BBK 12: ಇಂದು ಅಶ್ವಿನಿ–ರಕ್ಷಿತಾ ಸೇಫ್; ನಾಲ್ವರು ಎಲಿಮಿನೆಟ್ ಲಿಸ್ಟ್ ನಲ್ಲಿ – ಸುದೀಪ್ ವೇದಿಕೆಯಲ್ಲಿ ಟ್ವಿಸ್ಟ್ ಸೂಚನೆ
• ಸೆಕ್ಯುಲರ್ ವಾಯ್ಸ್ ಡೆಸ್ಕ್ ನ್ಯೂಸ್ :
ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 12 ಮನೆಯಲ್ಲಿ ಈ ವಾರ ಮತದಾನ ತೀವ್ರಗೊಂಡಿದ್ದು, ಅಶ್ವಿನಿ ಗೌಡ ಹಾಗೂ ರಕ್ಷಿತಾ ಶೆಟ್ಟಿ ಪ್ರೇಕ್ಷಕರ ಬೆಂಬಲದ ಬಲದಿಂದ ಸೇಫ್ ಲಿಸ್ಟ್‌ಗೆ ಸೇರಿದ್ದಾರೆ.
ಮನೆಯೊಳಗಿನ ಜಗಳ–ತಂತ್ರಗಳ ನಡುವೆಯೂ ಇವರಿಬ್ಬರ ಆಟಕ್ಕೆ ಜನಮನ್ನಣೆ ಸಿಕ್ಕಿದ್ದು, ಉಳಿದ ಸ್ಪರ್ಧಿಗಳ ಲೆಕ್ಕಾಚಾರಿಗೆ ಬದಲಾವಣೆ ತಂದಿದೆ.
ಇನ್ನೊಂದೆಡೆ, ಜಾನವಿ, ರಿಷಾ ಗೌಡ, ರಶಿಕಾ ಶೆಟ್ಟಿ ಹಾಗೂ ಧ್ರುವಂತ ತಲ್ವಾರ್—ಈ ನಾಲ್ವರು ಬಾಟಮ್ ಲಿಸ್ಟ್‌ನಲ್ಲಿ ಸಿಲುಕಿದ್ದು, ಭಾನುವಾರದ ಎಲಿಮಿನೇಷನ್ ಯಾರಿಗೆ ತಾಗಲಿದೆ ಎಂಬ ಕುತೂಹಲ ಹೆಚ್ಚಾಗಿದೆ.
ಈ ವಾರದ ಪ್ರಮುಖ ವಿವಾದವಾಗಿದ್ದ ‘ಚಪ್ಪಾಳೆ’ ಆರೋಪ ಕುರಿತು ವಾರಾಂತ್ಯದ ವೇದಿಕೆಯಲ್ಲಿ ಕಿಚ್ಚ ಸುದೀಪ್ ನೇರವಾಗಿ ಪ್ರಶ್ನಿಸಿದ್ದು, ಮನೆಯಲ್ಲಿ ಗೌರವ–ಮರ್ಯಾದೆ ಕಾಪಾಡುವಂತೆ ಸ್ಪಷ್ಟ ಸಂದೇಶ ನೀಡಿದ್ದಾರೆ. ರಕ್ಷಿತಾ ತಮ್ಮ ನಿಲುವು ವಿವರಿಸಿದ ನಂತರ ಸುದೀಪ್ ನೀಡಿದ ಚಪ್ಪಾಳೆ ಪ್ರೇಕ್ಷಕರ ಗಮನ ಸೆಳೆದಿದೆ.
ಮತದಾನದ ಅಂತರ ಅತಿ ಕಡಿಮೆಯಾಗಿರುವುದರಿಂದ, ಭಾನುವಾರದ ಎಪಿಸೋಡ್‌ನಲ್ಲಿ ಬಿಗ್ ಟ್ವಿಸ್ಟ್ ಸಾಧ್ಯತೆ ಬಗ್ಗೆ ಚರ್ಚೆ ಜೋರಾಗಿದೆ.