LOCAL EXPRESS: “ಯಾದಗಿರಿ| ಸಹಕಾರ ಚಕ್ರವ್ಯೂಹದಲ್ಲಿ ಗಿರಿನಾಡಿಗೆ ಜಯ; ವಿಶ್ವನಾಥರಡ್ಡಿ ದರ್ಶನಾಪೂರರಿಗೆ ಭವ್ಯ ಸನ್ಮಾನ”

By admin

“ಯಾದಗಿರಿ| ಸಹಕಾರ ಚಕ್ರವ್ಯೂಹದಲ್ಲಿ ಗಿರಿನಾಡಿಗೆ ಜಯ; ವಿಶ್ವನಾಥರಡ್ಡಿ ದರ್ಶನಾಪೂರರಿಗೆ ಭವ್ಯ ಸನ್ಮಾನ”

• ಸೆಕ್ಯುಲರ್‌ ವಾಯ್ಸ್‌ ನ್ಯೂಸ್‌ ಶಹಾಪೂರ: 

ಶಹಾಪುರ ತಾಲ್ಲೂಕಿನ ದರ್ಶನಾಪೂರ ಸರ್ಕಾರೀ ಹಿರಿಯ ಪ್ರಾಥಮಿಕ ಶಾಲೆಯ ಬಾಪುಗೌಡ ದರ್ಶನಾಪೂರ ರಂಗಮಂದಿರದಲ್ಲಿ ನಡೆದ ಯವ ಜನೋತ್ಸವ ಕಾರ್ಯಕ್ರಮದಲ್ಲಿ, 2025ರ ಸಾಲಿನ ‘ಸಹಕಾರ ರತ್ನ’ ಪ್ರಶಸ್ತಿ ಪಡೆದ ವಿಶ್ವನಾಥರಡ್ಡಿ ದರ್ಶನಾಪೂರರನ್ನು ಭಾನುವಾರ ಸನ್ಮಾನಿಸಲಾಯಿತು.

ಜಿಲ್ಲಾ ಸಹಕಾರಿ ಯೂನಿಯನ್ ಒಕ್ಕೂಟದ ಅಧ್ಯಕ್ಷರಾಗಿರುವ ವಿಶ್ವನಾಥರಡ್ಡಿ, ವಿವಿಧ ಸಹಕಾರ ಸಂಸ್ಥೆಗಳ ಬಲವರ್ಧನೆಗೆ ನೀಡಿದ ಕೊಡುಗೆಯನ್ನು ಸ್ಮರಿಸಿ, ಜಿಲ್ಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಚನ್ನಬಸಪ್ಪ ಮುಧೋಳ ಅವರು ಶಾಲೆಯ ವೇದಿಕೆಯಲ್ಲಿ ಗೌರವಿಸಿ ಮಾತನಾಡಿದರು.

“ಸಹಕಾರ ಕ್ಷೇತ್ರದಲ್ಲಿ ವಿಶ್ವನಾಥರಡ್ಡಿಯವರ ಪರಿಶ್ರಮ ಯಾದಗಿರಿ ಜಿಲ್ಲೆಯ ಗಿರಿನಾಡಿಗೆ ಹೆಗ್ಗಳಿಕೆ. ಮುಂದಿನ ದಿನಗಳಲ್ಲಿ ಸಹಕಾರ ಸಂಸ್ಥೆಗಳು ಬೆಳವಣಿಗೆ ಸಾಧಿಸಲು ಇವರ ಮಾರ್ಗದರ್ಶನ ಉಪಯುಕ್ತವಾಗಲಿದೆ” ಎಂದರು.

ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ವೈ.ಎಸ್. ಹರಗಿ ಅವರು ಅಭಿಪ್ರಾಯ ವ್ಯಕ್ತಪಡಿಸಿ “ರಾಜ್ಯ ಸಹಕಾರ ಇಲಾಖೆಯಿಂದ ಬಂದಿರುವ ‘ಸಹಕಾರ ರತ್ನ’ ಗೌರವ ಯಾದಗಿರಿಗೆ ಮತ್ತೊಂದು ಕೀರ್ತಿ. ಈ ಸಾಧನೆ ಜಿಲ್ಲೆಗೆ ಸಲ್ಲುವ ಗೌರವ” ಎಂದರು.

ಕಾರ್ಯಕ್ರಮದಲ್ಲಿ ರಾಜು ಬಾವಿಹಳ್ಳಿ, ಶರಣುಗೌಡ ಗುಂಡುಗುರ್ತಿ , ರಾಮಣ್ಣಗೌಡ ಖಾನಾಪೂರ, ದರ್ಶನಾಪೂರ ಸಿಆರ್‌ಪಿ ಹಣಮಂತ್ರಾಯ ಸೋಮಪೂರ, ಮುಖ್ಯಗುರು ಎಂ.ಎಸ್ಇ ಪಾಟೀಲ್, ಸುರೆಶ ಬಾಬು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.