🚨 ACCIDENT NEWS :”ಕಲಬುರಗಿ|ಜೀಪ್–ಸಾರಿಗೆ ಬಸ್ ಮಧ್ಯೆ ಭೀಕರ ಅಪಘಾತ: ಸ್ಥಳದಲ್ಲಿ ಮೂವರು ಸಾವು, ಪೊಲೀಸ್ ಕಮಿಷನರ್ ಭೇಟಿ, ಕೆಕೆಆರ್‌ಟಿಸಿ ನಿಗಮ ಅಧ್ಯಕ್ಷರಿಂದ ಸಂತಾಪ ಮತ್ತು ಪರಿಹಾರ ಭರವಸೆ”
🚨 ACCIDENT NEWS :“ಕಲಬುರಗಿ|ಜೀಪ್–ಸಾರಿಗೆ ಬಸ್ ಮಧ್ಯೆ ಭೀಕರ ಅಪಘಾತ: ಸ್ಥಳದಲ್ಲಿ ಮೂವರು ಸಾವು, ಪೊಲೀಸ್ ಕಮಿಷನರ್ ಭೇಟಿ,ಕೆಕೆಆರ್‌ಟಿಸಿ ನಿಗಮ ಅಧ್ಯಕ್ಷರಿಂದ ಸಂತಾಪ ಮತ್ತು ಪರಿಹಾರ ಭರವಸೆ”
• ಸೆಕ್ಯುಲರ್ ವಾಯ್ಸ್ ನ್ಯೂಸ್ ಕಲಬುರಗಿ:
ಕಲಬುರಗಿ ಜಿಲ್ಲೆಯ ಹಡಗಿಲ ಹಾರುತಿ ಸಮೀಪ ಮತ್ತು ಕಲಬುರಗಿ–ಅಫಜಲಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ಬುಧವಾರ ಸಂಭವಿಸಿದ ಭೀಕರ ಅಪಘಾತಗಳಲ್ಲಿಕೆಕೆಆರ್ಟಿಸಿ ಸಾರಿಗೆ ಬಸ್ ಮತ್ತು ಜೀಪ್ ನಡುವೆ ಮುಖಾಮುಖಿ ಡಿಕ್ಕಿ ಹೊಡೆದು ಮೂವರು ಸ್ಥಳದಲ್ಲೇ ಮೃತಪಟ್ಟ ದಾರುಣ ಘಟನೆ ಸಂಭವಿಸಿದೆ.
ಅಪಘಾತಗಳಲ್ಲಿ ಜೀಪ್‌ನಲ್ಲಿ ಇದ್ದ ಚಂದ್ರಕಾಂತ ಚಿತ್ತಪುರ, ಸುಲೋಚನಾ ಚಂದ್ರಕಾಂತ ಚಿತ್ತಪುರ ಮತ್ತು ಮಿಟ್ಟುಸಾಬ್ ರಸೂಲ್ ಪಟೇಲ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೂಲಗಳ ಪ್ರಕಾರ, ಮೃತರು ಅಫಜಲಪುರ ತಾಲ್ಲೂಕಿನ ತೆಲ್ಲೋಣಿ ಗ್ರಾಮದವರಾಗಿದ್ದು, ಹಲವರು ಗಂಭೀರವಾಗಿ ಗಾಯಗೊಂಡಿದ್ದು, ಗಾಯಾಳುಗಳನ್ನು ಸಮೀಪದ ಜಿಲ್ಲಾ ಮತ್ತು ಖಾಸಗಿ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆ ಸ್ಥಳೀಯರಿಗೆ ಭಾರಿ ಆಘಾತ ಮೂಡಿಸಿದೆ. ಘಟನಾ ಸ್ಥಳಕ್ಕೆ ಸ್ಥಳೀಯರು, ಪೊಲೀಸ್ ಸಿಬ್ಬಂದಿ ಮತ್ತು ಅಗ್ನಿಶಾಮಕ ದಳದವರು ರಕ್ಷಣಾ ಕಾರ್ಯದಲ್ಲಿ ತೊಡಗಿದ್ದರು.
ಈ ಘಟನೆಗೆ ಸ್ಪಂದಿಸಿದ ಕೆಕೆಆರ್‌ಟಿಸಿ ನಿಗಮದ ಅಧ್ಯಕ್ಷ ಅರುಣ್ ಕುಮಾರ್ ಪಾಟೀಲ್ ಅವರು ಮೃತರ ಕುಟುಂಬಗಳಿಗೆ ಟ್ವೀಟ್ ಮೂಲಕ ಸಂತಾಪ ಸೂಚಿಸಿ, ಅಗತ್ಯ ಪರಿಹಾರ ನೀಡುವ ಭರವಸೆ ವ್ಯಕ್ತಪಡಿಸಿದ್ದಾರೆ. ಘಟನಾ ಸ್ಥಳಕ್ಕೆ ಕಲಬುರಗಿ ಪೊಲೀಸ್ ಆಯುಕ್ತ ಶರಣಪ್ಪ ಎಸ್.ಡಿ. ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಅಪಘಾತದ ನಿಖರ ಕಾರಣ ತಿಳಿಯಲು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಲಾಗಿದೆ. ಸ್ಥಳೀಯರು ಅಪಘಾತ ಸಂಭವಿಸಿದ ಸ್ಥಳದಲ್ಲಿ ವೇಗ ನಿಯಂತ್ರಣ ಮತ್ತು ರಸ್ತೆ ಭದ್ರತೆಗೆ ಹೆಚ್ಚಿನ ಕ್ರಮ ಕೈಗೊಳ್ಳಬೇಕೆಂದು ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.