“ಕುಕನೂರ| ತಾಲ್ಲೂಕು ಕಟ್ಟಡಗಳ ನಿರ್ಮಾಣ ವಿಚಾರ : ರಾಜಕೀಯ ಬೇಡ, ಅಭಿವೃದ್ಧಿಗೆ ಸಹಕರಿಸಿ.! ಕೆಲ ಬಿಜೆಪಿಗರಿಗೆ ಟಾಂಗ್‌-ಕಾಂಗ್ರೇಸ್‌  ಮುಖಂಡ ಯಮನೂರಪ್ಪ ಕಟ್ಟಿಮನಿ ಹೇಳಿಕೆ”

By admin

“ಕುಕನೂರ| ತಾಲ್ಲೂಕು ಕಟ್ಟಡಗಳ ನಿರ್ಮಾಣ ವಿಚಾರ : ರಾಜಕೀಯ ಬೇಡ, ಅಭಿವೃದ್ಧಿಗೆ ಸಹಕರಿಸಿ.! ಕೆಲ ಬಿಜೆಪಿಗರಿಗೆ ಟಾಂಗ್‌ -ಕಾಂಗ್ರೇಸ್‌  ಮುಖಂಡ ಯಮನೂರಪ್ಪ ಕಟ್ಟಿಮನಿ ಹೇಳಿಕೆ”

Contents
“ಕುಕನೂರ| ತಾಲ್ಲೂಕು ಕಟ್ಟಡಗಳ ನಿರ್ಮಾಣ ವಿಚಾರ : ರಾಜಕೀಯ ಬೇಡ, ಅಭಿವೃದ್ಧಿಗೆ ಸಹಕರಿಸಿ.! ಕೆಲ ಬಿಜೆಪಿಗರಿಗೆ ಟಾಂಗ್‌ -ಕಾಂಗ್ರೇಸ್‌  ಮುಖಂಡ ಯಮನೂರಪ್ಪ ಕಟ್ಟಿಮನಿ ಹೇಳಿಕೆ”• ಸೆಕ್ಯುಲರ್‌ ವಾಯ್ಸ್‌ ನ್ಯೂಸ್‌ ಕುಕನೂರ:ನೂತನ ತಾಲೂಕಿನ ಕಟ್ಟಡಗಳ ನಿರ್ಮಾಣ ಕುರಿತ ಕಾರ್ಯಗಳು ಸಾರ್ವಜನಿಕರ ಅನುಕೂಲಕ್ಕಾಗಿ  ಎಲ್ಲರ ಹಿತಕ್ಕಾಗಿ ಕೈಗೆತ್ತಿಕೊಳ್ಳಲಾಗಿದೆ. ಈ ವಿಷಯದಲ್ಲಿ ಅನಾವಶ್ಯಕ ರಾಜಕೀಯ ಮಾಡುವುದೇ ಸರಿಯಲ್ಲ ಎಂದು ಸ್ಥಳೀಯ ಕಾಂಗ್ರೆಸ್ ವಕ್ತಾರ ಹಾಗೂ ಬಂಜಾರ ಸಮಾಜದ ಯುವ ನಾಯಕ  ಯಮನೂರಪ್ಪ ಕಟ್ಟಿಮನಿ ಅವರು ಹೇಳಿದರು.ಈ ಕುರಿತು ಸೋಮವಾರ  ಸೆಕ್ಯುಲರ್‌ ವಾಯ್ಸ್‌  ಡಿಜಿಟಲ್‌ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಬಿಜೆಪಿ ಯಲ್ಲಿರುವ ಕೆಲವರು ಅಭಿವೃದ್ಧಿ ವಿಚಾರದಲ್ಲಿ ವಿನಃ ಕಾರಣ ಹೇಳಿ ರಾಜಕೀಯ ಮಾಡಿ ಅಭಿವೃದ್ದಿ ಕಾರ್ಯಕ್ಕೆ ಬಿರುಕು ಮೂಡಿಸುವ ಬದಲು – ನೇರವಾಗಿ ಅಭಿವೃದ್ಧಿಗೆ ಕೈ ಜೋಡಿಸುವುದು ಜನಪರ ನಿಲುವಾಗಿದೆ. ಸಂಬಂಧಿಸದ ಹೆಸರುಗಳನ್ನು ಸಾರ್ವಜನಿಕ ವೇದಿಕೆಯಲ್ಲಿ ಎಳೆದು ತರುವುದು, ಅಥವಾ ಅಭಿವೃದ್ಧಿಪರ ನಾಯಕರ ಪರಿಯ ಬಗ್ಗೆ ಹಗುರವಾಗಿ ಮಾತನಾಡುವುದು ಸೂಕ್ತವಲ್ಲ. ರಾಯರೆಡ್ಡಿಯವರು ಸದಾ ಅಭಿವೃದ್ದಿ ಪರ ಚಿಂತನೆ ಹೊಂದಿರುವವರು – ಜನಪರ ಯೋಜನೆಗಳಿಗೆ ಅವರ ಬದ್ಧತೆ ಎಲ್ಲರಿಗೂ ತಿಳಿದಿರುವ ವಿಷಯ ಎಂದರು.ಕಟ್ಟಡಗಳ ನಿರ್ಮಾಣ ವಿಷಯದಲ್ಲಿ ಕೆಲವರು ರಾಜಕಾರಣ ಮಾಡಿದರೆ  ಅಭಿವೃದ್ಧಿ ಕುಂಠಿತಗೊಳ್ಳುವ ಸಂಭವ ಹೆಚ್ಚು. ಶಾಸಕ ಬಸವರಾಜ ರಾಯರೆಡ್ಡಿಯವರ ಹೆಸರು ಎಳೆದು ತರುವುದು ಅವರ ಬಗ್ಗೆ ಹಗುರವಾಗಿ ಮಾತನಾಡುವುದು ಸೂಕ್ತವಾದ ಕ್ರಮವಲ್ಲ. ಮೊದಲು ಸರಿಯಾಗಿ ಮಾತನಾಡೋದನ್ನ ಕಲಿಯಲಿ, ಈ ರೀತಿ ಇನ್ನೊಂದು ಸಾರಿ ಮಾತನಾಡಿದರೆ ಸರಿ ಇರಲ್ಲ, ಇಷ್ಟಕ್ಕೆ ಎಚ್ಚೆತ್ತುಕೊಂಡರೆ ಒಳ್ಳೆಯದು. ಒಣ ರಾಜಕೀಯ, ಒಣ ಪ್ರತಿಷ್ಠೆ ಬಿಟ್ಟು ಅಭಿವೃದ್ಧಿ ಕೆಲಸಕ್ಕೆ ಕೈ ಜೋಡಿಸಲಿ ಗುದ್ನೇಪ್ಪಜ್ಜನ ಆಶೀರ್ವಾದದಿಂದ ಆದಷ್ಟು ಬೇಗನೆ ನೂತನ ಕಟ್ಟಡಗಳ ನಿರ್ಮಾಣ ಕಾರ್ಯ ಪ್ರಾರಂಭವಾಗಲಿ’ ಎಂದು ಅವರು  ನೇರವಾಗಿ ಬಿಜೆಪಿಗರಿಗೆ ಎಚ್ಚರಿಸಿದ್ದಾರೆ.

• ಸೆಕ್ಯುಲರ್‌ ವಾಯ್ಸ್‌ ನ್ಯೂಸ್‌ ಕುಕನೂರ:

ನೂತನ ತಾಲೂಕಿನ ಕಟ್ಟಡಗಳ ನಿರ್ಮಾಣ ಕುರಿತ ಕಾರ್ಯಗಳು ಸಾರ್ವಜನಿಕರ ಅನುಕೂಲಕ್ಕಾಗಿ  ಎಲ್ಲರ ಹಿತಕ್ಕಾಗಿ ಕೈಗೆತ್ತಿಕೊಳ್ಳಲಾಗಿದೆ. ಈ ವಿಷಯದಲ್ಲಿ ಅನಾವಶ್ಯಕ ರಾಜಕೀಯ ಮಾಡುವುದೇ ಸರಿಯಲ್ಲ ಎಂದು ಸ್ಥಳೀಯ ಕಾಂಗ್ರೆಸ್ ವಕ್ತಾರ ಹಾಗೂ ಬಂಜಾರ ಸಮಾಜದ ಯುವ ನಾಯಕ  ಯಮನೂರಪ್ಪ ಕಟ್ಟಿಮನಿ ಅವರು ಹೇಳಿದರು.

ಈ ಕುರಿತು ಸೋಮವಾರ  ಸೆಕ್ಯುಲರ್‌ ವಾಯ್ಸ್‌  ಡಿಜಿಟಲ್‌ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಬಿಜೆಪಿ ಯಲ್ಲಿರುವ ಕೆಲವರು ಅಭಿವೃದ್ಧಿ ವಿಚಾರದಲ್ಲಿ ವಿನಃ ಕಾರಣ ಹೇಳಿ ರಾಜಕೀಯ ಮಾಡಿ ಅಭಿವೃದ್ದಿ ಕಾರ್ಯಕ್ಕೆ ಬಿರುಕು ಮೂಡಿಸುವ ಬದಲು – ನೇರವಾಗಿ ಅಭಿವೃದ್ಧಿಗೆ ಕೈ ಜೋಡಿಸುವುದು ಜನಪರ ನಿಲುವಾಗಿದೆ. ಸಂಬಂಧಿಸದ ಹೆಸರುಗಳನ್ನು ಸಾರ್ವಜನಿಕ ವೇದಿಕೆಯಲ್ಲಿ ಎಳೆದು ತರುವುದು, ಅಥವಾ ಅಭಿವೃದ್ಧಿಪರ ನಾಯಕರ ಪರಿಯ ಬಗ್ಗೆ ಹಗುರವಾಗಿ ಮಾತನಾಡುವುದು ಸೂಕ್ತವಲ್ಲ. ರಾಯರೆಡ್ಡಿಯವರು ಸದಾ ಅಭಿವೃದ್ದಿ ಪರ ಚಿಂತನೆ ಹೊಂದಿರುವವರು – ಜನಪರ ಯೋಜನೆಗಳಿಗೆ ಅವರ ಬದ್ಧತೆ ಎಲ್ಲರಿಗೂ ತಿಳಿದಿರುವ ವಿಷಯ ಎಂದರು.

ಕಟ್ಟಡಗಳ ನಿರ್ಮಾಣ ವಿಷಯದಲ್ಲಿ ಕೆಲವರು ರಾಜಕಾರಣ ಮಾಡಿದರೆ  ಅಭಿವೃದ್ಧಿ ಕುಂಠಿತಗೊಳ್ಳುವ ಸಂಭವ ಹೆಚ್ಚು. ಶಾಸಕ ಬಸವರಾಜ ರಾಯರೆಡ್ಡಿಯವರ ಹೆಸರು ಎಳೆದು ತರುವುದು ಅವರ ಬಗ್ಗೆ ಹಗುರವಾಗಿ ಮಾತನಾಡುವುದು ಸೂಕ್ತವಾದ ಕ್ರಮವಲ್ಲ. ಮೊದಲು ಸರಿಯಾಗಿ ಮಾತನಾಡೋದನ್ನ ಕಲಿಯಲಿ, ಈ ರೀತಿ ಇನ್ನೊಂದು ಸಾರಿ ಮಾತನಾಡಿದರೆ ಸರಿ ಇರಲ್ಲ, ಇಷ್ಟಕ್ಕೆ ಎಚ್ಚೆತ್ತುಕೊಂಡರೆ ಒಳ್ಳೆಯದು. ಒಣ ರಾಜಕೀಯ, ಒಣ ಪ್ರತಿಷ್ಠೆ ಬಿಟ್ಟು ಅಭಿವೃದ್ಧಿ ಕೆಲಸಕ್ಕೆ ಕೈ ಜೋಡಿಸಲಿ ಗುದ್ನೇಪ್ಪಜ್ಜನ ಆಶೀರ್ವಾದದಿಂದ ಆದಷ್ಟು ಬೇಗನೆ ನೂತನ ಕಟ್ಟಡಗಳ ನಿರ್ಮಾಣ ಕಾರ್ಯ ಪ್ರಾರಂಭವಾಗಲಿ’ ಎಂದು ಅವರು  ನೇರವಾಗಿ ಬಿಜೆಪಿಗರಿಗೆ ಎಚ್ಚರಿಸಿದ್ದಾರೆ.