“ಕೊಪ್ಪಳ| ಒಳ ಮೀಸಲಾತಿಯಲ್ಲಿ ಉದ್ಯೋಗ ನೇಮಕಾತಿ ಪ್ರಕ್ರೀಯೆ : ನಿಯಮಾವಳಿ ಪಾಲಿಸಲು ಆಗ್ರಹಿಸಿ ಮನವಿ”
•ಸೆಕ್ಯುಲರ್ ವಾಯ್ಸ್ ನ್ಯೂಸ್ ಕೊಪ್ಪಳ:
ಕುಷ್ಟಗಿಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಒಳಮೀಸಲಾತಿ ಜಾರಿ ಬಳಿಕ ಉದ್ಯೋಗ ನೇಮಕಾತಿ ಹಂಚಿಕೆಯಲ್ಲಿ ರೋಸ್ಟರ್ ನಿಯಮ ಪಾಲಿಸುತ್ತಿಲ್ಲ ಎಂದು ಆರೋಪಿಸಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ಅಂಬೇಡ್ಕ್ ರ್ ಧ್ವನಿ) ಚಂದ್ರಕಾಂತ ಕಾದ್ರೋಳ್ಳಿ ಬಣ) ಕಾರ್ಯಕರ್ತರು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಅವರಿಗೆ ಸೋಮವಾರ ಮನವಿ ಪತ್ರ ಸಲ್ಲಿಸಿದರು.
ಬಳಿಕ ಸಮಿತಿಯ ಜಿಲ್ಲಾ ಘಟಕದ ಆಧ್ಯಕ್ಷ ನಿಂಗಪ್ಪ ಜಿ. ಬೆಣಕಲ್ ಅವರು ಮಾತನಾಡಿ, ಕುಷ್ಟಗಿಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಒಳಮೀಸಲಾತಿ ಜಾರಿ ಬಳಿಕ ಉದ್ಯೋಗ ನೇಮಕಾತಿ ಹಂಚಿಕೆಯಲ್ಲಿ ರೋಸ್ಟರ್ ಪ್ರವರ್ಗ-Aಕ್ಕೆ ಉದ್ಯೋಗದ ಮೀಸಲಾತಿಯನ್ನು ಹಂಚಿಕೆಮಾಡಬೇಕಾಗಿತ್ತು. ಆದರೆ ಇದನ್ನು ಗಾಳಿಗೆ ತೂರಿದ ಜಿಲ್ಲಾ ಆರೋಗ್ಯ ಅಧಿಕಾರಿಗಳು ಸರ್ಕಾರದ ನಿಯಮಗಳನ್ನು ಕಡೆಗಣಿಸಿ, ಮಾದಿಗ ಮತ್ತು ಸಂಬಂಧಿತ ಉಪ ಜಾತಿಗಳಿಗೆ ದ್ರೋಹವನ್ನ ಬಗೆಯುತ್ತಿದ್ದಾರೆ ಎಂದು ದೂರಿದರು.
ಈ ಕುರಿತು ಪ್ರಶ್ನಿಸಿದರೆ ನಮಗೆ ಕುಂಟ ನೆಪ ಹೇಳಿ, ಈ ಹಿಂದೆ ಒಳಮೀಸಲಾತಿ ಜಾರಿಗೂ ಮೊದಲು ಗಂಗಾವತಿ ಮತ್ತು ಕುಕನೂರಲ್ಲಿ ಆಗಿರುವ ಪ್ರವರ್ಗ-A ಮತ್ತು B-ಗೆ ನೀಡಿರುತ್ತೇವೆ. ಹಾಗಾಗಿ ಒಳಮೀಸಲಾತಿ ಜಾರಿ ನಂತರ ನೇರವಾಗಿ ಪ್ರವರ್ಗ- ಸಿ ಗೆ ನೀಡಿದ್ದೇವೆ ಎಂದು ಉತ್ತರಿಸಿದ್ದಾರೆ. ಆದರೆ ಒಳಮೀಸಲಾತಿ ಜಾರಿಗೂ ಮೊದಲು ಈಗ ಪ್ರವರ್ಗ C ಯಲ್ಲಿರುವ ಜಾತಿಗಳಿಗೆ ಪರಿಶಿಷ್ಟ ಜಾತಿ ಮೀಸಲಾತಿ ಅಡಿಯಲ್ಲಿ ಉದ್ಯೋಗ ಹಂಚಿಕೆ ಆಗಿಲ್ಲವೇ ಎಂಬ ಪ್ರಶ್ನೆಯನ್ನು ನಾವು ಕೇಳಿದಾಗ, ಅದೇನಾಗಿದೆ ಒಂದು ಮನವಿಪತ್ರವನ್ನು ಕೊಡಿ, ಪರಿಶೀಲಿಸಿ ಒಂದು ವೇಳೆ ನಮ್ಮ ರೋಸ್ಟರ್ ಆಯ್ಕೆಯ ಪ್ರಕ್ರಿಯೆಯಲ್ಲಿ ತಪ್ಪುಗಳಾಗಿದ್ದರೆ ತಿದ್ದಿಕೊಳ್ಳುತ್ತೇವೆ ಸಮಾಜಾಯಿಸಿ ಅಧಿಕಾರಿಗಳು ಉತ್ತರ ನೀಡಿದ್ದಾರೆಂದು ಹೇಳಿದರು.
ಈ ಸಂದರ್ಭದಲ್ಲಿ ಸಮಿತಿಯ ಮುಖಂಡರಾದ ಕರಿಯಪ್ಪ ಮಣ್ಣಿನವರ್,ಮೈಲಪ್ಪ ಮಾದಿನೂರ ಇದ್ದರು.