LOCAL EXPRESS : “ಇಂಡಿ | ಸಿದ್ಧಲಿಂಗ ಮಹಾರಾಜರ ಐಕ್ಯ ಸ್ಥಳದ ಕಾರ್ಯಕ್ಕೆ 1ಕೋಟಿ ರೂ.ಅನುದಾನ :  ಶಾಸಕ ಯಶವಂತರಾಯಗೌಡ ಪಾಟೀಲ್ ಭರವಸೆ”

By admin

“ಇಂಡಿ | ಸಿದ್ಧಲಿಂಗ ಮಹಾರಾಜರ ಐಕ್ಯ ಸ್ಥಳದ ಕಾರ್ಯಕ್ಕೆ 1ಕೋಟಿ ರೂ.ಅನುದಾನ : 
ಶಾಸಕ ಯಶವಂತರಾಯಗೌಡ ಪಾಟೀಲ್ ಭರವಸೆ”

 

Contents
“ಇಂಡಿ | ಸಿದ್ಧಲಿಂಗ ಮಹಾರಾಜರ ಐಕ್ಯ ಸ್ಥಳದ ಕಾರ್ಯಕ್ಕೆ 1ಕೋಟಿ ರೂ.ಅನುದಾನ :  ಶಾಸಕ ಯಶವಂತರಾಯಗೌಡ ಪಾಟೀಲ್ ಭರವಸೆ”• ಸೆಕ್ಯುಲರ್ ವಾಯ್ಸ್ ಡೆಸ್ಕ್ ನ್ಯೂಸ್ :ಇಂಡಿ : ಸುಕ್ಷೇತ್ರ ಲಚ್ಯಾಣದಲ್ಲಿ ಲಿಂಗೈಕ್ಯ ಶ್ರೀ ಸಿದ್ಧಲಿಂಗ ಮಹಾರಾಜರ ಐಕ್ಯ ಸ್ಥಳದ ಕಾರ್ಯ ಪ್ರಗತಿ ಪಥದತ್ತ ಸಾಗುತ್ತಿದ್ದು, ಈಗಾಗಲೇ ಈ ಕಾರ್ಯಕ್ಕೆ 1 ಕೋಟಿ ಅನುಧಾನ ನೀಡಿದ್ದೇನೆ. ಇನ್ನೂ ಒಂದು ಕೋಟಿ ಅನುಧಾನ ನೀಡುವುದಾಗಿ ಶಾಸಕ ಯಶವಂತರಾಯಗೌಡ ಪಾಟೀಲ ಅವರು ಭರವಸೆ ನೀಡಿದರು.ತಾಲೂಕಿನ ಲಚ್ಯಾಣ ಗ್ರಾಮದಲ್ಲಿ ಶ್ರೀ ಸಿದ್ದಲಿಂಗಮಹಾರಾಜರ 98ನೇ ಪುಣ್ಯಾರಾಧನೆಯ ಅಂಗವಾಗಿ ಹಮ್ಮಿಕೊಂಡ ಪುರಾಣ ಮಂಗಲ ಕಾಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ನಾವೆಲ್ಲರು ಇಂದು ಶಾಂತಿಯಿಂದ ಬದುಕಲು ಕಾರಣ ಈ ಮಠದ ಪರಂಪರೆ, ಶ್ರೀ ಮಠದ ಪರಂಪರೆ ರಕ್ಷಣೆಗೆ ನನ್ನ ಜೀವನವನ್ನೆ ಮೀಸಲಾಗಿ ಇಡುತ್ತೇನೆ. ಈ ಕ್ಷೇತ್ರದಲ್ಲಿ ಬಿ.ಈಡಿ ಶಿಕ್ಷಣ ತರಬೇತಿ ಕೇಂದ್ರ ಸ್ಥಾಪನೆಗೆ ಶ್ರಮಿಸುತ್ತೇನೆ ಎಂದರು.ಮಠದ ಪೀಠಾಧೀಶರಾಗಿದ್ದ ಬಂಥನಾಳದ ಶ್ರೀ ಸಂಗನಬಸವ ಮಹಾಶಿವಯೋಗಿಗಳು ಈಭಾಗದಲ್ಲಿ ವಿದ್ಯುತ್, ರಸ್ತೆ, ಶಿಕ್ಷಣ ಸಂಸ್ಥೆಯ ಸ್ಥಾಪನೆಗೆ ಶ್ರಮಿಸಿದ್ದಾರೆ. ಪ್ರವಚನ ಕೇಳಿದ ಭಕ್ತರು ಜೋಳಿಗೆಗೆ ಹಾಕಿದ ಹಣದಲ್ಲಿ ಬಿಎಲ್‌ಡಿಇಸಂಸ್ಥೆಯ ವತಿಯಿಂದ ಹಲವಾರು ಶಿಕ್ಷಣ ಸಂಸ್ಥೆಗಳನ್ನು ಸ್ಥಾಪನೆ ಮಾಡಿದ್ದಾರೆ. ಪೂಜ್ಯರ ಜೀವನ ಚರಿತ್ರೆ ಕುರಿತು ಲಚ್ಯಾಣ ಮಠದಲ್ಲಿ ಪುರಾಣ ಕಾಯಕ್ರಮ ಆಯೋಜಿಸಿದ್ದು ಸಂತೋಷ ತಂದಿದೆ ಎಂದರು.ಸಾನಿಧ್ಯವಹಿಸಿದ್ದ ಯರನಾಳದ ಗುರುಸಂಗನಬಸವಮಹಾಸ್ವಾಮೀಜಿ ಮಾತನಾಡಿ, ಲಿಂ. ಶ್ರೀ ಸಿದ್ದಲಿಂಗ ಮಹಾರಾಜರ ಪುಣ್ಯಾರಾಧನೆಯ ಸಂದಭದಲ್ಲಿ ಮಳೆಯ ಸಿಂಚನ ಆಗುತ್ತಿರುವದು ಸಂತಸದ ಭಾವ ಮೂಡಿಸಿದೆ. ಈ ಹಿಂದೆ ನಾನು ಇಲ್ಲಿ ಪ್ರವಚನ ಹೇಳಲು ಬಂದಾಗ ಭಾರಿ ಪ್ರಮಾಣದ ಮಳೆ ಆಗಿ-ತ್ತು ಈ ಕ್ಷೇತ್ರದಲ್ಲಿ ಮಾಣಿಕ್ಯ ರೂಪದಲ್ಲಿ ಬಂದು ನಿಂತವರು ಬಂಥನಾಳದ ಶ್ರೀ ಸಂಗನಬಸವ ಮಹಾಶಿವಯೋಗಿಗಳು ಎಂದರು.ತುಂಗಳದ ಶಿವಶರಣೆ ಅನಸೂಯಾದೇವಿ ಅಮ್ಮನವರು ಮಾತನಾಡಿ, ಪರಮಾತೃಯಾವ ರೂಪದಲ್ಲಿ ಬರುತ್ತಾನೆ ಎಂದು ಹೇಳಲು ಆಗದು. ಸಾಕ್ಷಾತ ಪರಮಾತ್ಮನೆ ಸಿದ್ಧಲಿಂಗನ ರೂಪದಲ್ಲಿ ಬಂದಿದ್ದಾನೆ. ಗುರುಮಹಾತ್ಮನೇ ಪರಮಾತ್ಮ ಎಂದರು.ಹುಣಶ್ಯಾಳ ನಿಜಗುಣದೇವರು,ಪ್ರವಚನಕಾರ ಮುದಗಲ್ನ ಮಹಾಂತ ಸ್ವಾಮೀಜಿ 2.2. ಮಾತನಾಡಿ ಗವಾಯಿ ಕಲ್ಲೂರಿನ ಶಂಕರಯ್ಯ ಆರ್. ಗುರುಮಠ, ತಬಲಾ ವಾದಕ ಬಸವರಾಜ ಹೊನ್ನಿಗನೂರ, ವಯೋಲಿನ್ ಕಲಾವಿದ ಗೂಗವಾಡದ ಕೃಷ್ಣಾ ಅಂದಾನಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.ಹೂವಿನಹಿಪ್ಪರಗಿಯದ್ರಾಕ್ಷಾಯಣಿ ಅಮ್ಮನವರು,ಹಳಿಂಗಳಿಯಪೂಜ್ಯರು, ಜಕನೂರಿನ ಸಿದ್ದಲಿಂಗದೇವರು, ಅಗರಖೇಡದ ಅಭಿನವ ಪ್ರಭುಲಿಂಗ ಸ್ವಾಮೀಜಿ, ಮದರಖಂಡಿ ಬಸವಯ್ಯ ಸ್ವಾಮೀಜಿ,ಆಳೂರಿನ ಶಂಕರಾನಂದಸ್ವಾಮೀಜಿ,ಆತ್ಮಾನಂದ ಮಹಾಸ್ವಾಮೀಜಿ ಕಾಯಕ್ರಮದ ಸಾನಿಧ್ಯವಹಿಸಿದ್ದರು.ನಿವೃತ್ತ ಪ್ರಾಚಾಯ ಎ.ಪಿ. ಕಾಗವಾಡ ಸ್ವಾಗತಿಸಿದರು. ಅರಣ್ಯ ಅಧಿಕಾರಿ ಡಿ.ಎ. ಮುಜಗೊಂಡ ಕಾಯಕ್ರಮನಿರೂಪಿಸಿದರು.

 

• ಸೆಕ್ಯುಲರ್ ವಾಯ್ಸ್ ಡೆಸ್ಕ್ ನ್ಯೂಸ್ :

ಇಂಡಿ : ಸುಕ್ಷೇತ್ರ ಲಚ್ಯಾಣದಲ್ಲಿ ಲಿಂಗೈಕ್ಯ ಶ್ರೀ ಸಿದ್ಧಲಿಂಗ ಮಹಾರಾಜರ ಐಕ್ಯ ಸ್ಥಳದ ಕಾರ್ಯ ಪ್ರಗತಿ ಪಥದತ್ತ ಸಾಗುತ್ತಿದ್ದು, ಈಗಾಗಲೇ ಈ ಕಾರ್ಯಕ್ಕೆ 1 ಕೋಟಿ ಅನುಧಾನ ನೀಡಿದ್ದೇನೆ. ಇನ್ನೂ ಒಂದು ಕೋಟಿ ಅನುಧಾನ ನೀಡುವುದಾಗಿ ಶಾಸಕ ಯಶವಂತರಾಯಗೌಡ ಪಾಟೀಲ ಅವರು ಭರವಸೆ ನೀಡಿದರು.

ತಾಲೂಕಿನ ಲಚ್ಯಾಣ ಗ್ರಾಮದಲ್ಲಿ ಶ್ರೀ ಸಿದ್ದಲಿಂಗಮಹಾರಾಜರ 98ನೇ ಪುಣ್ಯಾರಾಧನೆಯ ಅಂಗವಾಗಿ ಹಮ್ಮಿಕೊಂಡ ಪುರಾಣ ಮಂಗಲ ಕಾಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ನಾವೆಲ್ಲರು ಇಂದು ಶಾಂತಿಯಿಂದ ಬದುಕಲು ಕಾರಣ ಈ ಮಠದ ಪರಂಪರೆ, ಶ್ರೀ ಮಠದ ಪರಂಪರೆ ರಕ್ಷಣೆಗೆ ನನ್ನ ಜೀವನವನ್ನೆ ಮೀಸಲಾಗಿ ಇಡುತ್ತೇನೆ. ಈ ಕ್ಷೇತ್ರದಲ್ಲಿ ಬಿ.ಈಡಿ ಶಿಕ್ಷಣ ತರಬೇತಿ ಕೇಂದ್ರ ಸ್ಥಾಪನೆಗೆ ಶ್ರಮಿಸುತ್ತೇನೆ ಎಂದರು.

ಮಠದ ಪೀಠಾಧೀಶರಾಗಿದ್ದ ಬಂಥನಾಳದ ಶ್ರೀ ಸಂಗನಬಸವ ಮಹಾಶಿವಯೋಗಿಗಳು ಈಭಾಗದಲ್ಲಿ ವಿದ್ಯುತ್, ರಸ್ತೆ, ಶಿಕ್ಷಣ ಸಂಸ್ಥೆಯ ಸ್ಥಾಪನೆಗೆ ಶ್ರಮಿಸಿದ್ದಾರೆ. ಪ್ರವಚನ ಕೇಳಿದ ಭಕ್ತರು ಜೋಳಿಗೆಗೆ ಹಾಕಿದ ಹಣದಲ್ಲಿ ಬಿಎಲ್‌ಡಿಇಸಂಸ್ಥೆಯ ವತಿಯಿಂದ ಹಲವಾರು ಶಿಕ್ಷಣ ಸಂಸ್ಥೆಗಳನ್ನು ಸ್ಥಾಪನೆ ಮಾಡಿದ್ದಾರೆ. ಪೂಜ್ಯರ ಜೀವನ ಚರಿತ್ರೆ ಕುರಿತು ಲಚ್ಯಾಣ ಮಠದಲ್ಲಿ ಪುರಾಣ ಕಾಯಕ್ರಮ ಆಯೋಜಿಸಿದ್ದು ಸಂತೋಷ ತಂದಿದೆ ಎಂದರು.

ಸಾನಿಧ್ಯವಹಿಸಿದ್ದ ಯರನಾಳದ ಗುರುಸಂಗನಬಸವಮಹಾಸ್ವಾಮೀಜಿ ಮಾತನಾಡಿ, ಲಿಂ. ಶ್ರೀ ಸಿದ್ದಲಿಂಗ ಮಹಾರಾಜರ ಪುಣ್ಯಾರಾಧನೆಯ ಸಂದಭದಲ್ಲಿ ಮಳೆಯ ಸಿಂಚನ ಆಗುತ್ತಿರುವದು ಸಂತಸದ ಭಾವ ಮೂಡಿಸಿದೆ. ಈ ಹಿಂದೆ ನಾನು ಇಲ್ಲಿ ಪ್ರವಚನ ಹೇಳಲು ಬಂದಾಗ ಭಾರಿ ಪ್ರಮಾಣದ ಮಳೆ ಆಗಿ-ತ್ತು ಈ ಕ್ಷೇತ್ರದಲ್ಲಿ ಮಾಣಿಕ್ಯ ರೂಪದಲ್ಲಿ ಬಂದು ನಿಂತವರು ಬಂಥನಾಳದ ಶ್ರೀ ಸಂಗನಬಸವ ಮಹಾಶಿವಯೋಗಿಗಳು ಎಂದರು.

ತುಂಗಳದ ಶಿವಶರಣೆ ಅನಸೂಯಾದೇವಿ ಅಮ್ಮನವರು ಮಾತನಾಡಿ, ಪರಮಾತೃಯಾವ ರೂಪದಲ್ಲಿ ಬರುತ್ತಾನೆ ಎಂದು ಹೇಳಲು ಆಗದು. ಸಾಕ್ಷಾತ ಪರಮಾತ್ಮನೆ ಸಿದ್ಧಲಿಂಗನ ರೂಪದಲ್ಲಿ ಬಂದಿದ್ದಾನೆ. ಗುರುಮಹಾತ್ಮನೇ ಪರಮಾತ್ಮ ಎಂದರು.

ಹುಣಶ್ಯಾಳ ನಿಜಗುಣದೇವರು,ಪ್ರವಚನಕಾರ ಮುದಗಲ್ನ ಮಹಾಂತ ಸ್ವಾಮೀಜಿ 2.2. ಮಾತನಾಡಿ ಗವಾಯಿ ಕಲ್ಲೂರಿನ ಶಂಕರಯ್ಯ ಆರ್. ಗುರುಮಠ, ತಬಲಾ ವಾದಕ ಬಸವರಾಜ ಹೊನ್ನಿಗನೂರ, ವಯೋಲಿನ್ ಕಲಾವಿದ ಗೂಗವಾಡದ ಕೃಷ್ಣಾ ಅಂದಾನಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಹೂವಿನಹಿಪ್ಪರಗಿಯದ್ರಾಕ್ಷಾಯಣಿ ಅಮ್ಮನವರು,ಹಳಿಂಗಳಿಯಪೂಜ್ಯರು, ಜಕನೂರಿನ ಸಿದ್ದಲಿಂಗದೇವರು, ಅಗರಖೇಡದ ಅಭಿನವ ಪ್ರಭುಲಿಂಗ ಸ್ವಾಮೀಜಿ, ಮದರಖಂಡಿ ಬಸವಯ್ಯ ಸ್ವಾಮೀಜಿ,ಆಳೂರಿನ ಶಂಕರಾನಂದಸ್ವಾಮೀಜಿ,ಆತ್ಮಾನಂದ ಮಹಾಸ್ವಾಮೀಜಿ ಕಾಯಕ್ರಮದ ಸಾನಿಧ್ಯವಹಿಸಿದ್ದರು.

ನಿವೃತ್ತ ಪ್ರಾಚಾಯ ಎ.ಪಿ. ಕಾಗವಾಡ ಸ್ವಾಗತಿಸಿದರು. ಅರಣ್ಯ ಅಧಿಕಾರಿ ಡಿ.ಎ. ಮುಜಗೊಂಡ ಕಾಯಕ್ರಮನಿರೂಪಿಸಿದರು.