CRIME NEWS :”ಸಂಡೂರ | ಶಾಲಾ ಮಕ್ಕಳ ಮೇಲೆ ಲೈಂಗಿಕ ಕಿರುಕುಳ ಆರೋಪ : ಮುಖ್ಯ ಶಿಕ್ಷಕ ಅಮಾನತು”

By admin

“ಸಂಡೂರ | ಶಾಲಾ ಮಕ್ಕಳ ಮೇಲೆ ಲೈಂಗಿಕ ಕಿರುಕುಳ ಆರೋಪ : ಮುಖ್ಯ ಶಿಕ್ಷಕ ಅಮಾನತು”

• ಸೆಕ್ಯುಲರ್‌ ವಾಯ್ಸ್‌ ನ್ಯೂಸ್‌ ಬಳ್ಳಾರಿ : 

ಶಾಲಾ ಮಕ್ಕಳಿಗೆ ನಿತ್ಯ ಲೈಂಗಿಕ ಕಿರುಕುಳ ನೀಡುತ್ತಿರುವ  ಆರೋಪ ಕೇಳಿ ಬಂದ ಪ್ರಕರಣದಲ್ಲಿ ಸಂಡೂರ ತಾಲ್ಲೂಕಿನ ಸಿದ್ದಾಪೂರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ  ಕಾಮುಕ ಮುಖ್ಯ ಶಿಕ್ಷಕ ಟಿ.ಜಂಬಣ್ಣ ಅವರನ್ನು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಸುಭದ್ರಾದೇವಿ ಮತ್ತು ಆಪ್ತ ಸಮಾಲೋಚಕಿ ಸುಧಾ ಅವರ ವರದಿ ಆಧರಿಸಿ ಶಾಲಾ ಶಿಕ್ಷಣ ಇಲಾಖೆಯ  ಶಿಸ್ತು ಪ್ರಾಧಿಕಾರಿ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿ ಡಾ.ಇಮಾಮಸಾಬ್‌ ಅಕ್ಕಿ ಅವರು  ಅಮಾನತುಗೊಳಿಸಿ ಮಂಗಳವಾರ ಆದೇಶ ಹೊರಡಿಸಿದ್ದಾರೆ ಎಂದು ತಿಳಿದು ಬಂದಿದೆ. 

ಮುಖ್ಯ ಶಿಕ್ಷಕ ಟಿ.ಜಂಬಣ್ಣ ತಮ್ಮ ಶಾಲೆಯ ಬೇಕಾದ ವಿದ್ಯಾರ್ಥಿನಿಯರನ್ನು ಶಾಲೆಗೆ ಬೇಗ ಕರೆಯಿಸಿಕೊಂಡು ತನ್ನ ಕಛೇರಿಯ ಗ್ರಾಡ್ರೇಜ್‌ ಸರಿಸಿ ಜಾಗ ಸಂದಿಯ ಸ್ಥಳದಲ್ಲಿ ಮಕ್ಕಳಿಗೆ ನಿರಂತರವಾಗಿ  ಶಾಲೆಯಲ್ಲಿ ನಿತ್ಯವೂ ಲೈಂಗಿಕ ಕಿರುಕುಳ ನೀಡುವ ಜೊತೆಗೆ ಅಸಭ್ಯವಾಗಿ ವರ್ತಿಸುತ್ತಿದ್ದ ಮತ್ತು ಮಾನಸಿಕ,ದೈಹಿಕವಾಗಿ  ಪೀಡುಸುತ್ತಿರುವುದಾಗಿ ಕಂಡು ಬಂದಿದೆ. ಈ  ವಿಷಯವನ್ನು  ಪೋಷಕರಿಗೆ ಮತ್ತು ಸ್ನೇಹಿತರಿಗೆ ಹೇಳಬಾರದೆಂದು  ಜೀವ ಬೆದರಿಕೆ ಹಾಕುತ್ತಿದನ್ನು ಎನ್ನಲಾಗಿದೆ. ಸಂಡೂರ ಪೋಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯ, ಕಿರುಕುಳ ಅದರಲ್ಲೂ ಶಾಲಾ-ಕಾಲೇಜುಗಳಲ್ಲಿ ಶಿಕ್ಷಕರಿಂದಲೇ ವಿದ್ಯಾರ್ಥಿನಿಯರಿಗೆ ಕಿರುಕುಳ ಆರೋಪಗಳು ಕೇಳಿ ಬರುತ್ತಲೇ ಇರುತ್ತವೆ. ಮಹಿಳಾ ಸುರಕ್ಷತೆಗಾಗಿ ಎಷ್ಟೇ ಬಿಗಿ ನಿಯಮ ತಂದಿದ್ದರೂ, ಕಿರುಕುಳ ಮಾತ್ರ ಕಡಿಮೆಯಾಗದೇ ಇರುವುದು ವಿಪರ್ಯಾಸ ಸಂಗತಿ ಎನ್ನಬಹುದಾಗಿದೆ.

ಇಂತಹ ಕಾಮುಕ ಮುಖ್ಯ ಶಿಕ್ಷಕನ ವಿರುದ್ಧ ಕೂಡಲೇ ಕಾನೂನು ರೀತ್ಯಾ ಕ್ರಮ ಕೈಗೊಳ್ಳುವಂತೆ ಪೋಷಕರು ಮತ್ತು ಸ್ಥಳೀಯರು ಒತ್ತಾಯಿಸಿದ್ದಾರೆ.