ACCIDENT BREKING NEWS :”ಕುಕನೂರ| ಬನ್ನಿಕೊಪ್ಪ ಬಳಿ ಭೀಕರ ರಸ್ತೆ ಅಪಘಾತ : ಓರ್ವ ವ್ಯಕ್ತಿ ಸಾವು…! ಆಕಳಿಗೆ ಗಾಯ.!

By admin

“ಕುಕನೂರ| ಬನ್ನಿಕೊಪ್ಪ ಬಳಿ ಭೀಕರ ರಸ್ತೆ ಅಪಘಾತ : ಓರ್ವ ವ್ಯಕ್ತಿ ಸಾವು.! ಆಕಳಿಗೆ ಗಾಯ.!

•ಸೆಕ್ಯುಲರ್‌ ವಾಯ್ಸ್‌ ನ್ಯೂಸ್‌ ಕುಕನೂರ: 

ಕುಕನೂರುರಾಷ್ಟ್ರೀಯ ಹೆದ್ದಾರಿ 67ರ ಬಳಿ ಟ್ರಾನ್ಸ್ಫರ್ ಟೆಂಪೋ(ಟ್ರಾನ್ಸ್ಫರ್ ಟೆಂಪೋ no. KA 63 8141, EICHER ಕಂಪನಿ)ಯೊಂದು ಕೊಪ್ಪಳ ಕಡೆಯಿಂದ ಗದಗ ಕಡೆಗೆ ವೇಗವಾಗಿ ಚಲಿಸುವಾಗ ದನ ಕಾಯುವ  ಓರ್ವ ವ್ಯಕ್ತಿಗೆ ರಸ್ತೆ ದಾಟುವ ಸಂದರ್ಭದಲ್ಲಿ  ಟಿಪ್ಪರ್ಯೊಂದು  ಡಿಕ್ಕಿಯಾದ ಪರಿಣಾಮ ವ್ಯಕ್ತಿ ಮೃತಪಟ್ಟ  ದಾರುಣ ಘಟನೆ ಕೊಪ್ಪಳ ಜಿಲ್ಲೆಯ ಕುಕನೂರ ತಾಲ್ಲೂಕಿನ ಬನ್ನಿಕೊಪ್ಪ ಬಳಿ ಶುಕ್ರವಾರ ಸಂಜೆ ನಡೆದಿದೆ ಎಂದು ತಿಳಿದು ಬಂದಿದೆ.

ಟಿಪ್ಪರ್‌ ವಾಹನವು ವೇಗವಾಗಿ ಡಿಕ್ಕಿ ಹೊಡೆದ  ಪರಿಣಾಮ ಓರ್ವ  ವ್ಯಕ್ತಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ.ಅಲ್ಲದೇ ಜೊತೆಗಿದ್ದ ಆಕಳಿಗೆ ಗಂಭಿರ ಗಾಯಗೊಂಡಿದೆ ಎನ್ನಲಾಗಿದೆ.  ಘಟನೆಯಲ್ಲಿ ಮೃತಪಟ್ಟ ವ್ಯಕ್ತಿ ಸಂಗಪ್ಪ ಓಜನಹಳ್ಳಿ (ವಯಸ್ಸು 70ವರ್ಷ ) ಎಂದು ಗುರುತಿಸಲಾಗಿದೆ.

ಈ ಪ್ರಕರಣವು ಕುಕನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಪೊಲೀಸರು ಸ್ಥಳ ಪರಿಶೀಲನೆ ನಡೆಸಿದ್ದಾರೆ ಎನ್ನಲಾಗಿದೆ.