🛑LOCAL EXPRESS : “ಯಾದಗಿರಿ|ಸರ್ಕಾರಿ ಶಾಲಾ ಮಕ್ಕಳಿಗೆ ಶೂ–ಸಾಕ್ಸ್ ವಿತರಿಸದ ಸರ್ಕಾರ :ಎಐಡಿಎಸ್‍ಓ ತೀವ್ರ ಆಕ್ರೋಶ”

By admin

  🛑LOCAL EXPRESS :“ಯಾದಗಿರಿ|ಸರ್ಕಾರಿ ಶಾಲಾ ಮಕ್ಕಳಿಗೆ ಶೂ–ಸಾಕ್ಸ್ ವಿತರಿಸದ ಸರ್ಕಾರ : ಎಐಡಿಎಸ್‍ಓ ತೀವ್ರ ಆಕ್ರೋಶ”

Contents
  🛑LOCAL EXPRESS :“ಯಾದಗಿರಿ|ಸರ್ಕಾರಿ ಶಾಲಾ ಮಕ್ಕಳಿಗೆ ಶೂ–ಸಾಕ್ಸ್ ವಿತರಿಸದ ಸರ್ಕಾರ : ಎಐಡಿಎಸ್‍ಓ ತೀವ್ರ ಆಕ್ರೋಶ”ಸರ್ಕಾರಿ ಶಾಲಾ ವಿದ್ಯಾರ್ಥಿಗಳ ಕಲ್ಯಾಣದ ವಿಷಯದಲ್ಲಿ ರಾಜ್ಯ ಸರ್ಕಾರ ಅನುಸರಿಸುತ್ತಿರುವ ನಿರ್ಲಕ್ಷ್ಯ ಧೋರಣೆಯನ್ನು ಆಲ್ ಇಂಡಿಯಾ ಡೆಮಾಕ್ರಟಿಕ್ ಸ್ಟುಡೆಂಟ್ಸ್ ಆರ್ಗನೈಜೆಷನ್ (ಎಐಡಿಎಸ್‍ಓ) ಜಿಲ್ಲಾ ಸಂಘಟನಾ ಸಮಿತಿ ಯು ತೀವ್ರವಾಗಿ ಖಂಡಿಸಿದೆ.                      (ಶಿಲ್ಪಾ ಬಿ.ಕೆ. ಎಐಡಿಎಸ್‌ಓ ಜಿಲ್ಲಾ ಸಂಚಾಲಕಿ).ಈ ಕುರಿತು ಶನಿವಾರ ಪತ್ರಿಕಾ ಹೇಳಿಕೆ ನೀಡಿರುವ ಎಐಡಿಎಸ್‍ಓ ಜಿಲ್ಲಾ ಸಂಚಾಲಕಿ ಶಿಲ್ಪಾ ಬಿ.ಕೆ. ಅವರು, ಪ್ರಸಕ್ತ ಶೈಕ್ಷಣಿಕ ವರ್ಷದ ಅರ್ಧಕ್ಕಿಂತ ಹೆಚ್ಚಿನ ಅವಧಿ ಕಳೆದಿದ್ದರೂ ರಾಜ್ಯದ ಹಲವೆಡೆ ವಿದ್ಯಾರ್ಥಿಗಳಿಗೆ ಅಗತ್ಯವಾದ ಶೂ ಹಾಗೂ ಸಾಕ್ಸ್‌ಗಳನ್ನು ಇನ್ನೂ ವಿತರಿಸಿಲ್ಲ ಎಂದು ಆರೋಪಿಸಿದರು. ಇದರಿಂದ ಅನೇಕ ಮಕ್ಕಳು ಬರಿಗಾಲಿನಲ್ಲೇ ಶಾಲೆಗೆ ಹಾಜರಾಗುವಂತಾಗಿದೆ ಎಂದರು.ರಾಜ್ಯಾದ್ಯಂತ ತೀವ್ರ ಚಳಿ ಇರುವಾಗ ಮಕ್ಕಳಿಗೆ ಪಾದರಕ್ಷೆಗಳಿಲ್ಲದೆ ಓಡಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿರುವುದು ಕಳವಳಕಾರಿ ವಿಷಯವಾಗಿದೆ. ಸರ್ಕಾರವು ಅಗತ್ಯ ಹಣವನ್ನು ಸಮಯಕ್ಕೆ ಬಿಡುಗಡೆ ಮಾಡದೇ ಇರುವುದರಿಂದ ಈ ಸಮಸ್ಯೆ ಉಂಟಾಗಿದೆ ಎಂದು ಶಾಲಾ ಮುಖ್ಯೋಪಾಧ್ಯಾಯರ ವರದಿಗಳನ್ನು ಉಲ್ಲೇಖಿಸಿ ಅವರು ತಿಳಿಸಿದರು.ಮೊಟ್ಟೆಯ ಬೆಲೆ ಏರಿಕೆಯ ಹಿನ್ನೆಲೆಯಲ್ಲಿ ಅನೇಕ ಶಾಲಾ ಮುಖ್ಯೋಪಾಧ್ಯಾಯರು ತಮ್ಮ ಸ್ವಂತ ಹಣದಿಂದಲೇ ಮಕ್ಕಳಿಗೆ ಪೌಷ್ಟಿಕ ಆಹಾರ ಒದಗಿಸುತ್ತಿದ್ದು, ಹಲವಾರು ಶಾಲೆಗಳಿಗೆ ಇನ್ನೂ ಸಮವಸ್ತ್ರಗಳೂ ತಲುಪಿಲ್ಲ. ತಕ್ಷಣವೇ ಶೂ–ಸಾಕ್ಸ್‌ಗಳಿಗೆ ಹಣ ಬಿಡುಗಡೆ ಮಾಡಿ ವಿದ್ಯಾರ್ಥಿಗಳ ಮೂಲಭೂತ ಅಗತ್ಯಗಳಿಗೆ ಸರ್ಕಾರ ಆದ್ಯತೆ ನೀಡಬೇಕೆಂದು ಎಐಡಿಎಸ್‍ಓ ಒತ್ತಾಯಿಸಿದೆ.

•ಸೆಕ್ಯುಲರ್‌ ವಾಯ್ಸ್‌ ನ್ಯೂಸ್‌ ಯಾದಗಿರಿ:

ಸರ್ಕಾರಿ ಶಾಲಾ ವಿದ್ಯಾರ್ಥಿಗಳ ಕಲ್ಯಾಣದ ವಿಷಯದಲ್ಲಿ ರಾಜ್ಯ ಸರ್ಕಾರ ಅನುಸರಿಸುತ್ತಿರುವ ನಿರ್ಲಕ್ಷ್ಯ ಧೋರಣೆಯನ್ನು ಆಲ್ ಇಂಡಿಯಾ ಡೆಮಾಕ್ರಟಿಕ್ ಸ್ಟುಡೆಂಟ್ಸ್ ಆರ್ಗನೈಜೆಷನ್ (ಎಐಡಿಎಸ್‍ಓ) ಜಿಲ್ಲಾ ಸಂಘಟನಾ ಸಮಿತಿ ಯು ತೀವ್ರವಾಗಿ ಖಂಡಿಸಿದೆ.

                      (ಶಿಲ್ಪಾ ಬಿ.ಕೆ. ಎಐಡಿಎಸ್‌ಓ ಜಿಲ್ಲಾ ಸಂಚಾಲಕಿ).

ಈ ಕುರಿತು ಶನಿವಾರ ಪತ್ರಿಕಾ ಹೇಳಿಕೆ ನೀಡಿರುವ ಎಐಡಿಎಸ್‍ಓ ಜಿಲ್ಲಾ ಸಂಚಾಲಕಿ ಶಿಲ್ಪಾ ಬಿ.ಕೆ. ಅವರು, ಪ್ರಸಕ್ತ ಶೈಕ್ಷಣಿಕ ವರ್ಷದ ಅರ್ಧಕ್ಕಿಂತ ಹೆಚ್ಚಿನ ಅವಧಿ ಕಳೆದಿದ್ದರೂ ರಾಜ್ಯದ ಹಲವೆಡೆ ವಿದ್ಯಾರ್ಥಿಗಳಿಗೆ ಅಗತ್ಯವಾದ ಶೂ ಹಾಗೂ ಸಾಕ್ಸ್‌ಗಳನ್ನು ಇನ್ನೂ ವಿತರಿಸಿಲ್ಲ ಎಂದು ಆರೋಪಿಸಿದರು. ಇದರಿಂದ ಅನೇಕ ಮಕ್ಕಳು ಬರಿಗಾಲಿನಲ್ಲೇ ಶಾಲೆಗೆ ಹಾಜರಾಗುವಂತಾಗಿದೆ ಎಂದರು.

ರಾಜ್ಯಾದ್ಯಂತ ತೀವ್ರ ಚಳಿ ಇರುವಾಗ ಮಕ್ಕಳಿಗೆ ಪಾದರಕ್ಷೆಗಳಿಲ್ಲದೆ ಓಡಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿರುವುದು ಕಳವಳಕಾರಿ ವಿಷಯವಾಗಿದೆ. ಸರ್ಕಾರವು ಅಗತ್ಯ ಹಣವನ್ನು ಸಮಯಕ್ಕೆ ಬಿಡುಗಡೆ ಮಾಡದೇ ಇರುವುದರಿಂದ ಈ ಸಮಸ್ಯೆ ಉಂಟಾಗಿದೆ ಎಂದು ಶಾಲಾ ಮುಖ್ಯೋಪಾಧ್ಯಾಯರ ವರದಿಗಳನ್ನು ಉಲ್ಲೇಖಿಸಿ ಅವರು ತಿಳಿಸಿದರು.

ಮೊಟ್ಟೆಯ ಬೆಲೆ ಏರಿಕೆಯ ಹಿನ್ನೆಲೆಯಲ್ಲಿ ಅನೇಕ ಶಾಲಾ ಮುಖ್ಯೋಪಾಧ್ಯಾಯರು ತಮ್ಮ ಸ್ವಂತ ಹಣದಿಂದಲೇ ಮಕ್ಕಳಿಗೆ ಪೌಷ್ಟಿಕ ಆಹಾರ ಒದಗಿಸುತ್ತಿದ್ದು, ಹಲವಾರು ಶಾಲೆಗಳಿಗೆ ಇನ್ನೂ ಸಮವಸ್ತ್ರಗಳೂ ತಲುಪಿಲ್ಲ. ತಕ್ಷಣವೇ ಶೂ–ಸಾಕ್ಸ್‌ಗಳಿಗೆ ಹಣ ಬಿಡುಗಡೆ ಮಾಡಿ ವಿದ್ಯಾರ್ಥಿಗಳ ಮೂಲಭೂತ ಅಗತ್ಯಗಳಿಗೆ ಸರ್ಕಾರ ಆದ್ಯತೆ ನೀಡಬೇಕೆಂದು ಎಐಡಿಎಸ್‍ಓ ಒತ್ತಾಯಿಸಿದೆ.