ತಾಲೂಕಿನ ಮಂಗಳೂರು ಗ್ರಾಮದ ಯಮನೂರಪ್ಪ ನಾಗಪ್ಪ ಕಟಗಿ ಅವರ ಕುರಿಗಳ ಹಿಂಡಿನ ಮೇಲೆ ಗುರುವಾರ ಸಂಜೆ 6 ಗಂಟೆಗೆ ತೋಳ ದಾಳಿ ಸಂಭವಿಸಿ 12 ಕುರಿಗಳು ಸಾವನ್ನಪ್ಪಿದ ಘಟನೆ ನಡೆದಿದೆ.
ಮಂಗಳೂರು ಸೀಮೆಯಲ್ಲಿ ಕುರಿಗಳ ಹಿಂಡು ಬಿಟ್ಟ ಸಮಯದಲ್ಲಿ ತೋಳವು ದಾಳಿ ನಡೆಸಿದ್ದು, ಶೇಕಡಾ ಸಾವಿರಾರು ರೂಪಾಯಿ ಮೌಲ್ಯದ ಕುರಿಗಳನ್ನು ತಿಂದು ಹಾಕಿದೆ ಎಂದು ಸ್ಥಳೀಯ ಮೂಲಗಳು ಮಾಹಿತಿ ನೀಡಿದ್ದಾರೆ.
ಗ್ರಾಮದ ಪಶು ವೈದ್ಯಾಧಿಕಾರಿ ಬಾಪುಗೌಡ ಪಾಟೀಲ ಮತ್ತು ಡಾ. ಸುಷ್ಮಾ ಹಾಗೂ ಅರಣ್ಯ ಇಲಾಖೆ ಅಧಿಕಾರಿ ಸಂತೋಷ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
“ಕುರಿಗಳಿಂದಲೇ ನಮ್ಮ ಜೀವನ ಸಾಗುತ್ತಿತ್ತು. ಈ ಘಟನೆಯಿಂದ ಪರಿಸ್ಥಿತಿ ಚಿಂತಾಜನಕವಾಗಿದೆ. ದಯವಿಟ್ಟು ಸರಕಾರ ನಮ್ಮ ಕುಟುಂಬಕ್ಕೆ ಪರಿಹಾರ ನೀಡಬೇಕು” -ಯಮನೂರಪ್ಪ ನಾಗಪ್ಪ ಕಟಗಿ
ಈ ಘಟನೆ ಯಮನೂರಪ್ಪ ಮತ್ತು ಕುಟುಂಬದ ಮೇಲೆ ಭಾರೀ ಆರ್ಥಿಕ ಮತ್ತು ಮಾನಸಿಕ ಒತ್ತಡ ಉಂಟುಮಾಡಿದ್ದು, ಅವರು ಸರ್ಕಾರದಿಂದ ತಕ್ಷಣ ಪರಿಹಾರ ನೀಡಬೇಕೆಂದು ಮನವಿ ಮಾಡಿದ್ದಾರೆ.