KOPPAL NEWS :”ಕೊಪ್ಪಳ| ಸಿಜೆಐ ಮೇಲೆ ಶೂ ಎಸೆಯಲು ಯತ್ನಿಸಿದ ವಕೀಲನ ವಿರುದ್ಧ ಕಠಿಣ ಕಾನೂನು ಕ್ರಮಕ್ಕಾಗಿ ಆಗ್ರಹಿಸಿ ಡಿ.ಎಸ್ ಎಸ್‌(ಅಂಬೇಡ್ಕರ್‌ ಧ್ವನಿ) ಮುಖಂಡರಿಂದ  ರಾಷ್ಟ್ರಪತಿ ಅವರಿಗೆ ಮನವಿ”

By admin

“ಕೊಪ್ಪಳ| ಸಿಜೆಐ ಮೇಲೆ ಶೂ ಎಸೆಯಲು ಯತ್ನಿಸಿದ ವಕೀಲನ ವಿರುದ್ಧ ಕಠಿಣ ಕಾನೂನು ಕ್ರಮಕ್ಕಾಗಿ ಆಗ್ರಹಿಸಿ ಡಿಎಸ್ಎಸ್‌(ಅಂಬೇಡ್ಕರ್‌ ಧ್ವನಿ) ಮುಖಂಡರಿಂದ ರಾಷ್ಟ್ರಪತಿ ಅವರಿಗೆ ಮನವಿ” 

 

• ಸೆಕ್ಯುಲರ್‌ ವಾಯ್ಸ್‌ ನ್ಯೂಸ್‌ : 

 ಕೊಪ್ಪಳಸಿಜೆಐ ಮೇಲೆ  ಶೂ ಎಸೆದು ಕಾನೂನು ವೃತ್ತಿಗೆ ಧಕ್ಕೆ ತಂದ ವಕೀಲನ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ  ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ಧ್ವನಿ) ಚಂದ್ರಕಾಂತ ಎಸ್ ಕಾದ್ರೋಳ್ಳಿ ಬಣದ ಕಾರ್ಯಕರ್ತರು  ಡಿಸಿ ಅವರ ಮುಖಾಂತರ ರಾಷ್ಟ್ರಪತಿ ಅವರಿಗೆ ಬುಧುವಾರ ಮನವಿ ಪತ್ರ ನೀಡಿ ಆಗ್ರಹಿಸಿದರು.

ಈ ವೇಳೆ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ಧ್ವನಿ) ಚಂದ್ರಕಾಂತ ಎಸ್ ಕಾದ್ರೋಳ್ಳಿ ಬಣದ ಜಿಲ್ಲಾಧ್ಯಕ್ಷ  ನಿಂಗಪ್ಪ ಜಿ.ಎಸ್. ಬೆಣಕಲ್ ಅವರು   ಮಾತನಾಡಿ,  ಇತ್ತೀಚೆಗೆ ಮುಖ್ಯ ನ್ಯಾಯಾಧೀಶ  ಗವಾಯಿ ಮಹೋದಯರ ಮೇಲೆ ನಡೆದ ಹಲ್ಲೆ ಘಟನೆಯನ್ನು ಅತ್ಯಂತ ತೀವ್ರವಾಗಿ ಖಂಡಿಸುತ್ತೇವೆ ಎಂದರು.

ಈ ಘಟನೆ ಕೇವಲ ಒಬ್ಬ ವ್ಯಕ್ತಿಯ ಮೇಲೆ ನಡೆದ ಹಲ್ಲೆಯಲ್ಲ. ನ್ಯಾಯಾಂಗದ ಸ್ವಾತಂತ್ರ್ಯ ಹಾಗೂ ಕಾನೂನಿನ ಆಳ್ವಿಕೆಗೆ ಧಿಕ್ಕಾರ ನೀಡುವ ಕೃತ್ಯವಾಗಿದೆ. ದೇಶದ ಉನ್ನತ ನ್ಯಾಯಾಂಗದ ಮುಖ್ಯಸ್ಥರ ಮೇಲೆ ಹಲ್ಲೆ ನಡೆಸುವುದು ರಾಷ್ಟ್ರದ ಸಂವಿಧಾನಾತ್ಮಕ ವ್ಯವಸ್ಥೆಯ ಮೇಲೆ ದಾಳಿ ಮಾಡುವಂತಾಗಿದೆ. ಈ ಕೃತ್ಯ ವೇಸಗಿದ ವಕೀಲನ ವಿರುದ್ಧ ತಕ್ಷಣ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಒತ್ತಾಯಿಸಿದರು.

 ಆ ವಕೀಲನನ್ನು  ವೃತ್ತಿಯಿಂದ ಶಾಶ್ವತವಾಗಿ ಅಮಾನತುಗೊಳಿಸಿ ಬಾರ್ ಕೌನ್ಸಿಲ್‌ ವಜಾ ಮಾಡಲು  ಕ್ರಮ ಕೈಗೊಳ್ಳುವಂತೆ ನಿರ್ದೇಶಿಸಬೇಕು ಮತ್ತು ಸಮಾಜದಲ್ಲಿ ಅಶಾಂತಿ ಉಂಟುಮಾಡುವ ಮತ್ತು ಸಂವಿಧಾನದ ಮೌಲ್ಯಗಳಿಗೆ ವಿರೋಧವಾಗಿ ನಡೆದುಕೊಳ್ಳುವ ಆ ವ್ಯಕ್ತಿಯನ್ನು ಗಡಿಪಾರು ಮಾಡಬೇಕು. ನ್ಯಾಯಾಂಗದ ಗೌರವವನ್ನು ಕಾಪಾಡಲು ರಾಷ್ಟ್ರ ಮಟ್ಟದಲ್ಲಿ ಕಾನೂನು ವ್ಯವಸ್ಥೆ ಬಲಪಡಿಸಬೇಕೆಂದರು.

ಈ ನಿಯೋಗದಲ್ಲಿ ಡಿ.ಎಸ್ ಎಸ್‌(ಅಂಬೇಡ್ಕರ್‌ ಧ್ವನಿ) ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಶಶಿಕಲಾ ಮಠದ ,ಅಲ್ಪಸಂಖ್ಯಾತ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಸಲ್ಮಾ ಜಾನ್ , ಜಿಲ್ಲಾ ಕಾರ್ಯದರ್ಶಿ ಕರಿಯಪ್ಪ ಬಿ ಮಣ್ಣಿನವರ, ವಿವಿಧ ಘಟಕದ ಮುಖಂಡರಾದ ಮೈಲಪ್ಪ ಮಾದೇನೂರು ಯಮನೂರು ಬಣಕಾರ್, ಶ್ರೀಕಾಂತ ಹೊಸಮನಿ, ದುರ್ಗಮ್ಮ ಬಟಗೇರಿ, ಮಾಂತೇಶ್ ಮ್ಯಾಗಲಮನಿ ಹಾಗೂ ಮುತ್ತು ಅರಕೇರಿ ಭೀಮೇಶ್ ಮಂಡಲಗೇರಿ , ಅರ್ಜುನ ಬೆಣಕಲ , ವೀರೇಶ ವೀರಾಪುರ್ ಸೇರಿದಂತೆ  ಇತರರಿದ್ದರು