“ಕೊಪ್ಪಳ | ನಗರದಲ್ಲಿ ಸಸಿ ನೆಡುವ ಮೂಲಕ ʼರಾಷ್ಟ್ರೀಯ ಎಂಜನಿಯರ್ ದಿನʼ ಆಚರಣೆ”

Contents
“ಕೊಪ್ಪಳ | ನಗರದಲ್ಲಿ ಸಸಿ ನೆಡುವ ಮೂಲಕ ʼರಾಷ್ಟ್ರೀಯ ಎಂಜನಿಯರ್ ದಿನʼ ಆಚರಣೆ” • ಸೆಕ್ಯುಲರ್ ವಾಯ್ಸ್ ಡೆಸ್ಕ್ ನ್ಯೂಸ್ :ಕೊಪ್ಪಳ : ಇಲ್ಲಿನ ಸಿವಿಲ್ ಎಂಜನಿಯರ್ ಅಂಡ್ ಅರ್ಕೀಟೆಕ್ಟ್ಸ ಅಸೋಸಿಯೇಷನ್” ವತಿಯಿಂದ ರಾಷ್ಟ್ರೀಯ ಎಂಜನಿಯರ್ ದಿನಾಚರಣೆಯನ್ನು ಇಂಜಿನಿಯರ್ ಅಸೋಸಿಯೇಷನ್ ಕಚೇರಿಯಲ್ಲಿ ಸೋಮವಾರ ಆಚರಿಸಲಾಯಿತು. ಈ ವೇಳೆ ಅಸೋಸಿಯೇಷನ್ ಸಿಬ್ಬಂದಿ ಹಾಗೂ ಖಾಸಗಿ ಕಂಪನಿ ಸಿಬ್ಬಂದಿಯವರು ಎಲ್ಲರೂ ಸೇರಿ “ಕೊಪ್ಪಳ ನಗರದಲ್ಲಿ ಸಸಿಗಳನ್ನು” ನೆಡುವ ಮುಖಾಂತರವಾಗಿ ಅರ್ಥಪೂರ್ಣವಾಗಿ ಆಚರಣೆಗೆ ಚಾಲನೆ ನೀಡಿದರು.ಈ ಸಂದರ್ಭದಲ್ಲಿ ಅಸೋಸಿಯೇಷನ್ ಎಂಜಿನಿಯರ್ ಚಂದ್ರಶೇಖರ್ ಪಾಟೀಲ್ ಅವರು ಮಾತನಾಡಿ ,ಎಂಜಿನಿಯರ್‌ಗಳ ದಿನವು ಕೇವಲ ಒಂದು ದಿನಾಂಕವಲ್ಲ, ಬದಲಾಗಿ ನಾವೀನ್ಯತೆ, ಸಮಸ್ಯೆ ಪರಿಹಾರ, ತಂತ್ರಜ್ಞಾನ ಮತ್ತು ರಾಷ್ಟ್ರ ನಿರ್ಮಾಣಕ್ಕಾಗಿ ಎಂಜಿನಿಯರ್‌ಗಳ ಉತ್ಸಾಹ, ಸಮರ್ಪಣೆ ಮತ್ತು ಸೃಜನಶೀಲತೆಯ ಆಚರಣೆಯಾಗಿದೆ. ಅವರ ಕಠಿಣ ಪರಿಶ್ರಮವು ನಮ್ಮ ದೇಶದ ಪ್ರಗತಿ, ಪರಿವರ್ತನೆ ಮತ್ತು ಸಾಮಾಜಿಕ ಅಭಿವೃದ್ಧಿಯ ಆಧಾರಸ್ತಂಭವಾಗಿದೆ ಎಂದರು.ಇಂದು ಭಾರತವು ತನ್ನ ಎಂಜಿನಿಯರಿಂಗ್ ಪರಾಕ್ರಮದ ಬಲದ ಮೇಲೆ ಜಾಗತಿಕ ಮಟ್ಟದಲ್ಲಿ ಮುನ್ನಡೆಯುತ್ತಿದೆ. ಆಧುನಿಕ ಭಾರತದ ಮೂಲಸೌಕರ್ಯ, ರಸ್ತೆಗಳು, ಅಣೆಕಟ್ಟುಗಳು, ಸೇತುವೆಗಳು, ವಿದ್ಯುತ್, ಡಿಜಿಟಲ್ ಇಂಡಿಯಾ, ಸ್ಮಾರ್ಟ್ ಸಿಟಿಗಳು ಇತ್ಯಾದಿಗಳಿಗೆ ಎಂಜಿನಿಯರಿಂಗ್ ಉತ್ತುಂಗಕ್ಕೇರಿದೆ ಎಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಸೋಸಿಯೇಷನ್ ಅಧ್ಯಕ್ಷ ಚನ್ನಕೇಶವ ಅವರು ವಹಿಸಿ ಮಾತನಾಡಿ, ವಿಶ್ವೇಶ್ವರಯ್ಯನವರು ನೀಡಿದ ಕೊಡುಗೆ ನಮಗೆ ಸ್ಪೂರ್ತಿದಾಯಕ. ಹೀಗಾಗಿ ಎಲ್ಲಾ ಇಂಜಿನಿರ‍್ಸ್ ಗಳು ತಮ್ಮ ಜೀವನದಲ್ಲಿ ಅವರ ವಿಚಾರಗಳು ಮತ್ತು ಯೋಜನೆಗಳು ಅಳವಡಿಸಿಕೊಂಡು ಅವರ ದಾರಿಯಲ್ಲಿ ನಡೆಯಬೇಕೆಂದು ಅಭಿಪ್ರಾಯಪಟ್ಟರು. ಕಾರ್ಯಕ್ರಮದ ಅತಿಥಿಗಳಾಗಿ ಡಾ. ಬಿ ವಿ ಮುದ್ಗಲ್, ಚಂದ್ರಶೇಖರಯ್ಯ ಸೊಪ್ಪಿಮಠ,.ಬಸವರಾಜ್ ಗೌರಿಮಠ, ಬಸವರಾಜ್ ದೇವಪುರ ಹಾಗೂ ಜಂಟಿ ಸೆಕ್ರೆಟರಿ ಮಹೇಶ್ ತಾವರಗೆರೆ, ಹಿರಿಯ ಇಂಜಿನಿಯರ್ ಗಳಾದ ಪಂಪಾಪತಿ, , ಪ್ರಮೋದ್, ಆಕಾಶ್ ,ಬಸವರಾಜ್ ಮಸ್ಕಿ, ಚಂದ್ರಶೇಖರ್ ಪಾಟೀಲ್, ಇಂಜಿನಿಯರ್ ಅನುರಾಧ, ಮೀಡಿಯಾ ಕನ್ವೀನರ್ ಕಲೀಮ್ ಖಾನ್, ಹಾಗೂ ಅಸೋಸಿಯೇಷನ್ ಸದಸ್ಯರು ಉಪಸ್ಥಿತರಿದ್ದರು.
