LOCAL EXPRESS: “ಕಲಬುರಗಿ|ಮಹಿಳೆಯರ–ಮಕ್ಕಳ ಭದ್ರತೆಗಾಗಿ ಎಐಎಂಎಸ್ಎಸ್ ರಾಷ್ಟ್ರಮಟ್ಟದ ಸಹಿ ಸಂಗ್ರಹ ಆಂದೋಲನ : ಅಪರಾಧಿಗಳಿಗೆ ಕಠಿಣ ಕ್ರಮಕ್ಕೆ ಕವಿಯತ್ರಿ ಹೊನಗುಂಟಿ ಒತ್ತಾಯ”

By admin

“ಕಲಬುರಗಿ|ಮಹಿಳೆಯರ–ಮಕ್ಕಳ ಭದ್ರತೆಗಾಗಿ ಎಐಎಂಎಸ್ಎಸ್ ರಾಷ್ಟ್ರಮಟ್ಟದ ಸಹಿ ಸಂಗ್ರಹ ಆಂದೋಲನ : ಅಪರಾಧಿಗಳಿಗೆ ಕಠಿಣ ಕ್ರಮಕ್ಕೆ ಕವಿಯತ್ರಿ ಹೊನಗುಂಟಿ ಒತ್ತಾಯ”

• ಸೆಕ್ಯುಲರ್‌ ವಾಯ್ಸ್‌ ನ್ಯೂಸ್‌ ಕಲಬುರಗಿ:

ಮಹಿಳೆಯರು ಮತ್ತು ಮಕ್ಕಳ ಮೇಲಿನ ಅಪರಾಧಗಳನ್ನು ತಡೆಯಲು ಉದ್ದೇಶಿಸಿದ ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ (ಎಐಎಂಎಸ್ಎಸ್) ವತಿಯಿಂದ ನಡೆಯುತ್ತಿರುವ ರಾಷ್ಟ್ರವ್ಯಾಪಿ ಸಹಿ ಸಂಗ್ರಹ ಆಂದೋಲನ ಕ್ಕೆ ಮಂಗಳವಾರ ಕಲಬುರಗಿಯಲ್ಲಿ ಮಹಿಳಾ ಹೋರಾಟಕ್ಕೆ ಬೆಂಬಲ ನೀಡಲಾಯಿತು.

ಇಂದಿನಿಂದ 25 ಮಾರ್ಚ್ 2026ರ ವರೆಗೆ ನಡೆಯುವ ಈ ಆಂದೋಲನದ ಭಾಗವಾಗಿ, ಜಿಲ್ಲಾ ಸಮಿತಿಯು ನಗರದ ಸುಪರ್ ಮಾರ್ಕೆಟ್‌ನಲ್ಲಿ ಸಹಿ ಸಂಗ್ರಹಿಸುವ ಕಾರ್ಯಕ್ರಮ ನಡೆಯಿತು.

ಈ ವೇಳೆ  ಸಹಿ ಸಂಗ್ರಹ ಕಾರ್ಯಕ್ರಮ ಉದ್ಘಾಟಿಸಿ  ಖ್ಯಾತ ಕವಿಯತ್ರಿ ಸಂಧ್ಯಾ ಹೊನಗುಂಟಿಕರ್ ಅವರು ಮಾತನಾಡಿ, ಮಹಿಳೆಯರು ಮತ್ತು ಮಕ್ಕಳ ಭದ್ರತೆಗೆ ತಕ್ಷಣ ಕ್ರಮ ಕೈಗೊಳ್ಳುವಂತೆ ಸರ್ಕಾರವನ್ನು ಆಗ್ರಹಿಸಿದರು. ಅವರು ಅಪರಾಧಿಗಳಿಗೆ ನಿದರ್ಶನೀಯ ಶಿಕ್ಷೆ ನೀಡಬೇಕು, ಸಮೂಹ ಮಾಧ್ಯಮಗಳಲ್ಲಿ ಹರಡುತ್ತಿರುವ ಅಶ್ಲೀಲ ಚಿತ್ರಗಳು ಮತ್ತು ಕ್ರೌರ್ಯವನ್ನು ಸಂಪೂರ್ಣವಾಗಿ ನಿಷೇಧಿಸಬೇಕು ಎಂದು ಒತ್ತಾಯಿಸಿದರು.

 ಎಲ್ಲಾ ಮಹಿಳೆಯರಿಗೆ ಶಿಕ್ಷಣ, ಉದ್ಯೋಗ ಮತ್ತು ಆರೋಗ್ಯ ಭದ್ರತೆ ಖಾತರಿಪಡಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು. ಕೊನೆಗೆ, ಮಹಿಳೆಯರ ಘನತೆಗಾಗಿ ಹೋರಾಡಲು ಜಿಲ್ಲೆಯ ಮಹಿಳೆಯರು ಮುಂದಾಗಬೇಕೆಂದು  ಅವರು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಸಂಘಟನೆಯ ಜಿಲ್ಲಾ ಅಧ್ಯಕ್ಷೆ ಗುಂಡಮ್ಮ ಮಡಿವಾಳ ಅವರು  ಅಧ್ಯಕ್ಷತೆಯನ್ನು ವಹಿಸಿದ್ದರು. ಜಿಲ್ಲಾ ಕಾರ್ಯದರ್ಶಿ ಡಾ. ಸೀಮಾ ದೇಶಪಾಂಡೆ ಅವರು ಮತ್ತು  ರಾಧಾ ಜಿ. ಅವರು ನೇತೃತ್ವ ವಹಿಸಿದರು.

ಈ ವೇಳೆ ಸಂಘಟನೆಯ ಜಿಲ್ಲಾ ನಾಯಕರುಗಳಾದ ವಿಶಾಲಾಕ್ಷಿ ಪಾಟೀಲ್, ಮಹಾದೇವಿ ಮಾನೆ, ಮಹಾದೇವಿ ಜಮಾದರ್, ಸಾಬಮ್ಮ ಕಟ್ಟಿಮನಿ, ಜಯಶ್ರೀ, ರೂಪಾ, ಉಷಾ, ರಾಧಿಕಾ, ರೇಣುಕಾ, ಭಾರತಿ, ಶಿಲ್ಪಾ, ಶರಣಮ್ಮ ಸೇರಿದಂತೆ ಹಲವಾರು ವಿದ್ಯಾರ್ಥಿನಿಯರು ಮತ್ತು ಮಹಿಳೆಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.