NATIONAL NEWS:🔴 ನವ ದೆಹಲಿ| ಕಾರು ಸ್ಪೋಟ ದುರಂತ: ಕಾರಿನ ಮಾಲೀಕ ಬಂಧನ.! ಕರ್ನಾಟಕದಲ್ಲೂ ಹೈ ಅಲರ್ಟ್‌ ಘೋಷಣೆ, ಬೀಗಿ ಭದ್ರತೆಗೆ ಸೂಚನೆ” 

By admin

“ನವ ದೆಹಲಿ| ಕಾರು ಸ್ಪೋಟ ದುರಂತ:  ಕಾರಿನ ಮೂಲ ಮಾಲೀಕನ ಬಂಧನ..! ಕರ್ನಾಟಕದಲ್ಲೂ ಹೈ ಅಲರ್ಟ್‌ ಘೋಷಣೆ, ಬೀಗಿ ಭದ್ರತೆಗೆ ಸೂಚನೆ” 

• ಸೆಕ್ಯುಲರ್‌ ವಾಯ್ಸ್‌ ಡೆಸ್ಕ್‌ ನ್ಯೂಸ್:‌ 

ನವದೆಹಲಿ : ಇಲ್ಲಿನ  ಕೆಂಪುಕೋಟೆಯ ಮೆಟ್ರೋ ನಿಲ್ದಾಣದ  ಗೇಟ್‌ ಸಂಖ್ಯೆ 1 ಬಳಿ ಸೋಮವಾರ(ನ.10) ಸಂಜೆ 6:30ರ ಸುಮಾರಿಗೆ ಭಯಾನಕ  ಕಾರು ಸ್ಫೋಟ ಸಂಭವಿಸಿದೆ.  ಕ್ಷಣದಲ್ಲಿ ಭಯಭೀತಿಯಲ್ಲಿ ನೂರಾರು ಜನರು ದಿಕ್ಕಾಪಾಲಾಗಿ ಓಡಿದ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 10ಕ್ಕೆ ಏರಿದೆ.ಜೊತೆಗೆ 15  ಕ್ಕೂ ಜನರಿಗೆ ಗಂಭೀರ ಗಾಯಗಳಾಗಿವೆ. ಗಾಯಾಳುಗಳಮನ್ನು ಹತ್ತಿರದ ಎಲ್‌ಎನ್‌ಜೆಪಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.

ನಂತರ ಪಕ್ಕದಲ್ಲಿದ್ದ 7 ರಿಂದ 8 ವಾಹನಗಳು ಸಹ ಬೆಂಕಿಗೆ ಆಹುತಿಯಾಗಿ ಹಾನಿಯಾಗಿವೆ. ತಕ್ಷಣ ಸ್ಥಳಕ್ಕೆ ಸುಮಾರು 20 ಅಗ್ನಿಶಾಮಕದಳ ವಾಹನಗಳು ಧಾವಿಸಿ ಬೆಂಕಿಯನ್ನು ನಂದಿಸಿವೆ.

ಸ್ಥಳೀಯ ಪ್ರತ್ಯಕ್ಷದರ್ಶಿಗಳು ಹೇಳುವ   ಪ್ರಕಾರ, ಚಾಂದನಿ ಚೌಕ್‌’ನ ಜನದಟ್ಟಣೆಯ ಕೆಂಪು ಕೋಟೆ ಪ್ರದೇಶದಲ್ಲಿ ಸ್ಫೋಟದ ತೀವ್ರತೆ ಎಷ್ಟು ಪ್ರಬಲವಾಗಿತ್ತೆಂದರೆ ಹತ್ತಿರದ ಬೀದಿ ದೀಪಗಳು ಪುಡಿಪುಡಿಯಾಗಿದ್ದವು ಮತ್ತು ಕಾರುಗಳು 150 ಮೀಟರ್ ದೂರದವರೆಗೆ ಹಾರಿದವು ಭಯಭೀತರಾಗಿ ಹೇಳಿದಾರೆನ್ನಲಾಗಿದೆ.

• ಕಾರಿನ ಮಾಲೀಕ ಅರೆಸ್ಟ್:‌ 

ಕಾರು ಸ್ಫೋಟದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ಕಾರು ಹರಿಯಾಣದ ಗುರುಗ್ರಾಮ ಪೊಲೀಸರು HR26 CE 7674 ನಂಬರ್ ಪ್ಲೇಟ್ ಹೊಂದಿರ ವ i20 ಕಾರಿನ ಮೂಲ ಮಾಲೀಕ ಮೊಹಮ್ಮದ್ ಸಲ್ಮಾನ್ ಬಂಧನ ನನ್ನು ದೃಢಪಡಿಸಿದ್ದಾರೆ ಎನ್ನಲಾಗಿದೆ. 

•ರಾಜ್ಯದಲ್ಲೂ ಹೈ ಕಟ್ಟೆಚ್ಚರ : 

ದೆಹಲಿಯಲ್ಲಿ ಕಾರು ಸ್ಫೋಟ ಬೆನ್ನಲ್ಲೇ ಬೆಂಗಳೂರು ಸೇರಿದಂತೆ ಜಿಲ್ಲಾ ಕೇಂದ್ರಗಳಲ್ಲಿ ಕಟ್ಟೆಚ್ಚರ ವಹಿಸುವಂತೆ ರಾಜ್ಯ ಪೊಲೀಸ್ ಮಹಾನಿರ್ದೇಶಕ ಡಾ.ಎಂ.ಎ.ಸಲೀಂ ಅವರು  ಆದೇಶ ಹೊರಡಿಸಿದ್ದಾರೆ. ಏರ್​ಪೋರ್ಟ್, ಬಂದರು, ರೈಲು ನಿಲ್ದಾಣ, ಬಸ್ ನಿಲ್ದಾಣಗಳು, ಮಾರ್ಕೆಟ್ ಸೇರಿದಂತೆ ಜನನಿಬಿಡ ಪ್ರದೇಶಗಳಲ್ಲಿ, ಜಿಲ್ಲೆಗಳಲ್ಲಿ ನಿಗಾವಹಿಸುವಂತೆ ಎಸ್​ಪಿಗಳಿಗೆ ಡಿಜಿ&ಐಜಿಪಿ ಸೂಚಿಸಿದ್ದಾರೆ.