VIJAYNAGAR NEWS :”ಹೊಸಪೇಟೆ|ಬೆನಕಾಪುರ ಗ್ರಾಮದಲ್ಲಿ ನಿವೇಶನ ರಹಿತರಿಗೆ ಗ್ರಾಮ ಸಭೆ”

By admin

“ಹೊಸಪೇಟೆ|ಬೆನಕಾಪುರ ಗ್ರಾಮದಲ್ಲಿ ನಿವೇಶನ ರಹಿತರಿಗೆ ಗ್ರಾಮ ಸಭೆ”

• ಸೆಕ್ಯುಲರ್‌ ವಾಯ್ಸ್‌ ನ್ಯೂಸ್‌ ಹೊಸಪೇಟೆ: 

ವಿಜಯನಗರ ಹೊಸಪೇಟೆಯ ನಾಗೇನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೆನಕಾಪುರ ಗ್ರಾಮದಲ್ಲಿ ನಿವೇಶನ ರಹಿತರ ಆಯ್ಕೆ ಮಾಡಲು ಗುರುವಾರ ಗ್ರಾಮ ಸಭೆ ನಡೆಯಿತು. 

ಈ ಗ್ರಾಮ ಸಭೆಯಲ್ಲಿ ನಾಗೇನಹಳ್ಳಿ  ಗ್ರಾ.ಪಂ. ಅಧ್ಯಕ್ಷ  ಎಂ ದುರುಗಪ್ಪ ಅವರು ಅಧ್ಯಕ್ಷತೆ ವಹಿಸಿ  ಮಾತನಾಡಿ ಕಂದಾಯ ಗ್ರಾಮ ಮಾಡುವ ಕುರಿತು ನಿರ್ಧಾರ ಸಾಮಾನ್ಯ ಸಭೆಯಲ್ಲಿ   ಚರ್ಚಿಸಿದ ಬಳಿಕ ಮನವಿಪತ್ರ ಮಾಡಿ ನಮ್ಮ ಬೆನಕಾಪರ ಗ್ರಾಮದಲ್ಲಿ ಎಷ್ಟು ವರ್ಷದಿಂದ ನಿವಾಸಿಗಳು ವಾಸ ಮಾಡಿದ್ದಾರೆ. ಡಿಸಿ ಹಾಗೂ ಮುಖ್ಯಮಂತ್ರಿಯವರಿಗೆ ಮನವಿ ಕಳಿಸಿದ್ದಾಗ ಸರ್ಕಾರ ಅದನ್ನು ಆಲಿಸಿ ಇಷ್ಟು ವರ್ಷ ಬೆನಕಪುರದಿಂದ ಯಾವುದೇ ದಾಖಲೆ ಬರುತ್ತಿರಲಿಲ್ಲ ನಾಗನಹಳ್ಳಿ ಗ್ರಾಮ ಪಂಚಾಯಿತಿ ಎಂದೇ ಬರುತ್ತಿತ್ತು.ಈಗ  ಬೆನಕಪುರ ಕಂದಾಯ ಎಂದು ಮಾಡಿ ಎಂದು ಅವರಿಗೆಲ್ಲ ಮನವಿ ಸಲ್ಲಿಸಿ ಕೇಳಿಕೊಂಡಿರುವೆವು ಎಂದರು.

ಮನೆಮನೆಗೆ ಸರ್ವೆ ಮಾಡಿದರೆ ಈ ಊರಿನ ಜನರು ಪಂಚಾಯಿತಿಗೆ ತೆರಿಗೆ ಪಾವತಿಸಿದ್ದಾರೆ ಇನ್ನು ಕೆಲವೇ ದಿನಗಳಲ್ಲಿ ಅವರಿಗೆಲ್ಲ ಸರ್ಕಾರದಿಂದ ಗ್ರಾಮ ಪಂಚಾಯಿತಿಯಿಂದ ಪಟ್ಟ ಬರುತ್ತದೆ, ಬೆನಕಪುರ ವಾಸ ಮಾಡುತ್ತಿರುವ ಗುರುತು 20*30,30*40 ಅವೆಲ್ಲ ಕೆಲವೇ ದಿನಗಳಲ್ಲಿ ಬೆನಕಪೂರ್ ಊರು ಆಗುತ್ತದೆ

 ಖಾಲಿ ಜಾಗ,ಪಾಳು ಬಿದ್ದ ಮನೆ ಸರ್ವೆ ಮಾಡಿ ತಹಸಿಲ್ದಾರ್ ರವರಿಗೆ ಮನವಿ ಸಲ್ಲಿಸಿ ಪಟ್ಟಿ  ರೆಡಿ ಮಾಡಿ ಅರ್ಹ ಫಲಾನುಭವಿಗಳಿಗೆ ಸಿಗುವ ಸೌಲಭ್ಯ ಕೆಲಸ ಆಗಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿಗ್ರಾ.ಪಂ. ಉಪಾಧ್ಯಕ್ಷೆ  ಟಿ.ಸವಿತಾ ,ಪಿಡಿಒ ವಾಸುಕಿ.ಸದಸ್ಯರಾದ ಮಹಮ್ಮದ್ ರಫೀಕ್,ಸಿಬ್ಬಂದಿ ಊರಿನ ಮುಖಂಡರು ಸೇರಿ ಗ್ರಾಮ ಸಭೆಯನ್ನು ಯಶಸ್ವಿ ಗೊಳಿಸಿದರು ಸರ್ವರಿಗೂ ಗ್ರಾಮ ಪಂಚಾಯಿತಿ ಅಧ್ಯಕ್ಷರು ಅಭಿನಂದನೆ ಸಲ್ಲಿಸಿದರು.