🔵 LOCAL EXPRESS :”ಗದಗ|ಮನುಸ್ಮೃತಿ ದಹನ ದಿವಸ ಆಚರಣೆ : ‘ಮನುಸ್ಮೃತಿ ಅಳಿಯಲಿ, ಸಂವಿಧಾನ ಉಳಿಯಲಿ’”

By admin

🔵 LOCAL EXPRESS :“ಗದಗ|ಮನುಸ್ಮೃತಿ ದಹನ ದಿವಸ ಆಚರಣೆ‘ಮನುಸ್ಮೃತಿ ಅಳಿಯಲಿ, ಸಂವಿಧಾನ ಉಳಿಯಲಿ’”

Contents
🔵 LOCAL EXPRESS :“ಗದಗ|ಮನುಸ್ಮೃತಿ ದಹನ ದಿವಸ ಆಚರಣೆ :  ‘ಮನುಸ್ಮೃತಿ ಅಳಿಯಲಿ, ಸಂವಿಧಾನ ಉಳಿಯಲಿ’”• ಸೆಕ್ಯುಲರ್‌ ವಾಯ್ಸ್‌ ನ್ಯೂಸ್‌  ಗದಗ:  ‘ಮನುಸ್ಮೃತಿ ಅಳಿಯಲಿ, ಸಂವಿಧಾನ ಉಳಿಯಲಿ’ ಎಂಬ ಘೋಷಣೆಯೊಂದಿಗೆ ದಲಿತ ಸಂಘಟನೆಗಳ ಒಕ್ಕೂಟವು ಗುರುವಾರ ನಗರದ ಗಾಂಧಿ ವೃತ್ತದಲ್ಲಿ ಮನುಸ್ಮೃತಿ ದಹನ ದಿವಸವನ್ನು ಆಚರಿಸಿತು. ಈ ವೇಳೆ ಮನುಸ್ಮೃತಿಯನ್ನು ಸುಡುವ ಮೂಲಕ ಪ್ರತಿಭಟನೆ ನಡೆಸಲಾಯಿತು.ಬಂಡಾಯ ಹೋರಾಟಗಾರ ಹಾಗೂ ಲಡಾಯಿ ಪ್ರಕಾಶಕ ಬಸವರಾಜ್ ಸೂಳೆಬಾವಿ ಅವರು ಮಾತನಾಡಿ, 1927ರ ಡಿಸೆಂಬರ್ 25ರಂದು ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರು ಮನುಸ್ಮೃತಿಯನ್ನು ಸುಟ್ಟಿದ್ದು, ಅದು ಈ ದೇಶದ ಅಸಮಾನತೆಯ ವಿರುದ್ಧದ ಐತಿಹಾಸಿಕ ಹೋರಾಟವಾಗಿದೆ ಎಂದರು. ಮನುಸ್ಮೃತಿ ಜಾತಿ ಹಾಗೂ ಲಿಂಗ ಆಧಾರಿತ ಅಸಮಾನತೆಯನ್ನು ಪ್ರತಿಪಾದಿಸುತ್ತದೆ. ಬ್ರಾಹ್ಮಣರನ್ನು ಶ್ರೇಷ್ಠರೆಂದು, ಉಳಿದವರನ್ನು ಕನಿಷ್ಠರೆಂದು ಕಾಣುವ ಮನೋಭಾವ ಇದರಲ್ಲಿ ಅಡಕವಾಗಿದೆ. ಇಂತಹ ಅಸಮಾನತೆಯನ್ನು ತಿರಸ್ಕರಿಸಲು ಮನುಸ್ಮೃತಿಯನ್ನೇ ಬಾಬಾಸಾಹೇಬ್ ಸುಟ್ಟರು ಎಂದು ಹೇಳಿದರು.ಮನುಸ್ಮೃತಿ ದಹನ ಸಣ್ಣ ವಿಷಯವಲ್ಲ. ಅದರಲ್ಲಿ ಹೆಣ್ಣು–ಗಂಡುಗಳ ಮಧ್ಯೆಯೂ ಭೇದಭಾವವಿದೆ. ಮಹಾಡ್ ಸಮಾವೇಶದ ವೇಳೆ ಮನುಸ್ಮೃತಿ ದಹನಕ್ಕೆ ಚಿತ್ಪಾವನ ಬ್ರಾಹ್ಮಣ ಸಿ.ಎನ್. ಸಹಸ್ರಪುತೆ ಠರಾವು ಮಂಡಿಸಿದ್ದು, ಪಿ.ಎನ್. ರಾಜಬೊದೆ ಅದಕ್ಕೆ ಅನುಮೋದನೆ ನೀಡಿದ್ದರು ಎಂದು ತಿಳಿಸಿದರು.ದಲಿತ ಕಲಾ ಮಂಡಳಿಯ ಕಲಾವಿದ ಶರೀಫ್ ಮಾತನಾಡಿ, ಸಾವಿರಾರು ವರ್ಷಗಳಿಂದ ಮೇಲು–ಕೀಳು ಭಾವನೆ ಆಧಾರಿತ ಸಮಾಜ ವ್ಯವಸ್ಥೆ ಮುಂದುವರಿದಿದೆ. ಇಂದಿಗೂ ಜಾತಿ ಆಧಾರಿತ ದೌರ್ಜನ್ಯಗಳು ನಡೆಯುತ್ತಿದ್ದು, ಅದೂ ಮನುಸ್ಮೃತಿಯ ಪರಿಣಾಮವೇ ಆಗಿದೆ. ಹೆಣ್ಣುಮಕ್ಕಳ ಮೇಲೆ ವಿಧಿಸಿದ ನಿರ್ಬಂಧಗಳೂ ಮನುಸ್ಮೃತಿಯಲ್ಲೇ ಅಡಕವಾಗಿವೆ. ಅಸಮಾನತೆಯ ವಿರುದ್ಧ ಸಮಾನತೆಯ ಸಂದೇಶ ನೀಡಲು ಬಾಬಾಸಾಹೇಬ್ ಮನುಸ್ಮೃತಿಯನ್ನು ಸುಟ್ಟರು ಎಂದರು.ಈ ಸಂದರ್ಭದಲ್ಲಿ ಎಸ್.ಎನ್. ಬಳ್ಳಾರಿ, ಅಶೋಕ ಬರಗುಂಡಿ, ಶೇಖಣ್ಣ ಕವಳಿಕಾಯಿ, ಅರ್ಜುನ ಗೊಳಸಂಗಿ, ಬಾಲರಾಜ್ ಅರಬರ, ಆನಂದ ಶಿಂಗಾಡಿ, ಶರೀಫ್ ಬಿಳೆಯಲಿ, ಮುತ್ತು ಬಿಳೆಯಲಿ, ಅನಿಲ್ ಕಾಳೆ, ಪರಶು ಕಾಳೆ, ಯಲ್ಲಪ್ಪ ರಾಮಗೇರಿ, ಬಸೂ ಬಿಳೆಯಲಿ, ರವಿ, ಮಂಜುನಾಥ, ರಮೇಶ ಕೊಳೂರು ಸೇರಿದಂತೆ ದಲಿತ ಸಂಘಟನೆಗಳ ಮುಖಂಡರು ಉಪಸ್ಥಿತರಿದ್ದರು.ಬನಹಟ್ಟಿಯ ಸಾವಿತ್ರಿಬಾಯಿ ಫುಲೆ ಮಹಿಳಾ ಸಂಘ, ವನಕೆ ಓಬವ್ವ ಮಹಿಳಾ ಸಂಘ (ಯಾವಗಲ್), ರಮಾಬಾಯಿ ಮಹಿಳಾ ಸಂಘ (ಕಳಸಾಪುರ) ಸೇರಿದಂತೆ ವಿವಿಧ ಮಹಿಳಾ ಸಂಘಗಳ ಸದಸ್ಯರು ಭಾಗವಹಿಸಿದ್ದರು.

• ಸೆಕ್ಯುಲರ್‌ ವಾಯ್ಸ್‌ ನ್ಯೂಸ್‌  ಗದಗ: 

 ‘ಮನುಸ್ಮೃತಿ ಅಳಿಯಲಿ, ಸಂವಿಧಾನ ಉಳಿಯಲಿ’ ಎಂಬ ಘೋಷಣೆಯೊಂದಿಗೆ ದಲಿತ ಸಂಘಟನೆಗಳ ಒಕ್ಕೂಟವು ಗುರುವಾರ ನಗರದ ಗಾಂಧಿ ವೃತ್ತದಲ್ಲಿ ಮನುಸ್ಮೃತಿ ದಹನ ದಿವಸವನ್ನು ಆಚರಿಸಿತು. ಈ ವೇಳೆ ಮನುಸ್ಮೃತಿಯನ್ನು ಸುಡುವ ಮೂಲಕ ಪ್ರತಿಭಟನೆ ನಡೆಸಲಾಯಿತು.

ಬಂಡಾಯ ಹೋರಾಟಗಾರ ಹಾಗೂ ಲಡಾಯಿ ಪ್ರಕಾಶಕ ಬಸವರಾಜ್ ಸೂಳೆಬಾವಿ ಅವರು ಮಾತನಾಡಿ, 1927ರ ಡಿಸೆಂಬರ್ 25ರಂದು ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರು ಮನುಸ್ಮೃತಿಯನ್ನು ಸುಟ್ಟಿದ್ದು, ಅದು ಈ ದೇಶದ ಅಸಮಾನತೆಯ ವಿರುದ್ಧದ ಐತಿಹಾಸಿಕ ಹೋರಾಟವಾಗಿದೆ ಎಂದರು. ಮನುಸ್ಮೃತಿ ಜಾತಿ ಹಾಗೂ ಲಿಂಗ ಆಧಾರಿತ ಅಸಮಾನತೆಯನ್ನು ಪ್ರತಿಪಾದಿಸುತ್ತದೆ. ಬ್ರಾಹ್ಮಣರನ್ನು ಶ್ರೇಷ್ಠರೆಂದು, ಉಳಿದವರನ್ನು ಕನಿಷ್ಠರೆಂದು ಕಾಣುವ ಮನೋಭಾವ ಇದರಲ್ಲಿ ಅಡಕವಾಗಿದೆ. ಇಂತಹ ಅಸಮಾನತೆಯನ್ನು ತಿರಸ್ಕರಿಸಲು ಮನುಸ್ಮೃತಿಯನ್ನೇ ಬಾಬಾಸಾಹೇಬ್ ಸುಟ್ಟರು ಎಂದು ಹೇಳಿದರು.

ಮನುಸ್ಮೃತಿ ದಹನ ಸಣ್ಣ ವಿಷಯವಲ್ಲ. ಅದರಲ್ಲಿ ಹೆಣ್ಣು–ಗಂಡುಗಳ ಮಧ್ಯೆಯೂ ಭೇದಭಾವವಿದೆ. ಮಹಾಡ್ ಸಮಾವೇಶದ ವೇಳೆ ಮನುಸ್ಮೃತಿ ದಹನಕ್ಕೆ ಚಿತ್ಪಾವನ ಬ್ರಾಹ್ಮಣ ಸಿ.ಎನ್. ಸಹಸ್ರಪುತೆ ಠರಾವು ಮಂಡಿಸಿದ್ದು, ಪಿ.ಎನ್. ರಾಜಬೊದೆ ಅದಕ್ಕೆ ಅನುಮೋದನೆ ನೀಡಿದ್ದರು ಎಂದು ತಿಳಿಸಿದರು.

ದಲಿತ ಕಲಾ ಮಂಡಳಿಯ ಕಲಾವಿದ ಶರೀಫ್ ಮಾತನಾಡಿ, ಸಾವಿರಾರು ವರ್ಷಗಳಿಂದ ಮೇಲು–ಕೀಳು ಭಾವನೆ ಆಧಾರಿತ ಸಮಾಜ ವ್ಯವಸ್ಥೆ ಮುಂದುವರಿದಿದೆ. ಇಂದಿಗೂ ಜಾತಿ ಆಧಾರಿತ ದೌರ್ಜನ್ಯಗಳು ನಡೆಯುತ್ತಿದ್ದು, ಅದೂ ಮನುಸ್ಮೃತಿಯ ಪರಿಣಾಮವೇ ಆಗಿದೆ. ಹೆಣ್ಣುಮಕ್ಕಳ ಮೇಲೆ ವಿಧಿಸಿದ ನಿರ್ಬಂಧಗಳೂ ಮನುಸ್ಮೃತಿಯಲ್ಲೇ ಅಡಕವಾಗಿವೆ. ಅಸಮಾನತೆಯ ವಿರುದ್ಧ ಸಮಾನತೆಯ ಸಂದೇಶ ನೀಡಲು ಬಾಬಾಸಾಹೇಬ್ ಮನುಸ್ಮೃತಿಯನ್ನು ಸುಟ್ಟರು ಎಂದರು.

ಈ ಸಂದರ್ಭದಲ್ಲಿ ಎಸ್.ಎನ್. ಬಳ್ಳಾರಿ, ಅಶೋಕ ಬರಗುಂಡಿ, ಶೇಖಣ್ಣ ಕವಳಿಕಾಯಿ, ಅರ್ಜುನ ಗೊಳಸಂಗಿ, ಬಾಲರಾಜ್ ಅರಬರ, ಆನಂದ ಶಿಂಗಾಡಿ, ಶರೀಫ್ ಬಿಳೆಯಲಿ, ಮುತ್ತು ಬಿಳೆಯಲಿ, ಅನಿಲ್ ಕಾಳೆ, ಪರಶು ಕಾಳೆ, ಯಲ್ಲಪ್ಪ ರಾಮಗೇರಿ, ಬಸೂ ಬಿಳೆಯಲಿ, ರವಿ, ಮಂಜುನಾಥ, ರಮೇಶ ಕೊಳೂರು ಸೇರಿದಂತೆ ದಲಿತ ಸಂಘಟನೆಗಳ ಮುಖಂಡರು ಉಪಸ್ಥಿತರಿದ್ದರು.

ಬನಹಟ್ಟಿಯ ಸಾವಿತ್ರಿಬಾಯಿ ಫುಲೆ ಮಹಿಳಾ ಸಂಘ, ವನಕೆ ಓಬವ್ವ ಮಹಿಳಾ ಸಂಘ (ಯಾವಗಲ್), ರಮಾಬಾಯಿ ಮಹಿಳಾ ಸಂಘ (ಕಳಸಾಪುರ) ಸೇರಿದಂತೆ ವಿವಿಧ ಮಹಿಳಾ ಸಂಘಗಳ ಸದಸ್ಯರು ಭಾಗವಹಿಸಿದ್ದರು.