BREAKING NEWS : “ಜೇವರ್ಗಿ| ಭೀಕರ ರಸ್ತೆ ಅಪಘಾತ: ಐಎಎಸ್ ಅಧಿಕಾರಿ ಮಹಾಂತೇಶ ಬೀಳಗಿ ಸೇರಿ ಇಬ್ಬರ ಸಹೋದರರ ದುರ್ಮರಣ!

Contents
BREAKING NEWS : “ಜೇವರ್ಗಿ| ಭೀಕರ ರಸ್ತೆ ಅಪಘಾತ: ಐಎಎಸ್ ಅಧಿಕಾರಿ ಮಹಾಂತೇಶ ಬೀಳಗಿ ಸೇರಿ ಇಬ್ಬರ ಸಹೋದರರ ದುರ್ಮರಣ!ಸೆಕ್ಯುಲರ್ ಡೆಸ್ಕ್ ನ್ಯೂಸ್ : ಜೇವರ್ಗಿ: ರಾಜ್ಯದ ಹಿರಿಯ ಐಎಎಸ್ ಅಧಿಕಾರಿ ಹಾಗೂ ಬೆಸ್ಕಾಂನ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಮಹಾಂತೇಶ ಬೀಳಗಿ ಅವರು ಇಂದು ಬೆಳಿಗ್ಗೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟಿರುವ ದಾರುಣ ಘಟನೆ ಜೇವರ್ಗಿ ತಾಲೂಕಿನ ಗೌನಹಳ್ಳಿ ಕ್ರಾಸ್ ಬಳಿ ನಡೆದಿದೆ.ಮಹಾಂತೇಶ ಬೀಳಗಿ ಅವರು ವಿಜಯಪುರದಿಂದ ಕಲಬುರ್ಗಿಯ ಕಡೆ ತೆರಳುತ್ತಿದ್ದ ವೇಳೆ KA 04 NC 7982 ಸಂಖ್ಯೆಯ ಅವರ ಇನ್ನೋವಾ ಕಾರು ನಿಯಂತ್ರಣ ತಪ್ಪಿ ಪಲ್ಟಿಯಾದ ಪರಿಣಾಮ ಈ ಭೀಕರ ಅಪಘಾತ ಸಂಭವಿಸಿದೆ. ಅಪಘಾತ ತೀವ್ರತೆಯ ಕಾರಣದಿಂದ ಸ್ಥಳದಲ್ಲೇ ಇಬ್ಬರು ಮೃತಪಟ್ಟಿದ್ದಾರೆ ಎಂಬ ಮಾಹಿತಿ ದೊರೆತಿದೆ.ಕಾರಿನಲ್ಲಿದ್ದ ಮಹಾಂತೇಶ ಬೀಳಗಿ ಗಂಭೀರ ಗಾಯಗೊಂಡಿದ್ದು, ಅವರನ್ನು ತಕ್ಷಣವೇ ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಮಾರ್ಗಮಧ್ಯದಲ್ಲಿಯೇ ಅವರು ಕೊನೆಯುಸಿರೆಳೆದಿದ್ದಾರೆ ಎಂದು ಮೂಲಗಳು ತಿಳಿಸಿವೆ.ಅಪಘಾತದ ಸುದ್ದಿ ತಿಳಿಯುತ್ತಿದ್ದಂತೆಯೇ ಜಿಲ್ಲೆಯಲ್ಲಿ ಶೋಕದ ಅಲೆ ಹರಡಿದ್ದು, ಹಿರಿಯ ಅಧಿಕಾರಿಗಳು, ಸ್ಥಳೀಯ ಆಡಳಿತ ಸಿಬ್ಬಂದಿಗಳು ಆಸ್ಪತ್ರೆ ಮತ್ತು ಘಟನೆ ಸ್ಥಳಕ್ಕೆ ಧಾವಿಸಿದ್ದಾರೆ. ಅಪಘಾತದ ನಿಖರ ಕಾರಣ ತಿಳಿದುಬಾರದಿದ್ದರೂ ಕಾರು ತೀವ್ರ ವೇಗದಲ್ಲಿ ಇದ್ದಿರಬಹುದೆಂಬ ಶಂಕೆ ವ್ಯಕ್ತವಾಗಿದೆ. ವಾಹನ ಸಂಪೂರ್ಣವಾಗಿ ನಾಶವಾಗಿದೆ.ಮಹಾಂತೇಶ ಬೀಳಗಿ ಅವರು ಕೇವಲ ಕರ್ತವ್ಯನಿಷ್ಠ ಅಧಿಕಾರಿ ಮಾತ್ರವಲ್ಲದೆ ಜನಸ್ನೇಹಿ ಆಡಳಿತಗಾರರಾಗಿದ್ದರು. ಅವರ ಅಕಾಲಿಕ ನಿಧನಕ್ಕೆ ರಾಜ್ಯಾದ್ಯಂತ ಸಂತಾಪ ವ್ಯಕ್ತವಾಗುತ್ತಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಪ್ರಾರಂಭಿಸಿದ್ದಾರೆ.

