LOCAL EXPRESS: “ಲಿಂಗಸುಗೂರು| ಬಿಲ್ ಕಲೆಕ್ಟರ್ ಯೊಬ್ಬರಿಂದ ಜನರ ಟ್ಯಾಕ್ಸ್ ಹಣ ಗುಳಂ ಮಾಡಿದ ಆರೋಪ: ಸ್ಥಳೀಯ ಮುಖಂಡರಿಂದ ಹೋರಾಟದ ಎಚ್ಚರಿಕೆ”

By admin

“ಲಿಂಗಸುಗೂರು| ಬಿಲ್ ಕಲೆಕ್ಟರ್ ಯೊಬ್ಬರಿಂದ  ಜನರ ಟ್ಯಾಕ್ಸ್ ಹಣ ಗುಳಂ ಮಾಡಿದ ಆರೋಪ: ಸ್ಥಳೀಯ ಮುಖಂಡರಿಂದ ಹೋರಾಟದ ಎಚ್ಚರಿಕೆ”

Contents
“ಲಿಂಗಸುಗೂರು| ಬಿಲ್ ಕಲೆಕ್ಟರ್ ಯೊಬ್ಬರಿಂದ  ಜನರ ಟ್ಯಾಕ್ಸ್ ಹಣ ಗುಳಂ ಮಾಡಿದ ಆರೋಪ: ಸ್ಥಳೀಯ ಮುಖಂಡರಿಂದ ಹೋರಾಟದ ಎಚ್ಚರಿಕೆ”• ಸೆಕ್ಯುಲರ್‌ ವಾಯ್ಸ್‌ ನ್ಯೂಸ್‌ ಲಿಂಗಸುಗೂರು:ತಾಲೂಕಿನ ರೋಡಬಂಡಾ ಯುಕೆಪಿ ಗ್ರಾಮ ಪಂಚಾಯತ್ ಬಿಲ್ ಕಲೆಕ್ಟರ್ ವಿರುದ್ಧ ಗಂಭೀರ ಆರೋಪ ಕೇಳಿ ಬಂದಿದೆ. ಪಂಚಾಯತ್ ವ್ಯಾಪ್ತಿಯ ಹಳ್ಳಿಗಳಲ್ಲಿ ವಸೂಲಿಯಾದ ಸಾರ್ವಜನಿಕ ಹಣವನ್ನು ಪಂಚಾಯತ್ ಖಾತೆಗೆ ಜಮಾ ಮಾಡದೇ, ಸ್ವಂತ ಪ್ರಯೋಜನಕ್ಕಾಗಿ ದುರುಪಯೋಗ ಪಡಿಸಿಕೊಂಡಿದ್ದಾರೆ ಎಂಬ ದೂರುಗಳು ಕೇಳಿ ಬಂದಿದೆ.ಕಳೆದ ಹತ್ತು ವರ್ಷಗಳಿಂದ ಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿರುವ ಬಿಲ್ ಕಲೆಕ್ಟರ್ ವಿರುದ್ಧ ಗ್ರಾಮಸ್ಥರಿಂದ ಅನೇಕ ಬಾರಿ ದೂರಗಳು ಬಂದಿದ್ದರೂ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ ಎಂಬ ಆರೋಪವೂ ಇದೆ. 2025ರ ಏಪ್ರಿಲ್‌ರಿಂದ ಅಕ್ಟೋಬರ್‌ವರೆಗೆ ಆರು ಹಳ್ಳಿಗಳಲ್ಲಿ ತೆರಿಗೆ (ಟ್ಯಾಕ್ಸ್‌) ವಸೂಲಿ ಮಾಡಿದರೂ, ಅದರಲ್ಲಿ 4 ರಿಂದ 5 ಲಕ್ಷ ರೂ.ಗಳನ್ನು ಪಂಚಾಯತ್ ಖಾತೆಗೆ ಜಮಾ ಮಾಡದೇ ಸ್ವಂತ ಖರ್ಚಿಗೆ ಬಳಸಿಕೊಂಡಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.ಅಲ್ಲದೆ ಇಂದಿರಾ ಆವಾಸ್, ಬಸವ ವಸತಿ, ಅಂಬೇಡ್ಕರ್, ಪ್ರಧಾನಮಂತ್ರಿ ಆವಾಸ್ ಯೋಜನೆಗಳ ಫಲಾನುಭವಿಗಳ ಮನೆಗಳಿಗೆ ಸಂಬಂಧಿಸಿದ ಜಿಪಿಎಸ್ ಪ್ರಕ್ರಿಯೆಯಲ್ಲಿ ಕೂಡಾ ಅವ್ಯವಸ್ಥೆ ನಡೆದಿದೆ ಎಂಬ ದೂರುಗಳು ಕೇಳಿ ಬರುತ್ತಿವೆ. ಫಲಾನುಭವಿಗಳು ದಿನಪತ್ರಿ ಕೆಲಸ ಬಿಟ್ಟು ಪಂಚಾಯತ್ ಕಚೇರಿಗೆ ಸುತ್ತಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.ಸ್ಥಳೀಯರು ಈ ಕುರಿತು ಇಒ ಅವರಿಗೆ ಹಲವಾರು ಬಾರಿ ಮಾಹಿತಿ ನೀಡಿದರೂ, ಯಾವುದೇ ಕ್ರಮ ಕೈಗೊಳ್ಳದಿರುವುದು ಜನರ ಅಸಮಾಧಾನಕ್ಕೆ ಕಾರಣವಾಗಿದೆ.ಸರ್ಕಾರಿ ಹಣವನ್ನು ದುರುಪಯೋಗ ಮಾಡಿದ ವ್ಯಕ್ತಿಯ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳದಿದ್ದರೆ, ನಾವು ಉಗ್ರ ಹೋರಾಟಕ್ಕೆ ಮುಂದಾಗುತ್ತೇವೆ” ಸ್ಥಳೀಯ ಮುಖಂಡರು  ಎಚ್ಚರಿಸಿದರು

• ಸೆಕ್ಯುಲರ್‌ ವಾಯ್ಸ್‌ ನ್ಯೂಸ್‌ ಲಿಂಗಸುಗೂರು:

ತಾಲೂಕಿನ ರೋಡಬಂಡಾ ಯುಕೆಪಿ ಗ್ರಾಮ ಪಂಚಾಯತ್ ಬಿಲ್ ಕಲೆಕ್ಟರ್ ವಿರುದ್ಧ ಗಂಭೀರ ಆರೋಪ ಕೇಳಿ ಬಂದಿದೆ. ಪಂಚಾಯತ್ ವ್ಯಾಪ್ತಿಯ ಹಳ್ಳಿಗಳಲ್ಲಿ ವಸೂಲಿಯಾದ ಸಾರ್ವಜನಿಕ ಹಣವನ್ನು ಪಂಚಾಯತ್ ಖಾತೆಗೆ ಜಮಾ ಮಾಡದೇ, ಸ್ವಂತ ಪ್ರಯೋಜನಕ್ಕಾಗಿ ದುರುಪಯೋಗ ಪಡಿಸಿಕೊಂಡಿದ್ದಾರೆ ಎಂಬ ದೂರುಗಳು ಕೇಳಿ ಬಂದಿದೆ.

ಕಳೆದ ಹತ್ತು ವರ್ಷಗಳಿಂದ ಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿರುವ ಬಿಲ್ ಕಲೆಕ್ಟರ್ ವಿರುದ್ಧ ಗ್ರಾಮಸ್ಥರಿಂದ ಅನೇಕ ಬಾರಿ ದೂರಗಳು ಬಂದಿದ್ದರೂ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ ಎಂಬ ಆರೋಪವೂ ಇದೆ. 2025ರ ಏಪ್ರಿಲ್‌ರಿಂದ ಅಕ್ಟೋಬರ್‌ವರೆಗೆ ಆರು ಹಳ್ಳಿಗಳಲ್ಲಿ ತೆರಿಗೆ (ಟ್ಯಾಕ್ಸ್‌) ವಸೂಲಿ ಮಾಡಿದರೂ, ಅದರಲ್ಲಿ 4 ರಿಂದ 5 ಲಕ್ಷ ರೂ.ಗಳನ್ನು ಪಂಚಾಯತ್ ಖಾತೆಗೆ ಜಮಾ ಮಾಡದೇ ಸ್ವಂತ ಖರ್ಚಿಗೆ ಬಳಸಿಕೊಂಡಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಅಲ್ಲದೆ ಇಂದಿರಾ ಆವಾಸ್, ಬಸವ ವಸತಿ, ಅಂಬೇಡ್ಕರ್, ಪ್ರಧಾನಮಂತ್ರಿ ಆವಾಸ್ ಯೋಜನೆಗಳ ಫಲಾನುಭವಿಗಳ ಮನೆಗಳಿಗೆ ಸಂಬಂಧಿಸಿದ ಜಿಪಿಎಸ್ ಪ್ರಕ್ರಿಯೆಯಲ್ಲಿ ಕೂಡಾ ಅವ್ಯವಸ್ಥೆ ನಡೆದಿದೆ ಎಂಬ ದೂರುಗಳು ಕೇಳಿ ಬರುತ್ತಿವೆ. ಫಲಾನುಭವಿಗಳು ದಿನಪತ್ರಿ ಕೆಲಸ ಬಿಟ್ಟು ಪಂಚಾಯತ್ ಕಚೇರಿಗೆ ಸುತ್ತಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಸ್ಥಳೀಯರು ಈ ಕುರಿತು ಇಒ ಅವರಿಗೆ ಹಲವಾರು ಬಾರಿ ಮಾಹಿತಿ ನೀಡಿದರೂ, ಯಾವುದೇ ಕ್ರಮ ಕೈಗೊಳ್ಳದಿರುವುದು ಜನರ ಅಸಮಾಧಾನಕ್ಕೆ ಕಾರಣವಾಗಿದೆ.

ಸರ್ಕಾರಿ ಹಣವನ್ನು ದುರುಪಯೋಗ ಮಾಡಿದ ವ್ಯಕ್ತಿಯ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳದಿದ್ದರೆ, ನಾವು ಉಗ್ರ ಹೋರಾಟಕ್ಕೆ ಮುಂದಾಗುತ್ತೇವೆ” ಸ್ಥಳೀಯ ಮುಖಂಡರು  ಎಚ್ಚರಿಸಿದರು