LOCAL BREKING NEWS :”ಕುಕನೂರ| ಗುದ್ದೇಪ್ಪನಮಠದ ಜಾಗದಲ್ಲಿ ಸರ್ಕಾರಿ ಕಟ್ಟಡಗಳನ್ನು ನಿರ್ಮಿಸುವ  ಪ್ರಸ್ತಾಪ ಕೈ ಬಿಡಲು ಆಗ್ರಹಿಸಿ : ನಾಳೆ ಬೃಹತ್‌ ಪಾದಯಾತ್ರೆ”

By admin

“ಕುಕನೂರ| “ಗುದ್ದೇಪ್ಪನಮಠದ ಜಾಗದಲ್ಲಿ ಸರ್ಕಾರಿ ಕಟ್ಟಡಗಳನ್ನು ನಿರ್ಮಿಸುವ  ಪ್ರಸ್ತಾಪ ಕೈ ಬಿಡಲು ಆಗ್ರಹಿಸಿ : ನಾಳೆ ಬೃಹತ್‌ ಪಾದಯಾತ್ರೆ”

Contents
“ಕುಕನೂರ| “ಗುದ್ದೇಪ್ಪನಮಠದ ಜಾಗದಲ್ಲಿ ಸರ್ಕಾರಿ ಕಟ್ಟಡಗಳನ್ನು ನಿರ್ಮಿಸುವ  ಪ್ರಸ್ತಾಪ ಕೈ ಬಿಡಲು ಆಗ್ರಹಿಸಿ : ನಾಳೆ ಬೃಹತ್‌ ಪಾದಯಾತ್ರೆ”• ಸೆಕ್ಯುಲರ್‌ ವಾಯ್ಸ್‌ ನ್ಯೂಸ್‌ ಕುಕನೂರ :ಗುದ್ದೇಪ್ಪನಮಠದ ಜಾಗದಲ್ಲಿ ಸರ್ಕಾರಿ ಕಟ್ಟಡಗಳನ್ನು ನಿರ್ಮಿಸುವ  ಪ್ರಸ್ತಾಪ ಕೈ ಬಿಡಲು ಆಗ್ರಹಿಸಿ ನಾಳೆ ನ.7ರಂದು ಬೆಳಗ್ಗೆ11 ಗಂಟೆಗೆ ಗುದ್ನೆಪ್ಪನಮಠದ ರುದ್ರಮುನೇಶ್ವರ ದೇವಸ್ಥಾನದಿಂದ ಪಟ್ಟಣದ ಶಿರೂರ ವೀರಭದ್ರಪ್ಪ ಸರ್ಕಲ್‌ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ, ಬೇಡಿಕೆಗಳುಳ್ಳ ಮನವಿ ಪತ್ರ ತಹಸಿಲ್ದಾರ ಮುಖಾಂತರ ಜಿಲ್ಲಾಧಿಕಾರಿ  ಅವರಿಗೆ  ಸಲ್ಲಿಸಲಾಗುವುದೆಂದು ಗೋರ ಸೇನಾ ರಾಜ್ಯ ಪ್ರಧಾನ ಕಾರ್ಯದರ್ಶಿ ಸುರೇಶ ಬಳೂಟಗಿ ಮತ್ತು  ಮುಖಂಡ ಮಾರುತಿ ಗಾವರಾಳ್ ಅವರು ತಿಳಿಸಿದರು. ಈ ಕುರಿತು  ಗುರುವಾರ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಗುದ್ನೆಪ್ಪನಮಠ ಗ್ರಾಮಸ್ಥ ಮುಖಂಡರು,  ಪಟ್ಟಣದಿಂದ  3 ಕಿಲೋಮೀಟರ್ ದೂರವಿರುವ ಗುದ್ದೇಪ್ಪನ ಮಠಕ್ಕೆ ಸೇರಿದೆ ಎನ್ನಲಾದ  ಜಾಗದಲ್ಲಿ  ತಾಲ್ಲೂಕು ಮಿನಿ ವಿಧಾನಸೌಧ ಕಟ್ಟಡ, ತಾಲ್ಲೂಕು ನ್ಯಾಯಾಲಯ ಕಟ್ಟಡ, ಬುದ್ಧ ಬಸವ ಅಂಬೇಡ್ಕರ್ ಭವನ ಕಟ್ಟಡ ನಿರ್ಮಾಣ ಮಾಡಲು ಮತ್ತು ಜಿಲ್ಲಾ ಆಡಳಿತ ಗುದ್ನೆಪ್ಪನಮಠ ಗ್ರಾಮಸ್ಥರ ವಿರೋಧದ ನಡುವೆ ಸಿದ್ಧತೆ ನಡೆಸುತ್ತಿರುವದು ಸರಿಯಾದ ಕ್ರಮವಲ್ಲಎಂದು ಹೇಳಿದರು.88 ಎಕರೆ ಗುದ್ದೇಶ್ವರ ಸೇವಾದಾರರು ಮತ್ತು ಅರ್ಚಕರಿಗೆ ಮೀಸಲಿಟ್ಟಿರುವ ಜಾಗದಲ್ಲಿ ಸರ್ಕಾರಿ ಕಟ್ಟಡ ನಿರ್ಮಾಣ ಮಾಡದಂತೆ ಧಾರವಾಡ ಉಚ್ಚ ನ್ಯಾಯಾಲಯದಿಂದ ಈಗಾಗಲೇ  ತಡೆಯಾಜ್ಞೆ ಗ್ರಾಮಸ್ಥರು ತಂದಿದ್ದಾರೆ ̤ಗುದ್ನೇಪ್ಪನ ಮಠದ ಜಮೀನು ಪ್ರಕರಣಕ್ಕೆ ಸಂಬಂಧಿಸಿದಂತೆ, ಹೈಕೋರ್ಟ್ ನಲ್ಲಿ ಪ್ರಕರಣವು ವಿಚಾರಣಾ ಹಂತದಲ್ಲಿದೆ. ಈ ಬಗ್ಗೆ ಗುದ್ನೇಪ್ಪನ ಮಠ ಹಾಗೂ ಸುತ್ತಮುತ್ತಲಿನ ಗ್ರಾಮದ 12 ಜನರ ವಿರುದ್ದ ಕುಕನೂರು ತಹಶೀಲ್ದಾರ್ ಅವರು ಸಮನ್ಸ್ ಜಾರಿಮಾಡಿರುವದು ಖಂಡನೀಯ ಎಂದರು. ಗುದ್ನೆಪ್ಪನಮಠ ಗ್ರಾಮಸ್ಥರ ಇದರ ಬಗ್ಗೆ ಹೋರಾಟ ಮಾಡಲು ಹೋದರೆ ಪ್ರಮುಖ ಮುಖಂಡರಿಗೆ ಒಂದು ರೀತಿಯಲ್ಲಿ ಹತ್ತಿಕ್ಕುವ ಪ್ರಯತ್ನದ ಕೆಲಸವಾಗುತ್ತಿದೆ. 3-4 ಕಿ.ಮೀ ದೂರವಿರುವ ಸ್ಥಳದಲ್ಲಿ  ಸರ್ಕಾರಿ ಕಟ್ಟಡ ನಿರ್ಮಾಣ ಮಾಡುವ ಬದಲು ಕುಕನೂರು ಸಮೀಪದಲ್ಲಿ ಜಾಗ ಖರೀದಿಸಿ, ಸರ್ಕಾರಿ ಕಟ್ಟಡಗಳನ್ನು ಕಟ್ಟಿಕೊಳ್ಳಲಿ, ಪುಕ್ಸಟ್ಟೆ ಜಾಗಕ್ಕೇ ಅಥವಾ ಸೇವಾದಾರರು ಮತ್ತು ಅರ್ಚಕರಿಗೆ ಮೀಸಲಾಗಿರುವ ಜಾಗಕ್ಕೆ ಕೈ ಬೀಡಬೇಕೆಂದು ಆಗ್ರಹಿಸಿದರು.ಈ ಸಂದರ್ಭದಲ್ಲಿ ಮಂಜುನಾಥ್ ನಾಡಗೌಡ್ರು  ಮತ್ತು  ಲಕ್ಷ್ಮಣ್ ಕಾಳಿ ಅವರು ಮಾತನಾಡಿ, ಗ್ರಾಮಸ್ಥರ ಬೇಡ ಅಂದಮೇಲೆ ತಾಲ್ಲೂಕು ಮತ್ತು  ಜಿಲ್ಲಾಡಳಿತ ಕೈ ಹಾಕುವುದು ಏಕೆ?. ಯಾರು ಒತ್ತಡಕ್ಕೆ?. ಗುದ್ದೇಪ್ಪನಮಠ ಗ್ರಾಮದ ಗುದ್ದೇಶ್ವರ ದೇವಸ್ಥಾನ ಮಾತ್ರ ಮುಜರಾಯಿ ಇಲಾಖೆಗೆ ಸೇರಿದೆ. ಸರ್ವೇ ನಂ ೭೮ ಆಸ್ತಿ ಮುಜರಾಯಿ ಇಲಾಖೆಗೆ ಸೇರಿಲ್ಲ. ಈ ಆಸ್ತಿಯು ಗುದ್ದೇಶ್ವರ ಸೇವಾದಾರರು ಮತ್ತು ಅರ್ಚಕರ ಆಸ್ತಿಯಾಗಿದೆ. ಈ ಆಸ್ತಿ ಮೇಲೆ ಯಾರು ಕಣ್ಣು ಇದೆ. ಅದನ್ನು ಈ ಕೂಡಲೇ ಕೈ ಬಿಟ್ಟರೆ ಒಳ್ಳೆಯದು. ಕುಕನೂರ  ಪಟ್ಟಣದ ಸಮೀಪ ಸರ್ಕಾರಿ ಕಚೇರಿಗಳನ್ನು ನಿರ್ಮಾಣ ಮಾಡಲಿ, ಇದರಲ್ಲಿ ಯಾರು ಅಭ್ಯಂತರವಿಲ್ಲ. ಗುಪ್ಪನಮಠದ ಸರ್ವೇ ನಂ 78 ರಆಸ್ತಿ ಮೇಲೆ ಸರ್ಕಾರಿ ಕಟ್ಟಡ ನಿರ್ಮಾಣ ಬೇಡ. ಇದು ಗುಪ್ಪನಮಠ ಗ್ರಾಮಸ್ಥರ ಒಕ್ಕೂರಲ ಒತ್ತಾಯವಾಗಿದೆ ಎಂದರು.  ಸುದ್ದಿಗೋಷ್ಠಿಯಲ್ಲಿ ವಕೀಲೆ ಮಹೇಶ್ವರಿ ಸವಳಗಿಮಠ,  ಮಹೇಶ ಕಲ್ಮಠ, ಮಾರುತಿ ಗಾವರಾಳ್,  ಸಿದ್ದಿಯ್ಯ ಉಳ್ಳಾಗಡ್ಡಿ, ಕರಿಬಸಯ್ಯ ಬಿನ್ನಾಳ, ಶಿವುಕುಮಾರ್ ನಾಗಲಾಪುರ್ ಮಠ್, ಜಗನಾಥ್ ಭೋವಿ, ವಿನಾಯಕ್ ಯಾಳಗಿ, ವಿನಾಯಕ್ ಸರಗಣಚಾರ್, ಮಹೇಶ್ ಕಲ್ಮಠ, ಶರಣಯ್ಯ ಹುಣಸಿಮರದ, ಮಲ್ಲು ಚೌದ್ರಿ, ನಾಗಪ್ಪ ಕಲ್ಮನಿ, ಮಧು ಕಲ್ಮನಿ, ಶರಣಪ್ಪ ಕಾಳಿ, ಶಿವರಾಜ್ ಎಲ್ಲಪ್ಪ ಗೌಡ್ರು, ವೀರೇಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

• ಸೆಕ್ಯುಲರ್‌ ವಾಯ್ಸ್‌ ನ್ಯೂಸ್‌ ಕುಕನೂರ :

ಗುದ್ದೇಪ್ಪನಮಠದ ಜಾಗದಲ್ಲಿ ಸರ್ಕಾರಿ ಕಟ್ಟಡಗಳನ್ನು ನಿರ್ಮಿಸುವ  ಪ್ರಸ್ತಾಪ ಕೈ ಬಿಡಲು ಆಗ್ರಹಿಸಿ ನಾಳೆ ನ.7ರಂದು ಬೆಳಗ್ಗೆ11 ಗಂಟೆಗೆ ಗುದ್ನೆಪ್ಪನಮಠದ ರುದ್ರಮುನೇಶ್ವರ ದೇವಸ್ಥಾನದಿಂದ ಪಟ್ಟಣದ ಶಿರೂರ ವೀರಭದ್ರಪ್ಪ ಸರ್ಕಲ್‌ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ, ಬೇಡಿಕೆಗಳುಳ್ಳ ಮನವಿ ಪತ್ರ ತಹಸಿಲ್ದಾರ ಮುಖಾಂತರ ಜಿಲ್ಲಾಧಿಕಾರಿ  ಅವರಿಗೆ  ಸಲ್ಲಿಸಲಾಗುವುದೆಂದು ಗೋರ ಸೇನಾ ರಾಜ್ಯ ಪ್ರಧಾನ ಕಾರ್ಯದರ್ಶಿ ಸುರೇಶ ಬಳೂಟಗಿ ಮತ್ತು  ಮುಖಂಡ ಮಾರುತಿ ಗಾವರಾಳ್ ಅವರು ತಿಳಿಸಿದರು. 

ಈ ಕುರಿತು  ಗುರುವಾರ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಗುದ್ನೆಪ್ಪನಮಠ ಗ್ರಾಮಸ್ಥ ಮುಖಂಡರು,  ಪಟ್ಟಣದಿಂದ  3 ಕಿಲೋಮೀಟರ್ ದೂರವಿರುವ ಗುದ್ದೇಪ್ಪನ ಮಠಕ್ಕೆ ಸೇರಿದೆ ಎನ್ನಲಾದ  ಜಾಗದಲ್ಲಿ  ತಾಲ್ಲೂಕು ಮಿನಿ ವಿಧಾನಸೌಧ ಕಟ್ಟಡ, ತಾಲ್ಲೂಕು ನ್ಯಾಯಾಲಯ ಕಟ್ಟಡ, ಬುದ್ಧ ಬಸವ ಅಂಬೇಡ್ಕರ್ ಭವನ ಕಟ್ಟಡ ನಿರ್ಮಾಣ ಮಾಡಲು ಮತ್ತು ಜಿಲ್ಲಾ ಆಡಳಿತ ಗುದ್ನೆಪ್ಪನಮಠ ಗ್ರಾಮಸ್ಥರ ವಿರೋಧದ ನಡುವೆ ಸಿದ್ಧತೆ ನಡೆಸುತ್ತಿರುವದು ಸರಿಯಾದ ಕ್ರಮವಲ್ಲಎಂದು ಹೇಳಿದರು.

88 ಎಕರೆ ಗುದ್ದೇಶ್ವರ ಸೇವಾದಾರರು ಮತ್ತು ಅರ್ಚಕರಿಗೆ ಮೀಸಲಿಟ್ಟಿರುವ ಜಾಗದಲ್ಲಿ ಸರ್ಕಾರಿ ಕಟ್ಟಡ ನಿರ್ಮಾಣ ಮಾಡದಂತೆ ಧಾರವಾಡ ಉಚ್ಚ ನ್ಯಾಯಾಲಯದಿಂದ ಈಗಾಗಲೇ  ತಡೆಯಾಜ್ಞೆ ಗ್ರಾಮಸ್ಥರು ತಂದಿದ್ದಾರೆ ̤ಗುದ್ನೇಪ್ಪನ ಮಠದ ಜಮೀನು ಪ್ರಕರಣಕ್ಕೆ ಸಂಬಂಧಿಸಿದಂತೆ, ಹೈಕೋರ್ಟ್ ನಲ್ಲಿ ಪ್ರಕರಣವು ವಿಚಾರಣಾ ಹಂತದಲ್ಲಿದೆ. ಈ ಬಗ್ಗೆ ಗುದ್ನೇಪ್ಪನ ಮಠ ಹಾಗೂ ಸುತ್ತಮುತ್ತಲಿನ ಗ್ರಾಮದ 12 ಜನರ ವಿರುದ್ದ ಕುಕನೂರು ತಹಶೀಲ್ದಾರ್ ಅವರು ಸಮನ್ಸ್ ಜಾರಿಮಾಡಿರುವದು ಖಂಡನೀಯ ಎಂದರು. 

ಗುದ್ನೆಪ್ಪನಮಠ ಗ್ರಾಮಸ್ಥರ ಇದರ ಬಗ್ಗೆ ಹೋರಾಟ ಮಾಡಲು ಹೋದರೆ ಪ್ರಮುಖ ಮುಖಂಡರಿಗೆ ಒಂದು ರೀತಿಯಲ್ಲಿ ಹತ್ತಿಕ್ಕುವ ಪ್ರಯತ್ನದ ಕೆಲಸವಾಗುತ್ತಿದೆ. 3-4 ಕಿ.ಮೀ ದೂರವಿರುವ ಸ್ಥಳದಲ್ಲಿ  ಸರ್ಕಾರಿ ಕಟ್ಟಡ ನಿರ್ಮಾಣ ಮಾಡುವ ಬದಲು ಕುಕನೂರು ಸಮೀಪದಲ್ಲಿ ಜಾಗ ಖರೀದಿಸಿ, ಸರ್ಕಾರಿ ಕಟ್ಟಡಗಳನ್ನು ಕಟ್ಟಿಕೊಳ್ಳಲಿ, ಪುಕ್ಸಟ್ಟೆ ಜಾಗಕ್ಕೇ ಅಥವಾ ಸೇವಾದಾರರು ಮತ್ತು ಅರ್ಚಕರಿಗೆ ಮೀಸಲಾಗಿರುವ ಜಾಗಕ್ಕೆ ಕೈ ಬೀಡಬೇಕೆಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಮಂಜುನಾಥ್ ನಾಡಗೌಡ್ರು  ಮತ್ತು  ಲಕ್ಷ್ಮಣ್ ಕಾಳಿ ಅವರು ಮಾತನಾಡಿ, ಗ್ರಾಮಸ್ಥರ ಬೇಡ ಅಂದಮೇಲೆ ತಾಲ್ಲೂಕು ಮತ್ತು  ಜಿಲ್ಲಾಡಳಿತ ಕೈ ಹಾಕುವುದು ಏಕೆ?. ಯಾರು ಒತ್ತಡಕ್ಕೆ?. ಗುದ್ದೇಪ್ಪನಮಠ ಗ್ರಾಮದ ಗುದ್ದೇಶ್ವರ ದೇವಸ್ಥಾನ ಮಾತ್ರ ಮುಜರಾಯಿ ಇಲಾಖೆಗೆ ಸೇರಿದೆ. ಸರ್ವೇ ನಂ ೭೮ ಆಸ್ತಿ ಮುಜರಾಯಿ ಇಲಾಖೆಗೆ ಸೇರಿಲ್ಲ. ಈ ಆಸ್ತಿಯು ಗುದ್ದೇಶ್ವರ ಸೇವಾದಾರರು ಮತ್ತು ಅರ್ಚಕರ ಆಸ್ತಿಯಾಗಿದೆ. ಈ ಆಸ್ತಿ ಮೇಲೆ ಯಾರು ಕಣ್ಣು ಇದೆ. ಅದನ್ನು ಈ ಕೂಡಲೇ ಕೈ ಬಿಟ್ಟರೆ ಒಳ್ಳೆಯದು. ಕುಕನೂರ  ಪಟ್ಟಣದ ಸಮೀಪ ಸರ್ಕಾರಿ ಕಚೇರಿಗಳನ್ನು ನಿರ್ಮಾಣ ಮಾಡಲಿ, ಇದರಲ್ಲಿ ಯಾರು ಅಭ್ಯಂತರವಿಲ್ಲ. ಗುಪ್ಪನಮಠದ ಸರ್ವೇ ನಂ 78 ರಆಸ್ತಿ ಮೇಲೆ ಸರ್ಕಾರಿ ಕಟ್ಟಡ ನಿರ್ಮಾಣ ಬೇಡ. ಇದು ಗುಪ್ಪನಮಠ ಗ್ರಾಮಸ್ಥರ ಒಕ್ಕೂರಲ ಒತ್ತಾಯವಾಗಿದೆ ಎಂದರು.  

ಸುದ್ದಿಗೋಷ್ಠಿಯಲ್ಲಿ ವಕೀಲೆ ಮಹೇಶ್ವರಿ ಸವಳಗಿಮಠ,  ಮಹೇಶ ಕಲ್ಮಠ, ಮಾರುತಿ ಗಾವರಾಳ್,  ಸಿದ್ದಿಯ್ಯ ಉಳ್ಳಾಗಡ್ಡಿ, ಕರಿಬಸಯ್ಯ ಬಿನ್ನಾಳ, ಶಿವುಕುಮಾರ್ ನಾಗಲಾಪುರ್ ಮಠ್, ಜಗನಾಥ್ ಭೋವಿ, ವಿನಾಯಕ್ ಯಾಳಗಿ, ವಿನಾಯಕ್ ಸರಗಣಚಾರ್, ಮಹೇಶ್ ಕಲ್ಮಠ, ಶರಣಯ್ಯ ಹುಣಸಿಮರದ, ಮಲ್ಲು ಚೌದ್ರಿ, ನಾಗಪ್ಪ ಕಲ್ಮನಿ, ಮಧು ಕಲ್ಮನಿ, ಶರಣಪ್ಪ ಕಾಳಿ, ಶಿವರಾಜ್ ಎಲ್ಲಪ್ಪ ಗೌಡ್ರು, ವೀರೇಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.