LOCAL EXPRESS:”ಕೊಪ್ಪಳ| ಮಹಿಳೆ–ಮಕ್ಕಳ ಮೇಲಿನ ಅಪರಾಧ ತಡೆಗೆ ಸಹಿ ಸಂಗ್ರಹ  ಆಂದೋಲನ: ಅಪರಾಧಿ ಆರೋಪಿಗಳಿಗೆ ಕ್ರಮಕ್ಕೆಎಐಎಂಎಸ್‌ಎಸ್‌ ಆಗ್ರಹ”

By admin

LOCAL EXPRESS: “ಕೊಪ್ಪಳ| ಮಹಿಳೆ–ಮಕ್ಕಳ ಮೇಲಿನ ಅಪರಾಧ ತಡೆಗೆ ಸಹಿ ಸಂಗ್ರಹ  ಆಂದೋಲನ: ಅಪರಾಧಿ ಆರೋಪಿಗಳಿಗೆ ಕ್ರಮಕ್ಕೆಎಐಎಂಎಸ್‌ಎಸ್‌ ಆಗ್ರಹ”

Contents
LOCAL EXPRESS: “ಕೊಪ್ಪಳ| ಮಹಿಳೆ–ಮಕ್ಕಳ ಮೇಲಿನ ಅಪರಾಧ ತಡೆಗೆ ಸಹಿ ಸಂಗ್ರಹ  ಆಂದೋಲನ: ಅಪರಾಧಿ ಆರೋಪಿಗಳಿಗೆ ಕ್ರಮಕ್ಕೆಎಐಎಂಎಸ್‌ಎಸ್‌ ಆಗ್ರಹ”• ಸೆಕ್ಯುಲರ್‌ ವಾಯ್ಸ್‌ ನ್ಯೂಸ್‌ ಕೊಪ್ಪಳ:ಮಹಿಳೆಯರು ಮತ್ತು ಮಕ್ಕಳ ಮೇಲಿನ ಅಪರಾಧಗಳ ವಿರುದ್ಧ ರಾಜ್ಯವ್ಯಾಪಿ ಆಂದೋಲನದ ಭಾಗವಾಗಿ ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ (AIMSS) ಜಿಲ್ಲಾ ಘಟಕದ ವತಿಯಿಂದ ನಗರದ ಕನಕದಾಸ ವೃತ್ತದಲ್ಲಿ ಸಹಿ ಸಂಗ್ರಹ ಅಭಿಯಾನ ನಡೆಯಿತು. ಹಿರಿಯ ಸಾಹಿತಿ ಹಾಗೂ ಹೋರಾಟಗಾರ ಅಲ್ಲಮಪ್ರಭು ಬೆಟ್ಟದೂರು ಹಾಗೂ ಸಂಘಟನೆಯ ರಾಜ್ಯಾಧ್ಯಕ್ಷೆ ಎಂ. ಎನ್. ಮಂಜುಳಾ  ಅವರು ಸಹಿ ಹಾಕಿ ಮಂಗಳವಾರ ಅಭಿಯಾನಕ್ಕೆ ಚಾಲನೆ ನೀಡಿದರು.ಅಭಿಯಾನವನ್ನು ಉದ್ದೇಶಿಸಿ ಮಾತನಾಡಿದ ಅಲ್ಲಮಪ್ರಭು ಬೆಟ್ಟದೂರು ಅವರು, “ಜಾಗತೀಕರಣದ ಬಳಿಕ ಮಹಿಳೆ–ಮಕ್ಕಳ ಮೇಲಿನ ದೌರ್ಜನ್ಯಗಳು ಭಾರೀ ಪ್ರಮಾಣದಲ್ಲಿ ಹೆಚ್ಚಿವೆ. ಟಿವಿ–ಮೊಬೈಲ್‌ಗಳಲ್ಲಿ ಹರಿಯುವ ಅಶ್ಲೀಲತೆ ಮತ್ತು ಹಿಂಸೆ ಯುವ ಮನಸ್ಸುಗಳನ್ನು ಕೆಡಿಸಿ ಅತ್ಯಾಚಾರ ಸೇರಿದಂತೆ ಅಮಾನವೀಯ ಕೃತ್ಯಗಳಿಗೆ ತಳ್ಳುತ್ತಿದೆ. ಮಹಿಳೆಯರ ಭದ್ರತೆ ಗಂಭೀರ ಪ್ರಶ್ನೆಯಾಗಿರುವ ಈ ಸಂದರ್ಭದಲ್ಲಿ ಸಮಾಜವೇ ಒಂದಾಗಿ ಎದುರಿಸಬೇಕು” ಎಂದು ಕಳವಳ ವ್ಯಕ್ತಪಡಿಸಿದರು.ರಾಜ್ಯಾಧ್ಯಕ್ಷೆ ಎಂ.ಎನ್. ಮಂಜುಳಾ ಅವರು, “ಸೌಜನ್ಯ, ದಾನಮ್ಮ, ನೇಹಾ ಹಿರೇಮಠ, ಅಂಜಲಿ, ಮಹಾಲಕ್ಷ್ಮಿ, ಯಾಮಿನಿ ಮತ್ತಿತರ ಯುವತಿಯರ ದುರ್ಮರಣಗಳು ನಾಗರಿಕರನ್ನು ಬೆಚ್ಚಿಬೀಳಿಸಿದ್ದವು. ಇತ್ತೀಚಿನ ಹುಬ್ಬಳ್ಳಿ, ತೋರಣಗಲ್ಲು, ಮೈಸೂರಿನ ಕಂದಮ್ಮಗಳ ಮೇಲಿನ ದೌರ್ಜನ್ಯಗಳು ಮಾನವೀಯತೆಯನ್ನೇ ಪ್ರಶ್ನಿಸುವಂತಿವೆ. ಇಂತಹ ಅಪರಾಧಗಳನ್ನು ತಡೆಯುವಲ್ಲಿ ಪೊಲೀಸ್‌–ಆಡಳಿತ–ನ್ಯಾಯಾಂಗ ಸಂಪೂರ್ಣವಾಗಿ ವಿಫಲವಾಗಿದೆ. ಮಹಿಳೆಯರಿಗೆ ನೈಜ ಘನತೆ–ಭದ್ರತೆ ನೀಡುವ ಹೊಸ ಸಮಾಜ ನಿರ್ಮಾಣಕ್ಕೆ ಸುಧೀರ್ಘ ಹೋರಾಟ ಅಗತ್ಯ” ಎಂದು ಹೇಳಿದರು.ಜಿಲ್ಲಾ ಸಂಘಟನಾ ಸಮಿತಿ ಅಧ್ಯಕ್ಷೆ ಮಂಜುಳಾ ಮಜ್ಜಿಗಿ ಅಧ್ಯಕ್ಷತೆ ವಹಿಸಿದ್ದರು. ಸಂಘಟನೆಯ ಪದಾಧಿಕಾರಿಗಳಾದ ಶಾರದಾ ಗಡ್ಡಿ, ಹುಸೇನ್ ಬಿ ಹಾಗೂ ವಿದ್ಯಾರ್ಥಿನಿಯರು ಭಾಗವಹಿಸಿದರು. ನೂರಾರು ನಾಗರಿಕರು ಸಹಿ ನೀಡಿ ಅಭಿಯಾನಕ್ಕೆ ಬೆಂಬಲ ವ್ಯಕ್ತಪಡಿಸಿದರು.

• ಸೆಕ್ಯುಲರ್‌ ವಾಯ್ಸ್‌ ನ್ಯೂಸ್‌ ಕೊಪ್ಪಳ:

ಮಹಿಳೆಯರು ಮತ್ತು ಮಕ್ಕಳ ಮೇಲಿನ ಅಪರಾಧಗಳ ವಿರುದ್ಧ ರಾಜ್ಯವ್ಯಾಪಿ ಆಂದೋಲನದ ಭಾಗವಾಗಿ ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ (AIMSS) ಜಿಲ್ಲಾ ಘಟಕದ ವತಿಯಿಂದ ನಗರದ ಕನಕದಾಸ ವೃತ್ತದಲ್ಲಿ ಸಹಿ ಸಂಗ್ರಹ ಅಭಿಯಾನ ನಡೆಯಿತು. ಹಿರಿಯ ಸಾಹಿತಿ ಹಾಗೂ ಹೋರಾಟಗಾರ ಅಲ್ಲಮಪ್ರಭು ಬೆಟ್ಟದೂರು ಹಾಗೂ ಸಂಘಟನೆಯ ರಾಜ್ಯಾಧ್ಯಕ್ಷೆ ಎಂ. ಎನ್. ಮಂಜುಳಾ  ಅವರು ಸಹಿ ಹಾಕಿ ಮಂಗಳವಾರ ಅಭಿಯಾನಕ್ಕೆ ಚಾಲನೆ ನೀಡಿದರು.

ಅಭಿಯಾನವನ್ನು ಉದ್ದೇಶಿಸಿ ಮಾತನಾಡಿದ ಅಲ್ಲಮಪ್ರಭು ಬೆಟ್ಟದೂರು ಅವರು, “ಜಾಗತೀಕರಣದ ಬಳಿಕ ಮಹಿಳೆ–ಮಕ್ಕಳ ಮೇಲಿನ ದೌರ್ಜನ್ಯಗಳು ಭಾರೀ ಪ್ರಮಾಣದಲ್ಲಿ ಹೆಚ್ಚಿವೆ. ಟಿವಿ–ಮೊಬೈಲ್‌ಗಳಲ್ಲಿ ಹರಿಯುವ ಅಶ್ಲೀಲತೆ ಮತ್ತು ಹಿಂಸೆ ಯುವ ಮನಸ್ಸುಗಳನ್ನು ಕೆಡಿಸಿ ಅತ್ಯಾಚಾರ ಸೇರಿದಂತೆ ಅಮಾನವೀಯ ಕೃತ್ಯಗಳಿಗೆ ತಳ್ಳುತ್ತಿದೆ. ಮಹಿಳೆಯರ ಭದ್ರತೆ ಗಂಭೀರ ಪ್ರಶ್ನೆಯಾಗಿರುವ ಈ ಸಂದರ್ಭದಲ್ಲಿ ಸಮಾಜವೇ ಒಂದಾಗಿ ಎದುರಿಸಬೇಕು” ಎಂದು ಕಳವಳ ವ್ಯಕ್ತಪಡಿಸಿದರು.

ರಾಜ್ಯಾಧ್ಯಕ್ಷೆ ಎಂ.ಎನ್. ಮಂಜುಳಾ ಅವರು, “ಸೌಜನ್ಯ, ದಾನಮ್ಮ, ನೇಹಾ ಹಿರೇಮಠ, ಅಂಜಲಿ, ಮಹಾಲಕ್ಷ್ಮಿ, ಯಾಮಿನಿ ಮತ್ತಿತರ ಯುವತಿಯರ ದುರ್ಮರಣಗಳು ನಾಗರಿಕರನ್ನು ಬೆಚ್ಚಿಬೀಳಿಸಿದ್ದವು. ಇತ್ತೀಚಿನ ಹುಬ್ಬಳ್ಳಿ, ತೋರಣಗಲ್ಲು, ಮೈಸೂರಿನ ಕಂದಮ್ಮಗಳ ಮೇಲಿನ ದೌರ್ಜನ್ಯಗಳು ಮಾನವೀಯತೆಯನ್ನೇ ಪ್ರಶ್ನಿಸುವಂತಿವೆ. ಇಂತಹ ಅಪರಾಧಗಳನ್ನು ತಡೆಯುವಲ್ಲಿ ಪೊಲೀಸ್‌–ಆಡಳಿತ–ನ್ಯಾಯಾಂಗ ಸಂಪೂರ್ಣವಾಗಿ ವಿಫಲವಾಗಿದೆ. ಮಹಿಳೆಯರಿಗೆ ನೈಜ ಘನತೆ–ಭದ್ರತೆ ನೀಡುವ ಹೊಸ ಸಮಾಜ ನಿರ್ಮಾಣಕ್ಕೆ ಸುಧೀರ್ಘ ಹೋರಾಟ ಅಗತ್ಯ” ಎಂದು ಹೇಳಿದರು.

ಜಿಲ್ಲಾ ಸಂಘಟನಾ ಸಮಿತಿ ಅಧ್ಯಕ್ಷೆ ಮಂಜುಳಾ ಮಜ್ಜಿಗಿ ಅಧ್ಯಕ್ಷತೆ ವಹಿಸಿದ್ದರು. ಸಂಘಟನೆಯ ಪದಾಧಿಕಾರಿಗಳಾದ ಶಾರದಾ ಗಡ್ಡಿ, ಹುಸೇನ್ ಬಿ ಹಾಗೂ ವಿದ್ಯಾರ್ಥಿನಿಯರು ಭಾಗವಹಿಸಿದರು. ನೂರಾರು ನಾಗರಿಕರು ಸಹಿ ನೀಡಿ ಅಭಿಯಾನಕ್ಕೆ ಬೆಂಬಲ ವ್ಯಕ್ತಪಡಿಸಿದರು.