಗಾಣ ರಾಜ್ಯದ ಮೀನುಗಾರಿಕೆ, ಪಶು ಸಂಗೋಪನೆ ಮತ್ತು ಕ್ರೀಡಾ ಇಲಾಖೆ ಸಚಿವ ವಾಕಿಟಿ ಶ್ರೀಹರಿ ಅವರ ಧರ್ಮಪತ್ನಿ ಶ್ರೀಮತಿ ಲಲಿತಮ್ಮ ವಾಕಿಟಿ ಹೇಳಿದರು.

ತಾಲೂಕಿನ ಸುಕ್ಷೇತ್ರ ಕೃಷ್ಣವೇಣಿ–ಭೀಮಾ ಸಂಗಮಕ್ಕೆ ಭೇಟಿ ನೀಡಿ ಸಂಗಮೇಶ್ವರ ಹಾಗೂ ಕಾಳಿಕಾ ಮಾತೆಯ ದರ್ಶನ ಪಡೆದ ಬಳಿಕ ಅವರು ಮಾತನಾಡಿದರು.

ಸಾವಿರಾರು ವರ್ಷಗಳ ಇತಿಹಾಸವನ್ನು ಹೊಂದಿರುವ ಈ ಪವಿತ್ರ ಕ್ಷೇತ್ರವು ಕರ್ನಾಟಕ–ತೆಲಂಗಾಣ ಗಡಿಭಾಗದಲ್ಲಿದ್ದು, ಎರಡು ರಾಜ್ಯಗಳ ನಡುವಿನ ಭ್ರಾತೃತ್ವ ಮತ್ತು ಬಾಂಧವ್ಯವನ್ನು ಬೆಸೆಯುವ ಮಹತ್ವದ ಧಾರ್ಮಿಕ ಕೇಂದ್ರವಾಗಿದೆ ಎಂದು ಅವರು ಹೇಳಿದರು.

• ಇದನ್ನು ಓದಿ..👇👇

ಉತ್ತಮ ನಿಸರ್ಗದ ಮಡಿಲಲ್ಲಿ ನೆಲೆಸಿರುವ ಸಂಗಮೇಶ್ವರ ದೇವಾಲಯವು ಭವ್ಯ ಹಾಗೂ ಪುರಾತನ ಇತಿಹಾಸವನ್ನು ಹೊಂದಿದೆ ಎಂದೂ ಅವರು ಪ್ರಶಂಸಿಸಿದರು.

ಈ ಸಂದರ್ಭದಲ್ಲಿ ಸಂಗಮದ ಪರಮಪೂಜ್ಯ ಶ್ರೀ ಕರುಣೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಸಚಿವರ ಧರ್ಮಪತ್ನಿ ಶ್ರೀಮತಿ ಲಲಿತಮ್ಮ ಅವರನ್ನು ಸನ್ಮಾನಿಸಿ ಆಶೀರ್ವದಿಸಿದರು.
ಕಾರ್ಯಕ್ರಮದಲ್ಲಿ ರಾಜಪ್ಪ ಗೌಡ ಕುಣಸಿ, ಬಸಯ್ಯಸ್ವಾಮಿ ಶಿವಪೂರ, ಮಲ್ಲಿಕಾರ್ಜುನ ಸ್ವಾಮಿ ಅರಿಶಿಣಗಿ, ಸಿದ್ದಪ್ಪ ಗೌಡ ಶಿವಪೂರ, ವೆಂಕಟರೆಡ್ಡಿ ಗೌಡ ಶಿವನೂರ, ಸೈದಣ್ಣ ಶಿವಪೂರ, ನಾಗರಾಜ್ ಗೌಡ ಶಿವಪೂರ, ಶ್ರೀನಿವಾಸ್ ಕಲಾಲ್, ಮಲ್ಲು ಶಿವಪೂರ, ಗುರುರಾಜ ಅಗ್ನಿಹಾಳ, ಜಿಂದಪ್ಪ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.