ನೀಲಿ ಶಾಲು ಪ್ರತಾಪ್ ಸಿಂಹ ಅವರನ್ನು ಡಿಸ್ಟರ್ಬ್ ಮಾಡಿದೆ: ನಟ ಪ್ರಕಾಶ್ ರಾಜ್

By admin

ನೀಲಿ ಶಾಲು ಪ್ರತಾಪ್ ಸಿಂಹ ಅವರನ್ನು ಡಿಸ್ಟರ್ಬ್ ಮಾಡಿದೆ: ನಟ ಪ್ರಕಾಶ್ ರಾಜ್

ಸೆಕ್ಯುಲರ್ ವಾಯ್ಸ್ ನ್ಯೂಸ್ ಶಹಾಪುರ

“ಪ್ರತಾಪ್ ಸಿಂಹ ಅವರಿಗೆ ನೀಲಿ ಶಾಲು ಡಿಸ್ಟರ್ಬ್ ಮಾಡಿದೆ. ಬಿಜೆಪಿಯವರಿಗೆ ಡಾ. ಬಿ.ಆರ್. ಅಂಬೇಡ್ಕರ್, ಬಸವಣ್ಣ, ಅಲ್ಲಮಪ್ರಭು ಹಾಗೂ ಕುವೆಂಪು ಅವರ ವಿಚಾರಗಳು ಡಿಸ್ಟರ್ಬ್ ಮಾಡುತ್ತವೆ. ಹೀಗಾಗಿ ಅವರು ಸಂಪೂರ್ಣ ಡಿಸ್ಟರ್ಬ್ ಆಗಿದ್ದಾರೆ” ಎಂದು ನಟ ಪ್ರಕಾಶ್ ರಾಜ್ ಹೇಳಿದರು.

ಬುಧವಾರ ಶಹಾಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನೀಲಿ ಶಾಲಿನ ಬಗ್ಗೆ ಹಗುರವಾಗಿ ಮಾತನಾಡುವುದು ಅಕ್ಷಮ್ಯ. ನೀಲಿ ಶಾಲು ಅಂಬೇಡ್ಕರ್ ಚಿಂತನೆ, ಸಾಮಾಜಿಕ ನ್ಯಾಯ ಮತ್ತು ಸಮಾನತೆಯ ಸಂಕೇತವಾಗಿ ಗುರುತಿಸಿಕೊಂಡಿದೆ. ಹೀಗಾಗಿ ಅದರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡುವುದು ಸರಿಯಲ್ಲ ಎಂದರು.

“ಅಂಬೇಡ್ಕರ್ ಬೇಡವಾದವರಿಗೆ ಅಂಬೇಡ್ಕರ್ ಹಾಗೂ ನೀಲಿ ಶಾಲಿನ ಬಗ್ಗೆ ಹಗುರವಾಗಿ ಮಾತನಾಡುವುದರಲ್ಲಿ ಅಚ್ಚರಿ ಏನಿಲ್ಲ. ಸಂವಿಧಾನ ಬದಲಾವಣೆಯ ಬಗ್ಗೆ ಮಾತನಾಡಿದವರಿಗೆ ಅಂಬೇಡ್ಕರ್ ಅವರ ಬಗ್ಗೆ ಹೇಗೆ ಗೌರವ ಇರಲು ಸಾಧ್ಯ?” ಎಂದು ಪ್ರಶ್ನಿಸಿದರು.

ಅಂಬೇಡ್ಕರ್ ಅವರು ದೇಶಕ್ಕೆ ನೀಡಿದ ಸಂವಿಧಾನ ಹಾಗೂ ಸಾಮಾಜಿಕ ಸಮಾನತೆಯ ಚಿಂತನೆಗಳನ್ನು ಗೌರವಿಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಭಿನ್ನಾಭಿಪ್ರಾಯಗಳು ಪ್ರಜಾಪ್ರಭುತ್ವದ ಸಹಜ ಭಾಗವಾದರೂ, ಯಾವುದೇ ಸಮುದಾಯದ ಭಾವನೆಗಳಿಗೆ ಧಕ್ಕೆ ತರುವ ರೀತಿಯ ಹೇಳಿಕೆಗಳನ್ನು ನೀಡಬಾರದು ಎಂದು ಪ್ರಕಾಶ್ ರಾಜ್ ಹೇಳಿದರು.

ನೀಲಿ ಶಾಲಿನ ಕುರಿತು ಪ್ರತಾಪ್ ಸಿಂಹ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಪ್ರಕಾಶ್ ರಾಜ್, ಸಾಮಾಜಿಕ ನ್ಯಾಯದ ಸಂಕೇತಗಳ ಬಗ್ಗೆ ಗೌರವಯುತವಾಗಿ ಮಾತನಾಡುವ ಅಗತ್ಯವಿದೆ ಎಂದು ಒತ್ತಿ ಹೇಳಿದರು.