📵 NATIONAL BREAKING NEWS : “16 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ಸಾಮಾಜಿಕ ಜಾಲತಾಣ ನಿಷೇಧ: ವಿಶ್ವದಲ್ಲೇ ಮೊದಲು ಮಹತ್ವದ ನಿರ್ಧಾರ ಮಾಡಿದ ಆಸ್ಟ್ರೇಲಿಯಾ !!
Contents
📵 NATIONAL BREAKING NEWS : “16 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ಸಾಮಾಜಿಕ ಜಾಲತಾಣ ನಿಷೇಧ: ವಿಶ್ವದಲ್ಲೇ ಮೊದಲು ಮಹತ್ವದ ನಿರ್ಧಾರ ಮಾಡಿದ ಆಸ್ಟ್ರೇಲಿಯಾ !!• ಸೆಕ್ಯುಲರ್ ವಾಯ್ಸ್ ಡೆಸ್ಕ್ ನ್ಯೂಸ್ :ಆಸ್ಟ್ರೇಲಿಯಾ ದೇಶವು 16 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಹಾಗೂ ಕಿಶೋರರು ಸಾಮಾಜಿಕ ಜಾಲತಾಣಗಳನ್ನು ಬಳಸುವುದನ್ನು ನಿಷೇಧಿಸಿದ ವಿಶ್ವದ ಮೊದಲ ದೇಶವಾಗಿ ಆಸ್ಟ್ರೇಲಿಯಾ ಗುರುತಿಸಿಕೊಂಡಿದೆ. ಈ ಸಂಬಂಧ ಜಾರಿಗೆ ತಂದಿರುವ ಹೊಸ ಕಾನೂನು ಡಿಸೆಂಬರ್ 10ರಿಂದ ಅಧಿಕೃತವಾಗಿ ಅನುಷ್ಠಾನಕ್ಕೆ ಬಂದಿದೆ.ಈ ಕಾನೂನು ಜಾರಿಗೆ ಬಂದ ಹಿನ್ನೆಲೆಯಲ್ಲಿ ಇನ್‌ಸ್ಟಾಗ್ರಾಮ್, ಫೇಸ್‌ಬುಕ್, ಥ್ರೆಡ್ಸ್, ಎಕ್ಸ್ (ಟ್ವಿಟರ್), ಸ್ನ್ಯಾಪ್‌ಚಾಟ್, ಕಿಕ್, ಟ್ವಿಚ್, ಟಿಕ್‌ಟಾಕ್, ರೆಡಿಟ್ ಹಾಗೂ ಯೂಟ್ಯೂಬ್ ಸೇರಿದಂತೆ ಪ್ರಮುಖ ಸಾಮಾಜಿಕ ಜಾಲತಾಣಗಳು 16 ವರ್ಷಕ್ಕಿಂತ ಕಡಿಮೆ ವಯಸ್ಸಿನ ಬಳಕೆದಾರರನ್ನು ತಡೆಹಿಡಿಯಬೇಕಾಗಿದೆ. ಇದರಿಂದ ಲಕ್ಷಾಂತರ ಮಕ್ಕಳು ಮತ್ತು ಕಿಶೋರರು ತಮ್ಮ ಖಾತೆಗಳನ್ನು ಬಳಸಲು ಸಾಧ್ಯವಾಗುವುದಿಲ್ಲ.ಹೊಸ ನಿಯಮ ಉಲ್ಲಂಘಿಸಿದರೆ ಸಾಮಾಜಿಕ ಜಾಲತಾಣ ಕಂಪನಿಗಳಿಗೆ ಗರಿಷ್ಠ 32 ಮಿಲಿಯನ್ ಡಾಲರ್‌ವರೆಗೆ ದಂಡ ವಿಧಿಸುವ ಅವಕಾಶವಿದೆ. ಆದರೆ ನಿಯಮ ಉಲ್ಲಂಘಿಸಿದ ಮಕ್ಕಳಿಗೆ ಅಥವಾ ಪೋಷಕರಿಗೆ ಯಾವುದೇ ಶಿಕ್ಷೆ ವಿಧಿಸಲಾಗುವುದಿಲ್ಲ ಎಂದು ಆಸ್ಟ್ರೇಲಿಯಾ ಸರ್ಕಾರ ಸ್ಪಷ್ಟಪಡಿಸಿದೆ.ಮಕ್ಕಳನ್ನು ಹಾನಿಕಾರಕ ವಿಷಯಗಳು, ಆನ್‌ಲೈನ್ ಕಿರುಕುಳ ಹಾಗೂ ಮಾನಸಿಕ ಸಮಸ್ಯೆಗಳಿಂದ ರಕ್ಷಿಸುವ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸರ್ಕಾರ ತಿಳಿಸಿದೆ. ಆದರೆ, ಈ ನಿಷೇಧವು ಅಸಹಾಯಕ ಕಿಶೋರರನ್ನು ಒಂಟಿತನಕ್ಕೆ ತಳ್ಳಬಹುದು ಹಾಗೂ ನಿಯಂತ್ರಣವಿಲ್ಲದ ಇಂಟರ್‌ನೆಟ್ ಜಗತ್ತಿನತ್ತ ಮಕ್ಕಳನ್ನು ದೂಡಬಹುದು ಎಂದು ವಿಮರ್ಶಕರು ಆತಂಕ ವ್ಯಕ್ತಪಡಿಸಿದ್ದಾರೆ.ಮಹತ್ವದ ತಂತ್ರಜ್ಞಾನ ಕಂಪನಿಗಳು ಹಾಗೂ ಮಾತಿನ ಸ್ವಾತಂತ್ರ್ಯ ಪರ ವಾದಿಗಳೂ ಈ ನಿರ್ಧಾರದ ಕುರಿತು ಆತಂಕ ವ್ಯಕ್ತಪಡಿಸಿದ್ದರೆ, ಪೋಷಕರು ಹಾಗೂ ಮಕ್ಕಳ ಸುರಕ್ಷತಾ ಸಂಘಟನೆಗಳು ಈ ಕ್ರಮವನ್ನು ಸ್ವಾಗತಿಸಿವೆ.ಪ್ರಧಾನಿ ಆಂಥನಿ ಅಲ್ಬನೀಸ್ ಅವರು ಕಳೆದ ಸೆಪ್ಟೆಂಬರ್‌ನಲ್ಲೇ ಸಾಮಾಜಿಕ ಜಾಲತಾಣ ಬಳಕೆಗೆ ವಯೋಮಿತಿ ಜಾರಿಗೆ ತರಲಾಗುವುದು ಎಂದು ಘೋಷಿಸಿದ್ದರು.

