” ನಂದೇ ಸರಿ ಎನ್ನುವ ಮಂಡೂಕಗಳು̤!” ⇒ಕೂಪಗೇಡಿತನ:
ಈರುಳ್ಳಿ ಮಾರುವವನೊಬ್ಬ ಬಂದ. ಈರುಳ್ಳಿ ಕೊಳ್ಳಲು ಮುಂದಾದೆ. ಆದರೆ ಆತನ ಬಳಿ ಫೋನ್ ಪೇ ಆಗಲಿ, ಗೂಗಲ್ ಪೇ ರೀತಿಯ ಯಾವುದೇ ಆನ್ಲೈನ್ ಆರ್ಥಿಕ ವ್ಯವಹಾರದ ಯಾವುದೇ ವ್ಯವಸ್ಥೆಯನ್ನು ಹೊಂದಿರಲಿಲ್ಲ. ನನ್ನ ಬಳಿ ನಗದು ಇರಲಿಲ್ಲ. ಹಾಗಾಗಿ ಈರುಳ್ಳಿ ವ್ಯಾಪಾರ ಸಾಧ್ಯವಾಗಲಿಲ್ಲ.
ನಾನೆಂದೆ, “ನೀವು ಯಾವುದಾದರೂ ಆನ್ಲೈನ್ ಪೇಮೆಂಟಿನ ವ್ಯವಸ್ಥೆ ಹೊಂದಿರಬೇಕು. ಈಗ ಅದೇ ಹೆಚ್ಚಿನ ಜನ ಬಳಸುವುದು.”
ಆತ ಹೇಳಿದ, “ಇಲ್ಲಾ ಸಾರ್. ಆನ್ಲೈನ್ ಸರಿ ಇಲ್ಲಾಂತ ಯಾರೂ ಉಪಯೋಗಿಸೋದೇ ಇಲ್ಲ. ಎಲ್ಲಾ ಕ್ಯಾಶೇ ಬಿಸಿನೆಸ್ ಮಾಡೋದು. ಯಾರೋ ಸ್ವಲ್ಪ ಜನ ಅಲ್ಲಿ ಇಲ್ಲಿ ಇದನ್ನು ಉಪಯೋಗಿಸೋದು.”
ನಾನು ವಾದಿಸದೇ ಇದ್ದರೂ ಆತ ಮಾತ್ರ ಆನ್ಲೈನ್ ಟ್ರಾನ್ಸಾಕ್ಷನ್ ಅತ್ಯಂತ ವಿರಳ. ಹಾಗೆ ನೋಡಿದರೆ ಎಲ್ಲರೂ ಈಗ ನಿಲ್ಲಿಸಿಯೇ ಬಿಟ್ಟಿದ್ದಾರೆ. ನಗದು ವ್ಯವಹಾರವೇ ಎಲ್ಲರೂ ಮಾಡುವುದು ಎಂದು ಖಡಾಖಂಡಿತವಾಗಿ ಹೇಳಿದ.
ಆತ ಅದರ ಬಗ್ಗೆ ಮಾತಾಡುವ ಉತ್ಸಾಹವನ್ನೂ ಕೂಡಾ ತೋರಲಿಲ್ಲ. ಅದರ ಬಗ್ಗೆ ತಿಳಿದುಕೊಂಡು ತಾನು ಅನುಸರಿಸುವ ಆಸಕ್ತಿಯನ್ನೂ ತೋರಲಿಲ್ಲ.
ತಾವು ನಂಬುವ, ತಾವು ಬಳಸುವ, ತಾವು ಹೇಳುವುದಷ್ಟೇ ಸತ್ಯ ಎಂದು ಉಳಿದುದನ್ನೆಲ್ಲಾ ನಿರಾಕರಿಸುವುದಕ್ಕೆ ಡಿನೈಯಲಿಸಂ ಅಥವಾ ಕೂಪಗೇಡಿತನ ಎಂದು ಕರೆಯುತ್ತಾರೆ.
ಈ ಸಮಸ್ಯೆ ಬಹಳಷ್ಟು ಮಂದಿಯಲ್ಲಿ ನಾನಾ ಸ್ವರೂಪಗಳಲ್ಲಿ ಇರುತ್ತದೆ.
ಈ ಸಮಸ್ಯೆ ಬಹಳಷ್ಟು ಮಂದಿಯಲ್ಲಿ ನಾನಾ ಸ್ವರೂಪಗಳಲ್ಲಿ ಇರುತ್ತದೆ.
• ಕೂಪಗೇಡಿಗಳ ಪ್ರಮುಖ ಲಕ್ಷಣಗಳೆಂದರೆ;
1. ತಮ್ಮಲ್ಲಿರುವ ಸಮಸ್ಯೆ ಅಥವಾ ಕೊರತೆಯನ್ನು ನಿರ್ಲಕ್ಷಿಸಬಹುದಾದಷ್ಟು ಸಣ್ಣದೆಂದು ಭಾವಿಸುವುದು.
2. ತಮ್ಮ ವರ್ತನೆಯನ್ನು, ನ್ಯೂನತೆ ಅಥವಾ ಕೊರತೆಯನ್ನು ಸಮರ್ಥಿಸಿಕೊಳ್ಳುವುದು.
3. ತಮ್ಮ ನ್ಯೂನತೆ, ಸಮಸ್ಯೆ, ವರ್ತನೆ, ಕೊರತೆಯೇ ಮೊದಲಾದ ಸರಿ ಮಾಡಿಕೊಳ್ಳಬೇಕಾದ ವಿಷಯದ ಬಗ್ಗೆ ಮಾತು ಮರೆಸುವುದು. ವಿಷಯ ಬಂದರೆ ವಿಷಯಾಂತರ ಮಾಡುವುದು. ಅದರ ಬಗ್ಗೆ ಯೋಚನೆ ಮಾಡಲೇ ಒಪ್ಪದಿರುವುದು.
4. ತಮ್ಮಲ್ಲಿ ಕೊರತೆ ಅಥವಾ ಸಮಸ್ಯೆಯಾಗಿರುವಂತ ವಿಷಯ ಬಂದರೆ ಗೊಂದಲಕ್ಕೆ ಈಡಾಗುವುದು ಮಾತ್ರವಲ್ಲದೇ, ವಾಸ್ತವವನ್ನು ಒಪ್ಪದೇ, ತಮ್ಮ ನಂಬುಗೆ ಮತ್ತು ಅಂದುಕೊಂಡಿರುವುದೇ ಸರಿ ಎನ್ನುವಂತೆ ವಾದಕ್ಕೆ ಮುಂದಾಗುವುದು, ಕೆಲವೊಮ್ಮೆ ವಾಗ್ದಾಳಿ ಮಾಡುವುದು.
ಫೇಸ್ಬುಕ್ಕಿನಲ್ಲಿ ಹಲವಾರು ಜನ ಹೀಗೆ ತಮ್ಮ ವಿಷಯವನ್ನು ಹೇಳಿರುತ್ತಾರೆ. ಅದನ್ನು ಯಾರಾದರೂ ಪ್ರಶ್ನಿಸಿದರೆ, ವಿಮರ್ಶಿಸಿದರೆ, ಖಂಡಿಸಿದರೆ, ಟೀಕಿಸಿದರೆ ವ್ಯಕ್ತಿಗತವಾಗಿ ಕೆರಳುತ್ತಾರೆ. ತಮ್ಮದ್ದನ್ನು ಸರಿ ಎನ್ನುವುದಕ್ಕೆ ಎಷ್ಟರ ಮಟ್ಟಿಗಾದರೂ ವ್ಯಕ್ತಿನಿಂದನೆಗೆ ಇಳಿಯುತ್ತಾರೆ.

ವ್ಯಕ್ತಿಯೊಬ್ಬನ ಅಹಂಕಾರವು ತಾನು ಸೋತೆನೆಂದು ಭಾವಿಸದಿರಲು ಮಾನಸಿಕವಾಗಿ ಮಾಡಿಕೊಳ್ಳುವಂತಹ ರಕ್ಷಣಾ ತಂತ್ರವೇ ಈ ಕೂಪಗೇಡಿತನ.
ಇದು ಎಷ್ಟರ ಮಟ್ಟಿಗೆ ಹೋಗುತ್ತದೆ ಎಂದರೆ ಸತ್ಯವನ್ನು ಒಪ್ಪಿಕೊಳ್ಳುವುದಕ್ಕೆ ಹಿಂದೇಟಾಕುವುದಲ್ಲ, ನಿರಾಕರಿಸಿಬಿಡುತ್ತದೆ.
ಏಕೆಂದರೆ ತಾನು ನಿರಾಕರಿಸಿರುವ ಸತ್ಯವನ್ನು ಒಪ್ಪಿಕೊಳ್ಳುವುದರಿಂದ ಆ ವ್ಯಕ್ತಿಯಲ್ಲಿ ಆತಂಕ, ಅಪರಾಧ ಪ್ರಜ್ಞೆ, ನಾಚಿಕೆ ಮತ್ತು ಭಯವೇ ಉಂಟಾಗಬಹುದು. ಇವುಗಳಿಂದ ತನ್ನತನವನ್ನು ರಕ್ಷಣೆ ಮಾಡಿಕೊಳ್ಳಲು ಮನಸ್ಸು ಕೂಪಗೇಡಿತನಕ್ಕೆ ಮೊರೆ ಹೋಗುತ್ತದೆ.
ಏಕೆಂದರೆ ತಾನು ನಿರಾಕರಿಸಿರುವ ಸತ್ಯವನ್ನು ಒಪ್ಪಿಕೊಳ್ಳುವುದರಿಂದ ಆ ವ್ಯಕ್ತಿಯಲ್ಲಿ ಆತಂಕ, ಅಪರಾಧ ಪ್ರಜ್ಞೆ, ನಾಚಿಕೆ ಮತ್ತು ಭಯವೇ ಉಂಟಾಗಬಹುದು. ಇವುಗಳಿಂದ ತನ್ನತನವನ್ನು ರಕ್ಷಣೆ ಮಾಡಿಕೊಳ್ಳಲು ಮನಸ್ಸು ಕೂಪಗೇಡಿತನಕ್ಕೆ ಮೊರೆ ಹೋಗುತ್ತದೆ.
ಎಷ್ಟೋ ಸಲ ಶ್ರದ್ಧಾ ನಂಬಿಕೆ ಎಂದು ಬಲವಾಗಿ ಆತುಕೊಂಡಿರುವ ವಿಷಯವು ಸತ್ಯಕ್ಕೆ ದೂರವಾದದ್ದು ಅಥವಾ ಅವೈಜ್ಞಾನಿಕವಾದದ್ದು ಎಂದು ನಿರೂಪಿತವಾಗುವಂತಹ ಸಂದರ್ಭ ಬರುತ್ತದೆ.
ಆಗ ವ್ಯಕ್ತಿಯು ತಾನು ವಿಶ್ವಾಸದಿಂದ ಆತುಕೊಂಡಿರುವ ವಿಷಯವನ್ನು ಎತ್ತಿ ಹಿಡಿಯುತ್ತಾ ತನ್ನ ವಿಷಯಕ್ಕೆ ವ್ಯತಿರಿಕ್ತವಾಗಿ ಇರುವಂತಹ ವಿಷಯವು ಸತ್ಯವಾಗಿದ್ದರೂ, ವೈಜ್ಞಾನಿಕವಾಗಿ ನಿರೂಪಿತವಾಗುವಂತಿದ್ದರೂ ಅದನ್ನು ಒಪ್ಪಲು ನಿರಾಕರಿಸುತ್ತಾನೆ.
ಏಕೆಂದರೆ ಅದರಿಂದ ಉಂಟಾಗುವ ಇಬ್ಬಂದಿತನದ ಒತ್ತಡದಿಂದ ತನ್ನ ಮನಸ್ಸನ್ನು ರಕ್ಷಿಸಿಕೊಳ್ಳಬೇಕಾಗುತ್ತದೆ. ಈ ಕೂಪಗೇಡಿತನವು ಅದಕ್ಕೆ ಸಹಾಯ ಮಾಡುತ್ತದೆ.

ಕೂಪಗೇಡಿತನದ ಸಾಮಾನ್ಯ ಲಕ್ಷಣಗಳೆಂದರೇನೇ ಪುರಾವೆಗಿಂತ ವಿಶ್ವಾಸವೇ ಹೆಚ್ಚಿನದು ಎನ್ನುವುದು, ಭಾವನಾತ್ಮಕವಾಗಿ ವಿಶ್ವಾಸವನ್ನು ತನ್ನದು ಎಂದು ಭಾವಿಸುವುದು.
ವಿಶೇಷವಾಗಿ ಸಂಸ್ಕೃತಿ, ಸಂಪ್ರದಾಯ, ಸಮುದಾಯವೇ ಮೊದಲಾದವುಗಳಿಂದ ಗುರುತಿಸಿಕೊಳ್ಳುವುದು.
ವಿಶೇಷವಾಗಿ ಸಂಸ್ಕೃತಿ, ಸಂಪ್ರದಾಯ, ಸಮುದಾಯವೇ ಮೊದಲಾದವುಗಳಿಂದ ಗುರುತಿಸಿಕೊಳ್ಳುವುದು.
ಕೂಪಗೇಡಿಗಳು ಸದಾ ಸಮರ್ಥಿಸಿಕೊಳ್ಳುವುದರಲ್ಲಿ ನಿಸ್ಸೀಮರು. ಧೂಮಪಾನಿ ಹೇಳಬಹುದು, “ಸಿಗರೇಟಿನಿಂದ ಕ್ಯಾನ್ಸರ್ ಬರತ್ತೆ ಎನ್ನುವುದು ಸುಳ್ಳು. ನಮ್ಮ ತಾತ ಯಾವಾಗಲೂ ಸಿಗರೇಟು ಸೇದುತ್ತಿದ್ದರು. 90 ವರ್ಷ ಬದುಕಿದ್ದರು.”
ಕುಡುಕನೊಬ್ಬ ಹೇಳುವನು, “ನಾನೇನೂ ವ್ಯಸನಿಯಲ್ಲ. ನಾನು ಯಾವಾಗ ಬೇಕಾದರೂ ನಿಲ್ಲಿಸುತ್ತೇನೆ” ಎಂದೋ ಅಥವಾ, “ಒತ್ತಡದಲ್ಲಿದ್ದಾಗ ಅಥವಾ ಸಂತೋಷವನ್ನು ಸೆಲಿಬ್ರೇಟ್ ಮಾಡಲು ಕುಡಿಯುತ್ತೇನೆ. ಯಾವಾಗಲೂ ಕುಡಿಯಬೇಕು ಎಂದಿಲ್ಲ.”
ಕೂಪಗೇಡಿತನದಿಂದ ಹೊರಬರಲು ಅವರ ಮನಸ್ಸಿನ ಸಮಸ್ಯೆ ಏನೆಂದರೆ, ನಿಜವನ್ನು ಒಪ್ಪಿಕೊಂಡರೆ ಹೊಣೆಗಾರಿಕೆಯನ್ನೂ ಹೊರಬೇಕು.
ಸಿಗರೇಟು ಸೇವನೆ ಹಾನಿ ಎಂದಾದರೆ ಅದನ್ನು ಬಿಡುವ ಪ್ರಯತ್ನ ಮಾಡಬೇಕು. ಅದು ಕಷ್ಟ ಮತ್ತು ಹೊಣೆಗಾರಿಕೆ. ಅದರಿಂದೇನೂ ಸಮಸ್ಯೆ ಆಗಲ್ಲ ಎಂದುಬಿಟ್ಟರೆ ಕಷ್ಟ ಪಡುವಷ್ಟಿರುವುದಿಲ್ಲ.
ತನ್ನ ಅಹಂಕಾರವನ್ನು ರಕ್ಷಿಸಿಕೊಳ್ಳಬೇಕು.
ಸಿಗರೇಟು ಸೇವನೆ ಹಾನಿ ಎಂದಾದರೆ ಅದನ್ನು ಬಿಡುವ ಪ್ರಯತ್ನ ಮಾಡಬೇಕು. ಅದು ಕಷ್ಟ ಮತ್ತು ಹೊಣೆಗಾರಿಕೆ. ಅದರಿಂದೇನೂ ಸಮಸ್ಯೆ ಆಗಲ್ಲ ಎಂದುಬಿಟ್ಟರೆ ಕಷ್ಟ ಪಡುವಷ್ಟಿರುವುದಿಲ್ಲ.
ತನ್ನ ಅಹಂಕಾರವನ್ನು ರಕ್ಷಿಸಿಕೊಳ್ಳಬೇಕು.
ವೈಚಾರಿಕವಾಗಿ ಮತ್ತು ವೈಜ್ಞಾನಿಕವಾಗಿ ಆಲೋಚಿಸಲು ಸಾಧ್ಯವಾಗುವಂತಹ ಶಿಕ್ಷಣ ದೊರಕಿದರೆ ಒಂದು ಹಂತಕ್ಕೆ ಕೂಪಗೇಡಿತನದಿಂದ ಹೊರಗೆ ಬರಬಹುದು. ಆದರೆ, ಗ್ಯಾರಂಟಿ ಇಲ್ಲ.
ಏಕೆಂದರೆ ಕೂಪಗೇಡಿತನವು ತೀವ್ರವಾಗಿರುವ ಪಕ್ಷದಲ್ಲಿ ಶಿಕ್ಷಣವನ್ನು ಬರಿಯ ಅಂಕ ಮತ್ತು ಅರ್ಹತಾಪತ್ರಕ್ಕೆ ಮೀಸಲಿಟ್ಟುಕೊಂಡು ಕಲಿಕೆಯನ್ನು ತಮ್ಮೊಳಗೆ ತೆಗೆದುಕೊಳ್ಳುವುದೇ ಇಲ್ಲ.
ಏಕೆಂದರೆ ಕೂಪಗೇಡಿತನವು ತೀವ್ರವಾಗಿರುವ ಪಕ್ಷದಲ್ಲಿ ಶಿಕ್ಷಣವನ್ನು ಬರಿಯ ಅಂಕ ಮತ್ತು ಅರ್ಹತಾಪತ್ರಕ್ಕೆ ಮೀಸಲಿಟ್ಟುಕೊಂಡು ಕಲಿಕೆಯನ್ನು ತಮ್ಮೊಳಗೆ ತೆಗೆದುಕೊಳ್ಳುವುದೇ ಇಲ್ಲ.
ಕೂಪಗೇಡಿತನದ ಫಲವಾಗಿ ವ್ಯಕ್ತಿ ತನ್ನ ಬೆಳವಣಿಗೆ ಮತ್ತು ವಿಕಾಸವನ್ನು ತಾನೇ ನಿರಾಕರಿಸಿಕೊಳ್ಳುತ್ತಾನೆ.
ಎಷ್ಟೋ ಸಲ ಇದು ಸಂಬಂಧಗಳನ್ನು ಹಾಳು ಮಾಡುತ್ತದೆ.
ಎಷ್ಟೋ ಸಲ ಇದು ಸಂಬಂಧಗಳನ್ನು ಹಾಳು ಮಾಡುತ್ತದೆ.