“ಕೊಪ್ಪಳ |ಅಲೆಮಾರಿ ಜಾತಿಗಳಿಗೆ ಶೇ.1ರಷ್ಟು ಪ್ರತ್ಯೇಕ ಒಳ ಮೀಸಲಾತಿಗಾಗಿ ಆಗ್ರಹಿಸಿ ಡಿಎಸ್ ಎಸ್ (ಎನ್. ಮೂರ್ತಿ ಬಣ) ನೇತೃತ್ವದಲ್ಲಿ ಪ್ರತಿಭಟನೆ”

Contents
“ಕೊಪ್ಪಳ |ಅಲೆಮಾರಿ ಜಾತಿಗಳಿಗೆ ಶೇ.1ರಷ್ಟು ಪ್ರತ್ಯೇಕ ಒಳ ಮೀಸಲಾತಿಗಾಗಿ ಆಗ್ರಹಿಸಿ ಡಿಎಸ್ ಎಸ್ (ಎನ್. ಮೂರ್ತಿ ಬಣ) ನೇತೃತ್ವದಲ್ಲಿ ಪ್ರತಿಭಟನೆ”• ಸೆಕ್ಯುಲರ್ ವಾಯ್ಸ್ ನ್ಯೂಸ್ :ಕೊಪ್ಪಳ : ಇಲ್ಲಿನ ಜಿಲ್ಲಾಡಳಿತ ಭವನ ಎದುರುಗಡೆ ಅಲೆಮಾರಿಯ 59 ಜಾತಿಗಳಿಗೆ ಪ್ರತ್ಯೇಕ ಶೇ.1ರಷ್ಟು ಒಳ ಮೀಸಲಾತಿಗಾಗಿ ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ದಾದಾ ಸಾಹೇಬ್ ಡಾ. ಎನ್. ಮೂರ್ತಿ ಬಣ ಸ್ಥಾಪಿತ ಬಣ) ನೇತೃತ್ವದಲ್ಲಿ ವಿವಿಧ ಸಮುದಾಯದ ಮುಖಂಡರು ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬುಧುವಾರ ಮನವಿ ಪತ್ರ ನೀಡಿ ಆಗ್ರಹಿಸಿದರು.ಈ ಪ್ರತಿಭಟನೆಯಲ್ಲಿ ಅಲೆಮಾರಿ ಜಿಲ್ಲಾ ಘಟಕದ ಅಧ್ಯಕ್ಷ ಹಾಗೂ ಚೆನ್ನದಾಸರ ಸಮುದಾಯದ ಜಿಲ್ಲಾ ಮುಖಂಡ ಸಂಜಯದಾಸ್ ಕೌಜಗೇರಿ ಮಾತನಾಡಿ, ಅಲೆಮಾರಿ 59 ಸಮುದಾಯಗಳಲ್ಲಿ ಸೇರಿಸಿದ 49 ಸಮುದಾಯದಲ್ಲಿ ಬರುವ ಹಾಗೂ 10,ರಲ್ಲಿ ಬರುವ ಸಮುದಾಯದಲ್ಲಿ ಕೆಲ ಪ್ರಮುಖ ಲೋಪ ದೋಷಗಳಿವೆ ಎಂದರು. ಇದರಲ್ಲಿ ಬಲಿಷ್ಠ ಕೊರಮ ಕೊರಚ ಹಾಗೂ ಲಂಬಾಣಿ ಭೋವಿ ಸಮುದಾಯಗಳು, ಎಡ ಮತ್ತು ಬಲ ದಲಿತ ಸಮುದಾಯಗಳಲ್ಲಿ ಮೂಲ ದಲಿತ ಸಮುದಾಯದಲ್ಲಿ ಬರುವ ದಕ್ಕಲಿಗ, ಚೆನ್ನದಾಸರ, ಹೊಲೆಯದಾಸರ, ದಾಸರಿ ಮಾಲಾ ದಾಸರ, ದಾಸರಿ ಸಮುದಾಯಗಳು ಮೂಲ ಅಲೆಮಾರಿಗಳು. ಇವುಗಳು ದಲಿತ ಸಂಬಂಧಿತ ಸಮುದಾಯಗಳಲ್ಲ ಎಂದು ನಾವುಗಳು ಯಾರೋ ಹೇಳುತ್ತಿರೋದಲ್ಲಇತಿಹಾಸದಲ್ಲಿ ಇದೆ ಎಂದು ಸ್ಟಷ್ಟಪಡಿಸಿದರು.ಎ. ಜೆ .ಸದಾಶಿವ ವರದಿಯಲ್ಲಿ ಇವುಗಳೆಲ್ಲವನ್ನು ಬೇರೆ ಪಡಿಸಿ ಮೂಲ ಅಸ್ಪೃಶ್ಯ ಅಲೆಮಾರಿ ಮುಟ್ಟುಸಿಕೊಳ್ಳದ ಸಮುದಾಯಗಳನ್ನು ಮುಟ್ಟುಸಿಕೊಳ್ಳದವರಿಂದ ಬೇರೆ ಮಾಡಿ ಉಳಿದ ಸುಮಾರು 49,ಸಮುದಾಯಗಳಿಗೆ 1%ಮೀಸಲಾತಿ ನೀಡಬೇಕೆಂದು ಒತ್ತಾಯಿಸಿದರು. ಈ ಹೋರಾಟದಲ್ಲಿ ಎಸ್ಸಿ ಎಸ್ಟಿ ಅಲೆಮಾರಿ ಬುಡಕಟ್ಟು ಮಹಾಸಭಾ, ಬುಡುಗ ಜಂಗಮ, ಸುಡುಗಾಡು ಸಿದ್ದರು ಹಾಗೂ ಚೆನ್ನದಾಸರ ಸಮುದಾಯದ ಜಿಲ್ಲಾ ಮತ್ತು ತಾಲೂಕು ಸಮಿತಿಗಳ ಮುಖಂಡರುಗಳು ಪ್ರತಿಭಟನೆಗೆ ಒಗ್ಗಟಿನಿಂದ ಸಾಥ್ ನೀಡಿದರು.ಈ ಪ್ರತಿಭಟನೆಯಲ್ಲಿ ಅಲೆಮಾರಿ ಅಭಿವೃದ್ದಿ ಸಂಘದ ಗೌರವ ಅಧ್ಯಕ್ಷ ಬಸವರಾಜ್ ವಿಭೂತಿ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಅಧ್ಯಕ್ಷ ಮರೀಸ್ವಾಮಿ ಆರ್,ಕನಕಗಿರಿ, ಆರ್ ಪಿ ಐ (ಬಿ) ಜಿಲ್ಲಾ ಉಪಾಧ್ಯಕ್ಷ ಯಮನೂರ ಮೇಕೆದಾಳ, ರಾಮಲಿಂಗಯ್ಯ ಶಾಸ್ತ್ರಿಮಠ, ಮೌನೇಶ್ ಚೆನ್ನದಾಸರ, ಗವಿಸಿದ್ದಪ್ಪ ಚೆಕೇನಕೊಪ್, ಶಿವಪುತ್ರ ಹಂಚಿನಾಳ ಸೇರಿದಂತೆ ಅಲೆಮಾರಿ ಸಮುದಾಯ ಹಾಗೂ ದಲಿತ ಸಮುದಾಯದ ಪ್ರಮುಖರು ಭಾಗವಹಿಸಿದರು.
