LOCAL EXPRESS : “ಯಾದಗಿರಿ| ಅತಿಯಾದ ಮಳೆಯಿಂದ ಬೆಳೆ ಹಾನಿ : ತುರ್ತಾಗಿ ಪರಿಹಾರ ನೀಡಲು ಸರ್ಕಾರಕ್ಕೆ ರೈತ ಮುಖಂಡ ಹಗರಟಗಿ ಒತ್ತಾಯ”

By admin

  “ಯಾದಗಿರಿ| ಅತಿಯಾದ ಮಳೆಯಿಂದ ಬೆಳೆ ಹಾನಿ : ತುರ್ತಾಗಿ ಪರಿಹಾರ ನೀಡಲು ಸರ್ಕಾರಕ್ಕೆ  ರೈತ ಮುಖಂಡ ಹಗರಟಗಿ ಒತ್ತಾಯ”

Contents
  “ಯಾದಗಿರಿ| ಅತಿಯಾದ ಮಳೆಯಿಂದ ಬೆಳೆ ಹಾನಿ : ತುರ್ತಾಗಿ ಪರಿಹಾರ ನೀಡಲು ಸರ್ಕಾರಕ್ಕೆ  ರೈತ ಮುಖಂಡ ಹಗರಟಗಿ ಒತ್ತಾಯ”• ಸೆಕ್ಯೂಲರ್‌ ವಾಯ್ಸ್‌ ನ್ಯೂಸ್‌ :ಯಾದಗಿರಿ : ಮಳೆಯಿಂದ ಜಿಲ್ಲೆಯಲ್ಲಿ ಅಪಾರ ಪ್ರಮಾಣದ ಬೆಳೆ ಹಾನಿಯಾಗಿದ್ದು ಸರಕಾರ ವಿಳಂಬ ಮಾಡದೇ ಬೆಳೆ ಹಾನಿಗೆ ಶೀಘ್ರವಾಗಿ ಹೆಚ್ಚಿನ ಪರಿಹಾರ ಪಾವತಿ ಮಾಡುವಂತೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷ ಮಲ್ಲಣ್ಣಗೌಡ ಹಗರಟಗಿ ಅವರು ಒತ್ತಾಯಿಸಿದ್ದಾರೆ.ಭಾರಿ  ಮಳೆಯಿಂದ ಬೆಳೆ ಹಾನಿಯಾದ ವಡಗೇರಾ ತಾಲೂಕಿನ ಹೈಯಾಳ ಬಿ ಗ್ರಾಮದ ರೈತರ ಜಮೀನಿಗೆ ಭೇಟಿ ನೀಡಿ ಬೆಳೆ ಹಾನಿ ವೀಕ್ಷಣೆ ಮಾಡಿ  ಮಾತನಾಡಿದ ಅವರು  ಜಿಲ್ಲೆಯಲ್ಲಿ ಕಳೆದ ಒಂದು ತಿಂಗಳಿನಿಂದ ಮಳೆ ಸುರಿದ ಪರಿಣಾಮ ಜಿಲ್ಲಾದ್ಯಂತ ರೈತರು ಬೆಳೆದ ಹೆಸರು, ತೊಗರಿ,ಹತ್ತಿ ,ಭತ್ತ ಹಾಗೂ ಅನೇಕ ಬೆಳೆಗಳು ಹಾನಿಯಾಗಿದ್ದಾವೆ.ರೈತರು ಉತ್ತಮ ಫಸಲು ನಿರೀಕ್ಷೆ ಮಾಡಿದರು.ಆದರೆ, ಅನ್ನದಾತರ ನಿರೀಕ್ಷೆ ಕಮರಿ ಹೋಗಿದೆ ಎಂದರು.ತಡರಾತ್ರಿ ಸುರಿದ ಮಳೆಯಿಂದ ಹೈಯಾಳ ಬಿ, ಹೈಯಾಳ ಕೆ, ಐಕೂರು, ಯಕ್ಷಿಂತಿ ,ಮುನಮುಟಗಿ ಭಾಗದಲ್ಲಿ ಸಾವಿರಾರು ಎಕರೆ ಪ್ರದೇಶದ ಬೆಳೆ ಮಳೆ ನೀರಿನಿಂದ ಹಾನಿಯಾಗಿದೆ.ಬೆಳೆ ಹಾನಿಯಿಂದ ಬೆಂಗಳೂರು, ಮುಂಬೈ ಸೇರಿದಂತೆ ಮಹಾನಗರಗಳಿಗೆ ರೈತ ಕುಟುಂಬಸ್ಥರು ವಲಸೆ ಹೋಗುವಂತಾಗಿದೆ.ಅಧಿಕಾರಿಗಳು ಬೆಳೆ ಹಾನಿ ಸಮೀಕ್ಷೆ ಮಾಡಬೇಕು. ಸರಕಾರ ಹೆಚ್ಚಿನ ಬೆಳೆ ಹಾನಿ ಪರಿಹಾರ ಪಾವತಿ ಮಾಡಿ ರೈತರ ಜೀವ ಉಳಿಸುವ ಕೆಲಸ ಮಾಡಬೇಕೆಂದು ಆಗ್ರಹ ಮಾಡಿದ್ದಾರೆ.ಈ ವೇಳೆ ಸಂಘದ ಜಿಲ್ಲಾ ಕಾರ್ಯದರ್ಶಿ ಶಿವಶರಣಪ್ಪ ಸಾಹುಕಾರ,ಕಂದಾಯ ನಿರೀಕ್ಷಕ ಸಿದ್ದಯ್ಯ ಸ್ವಾಮಿ,ಕೃಷಿ ಅಧಿಕಾರಿ ನಾಗರಾಜ ,ಗ್ರಾಮ ಆಡಳಿತ ಅಧಿಕಾರಿ ಗೌತಮಿ ಇದ್ದರು

• ಸೆಕ್ಯೂಲರ್‌ ವಾಯ್ಸ್‌ ನ್ಯೂಸ್‌ :

ಯಾದಗಿರಿ : ಮಳೆಯಿಂದ ಜಿಲ್ಲೆಯಲ್ಲಿ ಅಪಾರ ಪ್ರಮಾಣದ ಬೆಳೆ ಹಾನಿಯಾಗಿದ್ದು ಸರಕಾರ ವಿಳಂಬ ಮಾಡದೇ ಬೆಳೆ ಹಾನಿಗೆ ಶೀಘ್ರವಾಗಿ ಹೆಚ್ಚಿನ ಪರಿಹಾರ ಪಾವತಿ ಮಾಡುವಂತೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷ ಮಲ್ಲಣ್ಣಗೌಡ ಹಗರಟಗಿ ಅವರು ಒತ್ತಾಯಿಸಿದ್ದಾರೆ.

ಭಾರಿ  ಮಳೆಯಿಂದ ಬೆಳೆ ಹಾನಿಯಾದ ವಡಗೇರಾ ತಾಲೂಕಿನ ಹೈಯಾಳ ಬಿ ಗ್ರಾಮದ ರೈತರ ಜಮೀನಿಗೆ ಭೇಟಿ ನೀಡಿ ಬೆಳೆ ಹಾನಿ ವೀಕ್ಷಣೆ ಮಾಡಿ  ಮಾತನಾಡಿದ ಅವರು  ಜಿಲ್ಲೆಯಲ್ಲಿ ಕಳೆದ ಒಂದು ತಿಂಗಳಿನಿಂದ ಮಳೆ ಸುರಿದ ಪರಿಣಾಮ ಜಿಲ್ಲಾದ್ಯಂತ ರೈತರು ಬೆಳೆದ ಹೆಸರು, ತೊಗರಿ,ಹತ್ತಿ ,ಭತ್ತ ಹಾಗೂ ಅನೇಕ ಬೆಳೆಗಳು ಹಾನಿಯಾಗಿದ್ದಾವೆ.ರೈತರು ಉತ್ತಮ ಫಸಲು ನಿರೀಕ್ಷೆ ಮಾಡಿದರು.ಆದರೆ, ಅನ್ನದಾತರ ನಿರೀಕ್ಷೆ ಕಮರಿ ಹೋಗಿದೆ ಎಂದರು.

ತಡರಾತ್ರಿ ಸುರಿದ ಮಳೆಯಿಂದ ಹೈಯಾಳ ಬಿ, ಹೈಯಾಳ ಕೆ, ಐಕೂರು, ಯಕ್ಷಿಂತಿ ,ಮುನಮುಟಗಿ ಭಾಗದಲ್ಲಿ ಸಾವಿರಾರು ಎಕರೆ ಪ್ರದೇಶದ ಬೆಳೆ ಮಳೆ ನೀರಿನಿಂದ ಹಾನಿಯಾಗಿದೆ.ಬೆಳೆ ಹಾನಿಯಿಂದ ಬೆಂಗಳೂರು, ಮುಂಬೈ ಸೇರಿದಂತೆ ಮಹಾನಗರಗಳಿಗೆ ರೈತ ಕುಟುಂಬಸ್ಥರು ವಲಸೆ ಹೋಗುವಂತಾಗಿದೆ.ಅಧಿಕಾರಿಗಳು ಬೆಳೆ ಹಾನಿ ಸಮೀಕ್ಷೆ ಮಾಡಬೇಕು. ಸರಕಾರ ಹೆಚ್ಚಿನ ಬೆಳೆ ಹಾನಿ ಪರಿಹಾರ ಪಾವತಿ ಮಾಡಿ ರೈತರ ಜೀವ ಉಳಿಸುವ ಕೆಲಸ ಮಾಡಬೇಕೆಂದು ಆಗ್ರಹ ಮಾಡಿದ್ದಾರೆ.

ಈ ವೇಳೆ ಸಂಘದ ಜಿಲ್ಲಾ ಕಾರ್ಯದರ್ಶಿ ಶಿವಶರಣಪ್ಪ ಸಾಹುಕಾರ,ಕಂದಾಯ ನಿರೀಕ್ಷಕ ಸಿದ್ದಯ್ಯ ಸ್ವಾಮಿ,ಕೃಷಿ ಅಧಿಕಾರಿ ನಾಗರಾಜ ,ಗ್ರಾಮ ಆಡಳಿತ ಅಧಿಕಾರಿ ಗೌತಮಿ ಇದ್ದರು