LOCAL NEWS : “ಸಿಂಧನೂರು| ಕೋಮುವಾದ ತಡೆಗಟ್ಟಲು ಯುವಕರು ಮುಂಬರಲು ಮೌಲಾನಾ ಅಸದ್ ರಷೀದ್ ಕರೆ” 

By admin

“ಸಿಂಧನೂರು| ಕೋಮುವಾದ ತಡೆಗಟ್ಟಲು ಯುವಕರು ಮುಂಬರಲು ಮೌಲಾನಾ ಅಸದ್ ರಷೀದ್ ಕರೆ”

Contents
“ಸಿಂಧನೂರು| ಕೋಮುವಾದ ತಡೆಗಟ್ಟಲು ಯುವಕರು ಮುಂಬರಲು ಮೌಲಾನಾ ಅಸದ್ ರಷೀದ್ ಕರೆ”• ಸೆಕ್ಯುಲರ್‌ ವಾಯ್ಸ್‌ ನ್ಯೂಸ್‌ ಸಿಂಧನೂರು :ಸಿಂಧನೂರು : ದ್ವೇಷ ಅಳಸಿ ಮತ್ತು ಪ್ರೀತಿ ಅರಳಿಸಲು ಪ್ರತಿಯೊಬ್ಬರು ಕಂಕಣಬದ್ಧರಾಗಿ, ದೇಶದಲ್ಲಿರುವ ಕೋಮುವಾದ ತಡೆಗಟ್ಟಲು ಯುವಕರು ಮುಂದಾಗಬೇಕು ಎಂದು ಜಮೀಅತೆ ಉಲಮಾದ ಉತ್ತರ ಪ್ರದೇಶದ ರಾಜ್ಯ ಘಟಕದ ಅಧ್ಯಕ್ಷ ಮೌಲಾನಾ ಅಸದ್ ರಷೀದ್ ಕರೆ ನೀಡಿದರು.ನಗರದ ಇಂದಿರಾನಗರದಲ್ಲಿ ಜಮೀಆತೆ ಉಲಮಾ ತಾಲ್ಲೂಕು ಘಟಕದ ಕಾರ್ಯಾಲಯವನ್ನು ಇಂದು ಉದ್ಘಾಟಿಸಿ ಮಾತನಾಡುತ್ತಾ, ದೇಶದಲ್ಲಿ ಜಾತಿ, ಧರ್ಮದ ಹೆಸರಿನಲ್ಲಿ ಕೋಮುವಾದವನ್ನು ಬಿತ್ತುವ ಕೆಲಸವಾಗುತ್ತಿದೆ. ಇದರಿಂದಾಗಿ ದೇಶದಲ್ಲಿ ಅಶಾಂತಿ ತಲೆದೂರಿದೆ. ಶಾಂತಿ, ಸಹೋದರತ್ವದ ಭಾವನೆ ಎಲ್ಲರಲ್ಲಿ ಮೂಡಬೇಕು. ಕೋಮುವಾದದ ವಿರುದ್ದ ಹೋರಾಟ ಮಾಡಲು ಯುವಕರು ಜಾಗೃತರಾಗಬೇಕು. ಅಂದಾಗ ಮಾತ್ರ ಸುಭದ್ರ ರಾಷ್ಟ್ರನಿರ್ಮಾಣ ಸಾಧ್ಯ ಎಂದರು.107 ವರ್ಷದ ಇತಿಹಾಸವಿರುವ ಜಮೀಆತೆ ಉಲಮಾ ಸಂಘಟನೆ ಸ್ವಾತಂತ್ರ್ಯ ಚಳವಳಿಯಲ್ಲಿ ದೊಡ್ಡ ಮಟ್ಟದ ಹೋರಾಟ ಮಾಡಿದೆ. ಜಮೀಅತೆಯ ಅನೇಕ ಮಹಾನೀಯರು ದೇಶದ ಸ್ವಾತಂತ್ರ್ಯಕ್ಕಾಗಿ ಪ್ರಾಣತೆತ್ತಿದ್ದಾರೆ. ಎಲ್ಲಾ ಜಾತಿ ಜನಾಂದವರ ಮನಸ್ಸಿನಲ್ಲಿ ಪ್ರೀತಿ ತುಂಬುವ ಕೆಲಸ ಮಾಡಬೇಕು. ಆ ನಿಟ್ಟಿನಲ್ಲಿ ಜಮೀಅತೆ ಉಲಮಾ ಕೆಲಸ ಮಾಡುತ್ತಿದೆ ಎಂದರು.

• ಸೆಕ್ಯುಲರ್‌ ವಾಯ್ಸ್‌ ನ್ಯೂಸ್‌ ಸಿಂಧನೂರು :

ಸಿಂಧನೂರು : ದ್ವೇಷ ಅಳಸಿ ಮತ್ತು ಪ್ರೀತಿ ಅರಳಿಸಲು ಪ್ರತಿಯೊಬ್ಬರು ಕಂಕಣಬದ್ಧರಾಗಿ, ದೇಶದಲ್ಲಿರುವ ಕೋಮುವಾದ ತಡೆಗಟ್ಟಲು ಯುವಕರು ಮುಂದಾಗಬೇಕು ಎಂದು ಜಮೀಅತೆ ಉಲಮಾದ ಉತ್ತರ ಪ್ರದೇಶದ ರಾಜ್ಯ ಘಟಕದ ಅಧ್ಯಕ್ಷ ಮೌಲಾನಾ ಅಸದ್ ರಷೀದ್ ಕರೆ ನೀಡಿದರು.

ನಗರದ ಇಂದಿರಾನಗರದಲ್ಲಿ ಜಮೀಆತೆ ಉಲಮಾ ತಾಲ್ಲೂಕು ಘಟಕದ ಕಾರ್ಯಾಲಯವನ್ನು ಇಂದು ಉದ್ಘಾಟಿಸಿ ಮಾತನಾಡುತ್ತಾ, ದೇಶದಲ್ಲಿ ಜಾತಿ, ಧರ್ಮದ ಹೆಸರಿನಲ್ಲಿ ಕೋಮುವಾದವನ್ನು ಬಿತ್ತುವ ಕೆಲಸವಾಗುತ್ತಿದೆ. ಇದರಿಂದಾಗಿ ದೇಶದಲ್ಲಿ ಅಶಾಂತಿ ತಲೆದೂರಿದೆ. ಶಾಂತಿ, ಸಹೋದರತ್ವದ ಭಾವನೆ ಎಲ್ಲರಲ್ಲಿ ಮೂಡಬೇಕು. ಕೋಮುವಾದದ ವಿರುದ್ದ ಹೋರಾಟ ಮಾಡಲು ಯುವಕರು ಜಾಗೃತರಾಗಬೇಕು. ಅಂದಾಗ ಮಾತ್ರ ಸುಭದ್ರ ರಾಷ್ಟ್ರನಿರ್ಮಾಣ ಸಾಧ್ಯ ಎಂದರು.

107 ವರ್ಷದ ಇತಿಹಾಸವಿರುವ ಜಮೀಆತೆ ಉಲಮಾ ಸಂಘಟನೆ ಸ್ವಾತಂತ್ರ್ಯ ಚಳವಳಿಯಲ್ಲಿ ದೊಡ್ಡ ಮಟ್ಟದ ಹೋರಾಟ ಮಾಡಿದೆ. ಜಮೀಅತೆಯ ಅನೇಕ ಮಹಾನೀಯರು ದೇಶದ ಸ್ವಾತಂತ್ರ್ಯಕ್ಕಾಗಿ ಪ್ರಾಣತೆತ್ತಿದ್ದಾರೆ. ಎಲ್ಲಾ ಜಾತಿ ಜನಾಂದವರ ಮನಸ್ಸಿನಲ್ಲಿ ಪ್ರೀತಿ ತುಂಬುವ ಕೆಲಸ ಮಾಡಬೇಕು. ಆ ನಿಟ್ಟಿನಲ್ಲಿ ಜಮೀಅತೆ ಉಲಮಾ ಕೆಲಸ ಮಾಡುತ್ತಿದೆ ಎಂದರು.