LOCAL EXPRESS : “ಹುಮನಾಬಾದ್ | ಶಿಕ್ಷಕರ ದಿನಾಚರಣೆ :  ಸಮಾಜಕ್ಕೆ ಶಿಕ್ಷಕರ ಕೊಡುಗೆ ಅನನ್ಯ-  ಬಸವರಾಜ ಪಾಟೀಲ್ ಸೇಡಂ ಅಭಿಮತ”

By admin

“ಹುಮನಾಬಾದ್|  ಶಿಕ್ಷಕರ ದಿನಾಚರಣೆ :  ಸಮಾಜಕ್ಕೆ ಶಿಕ್ಷಕರ ಕೊಡುಗೆ ಅನನ್ಯ-  ಬಸವರಾಜ ಪಾಟೀಲ್ ಸೇಡಂ ಅಭಿಮತ”

• ಸೆಕ್ಯೂಲರ್‌ ವಾಯ್ಸ್‌ ಡೆಸ್ಕ್‌ ನ್ಯೂಸ್‌ : 

ಹುಮನಾಬಾದ್  : ಉತ್ತಮ ಸಮಾಜದ ನಿರ್ಮಾಣಕ್ಕೆ ಶಿಕ್ಷಕರ ಕೊಡುಗೆ ಅನನ್ಯ ಎಂದು ಮಾಜಿ ಸಂಸದ, ಕಲ್ಯಾಣ ಕರ್ನಾಟಕ ವಿಕಾಸ ಅಕಾಡೆಮಿಯ ಮುಖ್ಯ ಸಂಯೋಜಕ ಬಸವರಾಜ ಪಾಟೀಲ್ ಸೇಡಂ ಅವರು  ಹೇಳಿದರು.

ಪಟ್ಟಣದ ಬಸವರಾಜ ಎಚ್. ಪಾಟೀಲ್ ಕಲ್ಯಾಣ ಮಂಟಪದಲ್ಲಿ ಕಲ್ಯಾಣ ಕರ್ನಾಟಕ ಅನುದಾನ ರಹಿತ ಖಾಸಗಿ ಶಾಲಾ ಆಡಳಿತ ಮಂಡಳಿ ಸಂಘದ ವತಿಯಿಂದ ಶನಿವಾರ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು  ಮಾತನಾಡಿದರು.

ಕನ್ನಡ ನಾಡು, ಮಾತೃಭಾಷೆ ಸೇರಿದಂತೆ ನಮ್ಮ ಸಂಸ್ಕೃತಿ ಪರಂಪರೆ ಉಳಿಸಿ ಬೆಳೆಸುವ ಕಾರ್ಯಕ್ಕೆ ಎಲ್ಲರೂ ಕಂಕಣ ಬದ್ದರಾಗಿ ನಿಲ್ಲಬೇಕು. ಜತೆಗೆ ಆಂಗ್ಲ ಭಾಷೆಯ ಅರಿವು ಹೊಂದುವ ಮೂಲಕ ಸಮಾಜದಲ್ಲಿ ಉತ್ತಮ ಜೀವನ ನಡೆಸಬೇಕು. ಖಾಸಗಿ ಶಾಲೆಗಳಿಗೆ ಸೌಲಭ್ಯಗಳನ್ನು ಕಲ್ಪಿಸಿಕೊಡಲು ಈ ಭಾಗದ ಚುನಾಯಿತ ಜನಪ್ರತಿನಿಧಿಗಳು ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದರು.

ಶಾಸಕ ಡಾ. ಸಿದ್ದು ಪಾಟೀಲ್, ವಿಧಾನ ಪರಿಷತ್ ಸದಸ್ಯ ಭೀಮರಾವ ಪಾಟೀಲ್, ಕರ್ನಾಟಕ ರಾಜ್ಯ ಅನುದಾನ ರಹಿತ ಖಾಸಗಿ ಶಿಕ್ಷಣ ಸಂಸ್ಥೆ ಸಂಘದ ರಾಜ್ಯಾಧ್ಯಕ್ಷ ರೇವಣಸಿದ್ದಪ್ಪ ಜಲಾದೆ ಮಾತಮಾಡಿದರು.

ಶಿಕ್ಷಕರ ದಿನಾಚರಣೆ ನಿಮಿತ್ತ ಪಟ್ಟಣದ ಹಳೆ ತಹಸೀಲ್ ಕಚೇರಿ ಮುಂಭಾಗದಲ್ಲಿ ಕಲ್ಯಾಣ ಕರ್ನಾಟಕ ಅನುದಾನ ರಹಿತ ಖಾಸಗಿ ಶಿಕ್ಷಣ ಸಂಸ್ಥೆ ಸಂಘದ ವತಿಯಿಂದ ಶನಿವಾರ ನಡೆದ ಸರ್ವಪಲ್ಲಿ ರಾಧಾಕೃಷ್ಣನ್ ಅವರ ಭಾವಚಿತ್ರ ಮೆರವಣಿಗೆಗೆ ವಿಧಾನ ಪರಿಷತ್ ಸದಸ್ಯ ಭೀಮರಾವ ಪಾಟೀಲ್ ಚಾಲನೆ ನೀಡಿದರು. ಬಳಿಕ ಮಾತನಾಡಿ,  “ಮಾಜಿ ಸಚಿವ ರಾಜಶೇಖರ ಪಾಟೀಲ್, ವಿಧಾನ ಪರಿಷತ್ ಸದಸ್ಯ ಡಾ. ಚಂದ್ರಶೇಖರ ಪಾಟೀಲ್ ಜತೆಗೂಡಿ ಖಾಸಗಿ ಶಾಲಾ ಶಿಕ್ಷಕರ ಸಮಸ್ಯೆಗಳ ಕುರಿತು ಸರಕಾರದ ಗಮನ ಸೆಳೆದು ಸಮಸ್ಯೆ ಬಗೆಹರಿಸಲಾಗುವುದು.

“ಬಲಿಷ್ಠ ರಾಷ್ಟ್ರದ ನಿರ್ಮಾಣಕ್ಕೆ ಹಾಗೂ ಸಮಾಜದ ಒಳಿತಿಗಾಗಿ ಖಾಸಗಿ ಶಾಲಾ ಶಿಕ್ಷಕರು ನಿಸ್ವಾರ್ಥ ಸೇವೆ ಸಲ್ಲಿಸುತ್ತಿದ್ದಾರೆ. ಈ ನಿಸ್ವಾರ್ಥ ಜೀವಿಗಳ ಹಿತದೃಷ್ಟಿಯಿಂದ ಸರಕಾರದಿಂದ ಸೌಲಭ್ಯಗಳು ಕಲ್ಪಿಸಿಕೊಡಬೇಕು”.

  – ರೇಣುಕವೀರ ಗಂಗಾಧರ ಶಿವಾಚಾರ್ಯರು,
ಪೀಠಾಧಿಪತಿ,

ಈ ಸಂದರ್ಭದಲ್ಲಿ ಸುರೇಂದ್ರನಾಥ ಹುಡಗಿಕರ್, ಸುರೇಶ ಪಾಟೀಲ್, ಮುಕ್ರಮ ಪಟೇಲ್ ಭಾಸ್ಕರ್ ಖಾಶೆಂಪೂರೆ, ನಾಗರಾಜ ಹಿಬಾರೆ, ದೇವರಾಜ ಹೊಡ್ಮನಿ, ಗಣಪತಿರಾವ ಮಾಸ್ಟರ್, ಸುರೇಶ ಮುಸ್ತರಗಿ, ಜಗದೀಶ ಹಿರೇಮಠ, ಧನ್ನರಾಜ ದೊಡ್ಮನಿ, ಸಿರಾಜೋದ್ಧಿನ್, ನಾಗರಾಜ ವಾಸಗಿ, ಮಹ್ಮದ್ ಆಸೀಫ್ ಪಟೇಲ್ ಸೇರಿ ಅನೇಕರಿದ್ದರು.

 

Contents
“ಹುಮನಾಬಾದ್|  ಶಿಕ್ಷಕರ ದಿನಾಚರಣೆ :  ಸಮಾಜಕ್ಕೆ ಶಿಕ್ಷಕರ ಕೊಡುಗೆ ಅನನ್ಯ-  ಬಸವರಾಜ ಪಾಟೀಲ್ ಸೇಡಂ ಅಭಿಮತ”• ಸೆಕ್ಯೂಲರ್‌ ವಾಯ್ಸ್‌ ಡೆಸ್ಕ್‌ ನ್ಯೂಸ್‌ : ಹುಮನಾಬಾದ್  : ಉತ್ತಮ ಸಮಾಜದ ನಿರ್ಮಾಣಕ್ಕೆ ಶಿಕ್ಷಕರ ಕೊಡುಗೆ ಅನನ್ಯ ಎಂದು ಮಾಜಿ ಸಂಸದ, ಕಲ್ಯಾಣ ಕರ್ನಾಟಕ ವಿಕಾಸ ಅಕಾಡೆಮಿಯ ಮುಖ್ಯ ಸಂಯೋಜಕ ಬಸವರಾಜ ಪಾಟೀಲ್ ಸೇಡಂ ಅವರು  ಹೇಳಿದರು.ಪಟ್ಟಣದ ಬಸವರಾಜ ಎಚ್. ಪಾಟೀಲ್ ಕಲ್ಯಾಣ ಮಂಟಪದಲ್ಲಿ ಕಲ್ಯಾಣ ಕರ್ನಾಟಕ ಅನುದಾನ ರಹಿತ ಖಾಸಗಿ ಶಾಲಾ ಆಡಳಿತ ಮಂಡಳಿ ಸಂಘದ ವತಿಯಿಂದ ಶನಿವಾರ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು  ಮಾತನಾಡಿದರು.ಕನ್ನಡ ನಾಡು, ಮಾತೃಭಾಷೆ ಸೇರಿದಂತೆ ನಮ್ಮ ಸಂಸ್ಕೃತಿ ಪರಂಪರೆ ಉಳಿಸಿ ಬೆಳೆಸುವ ಕಾರ್ಯಕ್ಕೆ ಎಲ್ಲರೂ ಕಂಕಣ ಬದ್ದರಾಗಿ ನಿಲ್ಲಬೇಕು. ಜತೆಗೆ ಆಂಗ್ಲ ಭಾಷೆಯ ಅರಿವು ಹೊಂದುವ ಮೂಲಕ ಸಮಾಜದಲ್ಲಿ ಉತ್ತಮ ಜೀವನ ನಡೆಸಬೇಕು. ಖಾಸಗಿ ಶಾಲೆಗಳಿಗೆ ಸೌಲಭ್ಯಗಳನ್ನು ಕಲ್ಪಿಸಿಕೊಡಲು ಈ ಭಾಗದ ಚುನಾಯಿತ ಜನಪ್ರತಿನಿಧಿಗಳು ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದರು.ಶಾಸಕ ಡಾ. ಸಿದ್ದು ಪಾಟೀಲ್, ವಿಧಾನ ಪರಿಷತ್ ಸದಸ್ಯ ಭೀಮರಾವ ಪಾಟೀಲ್, ಕರ್ನಾಟಕ ರಾಜ್ಯ ಅನುದಾನ ರಹಿತ ಖಾಸಗಿ ಶಿಕ್ಷಣ ಸಂಸ್ಥೆ ಸಂಘದ ರಾಜ್ಯಾಧ್ಯಕ್ಷ ರೇವಣಸಿದ್ದಪ್ಪ ಜಲಾದೆ ಮಾತಮಾಡಿದರು.ಶಿಕ್ಷಕರ ದಿನಾಚರಣೆ ನಿಮಿತ್ತ ಪಟ್ಟಣದ ಹಳೆ ತಹಸೀಲ್ ಕಚೇರಿ ಮುಂಭಾಗದಲ್ಲಿ ಕಲ್ಯಾಣ ಕರ್ನಾಟಕ ಅನುದಾನ ರಹಿತ ಖಾಸಗಿ ಶಿಕ್ಷಣ ಸಂಸ್ಥೆ ಸಂಘದ ವತಿಯಿಂದ ಶನಿವಾರ ನಡೆದ ಸರ್ವಪಲ್ಲಿ ರಾಧಾಕೃಷ್ಣನ್ ಅವರ ಭಾವಚಿತ್ರ ಮೆರವಣಿಗೆಗೆ ವಿಧಾನ ಪರಿಷತ್ ಸದಸ್ಯ ಭೀಮರಾವ ಪಾಟೀಲ್ ಚಾಲನೆ ನೀಡಿದರು. ಬಳಿಕ ಮಾತನಾಡಿ,  “ಮಾಜಿ ಸಚಿವ ರಾಜಶೇಖರ ಪಾಟೀಲ್, ವಿಧಾನ ಪರಿಷತ್ ಸದಸ್ಯ ಡಾ. ಚಂದ್ರಶೇಖರ ಪಾಟೀಲ್ ಜತೆಗೂಡಿ ಖಾಸಗಿ ಶಾಲಾ ಶಿಕ್ಷಕರ ಸಮಸ್ಯೆಗಳ ಕುರಿತು ಸರಕಾರದ ಗಮನ ಸೆಳೆದು ಸಮಸ್ಯೆ ಬಗೆಹರಿಸಲಾಗುವುದು.“ಬಲಿಷ್ಠ ರಾಷ್ಟ್ರದ ನಿರ್ಮಾಣಕ್ಕೆ ಹಾಗೂ ಸಮಾಜದ ಒಳಿತಿಗಾಗಿ ಖಾಸಗಿ ಶಾಲಾ ಶಿಕ್ಷಕರು ನಿಸ್ವಾರ್ಥ ಸೇವೆ ಸಲ್ಲಿಸುತ್ತಿದ್ದಾರೆ. ಈ ನಿಸ್ವಾರ್ಥ ಜೀವಿಗಳ ಹಿತದೃಷ್ಟಿಯಿಂದ ಸರಕಾರದಿಂದ ಸೌಲಭ್ಯಗಳು ಕಲ್ಪಿಸಿಕೊಡಬೇಕು”.  – ರೇಣುಕವೀರ ಗಂಗಾಧರ ಶಿವಾಚಾರ್ಯರು, ಪೀಠಾಧಿಪತಿ,ಈ ಸಂದರ್ಭದಲ್ಲಿ ಸುರೇಂದ್ರನಾಥ ಹುಡಗಿಕರ್, ಸುರೇಶ ಪಾಟೀಲ್, ಮುಕ್ರಮ ಪಟೇಲ್ ಭಾಸ್ಕರ್ ಖಾಶೆಂಪೂರೆ, ನಾಗರಾಜ ಹಿಬಾರೆ, ದೇವರಾಜ ಹೊಡ್ಮನಿ, ಗಣಪತಿರಾವ ಮಾಸ್ಟರ್, ಸುರೇಶ ಮುಸ್ತರಗಿ, ಜಗದೀಶ ಹಿರೇಮಠ, ಧನ್ನರಾಜ ದೊಡ್ಮನಿ, ಸಿರಾಜೋದ್ಧಿನ್, ನಾಗರಾಜ ವಾಸಗಿ, ಮಹ್ಮದ್ ಆಸೀಫ್ ಪಟೇಲ್ ಸೇರಿ ಅನೇಕರಿದ್ದರು.