ACCIDENT NEWS: ” ಕೊಪ್ಪಳ| ತೀವ್ರ ವೇಗದಲ್ಲಿದ್ದ ಕಾರು ಹ್ಯಾಂಡ್ ಲಾಕ್ ಆಗಿ ಪಲ್ಟಿ: ಪ್ರಾಣಾಪಾಯದಿಂದ ಪಾರಾದ ಚಾಲಕ”
• ಸೆಕ್ಯುಲರ್ ವಾಯ್ಸ್ ನ್ಯೂಸ್ ಕೊಪ್ಪಳ :
ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯ ಎನ್‌ಎಚ್ ಹೆದ್ದಾರಿಯಲ್ಲಿ ಹಲಗೇರಿ ಸಮೀಪ ಮಂಗಳವಾರ ಬೆಳಗ್ಗೆ ಸುಮಾರು 4 ಗಂಟೆ ಸುಮಾರಿಗೆ ಕಾರು ಅಪಘಾತ ಸಂಭವಿಸಿದೆ.
ಕೆಎ 01 ಎನ್ ಸಿ 6310 ಸಂಖ್ಯೆಯ ಪಂಚ್ ಕಾರು ಆಕಸ್ಮಿಕವಾಗಿ ಆಟೋಮೆಟಿಕ್ ಹ್ಯಾಂಡ್ ಲಾಕ್ ಆಗಿದ ಪರಿಣಾಮ, ಕುಕನೂರ ತಾಲ್ಲೂಕಿನ ತಳಕಲ್ ಗ್ರಾಮದಿಂದ ಕೊಪ್ಪಳದ ಹೊಸಳ್ಳಿ ಕಡೆಗೆ ತೆರಳುತ್ತಿದ್ದ ವೇಳೆ ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್‌ಗೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ ಎಂದು ತಿಳಿದುಬಂದಿದೆ.
ಅಪಘಾತದ ತೀವ್ರತೆಗೆ ಕಾರು ನುಜ್ಜುಗುಜ್ಜಾಗಿ ರಸ್ತೆ ಬದಿಯಲ್ಲಿ ಬಿದ್ದಿದೆ.
ಅದೃಷ್ಟವಶಾತ್ ವಾಹನ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದು, ಯಾವುದೇ ಗಂಭೀರ ಗಾಯಗಳಾಗಿಲ್ಲ ಎಂದು ತಿಳಿದುಬಂದಿದೆ.
ಅದೃಷ್ಟವಶಾತ್ ವಾಹನ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದು, ಯಾವುದೇ ಗಂಭೀರ ಗಾಯಗಳಾಗಿಲ್ಲ ಎಂದು ತಿಳಿದುಬಂದಿದೆ.

