BREAKING NEWS :”ಕೊಪ್ಪಳ|ಹಾಸ್ಟೇಲ್ ನಲ್ಲಿ ಶಾಕ್ ಘಟನೆ : 16 ವರ್ಷದ ವಿದ್ಯಾರ್ಥಿನಿಗೆ ಹೆರಿಗೆ, ಪ್ರಕರಣ ದಾಖಲು!!

Contents
BREAKING NEWS :”ಕೊಪ್ಪಳ|ಹಾಸ್ಟೇಲ್ ನಲ್ಲಿ ಶಾಕ್ ಘಟನೆ : 16 ವರ್ಷದ ವಿದ್ಯಾರ್ಥಿನಿಗೆ ಹೆರಿಗೆ, ಪ್ರಕರಣ ದಾಖಲು!!•ಸೆಕ್ಯುಲರ್ ವಾಯ್ಸ್ ನ್ಯೂಸ್ ಕೊಪ್ಪಳ :ಕುಕನೂರು ತಾಲೂಕಿನ ಗ್ರಾಮವೊಂದರ ಸರ್ಕಾರಿ ವಸತಿ ನಿಲಯದಲ್ಲಿ ವಾಸಿಸುತ್ತಿದ್ದ ಹತ್ತನೇ ತರಗತಿಯ 16 ವರ್ಷದ ವಿದ್ಯಾರ್ಥಿನಿಗೆ ಬುಧವಾರ ಬೆಳಗ್ಗೆ ವಸತಿ ನಿಲಯದಲ್ಲೇ ಹೆರಿಗೆ ಸಂಭವಿಸಿದ ಘಟನೆ ಜಿಲ್ಲೆಯಲ್ಲಿ ಆತಂಕ ಮೂಡಿಸಿದೆ.ಹೊಟ್ಟೆನೋವಿನಿಂದ ಬಳಲುತ್ತಿದ್ದ ವಿದ್ಯಾರ್ಥಿನಿಯನ್ನು ಸಹಪಾಠಿಗಳು ಗಮನಿಸಿ ನಿರ್ವಹಣೆಗೆ ಮಾಹಿತಿ ನೀಡಿದ್ದು, ತಾಯಿ ಹಾಗೂ 1.2 ಕೆ.ಜಿ. ತೂಕದ ನವಜಾತ ಶಿಶುವನ್ನು ತಕ್ಷಣ ಕೊಪ್ಪಳ ಜಿಲ್ಲಾ ಆಸ್ಪತ್ರೆಗೆ ಕಳಿಸಲಾಗಿದೆ. ಇಬ್ಬರ ಆರೋಗ್ಯವೂ ಸ್ಥಿರವಾಗಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.ವಿದ್ಯಾರ್ಥಿನಿಯ ಗರ್ಭಧಾರಣೆ ತಿಂಗಳಿನಷ್ಟು ಕಾಲ ನಿಲಯದ ಸಿಬ್ಬಂದಿ, ಶಿಕ್ಷಕರು ಹಾಗೂ ಸ್ಥಳೀಯ ಅಧಿಕಾರಿಗಳಿಗೆ ತಿಳಿಯದೇ ಉಳಿದಿರುವುದು ಗಂಭೀರ ನಿರ್ಲಕ್ಷ್ಯ ಎಂದು ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಿಲಯದಲ್ಲಿ ಆರೋಗ್ಯ ತಪಾಸಣೆ, ಕೌನ್ಸೆಲಿಂಗ್ ಮತ್ತು ನಿಗಾ ಕ್ರಮಗಳು ಪರಿಣಾಮಕಾರಿಯೇ ಎಂಬ ಪ್ರಶ್ನೆಗಳು ಈಗ ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗುತ್ತಿವೆ.ಘಟನೆಯ ಹಿನ್ನೆಲೆಯಲ್ಲಿ ಕುಕನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಬಾಲ್ಯವಿವಾಹ, ಅನೈತಿಕ ನಂಟು ಮತ್ತು ಸಂಬಂಧಿತ ಅಪರಾಧಗಳ ದೃಷ್ಟಿಕೋನದಿಂದ ತನಿಖೆ ಮುಂದುವರಿದಿದೆ. ಶಾಲಾ ಶಿಕ್ಷಣ ಇಲಾಖೆ ಹಾಗೂ ಬಾಲ ಕಲ್ಯಾಣ ಸಮಿತಿಯ ಅಧಿಕಾರಿಗಳು ನಿಲಯಕ್ಕೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದರೆ, ಜಿಲ್ಲೆಯಲ್ಲಿ ವಸತಿ ನಿಲಯಗಳ ಸುರಕ್ಷತಾ ವ್ಯವಸ್ಥೆ ಮರುಪರಿಶೀಲನೆ ಮಾಡುವ ಒತ್ತಾಯ ಜೋರಾಗಿ ಕೇಳಿಬರುತ್ತಿದೆ.ಯುವಕನ ಬಂಧನಕ್ಕೆ ಪೋಲಿಸರು ಬಲೆ ಬೀಸಿದ್ದಾರೆ.
