🛑 LOCAL EXPRESS :“ಕೊಪ್ಪಳ|ಎಐಡಿವೈಒ ಯುವಜನ ಶಿಬಿರ : ಅಶೋಕನ ಶಿಲಾಶಾಸನದತ್ತ ಚಾರಣ, ಮಳೆ -ಮಲ್ಲೇಶ್ವರ ಬೆಟ್ಟದಲ್ಲಿ ಚರ್ಚಾಗೋಷ್ಠಿಗಳು 28 ರಂದು”

Contents
🛑 LOCAL EXPRESS :“ಕೊಪ್ಪಳ|ಎಐಡಿವೈಒ ಯುವಜನ ಶಿಬಿರ : ಅಶೋಕನ ಶಿಲಾಶಾಸನದತ್ತ ಚಾರಣ, ಮಳೆ -ಮಲ್ಲೇಶ್ವರ ಬೆಟ್ಟದಲ್ಲಿ ಚರ್ಚಾಗೋಷ್ಠಿಗಳು 28 ರಂದು”• ಸೆಕ್ಯುಲರ್ ವಾಯ್ಸ್ ನ್ಯೂಸ್ ಕೊಪ್ಪಳ :ಕೊಪ್ಪಳ ಹಾಗೂ ವಿಜಯನಗರ ಜಿಲ್ಲಾ ಮಟ್ಟದ ಆಲ್ ಇಂಡಿಯಾ ಡೆಮಾಕ್ರೆಟಿಕ್ ಯೂತ್ ಆರ್ಗನೈಸೇಷನ್ (AIDYO) ಯುವಜನ ಶಿಬಿರ 28ರಂದು ಇಲ್ಲಿನ ಮಳೆ–ಮಲ್ಲೇಶ್ವರ ಬೆಟ್ಟದಲ್ಲಿ ನಡೆಯಲಿದೆ.ಶನಿವಾರ ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಎಐಡಿವೈಓ ಜಿಲ್ಲಾ ಕಾರ್ಯದರ್ಶಿ ಶರಣು ಪಾಟೀಲ್ ಅವರು ತಿಳಿಸಿದರು.ಡಿ. 28ರಂದು ಬೆಳಿಗ್ಗೆ 6.30ರಿಂದ 8.30ರವರೆಗೆ ಅಶೋಕನ ಶಿಲಾಶಾಸನದತ್ತ ಚಾರಣ ಕಾರ್ಯಕ್ರಮ ಆಯೋಜಿಸಲಾಗಿದೆ. ನಂತರ ಬೆಳಿಗ್ಗೆ 10.30ರಿಂದ 12 ಗಂಟೆಯವರೆಗೆ ಮೊದಲ ಚರ್ಚಾಗೋಷ್ಠಿ ನಡೆಯಲಿದೆ.ಇದರಲ್ಲಿ “ಬಡತನ ಮತ್ತು ನಿರುದ್ಯೋಗ ಸಮಸ್ಯೆಗಳಿಗೆ ಜನಸಂಖ್ಯಾ ಸ್ಫೋಟವೇ ಕಾರಣವೇ?” ಎಂಬ ವಿಷಯದ ಕುರಿತು ಸಂಘಟನೆಯ ರಾಜ್ಯ ಸೆಕ್ರೆಟೇರಿಯಟ್ ಸದಸ್ಯ ಕಾ. ಭವಾನಿ ಶಂಕರ್ ಎಸ್. ಗೌಡ ಅವರು ಚರ್ಚಾಗೋಷ್ಟಿ ನಡೆಸುವವರು.ಮಧ್ಯಾಹ್ನ 12ರಿಂದ 1.30ರವರೆಗೆ ಎರಡನೇ ಚರ್ಚಾಗೋಷ್ಠಿ ನಡೆಸಲಾಗಿದ್ದು, “ಯುವಜನರಿಗೆ ಭಗತ್ ಸಿಂಗ್ ಅವರ ಕೊನೆಯ ಕರೆ (To the Young Political Workers)” ವಿಷಯದ ಮೇಲೆ ಸಂಘಟನೆಯ ರಾಜ್ಯ ಉಪಾಧ್ಯಕ್ಷ ಚನ್ನಬಸವ ಜಾನೇಕಲ್ ಅವರು ಮಾತನಾಡಲಿದ್ದಾರೆ.ಮಧ್ಯಾಹ್ನ 3ರಿಂದ 5 ಗಂಟೆಯವರೆಗೆ ಸಮಾರೋಪ ಕಾರ್ಯಕ್ರಮದಲ್ಲಿ “ಯುವಜನರ ಮುಂದಿರುವ ಕರ್ತವ್ಯಗಳು” ಎಂಬ ವಿಷಯದಲ್ಲಿ ಎಸ್‌ಯುಸಿಐ (ಸಿ) ರಾಜ್ಯ ಸೆಕ್ರೆಟೇರಿಯಟ್ ಸದಸ್ಯ ಕಾ. ರಾಮಾಂಜನಪ್ಪ ಆಲ್ಬಳ್ಳಿ ಅವರು ಸಂವಾದ ನಡೆಸಲಿದ್ದಾರೆ ಎಂದು ತಿಳಿಸಿದ್ದಾರೆ.
