🚨BREAKING NEWS : “ಧಾರವಾಡ | ಸಾಹಿತಿ ಅಲ್ಲಮ ಪ್ರಭು ಬೆಟ್ಟದೂರ ಸೇರಿ ಹಲವು ಪ್ರಮಖ ಉದ್ಯೋಗಾಕಾಂಕ್ಷಿಗಳ ಹೋರಾಟಗಾರರ ಬಂಧನ : ಬಿಡುಗಡೆಗೆ ಆಗ್ರಹಿಸಿ ವಿವಿಧ ಸಂಘಟನೆಗಳ ತೀವ್ರ ಆಗ್ರಹ”
• ಸೆಕ್ಯುಲರ್ ವಾಯ್ಸ್ ನ್ಯೂಸ್ ಧಾರವಾಡ:
ಧಾರವಾಡದಲ್ಲಿ ಹಲವು ತಿಂಗಳಿನಿಂದ ಉದ್ಯೋಗಾಕಾಂಕ್ಷಿಗಳು ಪ್ರಜಾಸತ್ತಾತ್ಮಕ ಮಾರ್ಗದಲ್ಲಿ ಹೋರಾಟ ನಡೆಸುತ್ತಿದ್ದಾರೆ. ಮುಖ್ಯಮಂತ್ರಿಗಳ ಭೇಟಿಗೆ ಅವಕಾಶ ಕೋರಿ ಮನವಿ ಸಲ್ಲಿಸಿದ್ದು, ಮುಖ್ಯ ಕಾರ್ಯದರ್ಶಿಗೆ ಹಕ್ಕೊತ್ತಾಯಗಳ ಆಗ್ರಹಪತ್ರ ನೀಡಿದ್ದರೂ, ರಾಜ್ಯ ಸರ್ಕಾರದಿಂದ ಯಾವುದೇ ಸ್ಪಂದನೆ ನೀಡಲಾಗಿಲ್ಲ. ಇಂದು ಧಾರವಾಡದಲ್ಲಿ ಸಮಿತಿಯ ಪ್ರತಿಭಟನಾ ಧರಣಿಗೆ ಅನುಮತಿ ನೀಡದೆ, ಪೊಲೀಸರಿಬ್ಬರು ಹೋರಾಟಗಾರರನ್ನು ಏಕಾಏಕಿ ಬಂಧಿಸಿರುವುದು ಸಮಿತಿಯು ತೀವ್ರ ಖಂಡನೆ ವ್ಯಕ್ತಪಡಿಸಿರುವಂತೆ, ಜನತಂತ್ರದ ಮೌಲ್ಯಗಳಿಗೆ ಧಕ್ಕೆ ತರುವಂತೆ ಎಂದು ಘೋಷಿಸಿದೆ.
ಆಲ್ ಇಂಡಿಯಾ ಡೆಮಾಕ್ರೆಟಿಕ್ ಯೂತ್ ಆರ್ಗನೈಸೇಶನ್ (AIDYO) ಈ ಬಂಧನ ಕ್ರಮವನ್ನು ಉಗ್ರವಾಗಿ ಖಂಡಿಸಿದೆ. ಸಂಘಟನೆ ಅಭಿಪ್ರಾಯ ಪ್ರಕಾರ, ಯುವಜನರನ್ನು ಕೇವಲ ಮತಬ್ಯಾಂಕ್ ಆಗಿ ಬಳಸಿಕೊಂಡು, ಉದ್ಯೋಗ ಕೇಳಿದರೆ ಲಾಠಿ ಬೀಸುವ ನೀತಿಯನ್ನು ಸರ್ಕಾರ ಅನುಸರಿಸುತ್ತಿದೆ. ಉದ್ಯೋಗಾಕಾಂಕ್ಷಿ ಯುವಜನರು ಹಾಗೂ ಪ್ರಜ್ಞಾವಂತ ನಾಗರಿಕರು ಒಟ್ಟಾಗಿ ಹೋರಾಡಬೇಕು ಎಂದು ಎಐಡಿವೈಓ ಕರೆ ನೀಡಿದೆ.


Contents
🚨BREAKING NEWS : “ಧಾರವಾಡ | ಸಾಹಿತಿ ಅಲ್ಲಮ ಪ್ರಭು ಬೆಟ್ಟದೂರ ಸೇರಿ ಹಲವು ಪ್ರಮಖ ಉದ್ಯೋಗಾಕಾಂಕ್ಷಿಗಳ ಹೋರಾಟಗಾರರ ಬಂಧನ : ಬಿಡುಗಡೆಗೆ ಆಗ್ರಹಿಸಿ ವಿವಿಧ ಸಂಘಟನೆಗಳ ತೀವ್ರ ಆಗ್ರಹ”• ಸೆಕ್ಯುಲರ್ ವಾಯ್ಸ್ ನ್ಯೂಸ್ ಧಾರವಾಡ: ಧಾರವಾಡದಲ್ಲಿ ಹಲವು ತಿಂಗಳಿನಿಂದ ಉದ್ಯೋಗಾಕಾಂಕ್ಷಿಗಳು ಪ್ರಜಾಸತ್ತಾತ್ಮಕ ಮಾರ್ಗದಲ್ಲಿ ಹೋರಾಟ ನಡೆಸುತ್ತಿದ್ದಾರೆ. ಮುಖ್ಯಮಂತ್ರಿಗಳ ಭೇಟಿಗೆ ಅವಕಾಶ ಕೋರಿ ಮನವಿ ಸಲ್ಲಿಸಿದ್ದು, ಮುಖ್ಯ ಕಾರ್ಯದರ್ಶಿಗೆ ಹಕ್ಕೊತ್ತಾಯಗಳ ಆಗ್ರಹಪತ್ರ ನೀಡಿದ್ದರೂ, ರಾಜ್ಯ ಸರ್ಕಾರದಿಂದ ಯಾವುದೇ ಸ್ಪಂದನೆ ನೀಡಲಾಗಿಲ್ಲ. ಇಂದು ಧಾರವಾಡದಲ್ಲಿ ಸಮಿತಿಯ ಪ್ರತಿಭಟನಾ ಧರಣಿಗೆ ಅನುಮತಿ ನೀಡದೆ, ಪೊಲೀಸರಿಬ್ಬರು ಹೋರಾಟಗಾರರನ್ನು ಏಕಾಏಕಿ ಬಂಧಿಸಿರುವುದು ಸಮಿತಿಯು ತೀವ್ರ ಖಂಡನೆ ವ್ಯಕ್ತಪಡಿಸಿರುವಂತೆ, ಜನತಂತ್ರದ ಮೌಲ್ಯಗಳಿಗೆ ಧಕ್ಕೆ ತರುವಂತೆ ಎಂದು ಘೋಷಿಸಿದೆ.ಆಲ್ ಇಂಡಿಯಾ ಡೆಮಾಕ್ರೆಟಿಕ್ ಯೂತ್ ಆರ್ಗನೈಸೇಶನ್ (AIDYO) ಈ ಬಂಧನ ಕ್ರಮವನ್ನು ಉಗ್ರವಾಗಿ ಖಂಡಿಸಿದೆ. ಸಂಘಟನೆ ಅಭಿಪ್ರಾಯ ಪ್ರಕಾರ, ಯುವಜನರನ್ನು ಕೇವಲ ಮತಬ್ಯಾಂಕ್ ಆಗಿ ಬಳಸಿಕೊಂಡು, ಉದ್ಯೋಗ ಕೇಳಿದರೆ ಲಾಠಿ ಬೀಸುವ ನೀತಿಯನ್ನು ಸರ್ಕಾರ ಅನುಸರಿಸುತ್ತಿದೆ. ಉದ್ಯೋಗಾಕಾಂಕ್ಷಿ ಯುವಜನರು ಹಾಗೂ ಪ್ರಜ್ಞಾವಂತ ನಾಗರಿಕರು ಒಟ್ಟಾಗಿ ಹೋರಾಡಬೇಕು ಎಂದು ಎಐಡಿವೈಓ ಕರೆ ನೀಡಿದೆ.ಬಂಧಿತ ಮುಖಂಡರಾದ ಸಿದ್ದಲಿಂಗ ಬಾಗೇವಾಡಿ, ಭವಾನಿ ಶಂಕರ್ ಎಸ್. ಗೌಡ, ಚನ್ನಬಸವ ಜಾನೇಕಲ್, ಶರಣಪ್ಪ ಉದ್ಬಾಳ್, ಲಕ್ಷ್ಮಣ ಜಡಗಣ್ಣವರ್, ಜಗನ್ನಾಥ ಎಸ್.ಎಚ್., ಶಂಕರ್ ಅಂಬಲಿ, ಸಿದ್ದುಗೌಡ ಮೋದಗಿ ಮತ್ತು ಪಾಲಾಕ್ಷ್ ಕೆ. ಸೇರಿದ್ದಾರೆ ಬಂಧಿತರನ್ನು ಕೂಡಲೇ ಬಿಡುಗಡೆ ಮಾಡಬೇಕೆಂದು ಆಗ್ರಹಿಸಿದ್ದಾರೆ.ಎಐಡಿಎಸ್ಓ (AIDSO) ಕೂಡ ವಿದ್ಯಾರ್ಥಿ-ಯುವಜನರಿಗೆ ಪ್ರಜಾತಾಂತ್ರಿಕ ಹಕ್ಕುಗಳ ರಕ್ಷಣೆಗಾಗಿ ಕರೆ ನೀಡಿದ್ದು, ಧಾರವಾಡದಲ್ಲಿ ನಡೆಯುತ್ತಿರುವ ಪ್ರತಿಭಟನಾ ಧರಣಿಯನ್ನು ಬೆಂಬಲಿಸಿದೆ. ಸರ್ಕಾರದ ದಮನಕಾರಿ ಕ್ರಮಗಳಿಂದ ವಿದ್ಯಾರ್ಥಿ-ಯುವಜನರ ಹೋರಾಟವನ್ನು ದಮನಗೊಳಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಮುಖಂಡ ಗಂಗರಾಜ ಅಳ್ಳೋಳ್ಳಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ (AIMSS) ಜಿಲ್ಲಾ ಸಂಚಾಲಕಿ ಶಾರದಾ ಗಡ್ಡಿ ಈ ಸಂದರ್ಭದಲ್ಲಿ ಗಂಭೀರ ಆಕ್ರೋಶ ವ್ಯಕ್ತಪಡಿಸಿ, ಹೋರಾಟಗಾರರ ಬಿಡುಗಡೆ ಮತ್ತು ನ್ಯಾಯಯುತ ಬೇಡಿಕೆಗಳ ಈಡೇರಿಕೆಯಾಗುವ ತನಕ ಹೋರಾಟದ ಕಾವನ್ನು ಕಾಪಾಡಿಕೊಳ್ಳಲು ಯುವಜನರನ್ನು ಹಾಗೂ ಸಾರ್ವಜನಿಕರನ್ನು ಮುಂದೆ ಬರಬೇಕೆಂದು ಕರೆ ನೀಡಿದ್ದಾರೆ.ರಾಜ್ಯ ಕಾಂಗ್ರೇಸ ಸರ್ಕಾರದ ವಿರುದ್ದ ಕೊಪ್ಪಳದಲ್ಲಿ ತೀವ್ರ ಪ್ರತಿಭಟನೆಈ ಬಂಧನದ ವಿರುದ್ಧ ಧಾರವಾಡದಲ್ಲಿ ತೀವ್ರ ಪ್ರತಿಭಟನೆ ನಡೆಸಿ, ಹೋರಾಟಗಾರರ ಬಿಡುಗಡೆ ಹಾಗೂ ಉದ್ಯೋಗಾಕಾಂಕ್ಷಿಗಳ ಬೇಡಿಕೆಗಳಿಗೆ ಸ್ಪಂದಿಸಲು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ. ಕೊಪ್ಪಳ ಹೋರಾಟ ಸಮಿತಿ ಈ ಕ್ರಮವನ್ನು ಜನತಂತ್ರ ಹರಣ ಎಂದು ಖಂಡಿಸಿ, ಯುವಜನರು ಮತ್ತು ಸಂಘಟನೆಗಳು ಒಟ್ಟಾಗಿ ಹೋರಾಡಬೇಕು ಎಂದು ಹೇಳಿದ್ದಾರೆ. ಸಮಿತಿ ಮುಖಂಡರು ಶರಣು ಗಡ್ಡಿ, ಸುಭಾನ್ ನೀರಲಗಿ, ಶರಣು ಪಾಟೀಲ್, ಆರ್. ವಂಕಲಕುಂಟಿ, ಶಿವಮೂರ್ತಿ, ಮಂಗಳೇಶ್ ರಾಥೋಡ್, ಕನಕರಾಯ ಬಸಾಪುರ್ ಮತ್ತು ವಿರುಪಾಕ್ಷಿ ಈ ವೇಳೆ ಹೋರಾಟವನ್ನು ನೇರವಾಗಿ ಬೆಂಬಲಿಸಿದ್ದರು.

