BIG NEWS :”ಕೊಪ್ಪಳ |ಬಲ್ಡೋಟಾ ಕಾರ್ಖಾನೆ ವಿಸ್ತರಣೆ ಹಾಗೂ ಹೊಸ ಕಾರ್ಖಾನೆಗಳನ್ನು ಸ್ಥಾಪಿಸುವುದಕ್ಕೆ ವಿರೋಧ :  7ನೇ ದಿನದ  ಅನಿರ್ದಿಷ್ಟಾವಧಿ ಧರಣಿಗೆ ವಿವಿಧ ಸಂಘಟನೆಗಳ ಬೆಂಬಲ”

By admin

“ಕೊಪ್ಪಳ |ಬಲ್ಡೋಟಾ ಕಾರ್ಖಾನೆ ವಿಸ್ತರಣೆ ಹಾಗೂ ಹೊಸ ಕಾರ್ಖಾನೆಗಳನ್ನು ಸ್ಥಾಪಿಸುವುದಕ್ಕೆ ವಿರೋಧ :  7ನೇ ದಿನದ  ಅನಿರ್ದಿಷ್ಟಾವಧಿ ಧರಣಿಗೆ ವಿವಿಧ ಸಂಘಟನೆಗಳ ಬೆಂಬಲ”

• ಸೆಕ್ಯುಲರ್‌ ವಾಯ್ಸ್‌ ನ್ಯೂಸ್‌ ಕೊಪ್ಫಳ: 

ಬಲ್ಡೋಟಾ ಕಾರ್ಖಾನೆ ವಿಸ್ತರಣೆ ಹಾಗೂ ಹೊಸ ಕಾರ್ಖಾನೆಗಳನ್ನು ಸ್ಥಾಪಿಸುವುದನ್ನು ವಿರೋಧಿಸಿ  ಕೊಪ್ಪಳ ಜಿಲ್ಲಾ ಬಚಾವೋ ಆಂದೋಲನ ಹಾಗೂ ಪರಿಸರ ಹಿತರಕ್ಷಣಾ ವೇದಿಕೆ ಜಂಟಿ ಕ್ರಿಯಾ ಸಮಿತಿ ನಗರಸಭೆ ಸಂಕೀರ್ಣದ ಮುಂದೆ ಹಲವು ದಿನಗಳಿಂದ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಮುಂದುವರೆಸಿವೆ.

ಬಲ್ಡೋಟಾ, ಕಿರ್ಲೋಸ್ಕರ್, ಕಲ್ಯಾಣಿ, ಮುಕುಂದ ಸುಮಿ, ಎಕ್ಸ್ ಇಂಡಿಯಾ ಸೇರಿ ಎಲ್ಲಾ ಕಾರ್ಖಾನೆಗಳ ವಿಸ್ತೀರ್ಣ ಮತ್ತು ಆರಂಭವನ್ನು ವಿರೋಧಿಸಿ ಅನಿರ್ದಿಷ್ಟಾವಧಿ ಧರಣಿಯ 7ನೇ ದಿನ ಕರ್ನಾಟಕ ಮಾದಿಗ ರಕ್ಷಣಾ ವೇದಿಕೆ (ಕೆ.ಎಂ.ಆರ್.ವಿ), ಕರ್ನಾಟಕ ಜನಶಕ್ತಿ ಹಾಗೂ ಧರಣಿ ಕಲಾ ಬಳಗದ ವತಿಯಿಂದ ಗುರುವಾರ  ಬೆಂಬಲ ಸೂಚಿಸಿದರು.

ಕೆ.ಎಂ.ಆರ್.ವಿ ರಾಜ್ಯಾಧ್ಯಕ್ಷ ಕರಿಯಪ್ಪ ಗುಡಿಮನಿ  ಅವರು ಮಾತನಾಡಿ,  ಜಿಲ್ಲೆಯ ಉಜ್ವಲ ಭವಿಷ್ಯ ನಿರ್ಮಾಣ ಮಾಡಬೇಕೆಂದು ಜಿಲ್ಲೆಯ ಜನರು ನಿಮ್ಮನ್ನು ಗೆಲ್ಲಿಸಿದ್ದಾರೆ ಎಂದು ಸಂಸದ ರಾಜಶೇಖರ ಹಿಟ್ನಾಳ, ಶಾಸಕ ರಾಘವೇಂದ್ರ ಹಿಟ್ನಾಳ, ಮುಖ್ಯಮಂತ್ರಿ ಆರ್ಥಿಕ ಸಲಹೆಗಾರರು ಬಸವರಾಜ ರಾಯರಡ್ಡಿ ಮತ್ತು ಸಚಿವ ಶಿವರಾಜ ತಂಗಡಗಿ ಅವರನ್ನು ಉಲ್ಲೇಖ ಮಾಡಿ, ಇಲ್ಲಿನ ಲಕ್ಷಗಟ್ಟಲೆ ಜನರ ಆರೋಗ್ಯ ಬಲಿಕೊಟ್ಟು ಯಾವ ಸಾಧನೆ ಮಾಡುತ್ತಿದ್ದೀರಿ ಎಂದು ಕಿಡಿಕಾರಿದರು.

ಗವಿಶ್ರೀಗಳು ಬಲ್ಡೋಟಾ ವಿಸ್ತರಣೆ ತಡೆ ಆದೇಶ ತರಬೇಕೆಂದು ಮಾಡಿದ ಧರ್ಮಾದೇಶಕ್ಕೆ ಈವರೆಗೆ ಯಾಕೆ ಸರ್ಕಾರದಿಂದ ಆದೇಶ ತಂದಿಲ್ಲ. ಎಂಟು ತಿಂಗಳಿಂದ ಕಾಯ್ದ ಜನರ ತಾಳ್ಮೆ ಕಟ್ಟೆಯೊಡೆಯುವ ಮುಂಚೆ ಎಚ್ಚೆತ್ತುಕೊಳ್ಳಿ. ಜಿಲ್ಲಾ ಮಂತ್ರಿ ಶಿವರಾಜ ತಂಗಡಗಿ ನಾನು ಆಟದಲ್ಲಿಲ್ಲ ಎನ್ನುವಂತೆ ನಡೆದುಕೊಳ್ಳುತ್ತಿದ್ದಾರೆ. ಜಿಲ್ಲಾ ಕೇಂದ್ರ, 20 ಬಾಧಿತ ಹಳ್ಳಿಗಳ ಜನರ ಗೋಳು ಕೇಳದೆ ನೀವು ಎಲ್ಲಿದ್ದೀರಿ. ಈ ಜನರ ಹೋರಾಟ ನಿಮಗೆ ಸಂಬಂಧವಿಲ್ಲವೇ, ನೀವು ಒಂದು ವೇಳೆ ಈ ಹೋರಾಟದ ಬೇಡಿಕೆಗೆ ಶೀಘ್ರ ಸ್ಪಂದನೆ ಮಾಡಿ ಬಲ್ಡೋಟಾ ವಿಸ್ತರಣೆ ನಿಲ್ಲಿಸದೇ ಹೋದರೆ ಮುಂದೆ ಕೆ.ಎಂ.ಆರ್.ವಿ ಬಲಿಷ್ಷ ಹೋರಾಟ ಕಟ್ಟಿ ಚಳುವಳಿಗೆ ಕರೆ ನೀಡಬೇಕಾಗುತ್ತದೆಂದು ಎಚ್ಚರಿಕೆ ನೀಡಿದರು. 

ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ನಜೀರಸಾಬ ಮೂಲಿಮನಿ ಅವರು  ಮಾತನಾಡಿ,  ಬಸಾಪುರ ಕೆರೆಗೆ ಸುತ್ತಲಿನ ಸಾವಿರಾರು ಜಾನುವಾರು, ಕುರಿಗಳು ನೀರು ಕುಡಿಯಲು ನುಗ್ಗಿದಾಗ ಬಲ್ಡೋಟ ಮೂಲದ ಎಂಎಸ್ಪಿಎಲ್ ಕಾರ್ಖಾನೆ ಗೂಂಡಾಗಳು ಹಸುಗಳ ಮೇಲೆ, ದನಗಾಹಿಗಳ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿದರು. ಕುರಿಗಾಹಿಗಳ ಮೇಲೆ, ಹೋರಾಟಗಾರರ ಮೇಲೆ ಹಲ್ಲೆ ಮಾಡಿದ್ದಲ್ಲದೆ, ಪೊಲೀಸ್ ಕೇಸ್ ಹಾಕಿದರು. ಇಲ್ಲಿನ ಜಿಲ್ಲಾ ಆಡಳಿತ ಕಾರ್ಖಾನೆ ಏಜಂಟಾಗಿ ಹೋಗಿದೆ. ರೋಸಿಹೋದ ಜನ ಬಂಡೇಳುವ ಕಾಲ ದೂರವಿಲ್ಲ ಆಕ್ರೋಶ ವ್ಯಕ್ತಪಡಿಸಿದರು.

 ಇದೇ ಸಂದರ್ಭದಲ್ಲಿ ಕರ್ನಾಟಕ ಜನಶಕ್ತಿ ಸಂಘಟನೆಯ ಕುಮಾರ ಸಮತಳ ಅವರು ಹೋರಾಟವನ್ನು ಬೆಂಬಲಿಸಿ ಮಾತನಾಡಿದರು.

ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹದಲ್ಲಿ ಸಾಹಿತಿ ಅಲ್ಲಮಪ್ರಭು ಬೆಟ್ಟದೂರು, ಕೆ.ಬಿ. ಗೋನಾಳ, ಡಿ.ಎಂ.ಬಡಿಗೇರ, ಡಿ.ಎಚ್.ಪೂಜಾರ, ಮಖಬೂಲ್ ರಾಯಚೂರು, ರವಿ ಕಾಂತನವರ, ಈಶ್ವರ ಹತ್ತಿ, ಬಸವರಾಜ ನರೇಗಲ್ ನೇತೃತ್ವ ವಹಿಸಿದ್ದರು. ಶ್ರಮಿಕ ಶಕ್ತಿ ಸಂಘಟನೆಯ ರವಿ ಮೋಹನ  ಮುಖಂಡರಾದ ಮುದಕಪ್ಪ ಹೊಸಮನಿ, ಎಂ.ಡಿ. ಸಿರಾಜ್ ಸಿದ್ದಾಪುರ ಮಾತನಾಡಿದರು.

ಈ ವೇಳೆ ಅನ್ಸಾರ ಪವನ್, ಯಮನೂರಪ್ಪ ವಕೀಲ, ಕ್ರಾಂತಿ ಗೀತೆ ಹಾಡಿದ ಗೌರಿ ಗೋನಾಳ, ಪ್ರೇಮಾ ಎಚ್, ಕವಿತಾ ಬಿ. ಮಮತಾಜ ಬೇಗಂ, ಭೀಮವ್ವ ಎಸ್.ಕೆ. ನೀಲವ್ವ, ಬಸಮ್ಮ ಕಿಶೋರಿ ಸಂಘಟನೆಯ ಸುಜಾತ, ಕೆ.ವಿ.ಎಸ್. ಸಂಘಟನೆಯ ಕೆ. ದುರುಗೇಶ, ವೀರೇಶ ಕರ್ನಾಟಕ ಜನ ಶಕ್ತಿಯ ಚನ್ನಮ್ಮ, ರಿಝ್ವಾನಾ, ಅಲಿಸಾಬ, ಬ ಉಮೇಶ,  ಹೋರಾಟಗಾರ ಧರ್ಮರಾಜ ಗೋನಾಳ, ಪಕೀರಸ್ವಾಮಿ, ಸಂಜೀವಮೂರ್ತಿ, ಸುಂಕಪ್ಪ ಮೀಸಿ, ಗವಿಸಿದ್ದಪ್ಪ ಹಲಿಗಿ, ನಾಗರಾಜ ಹೊಸಳ್ಳಿ, ಯಮನವ್ವ ಚಹ್ಹಳ್ಳೂರ, ಶೋಭಾ, ಎಸ್ ಮಹಾದೇವಪ್ಪ ಮಾವಿನಮಡು, ಚನ್ನಬಸಪ್ಪ ಅಪ್ಪಣ್ಣವರ, ನವಾಜ್ ಮಣಿಯಾರ, ಯಲ್ಲಪ್ಪ ಸಿದ್ದರು, ಯಮನೂರಪ್ಪ ಹಾಲಳ್ಳಿ ಬಸಾಪುರ, ರಾಮಪ್ಪ ಎಂ.ಜಿ. ಗೋಣಿಬಸಪ್ಪ, ಭರಮಾಜಿ, ಪ್ರಕಾಶ, ರಾಮಲಿಂಗಯ್ಯ ಶಾಸ್ತ್ರಿಮಠ, ಸಂಜಯದಾಸ ಚನ್ನದಾಸರ, ಭೀಮಪ್ಪ ಯಲಬುರ್ಗಿ, ಎಂಡಿ ಸಿರಾಜ್ ಮೂಲಿಮನಿ, ವಿರುಪಾಕ್ಷಿ. ಗಾಳೆಪ್ಪ ಎನ್. ಕೆ ಸೇರಿದಂತೆ ಹಲವರು ಭಾಗವಹಿಸಿದ್ದರು.