LOCAL EXPRESS : “ಕಲಬುರ್ಗಿ|ಸಂವಿಧಾನವೇ ದೇಶದ ಬೆಳಕು : ಪತ್ರಕರ್ತ ಡಾ. ಶಿವರಂಜನ ಸತ್ಯಂಪೇಟೆ ಅಭಿಮತ”

By admin

LOCAL EXPRESS : “ಕಲಬುರ್ಗಿ|ಸಂವಿಧಾನವೇ ದೇಶದ ಬೆಳಕು :  ಪತ್ರಕರ್ತ ಡಾ. ಶಿವರಂಜನ ಸತ್ಯಂಪೇಟೆ ಅಭಿಮತ”

• ಸೆಕ್ಯುಲರ್‌ ವಾಯ್ಸ್‌ ನ್ಯೂಸ್‌ ಕಲಬುರಗಿ :

ಭಾರತದ ಸಂವಿಧಾನವು ಪ್ರತಿಯೊಬ್ಬ ನಾಗರಿಕನಿಗೂ ಸ್ವಾತಂತ್ರ್ಯ, ಸಮಾನತೆ, ಭಾತೃತ್ವ ಮತ್ತು ನ್ಯಾಯ ನೀಡುವ ಶಕ್ತಿ ಹೊಂದಿದ್ದು, ಸಂವಿಧಾನದ ಮೌಲ್ಯಗಳೇ ದೇಶವನ್ನು ವಿಶ್ವ ಮಟ್ಟದಲ್ಲಿ ಗೌರವಯುತ ರಾಷ್ಟ್ರವನ್ನಾಗಿ ರೂಪಿಸಿವೆ ಎಂದು ಪತ್ರಕರ್ತ–ಲೇಖಕ ಡಾ. ಶಿವರಂಜನ ಸತ್ಯಂಪೇಟೆ ಅವರು ಅಭಿಪ್ರಾಯಪಟ್ಟರು.

ಅವರು ನಗರದ ತಾರಫೈಲ್ ಸರ್ಕಾರಿ ಪ್ರೌಢಶಾಲೆ, ಕರ್ನಾಟಕ ಪ್ರತಿಭಾ ಅಕಾಡೆಮಿ ಹಾಗೂ ಸುಂದರ ರಾಷ್ಟ್ರಾಭಿವೃದ್ಧಿ ಸಂಸ್ಥೆಯ ಆಶ್ರಯದಲ್ಲಿ ಬುಧವಾರ ನಡೆದ ಸಂವಿಧಾನ ಸಮರ್ಪಣಾ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಅಂಬೇಡ್ಕರ್ ಅವರು ಭಾರತದ ಬೆಳಕು, ಸಂವಿಧಾನ ಕೇವಲ ಗ್ರಂಥವಲ್ಲ ಅದು ಬದುಕಿನ ದಿಕ್ಕು ಎಂಬುದನ್ನು ಅವರು ಒತ್ತಿ ಹೇಳಿದರು. ವಿಶ್ವದ ಅತ್ಯಂತ ಶ್ರೇಷ್ಠ ಸಂವಿಧಾನಗಳಲ್ಲಿ ಭಾರತದ ಸಂವಿಧಾನಕ್ಕೂ ವಿಶಿಷ್ಟ ಸ್ಥಾನವಿದ್ದು, ಗಾಂಧಿ ಮತ್ತು ಅಂಬೇಡ್ಕರ್ ದೇಶದ ಎರಡು ಕಣ್ಣುಗಳಂತಿದ್ದಾರೆ ಎಂದರು. ಸಂವಿಧಾನದ ಅನುಷ್ಠಾನವೇ ಶಕ್ತಿಶಾಲಿ ರಾಷ್ಟ್ರ ನಿರ್ಮಾಣಕ್ಕೆ ಆಧಾರ ಎಂದರು.

ಕಾರ್ಯಕ್ರಮಕ್ಕೆ ಅಧ್ಯಕ್ಷತೆ ವಹಿಸಿದ್ದ ಮುಖ್ಯೋಪಾಧ್ಯಾಯ ಡಾ. ರಾಜಕುಮಾರ ಪಾಟೀಲ ಮಾತನಾಡಿ, ಅಂಬೇಡ್ಕರ್ ಅವರು ಕಲುಷಿತಗೊಂಡಿದ್ದ ಸಾಮಾಜಿಕ ವ್ಯವಸ್ಥೆಗೆ ಮೌಲ್ಯಾಧಾರಿತ ದಾರಿದೀಪವನ್ನು ನೀಡಿದರೆಂದು ಹೇಳಿದರು. ಸಂಸ್ಕಾರ ಪ್ರತಿಷ್ಠಾನದ ನಿರ್ದೇಶಕ ವಿಠ್ಠಲ್ ಚಿಕಣಿ, ಮಾನವ ಬಂಧುತ್ವ ವೇದಿಕೆಯ ವಿಭಾಗೀಯ ಸಂಚಾಲಕ ಸುನಿಲ ಮಾನ್ಪಡೆ, ಸಾಮಾಜಿಕ ಚಿಂತಕ ಬಿ.ಎಂ. ರಾವೂರ ಹಾಗೂ ಜ್ಯೋತಿದೇವಿ ಹವಾಲ್ದಾರ್ ಮುಖ್ಯ ಅತಿಥಿಗಳಾಗಿ ವೇದಿಕೆ ಮೇಲಿದ್ದರು.

 ಈ ವೇಳೆ ರಸಪ್ರಶ್ನೆ ಸ್ಪರ್ಧೆಯಲ್ಲಿ ವಿಜೇತರಾದ ಹೊಳೆಪ್ಪ, ಸೌಮ್ಯ, ಮಂಜುನಾಥ, ಸೌಂದರ್ಯ, ಓಂಕಾರ ಮೊದಲಾದ ವಿದ್ಯಾರ್ಥಿಗಳಿಗೆ ಪ್ರಥಮ, ದ್ವಿತೀಯ, ತೃತೀಯ ಹಾಗೂ ಸಮಾಧಾನಕರ ಬಹುಮಾನಗಳನ್ನು ವಿತರಿಸಲಾಯಿತು.

ಶಿಕ್ಷಕರಾದ ಈರಣ್ಣ ಕೆಂಭಾವಿ  ಕಾರ್ಯಕ್ರ ನಿರೂಪಿಸಿದರು. ಅನಿಲ ಸ್ವಾಗತಿಸಿ, ಸುಂದರ ರಾಷ್ಟ್ರಾಭಿವೃದ್ಧಿ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಸಂಜೀವಕುಮಾರ ಕಾಂಬಳೆ ವಂದಿಸಿದರು.