LOCAL NEWS:”ಕುಕನೂರ|ಬಡ ರೈತರಿಗೆ ಅನ್ಯಾಯ, ಪ್ರಭಾವಿಗಳಿಗೆ ಲಕ್ಷಾಂತರ: ರಿನ್ಯೂವಾ ಕಂಪನಿಯ ತಾರತಮ್ಯ ಪರಿಹಾರಕ್ಕೆ ಭೀಮ ಗರ್ಜನೆ ಆಕ್ರೋಶ”

By admin

“ಕುಕನೂರ|ಬಡ ರೈತರಿಗೆ ಅನ್ಯಾಯ, ಪ್ರಭಾವಿಗಳಿಗೆ ಲಕ್ಷಾಂತರ : ರಿನ್ಯೂವಾ ಕಂಪನಿಯ ತಾರತಮ್ಯ ಪರಿಹಾರಕ್ಕೆ ಭೀಮ ಗರ್ಜನೆ ಆಕ್ರೋಶ”

Contents
“ಕುಕನೂರ|ಬಡ ರೈತರಿಗೆ ಅನ್ಯಾಯ, ಪ್ರಭಾವಿಗಳಿಗೆ ಲಕ್ಷಾಂತರ : ರಿನ್ಯೂವಾ ಕಂಪನಿಯ ತಾರತಮ್ಯ ಪರಿಹಾರಕ್ಕೆ ಭೀಮ ಗರ್ಜನೆ ಆಕ್ರೋಶ”• ಸೆಕ್ಯುಲರ್‌ ವಾಯ್ಸ್‌ ನ್ಯೂಸ್‌ ಕುಕನೂರು :ದಲಿತ ಸಂಘಟನೆಗಳ ಒಕ್ಕೂಟ ಸಮಿತಿ ಹಾಗೂ ಡಿ.ಎಸ್.ಎಸ್. ಭೀಮ ಘರ್ಜನೆ ವತಿಯಿಂದ ಭಾನುವಾರ ಕುಕನೂರು  ಪಟ್ಟಣದ ಪರಿವೀಕ್ಷಣಾ  ಮಂದಿರದಲ್ಲಿ ಪತ್ರಿಕಾ ಗೋಷ್ಠಿ ನಡೆಸಿ. ಡಿಎಸ್ಎಸ್ ಭೀಮ ಗರ್ಜನೆ ರಾಜ್ಯ ಗೌರವಾಧ್ಯಕ್ಷ ಬಸವರಾಜ ನಡುವಿನಮನಿ ಮತ್ತು ದಲಿತ ಮುಖಂಡ ಗಾಳಪ್ಪ ಎಂ ಡಿ ಮಾತನಾಡಿ, ರೈತರ ಜಮೀನಿನಲ್ಲಿ ಅಕ್ರಮವಾಗಿ ಕಂಬ ನಿರ್ಮಾಣ ಕಾರ್ಯ ನಡೆಸುತ್ತಿರುವ ರಿನ್ಯೂವಾ ಟಾವರ್ ಟ್ರಾನ್ಸ್‌ಮಿಷನ್ ಲೈನ್ ಕಂಪನಿ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.ಕಳೆದ 5–6 ವರ್ಷಗಳಿಂದ ಪವನ ವಿದ್ಯುತ್, ಸೋಲಾರ್ ವಿದ್ಯುತ್ ಹಾಗೂ ಟಾವರ್ ಟ್ರಾನ್ಸ್‌ಮಿಷನ್ ಕಂಪನಿಗಳು ಕುಕನೂರು–ಯಲಬುರ್ಗಾ ಪ್ರದೇಶದಲ್ಲಿ ಯಾವುದೇ ಒಪ್ಪಂದ, ರೈತರ ಒಪ್ಪಿಗೆ ಅಥವಾ ಕಾನೂನು ಪ್ರಕ್ರಿಯೆ ಪಾಲಿಸದೇ ದಬ್ಬಾಳಿಕೆ ಮೂಲಕ ಕಾಮಗಾರಿಗಳನ್ನು ಮಾಡುತ್ತಿದ್ದು, ಇದು ರೈತರ ಬದುಕಿಗೆ ಘಾಸಿ ಉಂಟುಮಾಡುತ್ತಿದೆ ಎಂದು ಆರೋಪಿಸಿದರು.ಗುಳಗುಳಿ–ತಳಕಲ್ ಮಾರ್ಗದಲ್ಲಿ 400 KV / D/C ಲೈನ್ ಕಾಮಗಾರಿಯನ್ನು ರಿನ್ಯೂವಾ ಕಂಪನಿ ಪ್ರಾರಂಭಿಸಿದ್ದು, ಜಿಲ್ಲಾಧಿಕಾರಿಗಳ ಆದೇಶವಿದೆ ಎಂಬ ನೆಪದಲ್ಲಿ ರೈತರ ಕೃಷಿಭೂಮಿಗೆ ಅಕ್ರಮ ಪ್ರವೇಶ ಮಾಡಿ ಕಂಬ ನಿರ್ಮಾಣ ಮಾಡಲಾಗುತ್ತಿದೆ ಎಂದು ಮುಖಂಡರು ಆರೋಪಿಸಿದರು.ರಾಜಕೀಯ ಪ್ರಭಾವಿಗರಿಗೆ ₹50–60 ಲಕ್ಷ ಪರಿಹಾರ ನೀಡುತ್ತಿದ್ದರೆ, ಸಾಮಾನ್ಯ ಹಾಗೂ ಬಡ ರೈತರಿಗೆ ಕೇವಲ ₹2–3 ಲಕ್ಷ ನೀಡುವ ಮೂಲಕ ಅನ್ಯಾಯ ಮಾಡಲಾಗುತ್ತಿದೆ ಎಂದೂ ಅವರು ದೂರಿದರು.ನಿಂಗಾಪುರ ಗ್ರಾಮದ ಬಸಮ್ಮ ವಿರುಪಾಕ್ಷ ಪಾಟೀಲ್ ಅವರ ಜಮೀನಿನಲ್ಲಿ ನವೆಂಬರ್ 21,2015ರಂದು ಪರಿಹಾರ ಹಣ ನೀಡದೇ ಕಂಬ ಕೆಲಸ ಆರಂಭಿಸಲಾಗಿದ್ದು, ಇದನ್ನು ಪ್ರಶ್ನಿಸಿದ ರೈತರ ಮೇಲೆ ಕಂಪನಿ ಸಿಬ್ಬಂದಿ ದೌರ್ಜನ್ಯ ನಡೆಸಿ, ಹೊಡೆದು ಬಡೆದು, ಜೀವ ಬೆದರಿಕೆ ಹಾಕಿ ಹೊರಗೆ ನೂಕಿದ ಘಟನೆ ಪತ್ರಿಕಾ ಗೋಷ್ಠಿಯಲ್ಲಿ ಉದಾಹರಣೆಯಾಗಿ ವಿವರಿಸಲಾಯಿತು. ಅಲ್ಲದೆ ರೈತರ ಮಧ್ಯೆ ಜಗಳ ಉಂಟುಮಾಡಿ ಪೊಲೀಸರಿಗೆ ಕರೆ ಮಾಡಿಸಿ, ಬಡ ರೈತ ಮಹಿಳೆ ಮೇಲೆ ಹಲ್ಲೆ, ದೌರ್ಜನ್ಯ ಎಸಲಾಗಿದೆ. ಪೊಲೀಸರಿಂದಲೂ ಕಂಪನಿಗೆ ಬೆಂಬಲ ದೊರೆಯುತ್ತಿದೆ ಎಂಬ ಗಂಭೀರ ಆರೋಪ ಮಾಡಲಾಯಿತು.ರೈತರು ಈ ದೇಶದ ಬೆನ್ನೆಲುಬು ಎಂದು ಹೇಳುತ್ತ, ಜಿಲ್ಲಾಡಳಿತ ಹಾಗೂ ತಾಲೂಕು ಆಡಳಿತ ಯಾವ ರೀತಿಯ ಕ್ರಮ ಕೈಗೊಂಡಿಲ್ಲ ಎಂಬುದು ಸಾರ್ವಜನಿಕರಲ್ಲಿ ಚರ್ಚೆಗೆ ಕಾರಣವಾಗಿದೆ ಎಂದು ಸಂಘಟನೆಗಳ ಪ್ರತಿನಿಧಿಗಳು ಅಸಮಾಧಾನ ವ್ಯಕ್ತಪಡಿಸಿದರು.ಅಕ್ರಮ, ದೌರ್ಜನ್ಯ ಹಾಗೂ ರೈತರ ಮೇಲೆ ಅನ್ಯಾಯ ಮುಂದುವರಿದರೆ, ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಧರಣಿ–ಸತ್ಯಾಗ್ರಹ, ಹಾಗೂ ಕಾನೂನು ಸಲಹೆ ಪಡೆದು ಮುಂದಿನ ಹೋರಾಟ ಅನಿವಾರ್ಯವಾಗಲಿದೆ ಎಂದು ದಲಿತ ಸಂಘಟನೆಗಳ ಒಕ್ಕೂಟ ಸಮಿತಿ ಎಚ್ಚರಿಸಿದೆ.ಪತ್ರಿಕಾ ಗೋಷ್ಠಿಯಲ್ಲಿ ಡಿ.ಎಸ್.ಎಸ್. ಭೀಮ ಗರ್ಜನೆ ಕೊಪ್ಪಳ ಜಿಲ್ಲಾ ಅಧ್ಯಕ್ಷ ಹನುಮಂತಪ್ಪ ಕಡೆಮನಿ, ಜಿಲ್ಲಾ ಗೌರವಾಧ್ಯಕ್ಷ ಶಿವಪ್ಪ ಭಂಡಾರಿ, ಮುಖಂಡರಾದ ಲೋಹಿತ್ ಹಿರೇಮನಿ, ಸಿದ್ದಲಿಂಗಪ್ಪ ನಿಟ್ಟಾಲಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

• ಸೆಕ್ಯುಲರ್‌ ವಾಯ್ಸ್‌ ನ್ಯೂಸ್‌ ಕುಕನೂರು :

ದಲಿತ ಸಂಘಟನೆಗಳ ಒಕ್ಕೂಟ ಸಮಿತಿ ಹಾಗೂ ಡಿ.ಎಸ್.ಎಸ್. ಭೀಮ ಘರ್ಜನೆ ವತಿಯಿಂದ ಭಾನುವಾರ ಕುಕನೂರು  ಪಟ್ಟಣದ ಪರಿವೀಕ್ಷಣಾ  ಮಂದಿರದಲ್ಲಿ ಪತ್ರಿಕಾ ಗೋಷ್ಠಿ ನಡೆಸಿ. ಡಿಎಸ್ಎಸ್ ಭೀಮ ಗರ್ಜನೆ ರಾಜ್ಯ ಗೌರವಾಧ್ಯಕ್ಷ ಬಸವರಾಜ ನಡುವಿನಮನಿ ಮತ್ತು ದಲಿತ ಮುಖಂಡ ಗಾಳಪ್ಪ ಎಂ ಡಿ ಮಾತನಾಡಿ, ರೈತರ ಜಮೀನಿನಲ್ಲಿ ಅಕ್ರಮವಾಗಿ ಕಂಬ ನಿರ್ಮಾಣ ಕಾರ್ಯ ನಡೆಸುತ್ತಿರುವ ರಿನ್ಯೂವಾ ಟಾವರ್ ಟ್ರಾನ್ಸ್‌ಮಿಷನ್ ಲೈನ್ ಕಂಪನಿ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಕಳೆದ 5–6 ವರ್ಷಗಳಿಂದ ಪವನ ವಿದ್ಯುತ್, ಸೋಲಾರ್ ವಿದ್ಯುತ್ ಹಾಗೂ ಟಾವರ್ ಟ್ರಾನ್ಸ್‌ಮಿಷನ್ ಕಂಪನಿಗಳು ಕುಕನೂರು–ಯಲಬುರ್ಗಾ ಪ್ರದೇಶದಲ್ಲಿ ಯಾವುದೇ ಒಪ್ಪಂದ, ರೈತರ ಒಪ್ಪಿಗೆ ಅಥವಾ ಕಾನೂನು ಪ್ರಕ್ರಿಯೆ ಪಾಲಿಸದೇ ದಬ್ಬಾಳಿಕೆ ಮೂಲಕ ಕಾಮಗಾರಿಗಳನ್ನು ಮಾಡುತ್ತಿದ್ದು, ಇದು ರೈತರ ಬದುಕಿಗೆ ಘಾಸಿ ಉಂಟುಮಾಡುತ್ತಿದೆ ಎಂದು ಆರೋಪಿಸಿದರು.

ಗುಳಗುಳಿ–ತಳಕಲ್ ಮಾರ್ಗದಲ್ಲಿ 400 KV / D/C ಲೈನ್ ಕಾಮಗಾರಿಯನ್ನು ರಿನ್ಯೂವಾ ಕಂಪನಿ ಪ್ರಾರಂಭಿಸಿದ್ದು, ಜಿಲ್ಲಾಧಿಕಾರಿಗಳ ಆದೇಶವಿದೆ ಎಂಬ ನೆಪದಲ್ಲಿ ರೈತರ ಕೃಷಿಭೂಮಿಗೆ ಅಕ್ರಮ ಪ್ರವೇಶ ಮಾಡಿ ಕಂಬ ನಿರ್ಮಾಣ ಮಾಡಲಾಗುತ್ತಿದೆ ಎಂದು ಮುಖಂಡರು ಆರೋಪಿಸಿದರು.

ರಾಜಕೀಯ ಪ್ರಭಾವಿಗರಿಗೆ ₹50–60 ಲಕ್ಷ ಪರಿಹಾರ ನೀಡುತ್ತಿದ್ದರೆ, ಸಾಮಾನ್ಯ ಹಾಗೂ ಬಡ ರೈತರಿಗೆ ಕೇವಲ ₹2–3 ಲಕ್ಷ ನೀಡುವ ಮೂಲಕ ಅನ್ಯಾಯ ಮಾಡಲಾಗುತ್ತಿದೆ ಎಂದೂ ಅವರು ದೂರಿದರು.

ನಿಂಗಾಪುರ ಗ್ರಾಮದ ಬಸಮ್ಮ ವಿರುಪಾಕ್ಷ ಪಾಟೀಲ್ ಅವರ ಜಮೀನಿನಲ್ಲಿ ನವೆಂಬರ್ 21,2015ರಂದು ಪರಿಹಾರ ಹಣ ನೀಡದೇ ಕಂಬ ಕೆಲಸ ಆರಂಭಿಸಲಾಗಿದ್ದು, ಇದನ್ನು ಪ್ರಶ್ನಿಸಿದ ರೈತರ ಮೇಲೆ ಕಂಪನಿ ಸಿಬ್ಬಂದಿ ದೌರ್ಜನ್ಯ ನಡೆಸಿ, ಹೊಡೆದು ಬಡೆದು, ಜೀವ ಬೆದರಿಕೆ ಹಾಕಿ ಹೊರಗೆ ನೂಕಿದ ಘಟನೆ ಪತ್ರಿಕಾ ಗೋಷ್ಠಿಯಲ್ಲಿ ಉದಾಹರಣೆಯಾಗಿ ವಿವರಿಸಲಾಯಿತು. ಅಲ್ಲದೆ ರೈತರ ಮಧ್ಯೆ ಜಗಳ ಉಂಟುಮಾಡಿ ಪೊಲೀಸರಿಗೆ ಕರೆ ಮಾಡಿಸಿ, ಬಡ ರೈತ ಮಹಿಳೆ ಮೇಲೆ ಹಲ್ಲೆ, ದೌರ್ಜನ್ಯ ಎಸಲಾಗಿದೆ. ಪೊಲೀಸರಿಂದಲೂ ಕಂಪನಿಗೆ ಬೆಂಬಲ ದೊರೆಯುತ್ತಿದೆ ಎಂಬ ಗಂಭೀರ ಆರೋಪ ಮಾಡಲಾಯಿತು.

ರೈತರು ಈ ದೇಶದ ಬೆನ್ನೆಲುಬು ಎಂದು ಹೇಳುತ್ತ, ಜಿಲ್ಲಾಡಳಿತ ಹಾಗೂ ತಾಲೂಕು ಆಡಳಿತ ಯಾವ ರೀತಿಯ ಕ್ರಮ ಕೈಗೊಂಡಿಲ್ಲ ಎಂಬುದು ಸಾರ್ವಜನಿಕರಲ್ಲಿ ಚರ್ಚೆಗೆ ಕಾರಣವಾಗಿದೆ ಎಂದು ಸಂಘಟನೆಗಳ ಪ್ರತಿನಿಧಿಗಳು ಅಸಮಾಧಾನ ವ್ಯಕ್ತಪಡಿಸಿದರು.

ಅಕ್ರಮ, ದೌರ್ಜನ್ಯ ಹಾಗೂ ರೈತರ ಮೇಲೆ ಅನ್ಯಾಯ ಮುಂದುವರಿದರೆ, ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಧರಣಿ–ಸತ್ಯಾಗ್ರಹ, ಹಾಗೂ ಕಾನೂನು ಸಲಹೆ ಪಡೆದು ಮುಂದಿನ ಹೋರಾಟ ಅನಿವಾರ್ಯವಾಗಲಿದೆ ಎಂದು ದಲಿತ ಸಂಘಟನೆಗಳ ಒಕ್ಕೂಟ ಸಮಿತಿ ಎಚ್ಚರಿಸಿದೆ.

ಪತ್ರಿಕಾ ಗೋಷ್ಠಿಯಲ್ಲಿ ಡಿ.ಎಸ್.ಎಸ್. ಭೀಮ ಗರ್ಜನೆ ಕೊಪ್ಪಳ ಜಿಲ್ಲಾ ಅಧ್ಯಕ್ಷ ಹನುಮಂತಪ್ಪ ಕಡೆಮನಿ, ಜಿಲ್ಲಾ ಗೌರವಾಧ್ಯಕ್ಷ ಶಿವಪ್ಪ ಭಂಡಾರಿ, ಮುಖಂಡರಾದ ಲೋಹಿತ್ ಹಿರೇಮನಿ, ಸಿದ್ದಲಿಂಗಪ್ಪ ನಿಟ್ಟಾಲಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.