LOCAL EXPRESS :”ರಾಯಚೂರು|ಬಳಗಾನೂರ,ಕವಿತಾಳ ಪೊಲೀಸ್ ಠಾಣೆಗಳಿಗೆ ಅತ್ಯುತ್ತಮ ಪೊಲೀಸ್ ಠಾಣೆ ಪ್ರಶಸ್ತಿಗೆ ಆಯ್ಕೆ”

By admin

“ರಾಯಚೂರು|ಬಳಗಾನೂರು,ಕವಿತಾಳ ಪೊಲೀಸ್ ಠಾಣೆಗಳಿಗೆ ಅತ್ಯುತ್ತಮ ಪೊಲೀಸ್ ಠಾಣೆ ಪ್ರಶಸ್ತಿಗೆ ಆಯ್ಕೆ”

• ಸೆಕ್ಯುಲರ್‌ ವಾಯ್ಸ್‌ ನ್ಯೂಸ್‌ ರಾಯಚೂರ: 

ರಾಯಚೂರುಜಿಲ್ಲೆಯ ಬಳಗಾನೂರು ,ಕವಿತಾಳ ಗ್ರಾಮದ  ಪೋಲೀಸ್‌ ಠಾಣೆಗಳಿಗೆ ಪೋಲಿಸ್‌  ಕೇಂದ್ರ ಗೃಹಇಲಾಖೆ ನೀಡುವ ಅತ್ಯುತ್ತಮ ಪೊಲೀಸ್ ಠಾಣೆ ವಾರ್ಷಿಕ ಪ್ರಶಸ್ತಿಗೆ ಪಟ್ಟಣದ ಪೊಲೀಸ್ ಠಾಣೆ ಆಯ್ಕೆಯಾಗಿದೆ.

ರಾಜ್ಯದ 906 ಪೊಲೀಸ್ ಠಾಣೆಗಳ ಪೈಕಿ ಅತ್ಯುತ್ತಮ ಪೊಲೀಸ್ ಠಾಣೆ ವಾರ್ಷಿಕಪ್ರಶಸ್ತಿಗೆ ದೇಶದ ಪ್ರತಿ ರಾಜ್ಯದಿಂದ ಮೂರು ಪೊಲೀಸ್ ಠಾಣೆಗಳನ್ನು ಆಯ್ಕೆ ಮಾಡಲಾಗುತ್ತದೆ. ರಾಜ್ಯದಲ್ಲಿ ರಾಯಚೂರು ಜಿಲ್ಲೆಯ ಬಳಗಾನೂರು, ಕವಿತಾಳ, ಮತ್ತು ಬಳ್ಳಾರಿ ಜಿಲ್ಲೆಯ ಸಿರಿಗೇರಿ ಪೊಲೀಸ್ ಠಾಣೆಗಳು ಆಯ್ಕೆಯಾಗಿವೆ ಎಂದು ಗೃಹ ಮಂತ್ರಲಾಯದ ಅಧಿಕಾರಿ ಸೈಯದ್ ಮಹ್ಮದ್ ಹುಸೇನ್ ತಿಳಿಸಿದ್ದಾರೆ.

ಪಟ್ಟಣದ ಪೊಲೀಸ್ ಠಾಣೆಗೆ ಭೇಟಿ ನೀಡಿ ಪರಿಶೀಲಿಸಿದ ಅವರು, ಸ್ಥಳೀಯ ಅಧಿಕಾರಿಗಳಿಂದ ಮಾಹಿತಿ ಪಡೆದರು ಮತ್ತು ಅಂಗಡಿಗಳಿಗೆ ಭೇಟಿ ನೀಡಿ ವ್ಯಾಪಾರ ಸ್ಥರು ಮತ್ತು ಸಾರ್ವಜನಿಕರಿಂದ ಮಾಹಿತಿ ಪಡೆದರು.ಸಿಬ್ಬಂದಿ ಕಾರ್ಯ ಸಂಚಾರಿ ವ್ಯವಸ್ಥೆ, ಅಪರಾಧ ತಡೆ, ಕಟ್ಟಡದ ಸ್ವಚ್ಛತೆ, ಮಹಿಳಾ ಅಪಾರದ ತಡೆ, ಬಾಲ್ಯವಿವಾಹ ತಡೆ ಸೇರಿದಂತೆ ಸಾರ್ವಜನಿಕರ ಸಮಸ್ಯೆಗೆ ಸಿಬ್ಬಂದಿ ಸ್ಪಂದನೆ ಸೇರಿದಂತೆ ವಿವಿಧ ಹಂತದಲ್ಲಿ ಪರಶೀಲಿಸಿ ದೇಶದ 10 ಸ್ಥಾನಕ್ಕೆ ಹೀಗೆ ಠಾಣೆಗಳನ್ನು ಆಯ್ಕೆಮಾಡಲಾಗಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಡಿವೈಎಸ್‌ಪಿ ಬಿಸ್ ತಳವಾರ, ಡಿವೈಎಸ್‌ಪಿ ವೆಂಕಟೇಶ್, ಸರ್ಕಲ್ ಇನ್‌ಸ್ಪೇಕ್ಟರ್ ವೀರಾರೆಡ್ಡಿ, ಸಿಪಿಐಎಂ ಶಶಿಕಾಂತ್, ಠಾಣೆಯ ಪಿಎಸ್‌ಐ ಎರಿಯಪ್ಪ ಅಂಗಡಿ ಹಾಗೂ ಸಿಬ್ಬಂದಿಗಳು ಇದ್ದರು.