“ಇಂಡಿ | ಸಹಕಾರಿ ಕಾರ್ಖಾನೆ ಉಳಿಸಿ ಬೆಳೆಸುವುದೇ ರೈತರ ಕೆಲಸ : ಕಾರ್ಖಾನೆಯ ಅಧ್ಯಕ್ಷ, ಶಾಸಕ ಯಶವಂತರಾಯಗೌಡ ಪಾಟೀಲ್ ಹೇಳಿಕೆ”
Contents
“ಇಂಡಿ | ಸಹಕಾರಿ ಕಾರ್ಖಾನೆ ಉಳಿಸಿ ಬೆಳೆಸುವುದೇ ರೈತರ ಕೆಲಸ : ಕಾರ್ಖಾನೆಯ ಅಧ್ಯಕ್ಷ, ಶಾಸಕ ಯಶವಂತರಾಯಗೌಡ ಪಾಟೀಲ್ ಹೇಳಿಕೆ”• ಸೆಕ್ಯುಲರ್ ವಾಯ್ಸ್ ಡೆಸ್ಕ್ ನ್ಯೂಸ್ :ಇಂಡಿ :ಕಾರ್ಖಾನೆಯ ಪ್ರತಿ ವರ್ಷದ ಸಭೆಯಲ್ಲಿ ಭೀಮಾಶಂಕರ ಸಹಕಾರಿ ಸಕ್ಕರೆ ಕಾರ್ಖಾನೆ ರೈತರ ಆಸ್ತಿ,ಅದನ್ನು ಉಳಿಸಿ,ಬೆಳೆಸುವುದು ರೈತರ ಕೆಲಸ ಕಾರ್ಖಾನೆಯ ಉಳಿಯಬೇಕಾದರೆ ಅವಧಿಪೂರ್ಣಗೊಂಡ ಕಬ್ಬುಕಟಾವು ಮಾಡಿ ಕಾರ್ಖಾನೆಗೆ ಕಳುಹಿಸಬೇಕು ಎಂದು ಪದೇ ಪದೇ ಮನವಿ ಮಾಡಿಕೊಂಡಿದ್ದೇನೆ. ರೈತರ ಬಳಿ ಕಾರ್ಖಾನೆಯ ಉಳಿಸುವ ಬಗ್ಗೆ ಕಳಕಳಿ ಇಲ್ಲವಾದರೆ, ನಮ್ಮದೇನು ಕೆಲಸ ಕಾರ್ಖಾನೆಯನ್ನು ಯಾರು ಬೇಕಾದವರು ನಡೆಸಿಕೊಂಡು ಹೋಗಬಹುದು ಎಂದು ಕಾರ್ಖಾನೆಯ ಅಧ್ಯಕ್ಷ, ಶಾಸಕ ಯಶವಂತರಾಯಗೌಡ ಪಾಟಿಲ ಹೇಳಿದರು.ಅವರು ಮರಗೂರ ಭೀಮಾಶಂಕರ ಸಹಕಾರಿ ಸಕ್ಕರೆ ಕಾರ್ಖಾನೆ 2024-25ನೇ ಸಾಲಿನ ಸರ್ವ ಸಾಧಾರಣ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಈ ಕಾರ್ಖಾನೆಯ ರೈತರ ಆಸ್ತಿಯಾಗಿ ಉಳಿಯಬೇಕು ಎಂದು ಸರ್ಕಾರದಿಂದ ಅನುಧಾನ ತಂದು, ಜಪಾನ ಟೆಕ್ನಾಲಜಿ ಮೂಲಕ ಕಾರ್ಖಾನೆ ಕಟ್ಟಿದ್ದೇನೆ. ಆದರೆ ಇಂದು ಕಾರ್ಖಾನೆಯ ಹಲವು ಸಮಸ್ಯೆಗಳನ್ನು ಎದುರಿಸುತ್ತಿದೆ. ಕಾರ್ಖಾನೆ ಸ್ಥಾಪಿಸುವ ಹೊಸ ಯೋಜನೆ,ವಿಸ್ತರಣಾಯೋಜನೆಗಳಿಗೆ ಪಡೆದ ಸಾಲ ಮತ್ತು ಇತರೆ ಸಾಲಗಳ ಮೇಲೆ ವಾರ್ಷಿಕವಾಗಿ ಭರಿಸುತ್ತಿರುವಬಡ್ಡಿಯ ಹೊರೆಯಿಂದ ಕಾರ್ಖಾನೆಯು ಸತತವಾಗಿ ಹಾನಿ ಅನುಭವಿಸಿ ತೀವ್ರ ಆರ್ಥಿಕ ಸಂಕಷ್ಟದಲ್ಲಿ ಇದೆ.ಈ ಭಾಗದ ಕಬ್ಬು ಬೆಳೆಗಾರರ ಸದಸ್ಯರ ಹಿತದೃಷ್ಟಿಯಿಂದ ಕಾರ್ಖಾನೆಯನ್ನು ಕಾರ್ಯಾಚಾರಣೆಯಲ್ಲಿ ಇರುವಂತೆ ಮಾಡುವುದು ಅವಶ್ಯಕವಾಗಿರುವುದರಿಂದ ಕಾರ್ಖಾನೆ ಆರ್ಥಿಕ ಸಂಕಷ್ಟದಿಂದ ಹೊರಬರಲು,ಕಾರ್ಖಾನೆಯನ್ನು ನಡೆಸಿಕೊಂಡು ಹೋಗಲು ಮಾಲ್ಕಿ ಹಕ್ಕುಉಳಿಸಿಕೊಂಡು ಕಾರ್ಖಾನೆಯ ಗುತ್ತಿಗೆ ನೀಡುವುದು ಸಭೆಯಲ್ಲಿ ರೈತರ ಮುಂದೆ ಇಟ್ಟಿರುವುದಾಗಿ ಹೇಳಿದರು.ರೈತರುಯಾವನಿರ್ಣಯ ಮಾಡುತ್ತಾರೆಯೊ ಅದಕ್ಕೆ ಆಡಳಿತ ಮಂಡಳಿ ಬದ್ದವಾಗಿದೆ ಎಂದು ಹೇಳಿದರು.ಇದಕ್ಕೆ ರೈತರಾದ ಮಹಾದೇವ ಹಿರೇಕುರಬರ,ಸಂಗಣ್ಣ ಈರಾಬಟ್ಟಿ, ಶ್ರೀಮಂತ ಇಂಡಿ, ಗುರುನಾಥ ಬಗಲಿ,ಡಿ.ಆರ್.ಶಹಾ ಮಾತನಾಡಿ, ಇಂಡಿ,ಸಿಂದಗಿ, ಚಡಚಣ ಭಾಗದಲ್ಲಿ ಇದೊಂದೆ ರೈತರ ಕಾರ್ಖಾನೆಯಾಗಿದ್ದು, ಯಾವುದೇ ಕಾರಣಕ್ಕೂ ಕಾರ್ಖಾನೆ ಗುತ್ತಿಗೆ ನೀಡಬಾರದು. ಕಾರ್ಖಾನೆಯ ಆರ್ಥಿಕ ನಷ್ಟ ಅನುಭವಿಸುತ್ತಿದ್ದರೆ ರೈತರಿಂದ ಮತ್ತೇ ಶೇರ್ ಸಂಗ್ರಹ ಮಾಡಬೇಕು. ರೈತರು ನಿಮ್ಮ ಹಿಂದೆ ಇದ್ದಾರೆ.ಸಧ್ಯ ಇರುವ ಆಡಳಿತ ಮಂಡಳಿ ನೇತ್ರತ್ವದಲ್ಲಿ ಕಾರ್ಖಾನೆ ನಡೆಯಲಿ ಎಂದು ಹೇಳಿದರು.ಕಾರ್ಖಾನೆಯ ಅಧ್ಯಕ್ಷರಾದಿಯಾಗಿ ನಿಷ್ಠೆ,ಪ್ರಾಮಾಣಿಕ,ಕಳಕಳಿಯಿಂದ ಕೆಲಸ ಆಡಳಿತ ಈ ಮಾಡುತ್ತಿದ್ದಾರೆ.ಆದರೆ ಕಾರ್ಖಾನೆಯ ಕೆಲ ಅಧಿಕಾರಿ ವರ್ಗ, ಟ್ಯಾಕ್ಟರ್ ,ಟೋಳಿಯವರು ಕಳಕಳಿ ಇಲ್ಲದೆ ಕೆಲಸ ಮಾಡುತ್ತಿರುವುದರಿಂದ ಕಾರ್ಖಾನೆ ಕಬ್ಬು ನುರಿಸುವಲ್ಲಿ ಹಿಂದೆ ಬಿದ್ದಿದೆ ಎಂದು ಹೇಳಿದರು.ಶಾಸಕ ಯಶವಂತರಾಯಗೌಡ ಪಾಟೀಲ ಮಾತನಾಡಿ,2024-25ನೇ ಸಾಲಿನ ಕಬ್ಬುನುರಿಸುವ ಹಂಗಾಮಿನ 1 111 ದಿನಗಳಲ್ಲಿ 327452 ಮೆಟ್ರಿಕ್ ಟನ್ ಕಬ್ಬು ನುರಿಸಿ, 300280 ಕ್ವಿಂಟಲ್ ಸಕ್ಕರೆ ಉತ್ಪಾದನೆ ಮಾಡಲಾಗಿದ್ದು, ಶೇ. 9.17 ಪ್ರತಿಶತ ಸಕ್ಕರೆ ಇಳುವರಿಯನ್ನು ಪಡೆದಿದೆ.2025-26ನೇ ಸಾಲಿನ ಕಬ್ಬು ನುರಿಸುವ ಹಂಗಾಮಿನಲ್ಲಿ 5 ಲಕ್ಷ ಮೆಟ್ರಿಕ್ ಟನ್ ಕಬ್ಬು ನುರಿಸುವ ಗುರಿ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.ಪಿಆರ್‌ಪಿಗಿಂತ ಹೆಚ್ಚಿನ ದರ ನೀಡಿದ್ದು ಶ್ರೀ ಭೀಮಾಶಂಕರ ಸಹಕಾರಿಸಕ್ಕರೆ ಕಾರ್ಖಾನೆಯಾಗಿದೆ. ಕಾರ್ಬಾನೆಯ ವಿಷಯ ಗೌಪ್ಯವಾಗಿ ಇಡದೆ, ರೈತರ ಮಧ್ಯದಲ್ಲಿ ಎಲ್ಲವು ಚರ್ಚೆಯಾಗಬೇಕು ಎಂದು,ಎಲ್ಲ ವಿಷಯಗಳನ್ನು ರೈತರ ಮುಂದೆ ಇಟ್ಟಿದ್ದೇನೆ. ರೈತರಿಗೆ ಮೋಸ ಮಾಡಿ ಕಾರ್ಖಾನೆ ಲಾಭದಲ್ಲಿ ತರಬಹುದಿತ್ತು.ಆದರೆ ರೈತರಿಗೆ ಮೋಸ ಮಾಡಿದರೆ ಯಾವ ಕಾಲಕ್ಕೂ ಒಳ್ಳೆಯದಾಗುವುದಿಲ್ಲ ಎಂಬ ರೈತ ಪರ ಕಾಳಜಿಯಿಂದ ಬದ್ದತೆ, ಪ್ರಾಮಾಣಿಕತೆಯಿಂದಆ ಕೆಲಸಕ್ಕೆ ಕೈ ಹಾಕಿರುವುದಿಲ್ಲ,ಹಾಕುವುದಿಲ್ಲ ಎಂದು ಹೇಳಿದರು.ರೈತರು ಇದು ನಮ್ಮ ಕಾರ್ಖಾನೆ ಎಂದು ಭಾವಿಸಬೇಕು.ಸತ್ಯಕ್ಕೆ ಸಹಕರಿಸಿ, ಸುಳ್ಳಿಗೆ ವಿರೋಧ ಮಾಡುವ ಕೆಲಸ ರೈತರು ಮಾಡಬೇಕು ಎಂದು ಹೇಳಿದರು.ಕಾರ್ಖಾನೆಯ ಉಪಾಧ್ಯಕ್ಷ ಎಂ.ಆರ್.ಪಾಟೀಲ,ನಿರ್ದೇಶಕರಾದ ವಿಶ್ವನಾಥ ಬಿರಾದಾರ, ಸಿದ್ದಣ್ಣ ಬಿರಾದಾರ,ಜಟ್ಟೆಪ್ಪರವಳಿ,ಸುರೇಶಗೌಡ ಪಾಟೀಲ, ಅಶೋಕಗಜಾಕೋಶ, ರೇವಗೊಂಡಪ್ಪ ಪಾಟೀಲ, ಬಸವರಾಜ ಧನಶ್ರಿ, ವಿಶ್ವನಾಥ ಬಿರಾದಾರ,ದುಂಡಪ್ಪ ಖೇಡ, ವ್ಯವಸ್ಥಾಪಕ ನಿರ್ದೇಶಕಿ ಎಸ್. ಕೆ.ಭಾಗ್ಯಶ್ರೀ ಇದ್ದರು

