ಕುಕನೂರು| ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆ: ಕಾಂಗ್ರೆಸ್ ನ 11 ಅಭ್ಯರ್ಥಿಗಳಿಗೆ ಭರ್ಜರಿ ಜಯ..! : ಅದ್ದೂರಿ ವಿಜಯೋತ್ಸವ..!

By admin

ಕುಕನೂರು| ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆ:

ಕಾಂಗ್ರೆಸ್ ಬೆಂಬಲಿತ11 ಅಭ್ಯರ್ಥಿಗಳಿಗೆ ಭರ್ಜರಿ ಗೆಲುವು..! :ಬಿಜೆಪಿಗೆ ಮುಖಭಂಗ, ಅದ್ದೂರಿ ವಿಜಯೋತ್ಸವ..!

Contents
ಕುಕನೂರು| ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆ:ಕಾಂಗ್ರೆಸ್ ಬೆಂಬಲಿತ11 ಅಭ್ಯರ್ಥಿಗಳಿಗೆ ಭರ್ಜರಿ ಗೆಲುವು..! :ಬಿಜೆಪಿಗೆ ಮುಖಭಂಗ, ಅದ್ದೂರಿ ವಿಜಯೋತ್ಸವ..!•ಸೆಕ್ಯುಲರ್‌ ವಾಯ್ಸ್‌ ನ್ಯೂಸ್‌ ಕುಕನೂರ: “ನ್ಯಾಯಸಮತವಾಗಿ ನಡೆದ ಮತದಾನಕ್ಕೆ ದೊರೆತಿದೆ. ಪ್ರಜಾಪ್ರಭುತ್ವದ ಮಹತ್ವವನ್ನು ಇಂದು ಸಾಬೀತುಪಡಿಸಿದ್ದೇವೆ’ ಎಂದು ಕಾಂಗ್ರೆಸ್ ಹಿರಿಯ ಮುಖಂಡ ಯಂಕಣ್ಣ ಯರಾಶಿ ಅಭಿಪ್ರಾಯಪಟ್ಟರು.ಈ ಸಂದರ್ಭದಲ್ಲಿ ಕುಕನೂರಿನ ಕೃಷಿ ಪತ್ತಿನ ಸಹಕಾರ ಸಂಘದ ಕಳೆದ 2024ರ ಡಿಸೇಂಬರ್ 29 ರಂದು ಜರುಗಿದ ಆಡಳಿತ ಮಂಡಳಿಯ ಸಾಮಾನ್ಯ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಅಭೂತಪೂರ್ವ ಜಯಗಳಿಸಿದ್ದಾರೆ. ಕಾಂಗ್ರೆಸ್ ಪಕ್ಷದ ವತಿಯಿಂದ ವಿಜಯೋತ್ಸವ ಮೆರವಣಿಗೆಯು ಪಟ್ಟಣದ ಮಹಾಮಾಯ ದೇವಸ್ಥಾನದಿಂದ ವೀರಭದ್ರಪ್ಪ ವೃತ್ತದ ಮಾರ್ಗವಾಗಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಪ್ರಧಾನ ಕಚೇರಿವರೆಗೆ ಮೆರವಣಿಗೆ ನಡೆಸಿದರು.ಸಹಕಾರಿ ರಂಗವನ್ನು ಈ ಹಿಂದೆ ಯಾವ ರೀತಿ ನಡೆಸಿಕೊಂಡಿದ್ದಾರೋ ಎಲ್ಲರಿಗೂ ಗೊತ್ತಿದೆ. ಹಾಗಾಗಿ ಇನ್ನು ಮುಂದೆ ಸಹಕಾರಿ ರಂಗಕ್ಕೆ ನಮ್ಮ ನೆಚ್ಚಿನ ಬಸವರಾಜ್ ರಾಯರೆಡ್ಡಿ ಅವರು ಕಾಲಿಟ್ಟಿದ್ದು, ಈ ರಂಗಕ್ಕೆ ಹೊಸ ಚೈತನ್ಯ ಬಂದ ಹಾಗಿದೆ. ಸಾಧ್ಯ ಆದಷ್ಟು ಇಲ್ಲಿನ ರೈತರ ಮೂಲ ಸಮಸ್ಯೆಗಳನ್ನು ಪರಿಹರಿಸುತ್ತಾ, ಈ ಸಹಕಾರಿ ಇಷ್ಟಕ್ಕೆ ಸೀಮಿತವಾಗದೆ. ಇನ್ನಷ್ಟು ಬೆಳೆದು, ಮತದಾನ ಮಾಡಿದಂತ ರೈತರಿಗೆ ನ್ಯಾಯ ಸಮ್ಮತವಾದಂತಹ ಕೆಲಸಗಳನ್ನು ಮಾಡಿ ಅವರ ಋಣ ತೀರಿಸಬೇಕಾಗಿದೆ ಎಂದರು.ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಒಟ್ಟು 12 ನಿರ್ದೇಶಕರ ಸ್ಥಾನಗಳಿಗೆ ಚುನಾವಣೆ ನಡೆದಿತ್ತು, ಇದರಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು 11 ಮಂದಿ ಗೆಲುವು ಸಾಧಿಸಿದ್ದಾರೆ. ಕೇವಲ ಒಂದೇ ಒಂದು ಸ್ಥಾನಕ್ಕೆ ಬಿಜೆಪಿ ಸೀಮಿತವಾಗಿದೆ ಎಂದರು. ಡಿಸಿಸಿ ಬ್ಯಾಂಕ್ ನಿರ್ದೇಶಕ ಶೇಖರ್ ಗೌಡ ಉಳ್ಳಾಗಡ್ಡಿ ಮಾತನಾಡಿ ‘ ಪ್ರಜಾಪ್ರಭುತ್ವಕ್ಕೆ ಸಹಕಾರಿ ಸಂಘ ಬುನಾದಿ ಇದ್ದ ಹಾಗೆ, ಈ ರಂಗಕ್ಕೆ ಎಲ್ಲರ ಭಾಗವಹಿಸುವಿಕೆ ಬಹಳ ಮುಖ್ಯವಾದದ್ದು, ಪ್ರಸ್ತುತವಾಗಿ ಈ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘವು ಬರೋಬ್ಬರಿ 1.50 ಕೋಟಿ ರೂಪಾಯಿ ಸಾಲದಲ್ಲಿದೆ. ಇದಕ್ಕೆ 12% ಬಡ್ಡಿ ದರವನ್ನು ವಾರ್ಷಿಕವಾಗಿ ಈ ಬ್ಯಾಂಕ್ ಡಿಸಿಸಿ ಬ್ಯಾಂಕ್ ಗೆ ಕಟ್ಟಬೇಕಾಗಿದೆ. ಚುನಾಯಿತರಾದ 12 ಜನ ನಿರ್ದೇಶಕರ ಮೇಲೆ ಬಹುದೊಡ್ಡ ಜವಾಬ್ದಾರಿ ಕೂಡ ಇದೆ. ತುಂಬಾ ಜವಾಬ್ದಾರಿಯುತವಾಗಿ ಈ ಬ್ಯಾಂಕ್ ಅನ್ನ ಕಾಪಾಡಿಕೊಂಡು ಬೆಳೆಸುವ ಮೊದಲ ಕರ್ತವ್ಯ ನಿಮ್ಮದಾಗಿರುತ್ತದೆ ಎಂದು ಕಿವಿಮಾತು ಹೇಳಿದರು.ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಒಟ್ಟು 12 ನಿರ್ದೇಶಕರ ಸ್ಥಾನಕ್ಕೆ ಚುನಾವಣೆ ನಡೆದಿದ್ದು, ಅದರಲ್ಲಿ 11 ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಅಭೂತಪೂರ್ವ ಗೆಲವು ಕಂಡಿದ್ದಾರೆ. ಕೇವಲ ಒಂದು ಸ್ಥಾನವು ಬಿಜೆಪಿ ಬೆಂಬಲಿತ ಅಭ್ಯರ್ಥಿ ಜಯಗಳಿಸಿದ್ದಾರೆ.ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಹನುಮಂತಗೌಡ ಚೆಂಡೂರು, ವೀರನಗೌಡ್ರು ಬಳೂಟಗಿ, ಸಂಗಮೇಶ್ ಗುತ್ತಿ, ರೈಮನ್ ಸಾಬ್ ಮಕಪ್ನವರ್, ಮಂಜುನಾಥ್ ಕಡೆಮನಿ, ಗಗನ್ ನೋಟಗಾರ, ಕೆರಿಬಸಬಪ್ಪ ನಿಡಗುಂದಿ, ಭೀಮರೆಡ್ಡಿ, ಅಶೋಕ್ ತೋಟದ್, ಮೊಮ್ಮದ್ ರಫಿ ಮಂಡಲಗಿರಿ, ನೂತನ ನಿರ್ದೇಶಕರಾದ ಸಿದ್ದಯ್ಯ ಶಂಕ್ರಯ್ಯ ಕಳ್ಳಿಮಠ, ಕಳಕಪ್ಪ ಸಂಗಪ್ಪ ಕುಂಬಾರ, ದಸ್ತಗೀರಸಾಬ ಗೈಬುಸಾಬ ರಾಜೂರ, ರಾಮಪ್ಪ ಭೀಮಪ್ಪ ಭಜಂತ್ರಿ, ಶ್ರೀನಿವಾಸರಾವ್ ಹನುಮಂತರಾವ್ ದೇಸಾಯಿ ಇದ್ದರು.ಎಸ್ ಸಿ ಮೀಸಲು ಕ್ಷೇತ್ರದಲ್ಲಿ ಗುದ್ನೇಪ್ಪ  ಚಲವಾದಿ, ಸಾಲಗಾರರ ಪರಿಶಿಷ್ಟ ಪಂಗಡದಲ್ಲಿ ಭರಮಪ್ಪ  ತಳವಾರ, ಸಾಲಗಾರರ ಹಿಂ.ವ. ‘ಆ’ ಬಸವರಾಜ ನೋಟಗಾರ, ಸಾಲಗಾರರ ಹಿಂ.ವ. ‘ಬ’ ಕ್ಷೇತ್ರದಲ್ಲಿ ಮಲ್ಲಿಕಾರ್ಜುನ ಹಾದಿಯವರ್‌ , ಸಾಲಗಾರರ ಮಹಿಳಾ ಕ್ಷೇತ್ರದಲ್ಲಿ ರತ್ನಮ್ಮ  ಗದಗ, ಶಂಶಾದಬೇಗಂ ರಹಿಮಾನಸಾಬ ಕಟ್ಟಿಮನಿ  ಇನ್ನು ಅನೇಕ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಸಹಕಾರಿ ರಂಗದ ಆಸಕ್ತರು ಭಾಗವಹಿಸಿದ್ದರು.

•ಸೆಕ್ಯುಲರ್‌ ವಾಯ್ಸ್‌ ನ್ಯೂಸ್‌ ಕುಕನೂರ:

 “ನ್ಯಾಯಸಮತವಾಗಿ ನಡೆದ ಮತದಾನಕ್ಕೆ ದೊರೆತಿದೆ. ಪ್ರಜಾಪ್ರಭುತ್ವದ ಮಹತ್ವವನ್ನು ಇಂದು ಸಾಬೀತುಪಡಿಸಿದ್ದೇವೆ’ ಎಂದು ಕಾಂಗ್ರೆಸ್ ಹಿರಿಯ ಮುಖಂಡ ಯಂಕಣ್ಣ ಯರಾಶಿ ಅಭಿಪ್ರಾಯಪಟ್ಟರು.

ಈ ಸಂದರ್ಭದಲ್ಲಿ ಕುಕನೂರಿನ ಕೃಷಿ ಪತ್ತಿನ ಸಹಕಾರ ಸಂಘದ ಕಳೆದ 2024ರ ಡಿಸೇಂಬರ್ 29 ರಂದು ಜರುಗಿದ ಆಡಳಿತ ಮಂಡಳಿಯ ಸಾಮಾನ್ಯ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಅಭೂತಪೂರ್ವ ಜಯಗಳಿಸಿದ್ದಾರೆ.

 ಕಾಂಗ್ರೆಸ್ ಪಕ್ಷದ ವತಿಯಿಂದ ವಿಜಯೋತ್ಸವ ಮೆರವಣಿಗೆಯು ಪಟ್ಟಣದ ಮಹಾಮಾಯ ದೇವಸ್ಥಾನದಿಂದ ವೀರಭದ್ರಪ್ಪ ವೃತ್ತದ ಮಾರ್ಗವಾಗಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಪ್ರಧಾನ ಕಚೇರಿವರೆಗೆ ಮೆರವಣಿಗೆ ನಡೆಸಿದರು.

ಸಹಕಾರಿ ರಂಗವನ್ನು ಈ ಹಿಂದೆ ಯಾವ ರೀತಿ ನಡೆಸಿಕೊಂಡಿದ್ದಾರೋ ಎಲ್ಲರಿಗೂ ಗೊತ್ತಿದೆ. ಹಾಗಾಗಿ ಇನ್ನು ಮುಂದೆ ಸಹಕಾರಿ ರಂಗಕ್ಕೆ ನಮ್ಮ ನೆಚ್ಚಿನ ಬಸವರಾಜ್ ರಾಯರೆಡ್ಡಿ ಅವರು ಕಾಲಿಟ್ಟಿದ್ದು, ಈ ರಂಗಕ್ಕೆ ಹೊಸ ಚೈತನ್ಯ ಬಂದ ಹಾಗಿದೆ. ಸಾಧ್ಯ ಆದಷ್ಟು ಇಲ್ಲಿನ ರೈತರ ಮೂಲ ಸಮಸ್ಯೆಗಳನ್ನು ಪರಿಹರಿಸುತ್ತಾ, ಈ ಸಹಕಾರಿ ಇಷ್ಟಕ್ಕೆ ಸೀಮಿತವಾಗದೆ. ಇನ್ನಷ್ಟು ಬೆಳೆದು, ಮತದಾನ ಮಾಡಿದಂತ ರೈತರಿಗೆ ನ್ಯಾಯ ಸಮ್ಮತವಾದಂತಹ ಕೆಲಸಗಳನ್ನು ಮಾಡಿ ಅವರ ಋಣ ತೀರಿಸಬೇಕಾಗಿದೆ ಎಂದರು.

ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಒಟ್ಟು 12 ನಿರ್ದೇಶಕರ ಸ್ಥಾನಗಳಿಗೆ ಚುನಾವಣೆ ನಡೆದಿತ್ತು, ಇದರಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು 11 ಮಂದಿ ಗೆಲುವು ಸಾಧಿಸಿದ್ದಾರೆ. ಕೇವಲ ಒಂದೇ ಒಂದು ಸ್ಥಾನಕ್ಕೆ ಬಿಜೆಪಿ ಸೀಮಿತವಾಗಿದೆ ಎಂದರು.

 ಡಿಸಿಸಿ ಬ್ಯಾಂಕ್ ನಿರ್ದೇಶಕ ಶೇಖರ್ ಗೌಡ ಉಳ್ಳಾಗಡ್ಡಿ ಮಾತನಾಡಿ ‘ ಪ್ರಜಾಪ್ರಭುತ್ವಕ್ಕೆ ಸಹಕಾರಿ ಸಂಘ ಬುನಾದಿ ಇದ್ದ ಹಾಗೆ, ಈ ರಂಗಕ್ಕೆ ಎಲ್ಲರ ಭಾಗವಹಿಸುವಿಕೆ ಬಹಳ ಮುಖ್ಯವಾದದ್ದು, ಪ್ರಸ್ತುತವಾಗಿ ಈ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘವು ಬರೋಬ್ಬರಿ 1.50 ಕೋಟಿ ರೂಪಾಯಿ ಸಾಲದಲ್ಲಿದೆ. ಇದಕ್ಕೆ 12% ಬಡ್ಡಿ ದರವನ್ನು ವಾರ್ಷಿಕವಾಗಿ ಈ ಬ್ಯಾಂಕ್ ಡಿಸಿಸಿ ಬ್ಯಾಂಕ್ ಗೆ ಕಟ್ಟಬೇಕಾಗಿದೆ. ಚುನಾಯಿತರಾದ 12 ಜನ ನಿರ್ದೇಶಕರ ಮೇಲೆ ಬಹುದೊಡ್ಡ ಜವಾಬ್ದಾರಿ ಕೂಡ ಇದೆ. ತುಂಬಾ ಜವಾಬ್ದಾರಿಯುತವಾಗಿ ಈ ಬ್ಯಾಂಕ್ ಅನ್ನ ಕಾಪಾಡಿಕೊಂಡು ಬೆಳೆಸುವ ಮೊದಲ ಕರ್ತವ್ಯ ನಿಮ್ಮದಾಗಿರುತ್ತದೆ ಎಂದು ಕಿವಿಮಾತು ಹೇಳಿದರು.

ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಒಟ್ಟು 12 ನಿರ್ದೇಶಕರ ಸ್ಥಾನಕ್ಕೆ ಚುನಾವಣೆ ನಡೆದಿದ್ದು, ಅದರಲ್ಲಿ 11 ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಅಭೂತಪೂರ್ವ ಗೆಲವು ಕಂಡಿದ್ದಾರೆ. ಕೇವಲ ಒಂದು ಸ್ಥಾನವು ಬಿಜೆಪಿ ಬೆಂಬಲಿತ ಅಭ್ಯರ್ಥಿ ಜಯಗಳಿಸಿದ್ದಾರೆ.

ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಹನುಮಂತಗೌಡ ಚೆಂಡೂರು, ವೀರನಗೌಡ್ರು ಬಳೂಟಗಿ, ಸಂಗಮೇಶ್ ಗುತ್ತಿ, ರೈಮನ್ ಸಾಬ್ ಮಕಪ್ನವರ್, ಮಂಜುನಾಥ್ ಕಡೆಮನಿ, ಗಗನ್ ನೋಟಗಾರ, ಕೆರಿಬಸಬಪ್ಪ ನಿಡಗುಂದಿ, ಭೀಮರೆಡ್ಡಿ, ಅಶೋಕ್ ತೋಟದ್, ಮೊಮ್ಮದ್ ರಫಿ ಮಂಡಲಗಿರಿ, ನೂತನ ನಿರ್ದೇಶಕರಾದ ಸಿದ್ದಯ್ಯ ಶಂಕ್ರಯ್ಯ ಕಳ್ಳಿಮಠ, ಕಳಕಪ್ಪ ಸಂಗಪ್ಪ ಕುಂಬಾರ, ದಸ್ತಗೀರಸಾಬ ಗೈಬುಸಾಬ ರಾಜೂರ, ರಾಮಪ್ಪ ಭೀಮಪ್ಪ ಭಜಂತ್ರಿ, ಶ್ರೀನಿವಾಸರಾವ್ ಹನುಮಂತರಾವ್ ದೇಸಾಯಿ ಇದ್ದರು.

ಎಸ್ ಸಿ ಮೀಸಲು ಕ್ಷೇತ್ರದಲ್ಲಿ ಗುದ್ನೇಪ್ಪ  ಚಲವಾದಿ, ಸಾಲಗಾರರ ಪರಿಶಿಷ್ಟ ಪಂಗಡದಲ್ಲಿ ಭರಮಪ್ಪ  ತಳವಾರ, ಸಾಲಗಾರರ ಹಿಂ.ವ. ‘ಆ’ ಬಸವರಾಜ ನೋಟಗಾರ, ಸಾಲಗಾರರ ಹಿಂ.ವ. ‘ಬ’ ಕ್ಷೇತ್ರದಲ್ಲಿ ಮಲ್ಲಿಕಾರ್ಜುನ ಹಾದಿಯವರ್‌ , ಸಾಲಗಾರರ ಮಹಿಳಾ ಕ್ಷೇತ್ರದಲ್ಲಿ ರತ್ನಮ್ಮ  ಗದಗ, ಶಂಶಾದಬೇಗಂ ರಹಿಮಾನಸಾಬ ಕಟ್ಟಿಮನಿ  ಇನ್ನು ಅನೇಕ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಸಹಕಾರಿ ರಂಗದ ಆಸಕ್ತರು ಭಾಗವಹಿಸಿದ್ದರು.