“ಕುಷ್ಟಗಿ | ತಾಲ್ಲೂಕು ಮಟ್ಟದ ಆಶಾ ಕಾರ್ಯಕರ್ತೆಯರ ಸಮಾವೇಶ : ಭರವಸೆ ಈಡೇರಿಸದ ಸರ್ಕಾರ..! ಮತ್ತೆ ಹೋರಾಟಕ್ಕೆ ಸಿದ್ದ ಎಂದ -ಡಿ.ನಾಗಲಕ್ಷ್ಮೀ ಎಚ್ಚರಿಕೆ”

Contents
“ಕುಷ್ಟಗಿ | ತಾಲ್ಲೂಕು ಮಟ್ಟದ ಆಶಾ ಕಾರ್ಯಕರ್ತೆಯರ ಸಮಾವೇಶ : ಭರವಸೆ ಈಡೇರಿಸದ ಸರ್ಕಾರ..! ಮತ್ತೆ ಹೋರಾಟಕ್ಕೆ ಸಿದ್ದ ಎಂದ -ಡಿ.ನಾಗಲಕ್ಷ್ಮೀ ಎಚ್ಚರಿಕೆ”• ಸೆಕ್ಯೂಲರ್ ವಾಯ್ಸ್ ಡೆಸ್ಕ್ ನ್ಯೂಸ್ : ಕುಷ್ಟಗಿ : ರಾಜ್ಯ ಸರ್ಕಾರ ಕೊಟ್ಟ ಭರವಸೆ ಈಡೇರಿಲ್ಲ ಮುಂದಿನ ಹಂತದ ಹೋರಾಟಕ್ಕೆ ಆಶಾ ಕಾರ್ಯಕರ್ತೆಯರು ಸಿದ್ದವಾಗಿದ್ದಾರೆ ಎಂದು ಆಶಾ ಕಾರ್ಯಕರ್ತೆಯರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಡಿ. ನಾಗಲಕ್ಷ್ಮಿ ಅವರು ಆಕ್ರೋಶ ವ್ಯಕ್ತಪಡಿಸಿದರು. ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘ (ಎಐಯುಟಿಯುಸಿ) ವತಿಯಿಂದ ಕುಷ್ಟಗಿ ಪಟ್ಟಣದ ಬಸವ ಭವನದಲ್ಲಿ ತಾಲ್ಲೂಕು ಮಟ್ಟದ ಆಶಾ ಕಾರ್ಯಕರ್ತೆಯರ ಸಮಾವೇಶ ಉದ್ದೇಶಿಸಿ ಶನಿವಾರ ಅವರು ಮಾತನಾಡಿದರು.ಆಶಾ ಕಾರ್ಯಕರ್ತೆಯರಿಗೆ ಕೆಲಸ ತಕ್ಕಂತೆ ವೇತನ ನಿಗಧಿ ಮಾಡಬೇಕು. ಇತ್ತೀಚಿಗೆ ರಾಜ್ಯ ಮಟ್ಟದಲ್ಲಿ ಅನೀರ್ದಿಷ್ಟವಾಗಿ ಹೋರಾಟ ನಡೆಸಿದಾಗ ಸರ್ಕಾರ, ಏಪ್ರಿಲ್ ನಿಂದ ಹತ್ತು ಸಾವಿರ ಮತ್ತು ಇನ್ಸೆಂಟಿವ್ ನೀಡಲಾಗುವುದೆಂದು ರಾಜ್ಯದ 42 ಸಾವಿರ ಆಶಾ ಕಾರ್ಯಕರ್ತೆಯರಿಗೆ ಭರವಸೆ ನೀಡಿತ್ತು ಎಂದರು.ಸಿ.ಎಂ.ಸಿದ್ದರಾಮಯ್ಯ ಅವರು ನಮಗೆ ಕೊಟ್ಟ ಭರವಸೆ ಕಳೆದ ಐದಾರು ತಿಂಗಳಾದರೂ ಈಡೇರಸಿಲ್ಲ. ಕಾರಣ ಆಗಸ್ಟ್ ತಿಂಗಳಲ್ಲಿ ಮೂರು ದಿನಗಳ ಕಾಲ ರಾಜ್ಯದ ಜಿಲ್ಲಾ ಕೇಂದ್ರಗಳಲ್ಲಿ ಅವೋರಾತ್ರಿ ಧರಣಿ ಮಾಡಲಾಯಿತು.ಆದರೂ ಸರ್ಕಾರ ಕೊಟ್ಟ ಭರವಸೆ ಈಡೇರಿಲ್ಲ ಮುಂದಿನ ಹಂತದ ಹೋರಾಟಕ್ಕೆ ಆಶಾ ಕಾರ್ಯಕರ್ತೆಯರು ಸಿದ್ದವಾಗಿದ್ದಾರೆ ಎಂದರು. ಸರ್ಕಾರ ಕೊಟ್ಟ ಭರವಸೆ ಈಡೇರಿಸದೆ ಸರ್ವೇಗಳನ್ನು ಇತ್ಯಾದಿ ಸಮೀಕ್ಷೆಗಳನ್ನು ಸೇರಿದಂತೆ ಹೆಚ್ಚುವರಿ ಕೆಲಸ ನೀಡಲಾಗಿದೆ ಎಂದು ಹೇಳಿದರು.ಕೆಳಹಂತದಲ್ಲಿ ಜನರಿಗೆ ಆರೋಗ್ಯ ಸೇವೆಯನ್ನು ಒದಗಿಸುತ್ತಿರುವ ಹಾಗೂ ತಾಯಿ ಮಕ್ಕಳ ಆರೈಕೆ, ವಿವಿಧ ರೀತಿಯ ಸಾಂಕ್ರಾಮಿಕ ಕಾಯಿಲೆಗಳ ಬಗ್ಗೆ ನಿರಂತರ ಜಾಗೃತಿ ಮೂಡಿಸುತ್ತಿರುವ ಆರೋಗ್ಯ ಕಾರ್ಯಕರ್ತೆಯರು ಆಶಾಗಳಾಗಿದ್ದಾರೆ. ಕರೋನ ಸಂದರ್ಭದಲ್ಲಿ ಆಶಾ ಕಾರ್ಯಕರ್ತೆಯರ ಸೇವೆಯನ್ನು ಮರೆಯಲು ಸಾಧ್ಯವಿಲ್ಲ. ಆಶಾ ಕಾರ್ಯಕರ್ತೆಯರಿಗೆ ಮುಂಚೂಣಿ ವಾರಿಯಾರ್ಸ್, ಜಾಗತಿಕ ಆರೋಗ್ಯ ನಾಯಕರು ಎಂಬ ಬಿರುದು ಸಿಕ್ಕಿತು. ಆದರೆ ಅವರ ದುಡಿತಕ್ಕೆ ತಕ್ಕಂತೆ ವೇತನ ನೀಡುತ್ತಿಲ್ಲ .ಕೂಡಲೇ ಸರ್ಕಾರ ಆಶಾ ಕಾರ್ಯಕರ್ತೆಯರ ಎಲ್ಲ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿದರು.ಸಮಾವೇಶದಲ್ಲಿ ಜಿಲ್ಲಾ ಅಧ್ಯಕ್ಷ ಶರಣು ಗಡ್ಡಿ, ಜಿಲ್ಲಾ ಕಾರ್ಯದರ್ಶಿ ಕೌಶಲ್ಯ ದೊಡ್ಡಗೌಡರ, ಯಲಬುರ್ಗಾ ತಾಲ್ಲೂಕ ಕಾರ್ಯದರ್ಶಿ ಶಿವಮ್ಮ ಮುಖಂಡರಾದ ಅನ್ನಪೂರ್ಣ ಉಪಸ್ಥಿತರಿದ್ದರು.• ಕುಷ್ಟಗಿ ತಾಲ್ಲೂಕು ಹೊಸ ಸಮಿತಿ ರಚನೆ : ತಾಲ್ಲೂಕು ಅಧ್ಯಕ್ಷೆಯಾಗಿ ಗಾಯತ್ರಿ ಬಳಿಗೇರಿ, ಉಪಾಧ್ಯಕ್ಷೆರುಗಳಾಗಿ ಅಕ್ಕಮ್ಮ -ಹಿರೇಗೊಣ್ಣನಗರ್, ರೇಣುಕಾ ಹನುಮಸಾಗರ ಅಂಬ್ರಮ್ಮ ಕುಷ್ಟಗಿ ಅರ್ಬನ್ ಕಾರ್ಯದರ್ಶಿ ಚಂಪಾ , ಸಹ ಕಾರ್ಯದರ್ಶಿ ಮಂಡಳಿ ಸದಸ್ಯರಾಗಿ ಮಲ್ಲಮ್ಮ ಜುಲಕಟ್ಟಿ, ಸಾವಿತ್ರಿ ತಾವರಗೇರಾ, ಪಾರ್ವತಿ ಹಿರೇಮನ್ನಾಪುರ, ಮಹಾಲಕ್ಷ್ಮಿ ಗೊಲ್ಲರ, ಗಂಗೂಬಾಯಿ ಹಿರೇಮನ್ನಾಪುರ, ಕಾಳಮ್ಮ ಹಿರೇ ಗೋಣ್ಣನಗರ್ , ಮಂಜುಳಾ ಜಕ್ಕಲಿ ಸೇರಿದಂತೆ ಒಟ್ಟು 15 ಜನರ ಹೊಸ ಸಮಿತಿ ಆಯ್ಕೆ ಮಾಡಲಾಯಿತು.
