ಬಳ್ಳಾರಿ | ಸಿಜೆಐಗೆ ಶೂ ಎಸೆದು ಅಪಮಾನ : ಸೂಕ್ತ ಕ್ರಮಕ್ಕೆ ವಿವಿಧ ಸಂಘಟನೆಗಳ ಒತ್ತಾಯ”.
• ಸೆಕ್ಯುಲರ್ ವಾಯ್ಸ್ ನ್ಯೂಸ್ ಬಳ್ಳಾರಿ :
ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳ ಮೇಲೆ ವಕೀಲಯೊಬ್ಬ ಶೂ ಎಸೆದು ಅವಮಾನ ಮಾಡಿದ್ದು ವಕೀಲನನ್ನು ಕಠಿಣ ಶಿಕ್ಷೆಗೆ ಒಳಪಡಿಸಬೇಕು’ ಎಂದು ದಲಿತ ಸಂಘರ್ಷ ಸಮಿತಿಯ (ಡಿ.ಜಿ.ಸಾಗರ್ ಬಣದ) ಜಿಲ್ಲಾ ಸಂಚಾಲಕ ಎ ಮಾನಯ್ಯ ಅವರು ಒತ್ತಾಯಿಸಿದ್ದಾರೆ.
ಡಿಸಿ ಅವರ ಮೂಲಕ ರಾಷ್ಟçಪತಿ ದ್ರೌಪದಿ ಮುರ್ಮುರವರಿಗೆ ಮನವಿ ಪತ್ರ ನೀಡಿ ಬಳಿಕ ಮಾತನಾಡಿ, “ಆರ್‌ಎಸ್ಎಸ್ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ನಿರಾಕರಿಸಿದ ಗವಾಯಿಯವರ ಮೇಲೆ ದ್ವೇಷದಿಂದ ಈ ರೀತಿಯ ಘಟನೆಗೆ ಕಾರಣವಾಗಿದೆ. ಘಟನೆಗೆ ಕಾರಣವಾದ ರಾಕೇಶ ಕಿಶೋರ್ ನ್ಯಾಯಮೂರ್ತಿಗಳ ಮೇಲೆ ಶೂ ಎಸೆದು ‘ಸನಾತನ ಧರ್ಮಕ್ಕೆ ಅವಮಾನ ಮಾಡಿದರೆ ಸಹಿಸುವುದಿಲ್ಲ’ ಎಂಬ ಉದ್ಧಟತನದ ಹೇಳಿಕೆಯನ್ನು ನೀಡಿದ್ದಾನೆ. ಇಂತ ಹೀನಕೃತ್ಯ ಎಸಗಿದ ಸಂವಿಧಾನ ದ್ರೋಹಿ ಕಿಶೋರ್‌ನನ್ನು ಕಠಿಣ ಶಿಕ್ಷೆಗ ಗುರಿಪಡಿಸಿಬೇಕು” ಎಂದರು.
ಜಿಲ್ಲಾ ಅಂಬೇಡ್ಕರ್ ಸಂಘದ ವತಿಯಿದ ಜಿಲ್ಲಾಧಿಕಾರಿಗಳ ಮೂಲಕ ಪ್ರಧಾನಿಯವರಿಗೆ ಮನವಿ ಸಲ್ಲಿಸಿ, “ಸರ್ವೋಚ್ಚ ನ್ಯಾಯಾಲಯದ ಮುಖ್ಯನ್ಯಾಯಮೂರ್ತಿಗಳು ಕೇವಲ ದಲಿತ ಎಂಬ ಕಾರಣದಿಂದ ಅವರ ಮೇಲೆ ಸನಾತನಿ ವಕೀಲನೊಬ್ಬ ಶೂ ಎಸೆದು ಅವಮಾನ ಎಸಗಿದ್ದಾನೆ. ಬಿ.ಆರ್.ಗವಾಯಿ ಏಕಾಂಗಿಯಲ್ಲ ಅವರ ಹಿಂದೆ ದೇಶದ ಜನತೆ ಇದೆ ದೇಶದ ಅತ್ಯುನ್ನತ ನ್ಯಾಯಾಂಗಕ್ಕೆ ವ್ಯವಸ್ಥೆಗೆ ಅಪಮಾನ ಮಾಡಿದ ವಕೀಲನಿಗೆ ಕಠಿಣ ಶಿಕ್ಷೆ ವಿಧಿಸಬೇಕು” ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಪಿ.ಎಲ್ ಗಾದಿಲಿಂಗನಗೌಡ, ವಿ.ಎಸ್ ಶಿವಶಂಕರ್, ನರಸಪ್ಪ, ರಾಮನಾಯ್ಕ್, ಇಮಾಮ್ ಗೋಡೇಕರ್, ಗೋವಿಂದ ಬಾಬು, ಡಾ.ಟಿ.ಎ ದುರುಗಪ್ಪ, ರಾಜೇಶ್ ಹುಲಿಯಪ್ಪ, ಅನಂತಕುಮಾರ್, ರಮೇಶ್, ಡಿ.ಎಸ್.ಎಸ್ ಸಾಗರ ಬಣದ ಹಲವರು ಅಂಬೇಡ್ಕರ್ ಸಂಘದ ಕಾರ್ಯಕರ್ತರು ಸೇರಿದಂತೆ ಅನೇಕರು ಇದ್ದರು.